Homeಮುಖಪುಟತಾಪ್ಸಿ ಪನ್ನು ಅಭಿನಯದ ’ಥಪ್ಪಡ್’ ಟ್ರೈಲರ್ ನೋಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು?

ತಾಪ್ಸಿ ಪನ್ನು ಅಭಿನಯದ ’ಥಪ್ಪಡ್’ ಟ್ರೈಲರ್ ನೋಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು?

ತಾಪ್ಸಿ ಪನ್ನು ಹೊರತುಪಡಿಸಿ ಈ ಚಿತ್ರದಲ್ಲಿ ಪಪ್ಪೈಲ್ ಗುಲಾಟಿ, ದಿಯಾ ಮಿರ್ಜಾ, ರತ್ನ ಪಾಠಕ್ ಷಾ, ತನ್ವಿ ಅಜ್ಮಿ, ಕುಮುದ್ ಮಿಶ್ರಾ ಮತ್ತು ಮಾನವ್ ಕೌಲ್ ನಟಿಸಿದ್ದಾರೆ. ಈ ಚಿತ್ರವು ಫೆಬ್ರವರಿ 28 ರಂದು ತೆರೆಗೆ ಬರಲಿದೆ.

- Advertisement -
- Advertisement -

ಥಪ್ಪಡ್‌ (ಕೆನ್ನೆಗೆ ಬಾರಿಸುವುದು) ಎಂಬ ಮಹಿಳಾ ಪ್ರಧಾನ ಚಿತ್ರವೊಂದು ಬಾಲಿವುಡ್‌ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ.  ಮುಖ್ಯ ಪಾತ್ರದಲ್ಲಿ ತಾಪ್ಸಿ ಪನ್ನು ನಟಿಸಿದರೆ ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇವರಿಬ್ಬರೂ ಸಹ ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ಜೆಎನ್‌ಯು ವಿದ್ಯಾರ್ಥಿಗಳ ಪರ ನಿಂತಿದ್ದಾರೆ.

ಈ ಕಾಂಬಿನೇಷನ್‌ನ ಥಪ್ಪಡ್‌ ಸಿನೆಮಾದ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಥಪ್ಪಡ್‌ ಟ್ರೈಲರ್ ಬಿಡುಗಡೆಯಾದ ಕೆಲವು ದಿನಗಳ ನಂತರ “ನಾನು ಈ ಸಿನಿಮಾವನ್ನು ಖಂಡಿತವಾಗಿಯೂ ನೋಡುತ್ತೇನೆ ಮತ್ತು ಜನರು ಅದನ್ನು ತಮ್ಮ ಕುಟುಂಬಗಳೊಂದಿಗೆ ನೋಡುತ್ತಾರೆ ಎಂದು ಭಾವಿಸುತ್ತೇನೆ” ಎಂದು ಸಚಿವೆ ಹೇಳಿದ್ದಾರೆ.

ಥಪ್ಪಡ್‌ ಚಿತ್ರದ ಟ್ರೈಲರ್

“ನಾನು ನಿರ್ದೇಶಕರ ರಾಜಕೀಯ ಸಿದ್ಧಾಂತವನ್ನು ಬೆಂಬಲಿಸದಿರಬಹುದು ಅಥವಾ ಕೆಲವು ವಿಷಯಗಳ ಬಗ್ಗೆ ಕೆಲವು ನಟಿರೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು ಆದರೆ ಇದು ನಾನು ಖಂಡಿತವಾಗಿ ನೋಡುವ ಕಥೆಯಾಗಿದೆ” ಎಂದು ಸ್ಮೃತಿ ಇರಾನಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ತಮ್ಮ ಪೋಸ್ಟ್ನಲ್ಲಿ, ಸ್ಮೃತಿ ಇರಾನಿ ಅವರು ಕುಟುಂಬದೊಳಗಿನ ಕಿರುಕುಳವನ್ನು ಒಳಗೊಂಡ ಸಂದರ್ಭಗಳಲ್ಲಿ “ಹೊಂದಾಣಿಕೆ” ಮಾಡಬೇಕಾದ ನಿದರ್ಶನಗಳ ಸಿನಿಮಾ ಮಾತನಾಡುತ್ತದೆ. “ಮಹಿಳೆಯರಿಗೆ ಹೊಡೆಯುವುದು ಸರಿಯಲ್ಲ … ಒಂದು ಕಪಾಳಮೋಕ್ಷವೂ ಸರಿಯಲ್ಲ. ಕೇವಲ ಒಂದು ಕಪಾಳಮೋಕ್ಷವೂ ಅಲ್ಲ” ಎಂದು ಬರೆದುಕೊಂಡಿದ್ದಾರೆ.

ಸಂತೋಷದಿಂದ ಮದುವೆಯಾದ ದಂಪತಿಗಳಲ್ಲಿ ಒಂದು ದಿನ ಪತಿಯು ಮನೆಯ ಪಾರ್ಟಿಯಲ್ಲಿ ಕೆಲವು ಅತಿಥಿಗಳ ಮುಂದೆ ಹೆಂಡತಿಗೆ ಕಪಾಳಕ್ಕೆ ಹೊಡೆಯುತ್ತಾನೆ. ಇದನ್ನು ಪ್ರತಿಭಟಿಸಿ ಹೆಂಡತಿ ಮದುವೆಯಿಂದ ಹೊರನಡೆಯಲು ನಿರ್ಧರಿಸುತ್ತಾಳೆ. ಇವೆಲ್ಲವೂಗಳ ನಡುವೆ ನಡೆಯುವ ಕಥೆಯೆ ಥಪ್ಪಡ್‌ ಸಿನಿಮಾವಾಗಿದೆ. ಆರ್ಟಿಕಲ್‌ 15 ಎಂಬ ಜಾತಿ ತಾರತಮ್ಯ ಮತ್ತು ಅತ್ಯಾಚಾರದ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದ ಅನುಭವ್‌ ಸಿನ್ಹಾರವರ ಮುಂದಿನ ಚಿತ್ರ ಇದಾಗಿದೆ.

ಥಪ್ಪಡ್‌ನಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿರುವ ತಾಪ್ಸಿ ಪನ್ನು ನಟಿಸಿದ್ದಾರೆ. ಅವರು ಇತ್ತೀಚಿನ ಸಂದರ್ಶನದಲ್ಲಿ ಈ ಪಾತ್ರವು ತನಗೆ ಹೇಗೆ ಸವಾಲಿನದು ಎಂಬುದರ ಕುರಿತು ಮಾತನಾಡುತ್ತಾ, “ಅಮೃತಾ ಪಾತ್ರವು ಕೊನೆಯಲ್ಲಿ ನನಗೆ ಉಸಿರುಗಟ್ಟಿಸುತ್ತಿತ್ತು ಮತ್ತು ನಾನು ಅದನ್ನು ಸವಾಲಾಗಿ ತೆಗೆದುಕೊಂಡೆ. 15 ದಿನಗಳ ಶೂಟಿಂಗ್ ನಂತರ, ನಾನು ಕ್ಲಾಸ್ಟ್ರೋಫೋಬಿಕ್ ಅನ್ನು ಅನುಭವಿಸಲು ಪ್ರಾರಂಭಿಸಿದೆ. ನನ್ನ ಫೈರ್‌ಬ್ರಾಂಡ್ ಇಮೇಜ್ ಮತ್ತು ಮನಸ್ಸಿನ ಸ್ಥಳದಿಂದ ಹೊರಬರಲು ಮತ್ತು ಈ ಪಾತ್ರದಿಂದ ಹೊರಬರುವುದು ನನಗೆ ಕಠಿಣವಾಗಿತ್ತು” ಎಂದು ಹೇಳಿದ್ದರು.

ತಾಪ್ಸಿ ಪನ್ನು ಹೊರತುಪಡಿಸಿ ಈ ಚಿತ್ರದಲ್ಲಿ ಪಪ್ಪೈಲ್ ಗುಲಾಟಿ, ದಿಯಾ ಮಿರ್ಜಾ, ರತ್ನ ಪಾಠಕ್ ಷಾ, ತನ್ವಿ ಅಜ್ಮಿ, ಕುಮುದ್ ಮಿಶ್ರಾ ಮತ್ತು ಮಾನವ್ ಕೌಲ್ ನಟಿಸಿದ್ದಾರೆ. ಈ ಚಿತ್ರವು ಫೆಬ್ರವರಿ 28 ರಂದು ತೆರೆಗೆ ಬರಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...