Homeಮುಖಪುಟ’ದಾರಿ ತಪ್ಪಲು ನಾವು ಮಕ್ಕಳಲ್ಲ’: ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು

’ದಾರಿ ತಪ್ಪಲು ನಾವು ಮಕ್ಕಳಲ್ಲ’: ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು

ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭಗಳಲ್ಲಿ ಮೌನವಾಗಿದ್ದ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳ ಮೇಲೂ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ “ಮುಸ್ಲಿಂ ಸಹೋದರರು” ದಾರಿ ತಪ್ಪಿದ್ದಾರೆ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಭಿಪ್ರಾಯಕ್ಕೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲೇಮಿನ್ (AIMIM)  ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

’ನಾವು ದಾರಿ ತಪ್ಪಲು ಮಕ್ಕಳಲ್ಲ’ ಸಿಎಎ ಮತ್ತು ಎನ್‌ಆರ್‌ಸಿ ಏನು ಮಾಡುತ್ತವೆ ಎಂಬ ಬಗ್ಗೆ ಬಿಜೆಪಿ ಒಂದು ಪದಗಳನ್ನು ಹೇಳಲಿಲ್ಲ. ಆ ಕಾಯ್ದೆಗಳು ಮುಸ್ಲಿಮರ ಬಗ್ಗೆ ಇಲ್ಲದಿದ್ದರೆ, ಧರ್ಮದ ಎಲ್ಲ ಉಲ್ಲೇಖಗಳನ್ನು ಕಾನೂನಿನಿಂದ ತೆಗೆದುಹಾಕಿ ”ಎಂದು ಓವೈಸಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಜೊತೆಗೆ, “ಇದನ್ನು ತಿಳಿದುಕೊಳ್ಳಿ: ನಮ್ಮ ಭಾರತೀಯತೆಯನ್ನು ಸಾಬೀತುಪಡಿಸಲು ಕಾನೂನುಗಳು ಇರುವವರೆಗೂ ನಾವು ಮತ್ತೆ ಮತ್ತೆ ಪ್ರತಿಭಟಿಸುತ್ತೇವೆ” ಎಂದು ಓವೈಸಿ ಸೇರಿಸಿದ್ದಾರೆ.

ಇದನ್ನೂ ಓದಿ: ’ಮಹಾಘಟಬಂಧನ್’ ಗೆದ್ದರೆ ಕೇಂದ್ರದ ಕೃಷಿ ವಿರೋಧಿ ಕಾನೂನುಗಳು ರದ್ದು!

ಆರ್‌ಎಸ್‌ಎಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ ಮೊಹನ್ ಭಾಗವತ್ ತಮ್ಮ ಭಾಷಣದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರಸ್ತಾಪಿಸಿದರು. “ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ. ಆದರೆ ಈ ಹೊಸ ಕಾನೂನನ್ನು ವಿರೋಧಿಸಲು ಬಯಸುವವರು ಮುಸ್ಲಿಂ ಸಮುದಾಯವನ್ನು ನಿರ್ಬಂಧಿಸುವ ಗುರಿಯನ್ನು ಈ ಕಾಯ್ದೆಗಳು ಹೊಂದಿವೆ ಎಂಬ ಸುಳ್ಳು ವದಂತಿಯನ್ನು ಪ್ರಚಾರ ಮಾಡಿದರು. ಆ ಮೂಲಕ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಿದರು. ಸಿಎಎ ಬಳಸಿ, ಅವಕಾಶವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ನಡೆಸಿದರು” ಎಂದು ಹೇಳಿದ್ದರು.

ಸಿಎಎ ಬಗ್ಗೆ ಮುಸ್ಲಿಮರು ದಾರಿ ತಪ್ಪುತ್ತಿದ್ದಾರೆ ಎಂಬ ಭಾಗವತ್ ಅವರ ಹೇಳಿಕೆ ಮೇರೆಗೆ ಓವೈಸಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳ ಮೇಲೂ ವಾಗ್ದಾಳಿ ನಡೆಸಿದ್ದಾರೆ. “ನಾವು ಪೌರತ್ವದ ಆಧಾರದ ಮೇಲೆ ಧರ್ಮವನ್ನು ಸೇರಿಸುವ ಕಾನೂನಿನ ವಿರುದ್ಧ ಪ್ರತಿಭಟಿಸುತ್ತೇವೆ. ನಾನು ಕಾಂಗ್ರೆಸ್, ಆರ್‌ಜೆಡಿ ಮತ್ತು ಅಂತ ಪಕ್ಷಗಳ ತದ್ರೂಪುಗಳನ್ನು ಸಹ ಹೆಸರಿಸಲು ಬಯಸುತ್ತೇನೆ” ಎಂದಿದ್ದಾರೆ

ಇನ್ನು,’ ಪ್ರತಿಭಟನೆಯ ಸಮಯದಲ್ಲಿ ನಿಮ್ಮ ಮೌನವನ್ನು ಮರೆಯಲಾಗುವುದಿಲ್ಲ. ಬಿಜೆಪಿ ನಾಯಕರು ಸೀಮಾಂಚಲ್ ಜನರನ್ನು ನುಸುಳುಕೋರರು ಎಂದು ಕರೆಯುತ್ತಿರುವಾಗ, ಆರ್‌ಜೆಡಿ-ಐಎನ್‌ಸಿ ಒಮ್ಮೆಯೂ ಬಾಯಿ ತೆರೆಯಲಿಲ್ಲ ”ಎಂದು ಓವೈಸಿ ಆಕ್ರೋಶ ಹೊರಹಾಕಿದ್ದಾರೆ.

ಗ್ರ್ಯಾಂಡ್ ಡೆಮಾಕ್ರಟಿಕ್ ಸೆಕ್ಯುಲರ್ ಫ್ರಂಟ್ ನ ಅಂಗವಾಗಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 24 ಸ್ಥಾನಗಳಲ್ಲಿ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲೇಮಿನ್ ಸ್ಪರ್ಧಿಸುತ್ತಿದೆ.


ಇದನ್ನೂ ಓದಿ: ಚೀನಾ ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಎಂಬುದು ಸ್ಪಷ್ಟ: ಮೋಹನ್ ಭಾಗವತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...