ಒಕ್ಕೂಟ ಸರ್ಕಾರದ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಪುತ್ರಿ ಜೊಯಿಶ್ ಇರಾನಿ ನಡೆಸುತ್ತಿರುವ ರೆಸ್ಟೋರೆಂಟ್ ಅಕ್ರಮ ಬಾರ್ ಲೈಸೆನ್ಸ್ ಹೊಂದಿದೆ ಎಂಬ ಆರೋಪದ ಮೇಲೆ ಗೋವಾ ಅಬಕಾರಿ ಆಯುಕ್ತರು ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.
‘ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್’ ಎಂಬ ಐಶಾರಾಮಿ ರೆಸ್ಟೋರೆಂಟ್ ಉತ್ತರ ಗೋವಾದ ಅಸ್ಸಾಗಾವೊದಲ್ಲಿದ್ದು, ಅದನ್ನು ಜೋಯಿಶ್ ಇರಾನಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ವರ್ಷಗಳ ಹಿಂದೆ ನಿಧನ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ರೆಸ್ಟೋರೆಂಟ್‌ಗೆ ಅಕ್ರಮವಾಗಿ ಪರವಾನಗಿಯನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜೋಯಿಶ್ ವಿರುದ್ಧ ವಕೀಲರಾದ ಐರಿಸ್ ರೋಡ್ರಿಗಸ್ ಅವರು, “ಜೋಯಿಶ್ ಅವರು ಮೋಸದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮದ್ಯದ ಪರವಾನಗಿಯನ್ನು ಪಡೆದುಕೊಂಡಿದ್ದಾರೆ” ಎಂದು ದೂರು ನೀಡಿದ್ದರು. ಅವರ ದೂರಿನಂತೆ, ಜುಲೈ 21 ರಂದು ಗೋವಾದ ಅಬಕಾರಿ ಕಮಿಷನರ್ ನಾರಾಯಣ್ ಎಂ. ಗಡ್ ಅವರು ಜೊಯಿಶ್ ಇರಾನಿ ನಡೆಸುತ್ತಿರುವ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ಗೆ ಷೋಕಾಸ್ ನೋಟಿಸ್ ನೀಡಿದ್ದರು.
ಇದನ್ನೂ ಓದಿ: ತಾಪ್ಸಿ ಪನ್ನು ಅಭಿನಯದ ’ಥಪ್ಪಡ್’ ಟ್ರೈಲರ್ ನೋಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು?
“ಪರವಾನಗಿದಾರರು 17/05/2021 ರಂದು ನಿಧನರಾಗಿದ್ದರೂ ಸಹ, ಕಳೆದ ತಿಂಗಳು ಪರವಾನಗಿಯನ್ನು ನವೀಕರಿಸಲಾಗಿದೆ” ಎಂದು ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಕರಣದ ವಿಚಾರಣೆಯನ್ನು ಜುಲೈ 29ಕ್ಕೆ ನಿಗದಿಪಡಿಸಲಾಗಿದೆ.
“ಪರವಾನಗಿ ನವೀಕರಣಕ್ಕಾಗಿ ಅರ್ಜಿಯನ್ನು ಜೂನ್ 22, 2022 ರಂದು ಆಂಥೋನಿ ದ್ಗಾಮಾ ಅವರ ಹೆಸರಿನಲ್ಲಿ ಮಾಡಲಾಗಿದೆ. ಆದರೆ ದ್ಗಾಮಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ನಿಧನರಾದರು. ‘ದಯವಿಟ್ಟು 2022-23ನೇ ಸಾಲಿಗೆ ಈ ಪರವಾನಗಿಯನ್ನು ನವೀಕರಿಸಿ ಮತ್ತು ಆರು ತಿಂಗಳೊಳಗೆ ಈ ಪರವಾನಗಿಯನ್ನು ವರ್ಗಾಯಿಸಲಾಗುವುದು’ ಎಂದು ಲೈಸನ್ಸ್ ಹೊಂದಿರುವ ದ್ಗಾಮಾ ಪರವಾಗಿ ಬೇರೆ ಯಾರಾದರೂ ಸಹಿ ಮಾಡಿದ್ದಾರೆ” ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಆರ್‌ಟಿಐ ಅರ್ಜಿಯ ಮೂಲಕ ದಾಖಲೆಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿರುವ ವಕೀಲ ರೋಡ್ರಿಗಸ್ ಅವರು, “ಕೇಂದ್ರ ಸಚಿವರ ಕುಟುಂಬವು ಅಬಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಅಸ್ಸಾಗಾವೊ ಪಂಚಾಯತ್‌ನೊಂದಿಗೆ ಸೇರಿಸಿ ನಡೆಸಿದ ಈ ಮೆಗಾ ವಂಚನೆಯ ಬಗ್ಗೆ ಸಂಪೂರ್ಣ ತನಿಖೆಯನ್ನು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜನರು ಏನು ತೊಡುತ್ತಾರೆ ಎಂಬುದರಲ್ಲಿ ರಾಜಕಾರಣಿಗಳು ಮೂಗು ತೂರಿಸಬೇಕಿಲ್ಲ: ಸ್ಮೃತಿ ಇರಾನಿ
“ಗೋವಾದಲ್ಲಿ ಅಬಕಾರಿ ನಿಯಮಗಳು ಅಸ್ತಿತ್ವದಲ್ಲಿರುವ ರೆಸ್ಟೋರೆಂಟ್‌ಗೆ ಮಾತ್ರ ಬಾರ್ ಪರವಾನಗಿಯನ್ನು ನೀಡುತ್ತವೆ. ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ ಪ್ರಕರಣದಲ್ಲಿ, ಅಬಕಾರಿ ಇಲಾಖೆಯು ಕಳೆದ ವರ್ಷ ಫೆಬ್ರವರಿಯಲ್ಲಿ ಐಷಾರಾಮಿ ರೆಸ್ಟೋರೆಂಟ್ ಪರವಾನಗಿಯನ್ನು ಹೊಂದುವ ಮೊದಲೇ ಮಾಲೀಕರಿಗೆ ವಿದೇಶಿ ಮದ್ಯ, ಭಾರತೀಯ ನಿರ್ಮಿತ ವಿದೇಶಿ ಮದ್ಯ ಮತ್ತು ದೇಶೀಯ ಮದ್ಯಕ್ಕೆ ಪರವಾನಗಿ ನೀಡಲು ನಿಯಮಗಳನ್ನು ಉಲ್ಲಂಘಿಸಿತ್ತು” ಎಂದು ವಕೀಲ ರೋಡಿಗ್ರಸ್ ಅವರು ಹೇಳಿದ್ದಾರೆ.
ಎಲ್ಲಾ ಅಬಕಾರಿ ಅರ್ಜಿಗಳನ್ನು ಆಂಥೋನಿ ದ್ಗಾಮಾ ಹೆಸರಿನಲ್ಲಿ ಮಾಡಲಾಗಿದೆ, ಅವರ ಆಧಾರ್ ಕಾರ್ಡ್ ಡಿಸೆಂಬರ್ 2020 ರಲ್ಲಿ ನೀಡಲಾಗಿದ್ದು ಅವರನ್ನು ಮುಂಬೈನ ವಿಲೆ ಪಾರ್ಲೆ ನಿವಾಸಿ ಎಂದು ದಾಖಲೆ ಹೇಳುತ್ತದೆ.
ಪ್ರಕರಣದ ಸುಳಿವು ಸಿಕ್ಕ ನಂತರ ವಕೀಲ ರೋಡಿಗ್ರಸ್ ಅವರು, ತಿಂಗಳುಗಳ ಕಾಲ ಹುಡುಕಾಡಿ ಮುಂಬೈನ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ದ್ಗಾಮಾ ಅವರ ಮರಣ ಪ್ರಮಾಣಪತ್ರವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ವ್ಯಕ್ತಿಯು ಗೋವಾದಲ್ಲಿ 1,200 ಚದರ ಮೀಟರ್ ವಿಸ್ತಾರವಾದ ಆಸ್ತಿಯೊಂದಿಗೆ ಐಶಾರಾಮಿ ರೆಸ್ಟೋರೆಂಟ್ ಹೊಂದಲು ಸಾಧ್ಯವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಚಿವೆ ಸ್ಮೃತಿ ಇರಾನಿ ಕುರಿತು ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಆರೋಪ: ಯುಪಿ ಪ್ರಾಧ್ಯಾಪಕ ಜೈಲಿಗೆ
ಆಹಾರದ ಬಗ್ಗೆ ಕಾರ್ಯಕ್ರಮ ನಡೆಸುವ ಕುನಾಲ್ ವಿಜಯ್ಕರ್ ಅವರೊಂದಿಗೆ ಯುಟ್ಯೂಬ್‌ನಲ್ಲಿ ಮಾತನಾಡಿದ್ದ ಜೋಯಿಶ್ ಇರಾನಿ, “ಗೋವಾ ಒಂದು ದೊಡ್ಡ ಪ್ರವಾಸಿ ಕೇಂದ್ರವಾಗಿದ್ದರೂ, ಅದು ಅಂತರಾಷ್ಟ್ರೀಯ ಮಟ್ಟದ ಅತ್ಯುತ್ತಮ ಮಟ್ಟದ ಆಹಾರದ ವಿಷಯದಲ್ಲಿ ಹಿಂದುಳಿದಿದೆ. ಹಾಗಾಗಿ ಸಿಲ್ಲಿ ಸೋಲ್ಸ್ ಕೆಫೆಯನ್ನು ಗೋವಾದ ‘ಆಹಾರ ತಾಣ’ ಆಗಬೇಕು” ಎಂದು ಹೇಳಿದ್ದರು.



ಒಕ್ಕೂಟ ಸರಕಾರದ ಸಂಸ್ಕೃತಿ ಸಚಿವರ ಮಗಳು ಮಗಳು ನಿಯಮಗಳಿಗೆ ಅತೀತರಲ್ಲವಾ!?
O God.What is happening around.
ದುಡ್ಡಿದ್ದವನೇ ದೊಡ್ಡಪ್ಪ… ಭಾಜಪದವರೆಲ್ಲಾ ಮಾಡೋ ಎಲ್ಲಾ ಹಲ್ಕಟ್ ಕೆಲಸಗಳು ಮುಂದೆ ಬಿ ಫ಼ಾರ್ಮ್ ಹಾಕಿಕೊಂಡು ಖುಲಾಸೆಯಾಗ್ತಾರೆ… ಅತ್ಯಂತ ಸುಸ೦ಸ್ಕ್ರುತ ಪಕ್ಷ ನಮ್ಮ ಭಾಜಪ ಪಕ್ಷ.
ಈ ಬಗ್ಗೆ ಇನ್ನಷ್ಟು ವಿಸ್ತೃತ ತನಿಖೆ ನಡೆಯಬೇಕು.
ಸಂಪೂರ್ಣ ಆತ್ಮ ವಿಶ್ವಾಸದೊಂದಿಗೆ INC ನಾಯಕರ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲು ಮಾಡುವ ಮಾತನಾಡುತ್ತಿರುವ ಮಂತ್ರಿಯವರ ವಿರುದ್ಧ Congress ನಾಯಕರು ವಾಗ್ಧಾಳಿ ಮಾಡದಿರುವುದು ವರದಿಯ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಮೂಡಿಸುತ್ತಿದೆ.
ಈಗಿನ ಪರಿಸ್ಥಿತಿಯಲ್ಲಿ ಮಾಧ್ಯಮಗಳು ವಸ್ತುಸ್ಥಿತಿಯ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಹೊಂದಿವೆ ಮತ್ತು ಈ ವರದಿ ಸತ್ಯವಾಗಿದ್ದರೆ, ಅದು ಭಾಜಪ ಆಡಳಿತದ ಅಂತ್ಯದ ಆರಂಭವಾಗಬಲ್ಲದು