“ಒಂದು ಸ್ವತಂತ್ರ ಮಾಧ್ಯಮವನ್ನು ನನಗೆ ಕೊಡಿ. ಸ್ವತಂತ್ರ ಸಂಸ್ಥೆಗಳನ್ನು ನೀಡಿ. ಮರುಕ್ಷಣ ಈ ಕೇಂದ್ರ ಸರ್ಕಾರ ಆಡಳಿತದಲ್ಲಿರುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಕೈಗೊಂಡಿದ್ದ ಯಾತ್ರೆಯ ಅಂತಿಮ ದಿನವಾದ ಇಂದು ಪಂಜಾಬಿನ ಪಟಿಯಾಲದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ
ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ್‍ಯಾಲಿ
ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ರಾಹುಲ್ ಗಾಂಧಿ, “ದುರ್ಬಲಗೊಂಡಿರುವುದು ವಿರೋಧ ಪಕ್ಷಗಳಲ್ಲ. ನಮ್ಮ ಸುದ್ದಿ ಮಾಧ್ಯಮಗಳನ್ನು, ಸಂಸ್ಥೆಗಳನ್ನು ಎಲ್ಲವನ್ನೂ ಕೈವಶ ಮಾಡಿಕೊಳ್ಳಲಾಗಿದೆ. ಒಂದು ಸ್ವತಂತ್ರ ಮಾಧ್ಯಮವನ್ನು ನನಗೆ ಕೊಡಿ, ಸ್ವತಂತ್ರವಾಗಿರುವ ಸಂಸ್ಥೆಗಳನ್ನು ಕೊಡಿ. ಮರುಗಳಿಗೆ ಈ ಸರಕಾರ ಅಧಿಕಾರದಲ್ಲಿ ಇರುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕರಾಳ ಕಾಯ್ದೆಗಳನ್ನು ತೆಗೆದುಹಾಕುತ್ತದೆ: ರಾಹುಲ್ ಗಾಂಧಿ
“ಸರಿ ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂಬುದು ನಿಮ್ಮ ಆರೋಪ. ಆದರೆ ಗೆಳಯರೇ, ನೀವೂ ಸಹ ಗುಲಾಮಗಿರಿಗೆ ಒಳಗಾಗುತ್ತಿದ್ದೀರಿ. ಒಂದು ದೇಶದ ಭೂಭಾಗವನ್ನು ಇನ್ನೊಂದು ದೇಶ ಆಕ್ರಮಿಸಿದೆ. ಆದರೆ ಮಾಧ್ಯಮಗಳೂ ಕೂಡ ಸರ್ಕಾರವನ್ನು ಪ್ರಶ್ನಿಸದೇ ಇರುವಂತಹ ಪರಿಸ್ಥಿತಿಯನ್ನು ಜಗತ್ತಿನಲ್ಲಿ ಯಾವುದೇ ದೇಶ ಇಂದು ಎದುರಿಸುತ್ತಿಲ್ಲ. ನೀವೇಕೆ ಅವರನ್ನು ಪತ್ರಿಕಾಗೋಷ್ಠಿಗಳಲ್ಲಿ ಪ್ರಶ್ನಿಸಬಾರದು?” ಎಂದು ಮಾಧ್ಯಮಗಳಿಗೆ ಮರುಪ್ರಶ್ನೆ ಮಾಡಿದ್ದಾರೆ.
“ಸರ್ಕಾರ ವಿವಿಧ ಸಂಸ್ಥೆಗಳನ್ನು ತನ್ನ ಕೈವಶ ಮಾಡಿರಬಹುದು. ಆದರೆ ರೈತರನ್ನು, ಯುವಜನತೆಯನ್ನು ಹಾಗೂ ಸಣ್ಣ ವರ್ತಕರ ವಿಚಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಮೋದಿ ಸರ್ಕಾರದ ನೀತಿಗಳಿಂದ ತೀವ್ರ ಬಾಧಿತಕ್ಕೊಳಗಾಗಿರುವ ಜನರೊಂದಿಗೆ ನಾನಿದ್ದೇನೆ. ನಾನು ತಾಳ್ಮೆ ಇರುವ ವ್ಯಕ್ತಿ. ಜನರಿಗೆ ಸತ್ಯದ ಅರಿವು ಆಗುವ ತನಕ ಕಾಯುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: ವಿವಾದಾತ್ಮಕ ಮಸೂದೆ ವಿರುದ್ಧ ನಿಲ್ಲದ ರೈತರ ಪ್ರತಿಭಟನೆ: ಜೈ ಕಿಸಾನ್ ಆಂದೋಲನ
ಕೃಷಿ ಮಸೂದೆಗಳನ್ನು ವಿರೋಧಿಸಿ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಪಂಜಾಬ್‌ನಿಂದ ದೆಹಲಿಯವರೆಗೆ ಟ್ರ್ಯಾಕ್ಟರ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಹರಿಯಾಣ ಗಡಿಯ ಬಳಿ ಅವರನ್ನು ತಡೆಯಲಾಗಿದೆ. ವಿಶೇಷವೆಂದರೆ ಈ ರ‍್ಯಾಲಿಯಲ್ಲಿ ರಾಹುಲ್ ಗಾಂಧಿಯವರೇ ಸ್ವತಃ ಟ್ರ್ಯಾಕ್ಟರ್ ಚಲಾಯಿಸಿದ್ದರು.
ತಮ್ಮನ್ನು ಗಡಿಯಲ್ಲಿ ತಡೆದಿದ್ದನ್ನು ವಿರೋಧಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಅವರು ನಮ್ಮನ್ನು ಹರಿಯಾಣ ಗಡಿಯ ಬ್ರಿಡ್ಜ್ ಬಳಿ ತಡೆಯಲಾಗಿದೆ. ನಾನು ಅಲುಗಾಡುವುದಿಲ್ಲ. ಇಲ್ಲಿ ಕಾಯುವುದಕ್ಕೆ ನನಗೆ ಸಂತೋಷವಿದೆ. 1 ಗಂಟೆ, 5 ಗಂಟೆ, 24 ಗಂಟೆ, 100 ಗಂಟೆಗಳು, 1000 ಗಂಟೆಗಳು ಅಥವಾ 5000 ಗಂಟೆಗಳು ಬೇಕಾದರೂ ಕಾಯುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
They have stopped us on a bridge on the Haryana border. I’m not moving and am happy to wait here.
1 hour, 5 hours, 24 hours, 100 hours, 1000 hours or 5000 hours. pic.twitter.com/b9IjBSe7Bg
— Rahul Gandhi (@RahulGandhi) October 6, 2020
ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ”ಅನ್ನದಾತ’ರ ಪ್ರತಿಭಟನೆ


