Homeಮುಖಪುಟ"ದಿ ಕಪಿಲ್‌ ಶರ್ಮಾ ಶೋ" ಬಾಯ್ಕಾಟ್: ಸಿಡಿದೆದ್ದ ಅರ್ನಾಬ್ ಅಭಿಮಾನಿಗಳು?

“ದಿ ಕಪಿಲ್‌ ಶರ್ಮಾ ಶೋ” ಬಾಯ್ಕಾಟ್: ಸಿಡಿದೆದ್ದ ಅರ್ನಾಬ್ ಅಭಿಮಾನಿಗಳು?

ಅರ್ನಾಬ್ ಗೋಸ್ವಾಮಿಯ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಈ ಪ್ರದರ್ಶನವನ್ನು ನೊಡಿವುದಿಲ್ಲ, ಮತ್ತು ಇದನ್ನು ಬಾಯ್ಕಾಟ್ ಮಾಡಬೇಕು ಎಂದು ಟ್ವಿಟ್ಟರ್‌ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಜೊತೆಗೆ ಈ ಪ್ರದರ್ಶನವನ್ನು ಬೆಂಬಲಿಸಿ ಹಲವರು ಟ್ವೀಟ್‌ಗಳನ್ನು ಮಾಡಿದ್ದಾರೆ.

- Advertisement -
- Advertisement -

ಅರ್ನಾಬ್ ಗೋಸ್ವಾಮಿ ವಿರುದ್ಧ ವಿವಾದಾತ್ಮಕ ಪ್ರದರ್ಶನ ನೀಡಿದ್ದಕ್ಕಾಗಿ “ದಿ ಕಪಿಲ್ ಶರ್ಮಾ ಶೋ”ವನ್ನು ಬಾಯ್ಕಾಟ್ ಮಾಡಬೇಕು ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದು, ಕಳೆದ ವಾರ ಅರ್ನಾಬ್ ಗೊಸ್ವಾಮಿಯನ್ನು ಅನುಕರಿಸಿ ಪ್ರದರ್ಶನವೊಂದನ್ನು ನೀಡಿದ್ದರು.

ಇತ್ತೀಚೆಗೆ ಹಿಂದಿಯ ಪ್ರಖ್ಯಾತ ದಿ ಕಪಿಲ್ ಶರ್ಮಾ ಶೋ ಹಲವು ಕಾರಣಗಳಿಗೆ ಸುದ್ಧಿಯಲ್ಲಿತ್ತು. ಕಳೆದ ವಾರ ಅರ್ನಾಬ್ ಗೋಸ್ವಾಮಿಯನ್ನು ಅನುಕರಿಸಿ, ಹೆಸರು ಹೇಳದೆಯೇ ಆತನ ಹಾವ-ಭಾವಗಳನ್ನು ಅನುಕರಿಸಿ ಶೋ ಮಾಡಿದ್ದರು. ಈ ಶೋನಲ್ಲಿ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದ ಅರ್ನಾಬ್ ಗೊಸ್ವಾಮಿಯ ಮೇಲೆ ಕಿಕು ಶಾರ್ದ ಹಾಗೂ ಕೃಷ್ಣ ಅಭಿಷೇಕ್ ಪ್ರತಿದಾಳಿಯನ್ನು ಮಾಡಿದ್ದರು. ಇಂದು ಇಂಡಿಯಾ ಟುಡೆಯ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಕೂಡ ಅರ್ನಾಬ್‌ ಮೇಲೆ ತೀವ್ರವಾದ ವಾಗ್ದಾಳಿ ನಡೆಸಿದ್ದು ವೈರಲ್ ಆಗಿತ್ತು.

“ಅರ್ನಾಬ್ ಗೋಸ್ವಾಮಿ ನೀವು ಬನಾನಾ ರಿಪಬ್ಲಿಕ್ ಚಾನೆಲ್ ನಡೆಸುತ್ತಿದ್ದೀರಿ. ನಿಮ್ಮ ವಿಚಾರಗಳಿಗೆ ತಕ್ಕಂತೆ ಉದ್ದೇಶಪೂರ್ವಕವಾಗಿ ವಿಷಯಗಳನ್ನು ತಿರುಚುತ್ತಿದ್ದೀರಿ. ಪತ್ರಿಕೋದ್ಯಮವನ್ನು ನೀವು ಇಷ್ಟೊಂದು ಕೀಳು ಮಟ್ಟಕ್ಕೆ ಒಯ್ಯಬೇಡಿ. ನಿಮಗೆ ಒಂದು ಸಲಹೆ ನೀಡುತ್ತಿದ್ದೇನೆ. ಪತ್ರಿಕೋದ್ಯಮವೆಂದರೆ ಇದಲ್ಲ. ಕಳೆದ ಎರಡು ತಿಂಗಳಿನಿಂದ ನೀವು ಪ್ರಸಾರ ಮಾಡುತ್ತಿದ್ದ ಅಸಹ್ಯವಾದ ವಿಚಾರವನ್ನು ಕೇಳಿಸಿಕೊಂಡು ನಾನು ಸುಮ್ಮನಿದ್ದೆ. ಟಿಆರ್‌ಪಿಗಿಂತಲೂ ಹೆಚ್ಚಾಗಿರುವುದು ಇದೆ ಗೆಳಯ, ಅದು ಟೆಲಿವಿಶನ್ ರೆಸ್ಪೆಕ್ಟ್ ಪಾಯಿಂಟ್ಸ್” ಎಂದು ‘ಇಂಡಿಯಾ ಟುಡೆ’ ಟಿವಿ ವಾಹಿನಿಯ ಕಾರ್ಯಕ್ರಮ ಪ್ರಸಾರದ ವೇಳೆ ತಮ್ಮ ತಾಳ್ಮೆ ಕಳೆದುಕೊಂಡು ರಾಜ್‌ದೀಪ್ ಸರ್ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ನಿಮ್ಮದು ಬನಾನಾ ರಿಪಬ್ಲಿಕ್ ಚಾನೆಲ್: ಅರ್ನಾಬ್ ಗೋಸ್ವಾಮಿ ವಿರುದ್ಧ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಆಕ್ರೋಶ

ಈಗ ಅರ್ನಾಬ್ ಗೋಸ್ವಾಮಿಯ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಈ ಪ್ರದರ್ಶನವನ್ನು ನೋಡುವುದಿಲ್ಲ, ಮತ್ತು ಇದನ್ನು ಬಾಯ್ಕಾಟ್ ಮಾಡಬೇಕು ಎಂದು ಟ್ವಿಟ್ಟರ್‌ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಜೊತೆಗೆ ಈ ಪ್ರದರ್ಶನವನ್ನು ಬೆಂಬಲಿಸಿ ಹಲವರು ಟ್ವೀಟ್‌ಗಳನ್ನು ಮಾಡಿದ್ದಾರೆ.

ಪ್ರಶಾಂತ್ ಎಂಬುವವರು ಟ್ವೀಟ್ ಮಾಡಿದ್ದು, “#BoycottKapilSharmaShow, ನಿಮ್ಮ ಪ್ರದರ್ಶನದಿಂದ ಸ್ವಲ್ಪ ತಾಳ್ಮೆ ನಿರೀಕ್ಷಿಸಿದ್ದೆ. ಆದರೆ ಇಂದು ನಮ್ಮಂತಹವರನ್ನು ನಿರಾಶೆಗೊಳಿಸಿದಿರಿ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಯ್ಕಾಟ್ ಚೀನಾ: ಟೀಶರ್ಟ್‌ ಸುಟ್ಟು ಪ್ರತಿಭಟಿಸಿದ ಜೊಮಾಟೊ ಉದ್ಯೋಗಿಗಳು!

ಅಲೋಕ್ ಶ್ರಿವಾಸ್ತವ ಎಂಬುವವರು ಈ ಪ್ರದರ್ಶನದ ಪರವಾಗಿ ಟ್ವೀಟ್ ಮಾಡಿದ್ದು, “ಎಂಥಾ ಉಲ್ಲಾಸದಾಯಕವಾದ ಮತ್ತು ಅದ್ಭುತವಾದ ಪ್ರದರ್ಶನ” ಎಂದು ಬರೆದುಕೊಂಡಿದ್ದು, ತಂಡಕ್ಕೆ ಜಿಂದಾಬಾದ್ ಹೇಳಿದ್ದಾರೆ.

ಇದನ್ನೂ ಓದಿ: ಇದ್ದಕ್ಕಿದ್ದಂತೆ ಸಾಧ್ಯವಿಲ್ಲ: ’ಬಾಯ್ಕಾಟ್ ಚೀನಾ’ ಅಭಿಯಾನಕ್ಕೆ ಕ್ರೀಡಾ ಕ್ಷೇತ್ರದ ವಿರೋಧವೇಕೆ?

ಇಷ್ಟು ದಿನ ಪ್ರದರ್ಶನವನ್ನು ಇಷ್ಟಪಡುತ್ತಿದ್ದವರು, ಅರ್ನಾಬ್ ವಿರುದ್ಧ ಒಂದು ಎಪಿಸೋಡ್ ಮಾಡಿದ್ದಾರೆಂದು ಹೇಳಿ ಇಡೀ ಪ್ರದರ್ಶನವನ್ನು ಬಾಯ್ಕಾಟ್ ಮಾಡಿ ಎಂದು ಹೇಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಇದರ ಹಿಂದೆ ಯಾವುದೋ ಪಕ್ಷದ ಐಟಿ ಸೆಲ್ ಕೆಲಸ ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಾಯ್ಕಾಟ್, ಬ್ಯಾನ್‌ಗಳು ತುಂಬಾ ಹೆಚ್ಚಾಗುತ್ತಿದ್ದು, ತಮಗೆ ಮತ್ತು ತಮ್ಮ ಸಿದ್ಧಾಂತಕ್ಕೆ ಹೊಂದದ ಸಿನಿಮಾ, ರಿಯಾಲಿಟಿ ಶೋ, ನಟ, ನಟಿ, ನಿರ್ದೇಶಕ ಮುಂತಾದ ಎಲ್ಲರನ್ನೂ ಬಾಯ್ಕಾಟ್ ಮಾಡಬೇಕು ಎಂದು ತುಂಬಾ ಜನರು ದನಿಯೆತ್ತುತ್ತಾರೆ. ಆದರೆ ಇದಾದ ನಂತರ, ಯಾರನ್ನು ಅಥವಾ ಯಾವುದನ್ನು ಬಾಯ್ಕಾಟ್ ಮಾಡಬೇಕು ಎಂದು ಹೇಳಿದ್ದರೋ ಅವುಗಳೇ ಅತ್ಯುತ್ತಮ ಪ್ರದರ್ಶನ ಕಾಣುವ ಸಾಧ್ಯತೆಗಳಿವೆ.

ಈ ಸಾಲಿಗೆ ಈಗ “ದಿ ಕಪಿಲ್ ಶರ್ಮಾ ಶೋ” ಸೇರಿಕೊಳ್ಳುವುದೇ ಎಂದು ಕಾದುನೊಡಬೇಕಿದೆ.


ಇದನ್ನೂ ಓದಿ: ಮತ್ತೊಂದು ಧೋಕ್‍ಲಾಂ ಆಗಲಿದೆಯೇ ಲಡಾಖ್‍ನ ಗಾಲ್ವನ್ ಕಣಿವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...