Homeಕರ್ನಾಟಕಹಸಿದ ಅಲೆಮಾರಿಗಳಿಗೂ ವಿಶೇಷ ಪ್ಯಾಕೇಜ್ ನೀಡಿ: ಮುಖ್ಯಮಂತ್ರಿಗೆ ಸಿ.ಎಸ್.ದ್ವಾರಕಾನಾಥ್ ಆಗ್ರಹ

ಹಸಿದ ಅಲೆಮಾರಿಗಳಿಗೂ ವಿಶೇಷ ಪ್ಯಾಕೇಜ್ ನೀಡಿ: ಮುಖ್ಯಮಂತ್ರಿಗೆ ಸಿ.ಎಸ್.ದ್ವಾರಕಾನಾಥ್ ಆಗ್ರಹ

'ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿಯಂತಹ ಯಾವುದೇ ದಾಖಲೆಗಳಿಲ್ಲದೆ ಇರುವುದರಿಂದ ಸರ್ಕಾರ  ನೀಡುವ ಎಲ್ಲಾ  ನೆರವಿನಿಂದ ಈ ಸಮುದಾಯ ವಂಚಿತವಾಗುತ್ತಿದೆ.’

- Advertisement -
- Advertisement -

ಊರಾಚೆಯ ಸ್ಮಶಾನಗಳಲ್ಲಿ, ಪಾಳುಮಂಟಪಗಳಲ್ಲಿ, ರೈಲ್ವೆ ಹಳಿಗಳ ಪಕ್ಕಗಳಲ್ಲಿ, ಹಳೆಯ ಬಟ್ಟೆಗಳಿಂದ ಜೋಪಡಿಗಳನ್ನು ಹಾಕಿಕೊಂಡು ಜೀವನ ನಡೆಸುವ ಅಲೆಮಾರಿ ಸಮುದಾಯಗಳು ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಹಸಿವಿನಿಂದ ಕಂಗಾಲುತ್ತಿವೆ. ಕೊರೊನಾ ಲಾಕ್‌ಡೌನ್‌ನಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಗೌರವಾದ್ಯಕ್ಷ, ಡಾ.ಸಿ.ಎಸ್.ದ್ವಾರಕಾನಾಥ್ ಮುಖ್ಯಮಂತ್ರಿಗೆಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದಿಂದ ಸಂಕಷ್ಟದಲ್ಲಿ ಸಿಲುಕಿರುವ, ಆಟೋ ಚಾಲಕರಿಗೆ, ವಾಹನ ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ, ಕ್ಷೌರಿಕರು, ಮಡಿವಾಳರು, ನೇಕಾರರೇ ಮುಂತಾದ ಹಿಂದುಳಿದ ಸಮುದಾಯಗಳಿಗೆ ಹಾಗೂ ಹಲವಾರು ಕಾರ್ಮಿಕ  ವರ್ಗದ ಪ್ರತಿ ಕುಟುಂಬಕ್ಕೂ ನೆರವನ್ನು ಘೋಷಣೆ ಮಾಡಲಾಗಿದೆ.

ಆದರೆ, ಊರಾಚೆಯ ಸ್ಮಶಾನದಲ್ಲಿ, ಪಾಳುಮಂಟಪಗಳಲ್ಲಿ, ರೈಲ್ವೆ ಹಳಿಗಳ ಪಕ್ಕದಲ್ಲಿ, ಹಳೆಯ ಬಟ್ಟೆಗಳಿಂದ ಜೋಪಡಿಗಳನ್ನು ಹಾಕಿಕೊಂಡು ಊರಾಚೆ ಬದುಕುವ ಅಲೆಮಾರಿಗಳ ಆಕ್ರಂದನವನ್ನು ಒಮ್ಮೆ ಗಮನಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಕುರಿತು 14 ಏಪ್ರಿಲ್ ಮತ್ತು ಮೇ 8 ರಂದು ಎರಡು ಬಾರಿ ಪತ್ರ ಬರೆದು ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾಗೆ ಔಷಧಿ ನೀಡಲು ನಾಟಿ ವೈದ್ಯ ನೆಲ್ಲೂರು ಆನಂದಯ್ಯಗೆ ಆಂಧ್ರ ಸರ್ಕಾರದ ಒಪ್ಪಿಗೆ

’ಈ ಸಮುದಾಯಗಳು ಯಾವ ಸರ್ಕಾರಿ  ಅಧಿಕಾರಿಗಳಿಗಾಗಲಿ ಅಥವಾ ಜನ ಪ್ರತಿನಿಧಿಗಳಿಗಾಗಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ನಮ್ಮ ಅಲೆಮಾರಿಗಳು ಊರೂರು ಅಲೆಯುತ್ತಾ ತಮ್ಮ ಕುಲ ಕಸುಬುಗಳಾದ ತೊಗಲು ಗೊಂಬೆಯಾಟ, ಬೀಗ ರಿಪೇರಿ, ಛತ್ರಿ ರಿಪೇರಿ, ಗಾರುಡಿ, ಕಸರತ್ತಿನ ಕಲೆ, ದೊಂಬರಾಟ, ನಾಟಿಮದ್ದು ಮಾರುವುದು, ಸೂಜಿದಾರ, ಪಿನ್ನು ಮಾರುವುದು, ಕೂದಲು ಆರಿಸುವುದು, ಹಚ್ಚೆ ಹಾಕುವುದು, ಪ್ಲಾಸ್ಟಿಕ್ ವಸ್ತುಗಳ ಮಾರಾಟ, ದೇವರ ಪೋಟೋ ಮಾರುವುದು, ಶಾಸ್ತ್ರ ಹೇಳುವುದು, ಮೋಡಿ ಆಟ ಇತ್ಯಾದಿ ಪ್ರದರ್ಶನ ಕಲೆಗಳ ಸೇವೆ ಮಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿರುತ್ತಾರೆ’.

’ಹೀಗೆ ಅಲೆಮಾರಿಗಳಾಗಿರುವುದರಿಂದ ಇವರಿಗಾಗಲಿ, ಇವರ ಮಕ್ಕಳಿಗಾಗಲಿ ಶಿಕ್ಷಣವೆಂಬುದು ಮರೀಚಿಕೆಯಾಗಿದೆ‌. ಇವರಿಗೆ ರೇಷನ್ ಕಾರ್ಡ್ ಆಗಲಿ, ಆಧಾರ್ ಕಾರ್ಡ್ ಆಗಲಿ, ಗುರುತಿನ ಚೀಟಿಯಾಗಲಿ, ಯಾವುದೇ ದಾಖಲೆಗಳಿಲ್ಲದೆ ಇರುವುದರಿಂದ ಸರ್ಕಾರ  ನೀಡುವ ಎಲ್ಲಾ  ನೆರವಿನಿಂದ ಅಪಾರವಾಗಿ ವಂಚಿತರಾಗುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಅಲೆಮಾರಿಗಳಿಗೆ ಸರ್ಕಾರದಿಂದ ನೀಡುವ ಯಾವುದೇ ಹಣಕಾಸಿನ ನೆರವಾವಾಗಲಿ ಹಾಗೂ ಸರ್ಕಾರದಿಂದ ವಿತರಿಸಿದ ಪಡಿತರವಾಗಲಿ ಸಿಗದೆ ಏಲ್ಲಾ ಸೌಲಭ್ಯಗಳಿಂದ  ವಂಚಿತರಾಗಿದ್ದಾರೆ’ ಎಂದು ದ್ವಾರಕಾನಾಥ್ ತಿಳಿಸಿದ್ದಾರೆ.

’ಇಂತಹ ಸೌಲಭ್ಯ ವಂಚಿತ ಅಲೆಮಾರಿಗಳು ಹಸಿವಿನಿಂದ ನರಳುತ್ತಾ  ಅನ್ನಕ್ಕಾಗಿ  ಪರಿತಪಿಸುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ  ಅಲೆಮಾರಿಗಳ ಜೀವನ ತುಂಬಾ ದುಸ್ಥಿತಿಯಲ್ಲಿದೆ ಹಾಗೂ ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದು, ಅನೇಕ ಅಲೆಮಾರಿಗಳಿಗೆ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಕೊರೊನಾದಿಂದ ಸಾಯುವುದು ಒಂದು ಕಡೆಯಾದರೆ ಹಸಿವಿನಿಂದ ಕೆಲವೇ ದಿನಗಳಲ್ಲಿ ಅನೇಕರು ಸಾಯುವುದರಲ್ಲಿ ಯಾವುದೇ ಸಂಶಯವಿಲ್ಲ.
ರಾಜ್ಯದ ಕೆಲವು ಕಡೆ ಈ ಅಲೆಮಾರಿಗಳಿಗೆ ಸಂಘ ಸಂಸ್ಥೆಗಳು ಅಲ್ಪ ಸ್ವಲ್ಪ ಸಹಾಯ ಮಾಡಿರುವುದನ್ನು ಬಿಟ್ಟರೆ ಬೇರೆ  ಯಾವುದೇ ಜಿಲ್ಲಾಡಳಿತಗಳಾಗಲಿ, ತಾಲ್ಲೂಕು ಆಡಳಿತಗಳಾಗಲಿ ನೆರವು ನೀಡದೇ ಮೌನವಹಿಸಿವೆ’ ಎಂದು ಆರೋಪಿಸಲಾಗಿದೆ.

‌ಅಲೆಮಾರಿಗಳ ಅಭಿವೃದ್ಧಿಗಾಗಿಯೇ ಸ್ಥಾಪನೆಯಾದ ರಾಜ್ಯ ಪ.ಜಾತಿ, ಪ.ವರ್ಗದ ಅಲೆಮಾರಿ ಅಭಿವೃದ್ಧಿ ಕೋಶದಿಂದಾಗಲಿ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದಾಗಲಿ  ಯಾವುದೇ ನೆರವನ್ನೂ ಸಹ ಈವರೆಗೂ ನೀಡಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

1) ನಮ್ಮ ರಾಜ್ಯದಲ್ಲಿ ಇರುವ ಅಲೆಮಾರಿಗಳ ಪ್ರತಿ ಕುಟುಂಬಕ್ಕೂ ಸಹ 5,000 ರೂಪಾಯಿಗಳ ನೆರವಿನ ಹಣವನ್ನು ಅತ್ಯಂತ ತುರ್ತಾಗಿ ಬಿಡುಗಡೆ ಮಾಡಬೇಕು.
2) ಸಂಪೂರ್ಣ ಅಡುಗೆ ಪದಾರ್ಥಗಳಿರುವ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಕೂಡಲೆ ವಿತರಿಸಬೇಕು ಎಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಆಗ್ರಹಿಸಿದೆ.


ಇದನ್ನೂ ಓದಿ: ಏಕಾಏಕಿ ಎತ್ತಂಗಡಿ: ಬೆಂಗಳೂರಿನಲ್ಲಿ ನೆಲೆಯಿಲ್ಲದೆ ಅಲೆಯುತ್ತಿರುವ 15 ಬಡ ಕುಟುಂಬಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...