Homeಅಂತರಾಷ್ಟ್ರೀಯಗಾಝಾ | ಇಸ್ರೇಲ್ ದಾಳಿಯಲ್ಲಿ ಅಲ್‌-ಜಝೀರಾ ಪತ್ರಕರ್ತ ಸಾವು : ತೀವ್ರ ಖಂಡನೆ ವ್ಯಕ್ತಪಡಿಸಿದ ಮಾಧ್ಯಮ...

ಗಾಝಾ | ಇಸ್ರೇಲ್ ದಾಳಿಯಲ್ಲಿ ಅಲ್‌-ಜಝೀರಾ ಪತ್ರಕರ್ತ ಸಾವು : ತೀವ್ರ ಖಂಡನೆ ವ್ಯಕ್ತಪಡಿಸಿದ ಮಾಧ್ಯಮ ಸಂಸ್ಥೆ

- Advertisement -
- Advertisement -

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್-ಜಝೀರಾ ಮಾಧ್ಯಮ ಸಂಸ್ಥೆಯ ಪತ್ರಕರ್ತ ಮೊಹಮ್ಮದ್ ವಿಶಾಹ್ ಸಾವನ್ನಪ್ಪಿದ್ದಾರೆ.

ಗಾಝಾ ನಗರದ ಪಶ್ಚಿಮ ಭಾಗದಲ್ಲಿರುವ ಕರಾವಳಿ ರಸ್ತೆಯಾದ ಅಲ್-ರಶೀದ್ ಸ್ಟ್ರೀಟ್‌ನಲ್ಲಿ ಬುಧವಾರ (ಏ.8) ಕಾರಿನ ಮೇಲೆ ನಡೆದ ದಾಳಿಯಲ್ಲಿ ಅಲ್ ಜಝೀರಾ ಮುಬಾಶರ್‌ನ ಗಾಝಾ ವರದಿಗಾರ ವಿಶಾಹ್‌ ಹತರಾಗಿದ್ದಾರೆ ಎಂದು aljazeera.com ವರದಿ ಮಾಡಿದೆ.

ಇಸ್ರೇಲ್ ವೈಮಾನಿಕ ದಾಳಿಯಿಂದಾಗಿ ವಿಶಾಹ್ ಪ್ರಯಾಣಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾಯಿಗಿದೆ ಎಂದು ವರದಿ ಉಲ್ಲೇಖಿಸಿದೆ.

2023ರ ಅಕ್ಟೋಬರ್‌ನಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಪ್ಯಾಲೆಸ್ತೀನಿಯರ ಜನಾಂಗೀಯ ಹತ್ಯೆಯ ವರದಿ ಮಾಡುತ್ತಿರುವ ಪತ್ರಕರ್ತರನ್ನು ಇಸ್ರೇಲ್ ನಿರಂತರವಾಗಿ ಗುರಿಯಾಗಿಸುತ್ತಿದೆ. ಗಾಝಾ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ, 2023ರ ಅಕ್ಟೋಬರ್‌ನಿಂದ ಈವರೆಗೆ ಕನಿಷ್ಠ 262 ಪತ್ರಕರ್ತರು ಇಸ್ರೇಲಿ ದಾಳಿಗೆ ಬಲಿಯಾಗಿದ್ದಾರೆ.

“ಅಲ್ ಜಝೀರಾ ಮುಬಾಶರ್ ವರದಿಗಾರ ಮೊಹಮ್ಮದ್ ವಿಶಾಹ್ ಅವರನ್ನು ಹತ್ಯೆ ಮಾಡಿದ ಇಸ್ರೇಲ್‌ನ ಘೋರ ಅಪರಾಧವನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್ ಹೇಳಿಕೆಯಲ್ಲಿ ತಿಳಿಸಿದೆ.

“ಇದು ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಹೊಸ ಮತ್ತು ಸ್ಪಷ್ಟ ಉಲ್ಲಂಘನೆಯಾಗಿದೆ. ಪತ್ರಕರ್ತರನ್ನು ಗುರಿಯಾಗಿಸುವ ಮತ್ತು ಸತ್ಯದ ಧ್ವನಿಯನ್ನು ಅಡಗಿಸುವ ನಿರಂತರ ವ್ಯವಸ್ಥಿತ ನೀತಿಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದಿದೆ.

“2018ರಲ್ಲಿ ನೆಟ್‌ವರ್ಕ್‌ಗೆ ಸೇರಿದ ತನ್ನ ವರದಿಗಾರ ಮೊಹಮ್ಮದ್ ವಿಶಾಹ್ ಅವರ ಹತ್ಯೆಯು ಆಕಸ್ಮಿಕ ಕೃತ್ಯವಲ್ಲ, ಬದಲಾಗಿ ಪತ್ರಕರ್ತರನ್ನು ಬೆದರಿಸುವ ಮತ್ತು ಅವರ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯುವ ಉದ್ದೇಶದಿಂದ ನಡೆಸಿದ ಉದ್ದೇಶಪೂರ್ವಕ ಅಪರಾಧವಾಗಿದೆ” ಎಂದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ವೇತನ ಕೇಳಿದ್ದಕ್ಕೆ ಅಪಾಯಕಾರಿ ಚರಂಡಿ ಸ್ವಚ್ಛಗೊಳಿಸಲು ಒತ್ತಾಯ; ಸುರಕ್ಷತಾ ಸಾಧನಗಳಿಲ್ಲದೆ ಚರಂಡಿಗಿಳಿದ ನೈರ್ಮಲ್ಯ ಕಾರ್ಮಿಕ ಸಾವು

ವಾಲ್ಮೀಕಿ ಸಮುದಾಯದ ಗುತ್ತಿಗೆ ನೈರ್ಮಲ್ಯ ಕಾರ್ಮಿಕ ರಾಹುಲ್ (32) ಮಾರ್ಚ್ 30 ರಂದು ದಿಲ್ಶಾದ್ ಗಾರ್ಡನ್‌ನ ತಹಿರ್‌ಪುರದಲ್ಲಿ 8 ರಿಂದ 10 ಅಡಿ ಆಳದ ಚರಂಡಿಯನ್ನು ಹಸ್ತಚಾಲಿತವಾಗಿ ಹೂಳು ತೆಗೆಯುವಾಗ ಯಾವುದೇ ಸುರಕ್ಷತಾ...

ಅಸ್ಸಾಂ : ಮತದಾನದ ಹಿಂದಿನ ದಿನ ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ!

ಅಸ್ಸಾಂ ವಿಧಾನಸಭೆ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಉದಲ್ಗುರಿ (ಎಸ್‌ಟಿ) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ದೈಮರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ನಾಯಕತ್ವದಿಂದ...

ವಿಧಾನಸಭೆ ಚುನಾವಣೆ : ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಇಂದು ಮತದಾನ

ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆಯ ಚುನಾವಣೆಯ ಮತದಾನ ಇಂದು (ಏ.9, 2026) ಒಂದೇ ಹಂತದಲ್ಲಿ ನಡೆಯಲಿದೆ. ಈಗಾಗಲೇ ಮತದಾನ ಆರಂಭಗೊಂಡಿದೆ. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯು...

‘ಯುದ್ಧ ಮುಂದುವರಿಸಲು ಸಾಧ್ಯವಾಗದೆ ಅಮೆರಿಕ ಬಲವಂತವಾಗಿ ಕದನ ವಿರಾಮ ಘೋಷಿಸಿತು’: ಭಾರತದಲ್ಲಿ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ

ನವದೆಹಲಿ: ಸಂಘರ್ಷವನ್ನು ಮುುಂದುವರಿಸಲು ವಿಫಲವಾದ ನಂತರ ಅಮೆರಿಕವು ಇರಾನ್ ಜೊತೆ ಕದನ ವಿರಾಮ ಘೋಷಿಸಲು ಒತ್ತಾಯಿಸಲ್ಪಟ್ಟಿತು ಮತ್ತು ನಿರಂತರ ಹಗೆತನವು ವಾಷಿಂಗ್ಟನ್‌ಗೆ ಮತ್ತಷ್ಟು ಹಿನ್ನಡೆಗೆ ಕಾರಣವಾಗುತ್ತಿತ್ತು ಎಂದು ಇರಾನ್‌ನ ಸರ್ವೋಚ್ಚ ನಾಯಕನ ಭಾರತದಲ್ಲಿನ...

ಶಾರದಾ ಚಿಟ್ ಫಂಡ್ ಹಗರಣ: 13 ವರ್ಷಗಳ ನಂತರ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಜಾಮೀನು ಮಂಜೂರು ಮಾಡಿದ ಕೊಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ ಹೈಕೋರ್ಟ್ ಬುಧವಾರ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, 13 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಲು ದಾರಿ ಸುಗಮವಾಗಿದೆ. ಪಶ್ಚಿಮ...

ಇಂದೋರ್: ಪೊಲೀಸರಿಂದ ಹಣಕ್ಕಾಗಿ ಬೇಡಿಕೆ, ಹಲ್ಲೆ ಆರೋಪ; 25 ವರ್ಷದ ಟ್ಯಾಕ್ಸಿ ಚಾಲಕ ಆತ್ಮಹತ್ಯೆ: ಪೊಲೀಸ್ ಅಮಾನತು

ಇಂದೋರ್: ಪೊಲೀಸರ ಹಲ್ಲೆ ಮತ್ತು ಭ್ರಷ್ಟಾಚಾರವನ್ನು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿದ ನಂತರ 25 ವರ್ಷದ ಟ್ಯಾಕ್ಸಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅಧಿಕಾರಿಗಳು ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಅಭಿಷೇಕ್...

ಅಮೆರಿಕ ಕೋರ್ಟ್ ಮೆಟ್ಟಿಲೇರಿದ ಅದಾನಿ : ಎಸ್‌ಇಸಿ ವಂಚನೆ ಪ್ರಕರಣ ವಜಾಗೊಳಿಸುವಂತೆ ಮನವಿ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೆರಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್...

ಜಮ್ಮು-ಕಾಶ್ಮೀರ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಆರೋಪ; ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಮನೋಜ್ ಸಿನ್ಹಾ

ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ್ದಾರೆ ಎಂದು...

ಭಾರಿ ಜನ ಬೆಂಬಲದ ನಡುವೆ ಭವಾನಿಪುರದಲ್ಲಿ ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ: ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟ ಮೆರವಣಿಗೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ಕಾಲಿಘಾಟ್ಕಾಲ್ ನಿವಾಸದಿಂದ ಹೊರಬಂದು ಭಬಾನಿಪುರ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳಿದರು, ಆ ಸಮಯದಲ್ಲಿ ಬೆಂಬಲಿಗರ ದೊಡ್ಡ ಗುಂಪೊಂದು ತೃಣಮೂಲ ಕಾಂಗ್ರೆಸ್...

‘ಜ್ಞಾನೇಶ್ ಕುಮಾರ್ ನಮಗೆ ‘ಗೆಟ್ ಲಾಸ್ಟ್’ ಅಂದ್ರು’ : ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಸಭೆ ಬಳಿಕ ಟಿಎಂಸಿ ನಾಯಕರಿಂದ ಆರೋಪ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಲ್ವರು ಸದಸ್ಯರ ನಿಯೋಗ ನಡೆಸಿದ ಸಭೆಯು ಬುಧವಾರ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಈ ವೇಳೆ ಚುನಾವಣಾ ಆಯುಕ್ತರು ನಮಗೆ...