Homeಕರ್ನಾಟಕಸೆಪ್ಟೆಂಬರ್‌ 1 ರಿಂದ ಹಲವು ಗೊಂದಲಗಳ ನಡುವೆ ನಡೆಯಲಿದೆ ಪದವಿ ಪರೀಕ್ಷೆಗಳು

ಸೆಪ್ಟೆಂಬರ್‌ 1 ರಿಂದ ಹಲವು ಗೊಂದಲಗಳ ನಡುವೆ ನಡೆಯಲಿದೆ ಪದವಿ ಪರೀಕ್ಷೆಗಳು

ಕೊರೊನ ಸೋಂಕು ಹೆಚ್ಚುತ್ತಿರುವ ನಡುವೆಯೇ ರಾಜ್ಯದ ಎಲ್ಲಾ ವಿವಿಗಳು ಬಿಎ, ಬಿಎಸ್‌ಸಿ, ಬಿಕಾಂ, ಬಿಲಿಬ್ ಪದವಿಯ 6 ನೇ ಸೆಮಿಸ್ಟರ್ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.

- Advertisement -
- Advertisement -

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆಗಳು ಸೆ.1 ರಿಂದ 24 ರವರೆಗೆ ನಡೆಯಲಿವೆ. ಕೊರೊನ ಸೋಂಕು ಹೆಚ್ಚುತ್ತಿರುವ ನಡುವೆಯೇ ಬಿಎ, ಬಿಎಸ್‌ಸಿ, ಬಿಕಾಂ, ಬಿಲಿಬ್ ಪದವಿಯ 6 ನೇ ಸೆಮಿಸ್ಟರ್ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ವಿವಿಗಳು ಒಂದೇ ಭಾರಿಗೆ ಪರೀಕ್ಷೆಗಳನ್ನು ನಡೆಸುತ್ತಿದ್ದು ಏಕರೂಪ ಶಿಕ್ಷಣದ ಮೊದಲ ಹಂತ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಭಜಿತ ಬೆಂಗಳೂರು ವಿವಿಯ ನಾಲ್ಕು, ಮೈಸೂರು, ಕುವೆಂಪು, ತುಮಕೂರು, ಬಳ್ಳಾರಿಯ ಕೃಷ್ಣದೇವರಾಯ, ರಾಣಿಚೆನ್ನಮ್ಮ ಹೀಗೆ ಎಲ್ಲಾ ವಿವಿಗಳಲ್ಲೂ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ನವೆಂಬರ್‌ನಿಂದ ಜನವರಿವರೆಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಈಗ ಐದು ತಿಂಗಳ ದೀರ್ಘಾವಧಿ ಕೊರೊನಾ ರಜೆಯ ಬಳಿಕ ಪರೀಕ್ಷೆಗಳನ್ನು ಎದುರಿಸಬೇಕಾಗಿ ಬಂದಿದೆ.

ಇದನ್ನೂ ಓದಿ: ಪದವಿಪೂರ್ವ ಉಪನ್ಯಾಸಕರ ಹುದ್ದೆಗಳ ಹೆಚ್ಚಳಕ್ಕಾಗಿ ಒತ್ತಾಯ: ಸಿಎಂ, ಶಿಕ್ಷಣ ಸಚಿವರ ಭೇಟಿ.

“ಲಾಕ್‌ಡೌನ್ ಮಾಡುವ ಪೂರ್ವದಲ್ಲಿ ಆಫ್‌ಲೈನ್ ತರಗತಿಗಳು ನಡಿದ್ದವು. ಕೊರೊನಾ ಸೋಂಕು ಹರಡಿದ ಪರಿಣಾಮ ಮೂರು ತಿಂಗಳು ತರಗತಿಗಳು ನಡೆಯಲಿಲ್ಲ. ನಂತರ ವಿವಿಗಳು ಆನ್‌ಲೈನ್ ತರಗತಿ ನಡೆಸಿದವು. ಮೊಬೈಲ್ ಇದ್ದು ಸಿಗ್ನಲ್ ಸಿಕ್ಕವರು ತರಗತಿಯಲ್ಲಿ ಪಾಲ್ಗೊಂಡಿರಬಹುದು ಬಹುದು. ಆದರೆ ಮೊಬೈಲ್ ಇಲ್ಲದೇ ಇರುವವರು ಆನ್‌ಲೈನ್ ತರಗತಿಯಲ್ಲಿ ಪಾಠ ಕೇಳಲು ಸಾಧ್ಯವಾಗಿರಲಿಲ್ಲ. ನೇರ ಅಧ್ಯಾಪಕರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಬಸ್ ವ್ಯವಸ್ಥೆ ಇರಲಿಲ್ಲ. ನಗರದ ವಿದ್ಯಾರ್ಥಿಗಳು ಅಧ್ಯಾಪಕರನ್ನು ಭೇಟಿ ಮಾಡಿರಬಹುದು. ಆದರೆ ನಮಗೆ ಅಂತಹ ವ್ಯವಸ್ಥೆ ಇರಲಿಲ್ಲ” ಎಂದು ಗ್ರಾಮೀಣ ವಿದ್ಯಾರ್ಥಿಗಳು ದೂರಿದ್ದಾರೆ.

ತುಮಕೂರು ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ವಿವಿಗಳಲ್ಲಿ ಶೇಕಡ 60 ರಷ್ಟು ಸಿಲಬಸ್ ಪೂರ್ಣಗೊಂಡಿಲ್ಲ. ಆದರೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಆದರೆ ಮಾರ್ಚ್ ವೇಳೆಗೆ ಶೇ. 80 ರಷ್ಟು ಸಿಲಬಸ್ ಪೂರ್ಣಗೊಂಡಿತ್ತು. ಪ್ರಶ್ನೆಪತ್ರಿಕೆಗಳ ರಚನೆಗೆ ಸಿದ್ದತೆ ನಡೆದಿತ್ತು ಎನ್ನುತ್ತವೆ ಅಧ್ಯಾಪಕ ವರ್ಗದ ಮೂಲಗಳು.

ಇದನ್ನೂ ಓದಿ: ಅರುಣ್ ಫೆರೇರ: ನತದೃಷ್ಟರ ಕಾನೂನು ನೆರವಿಗೆ ಸದಾ ಲಭ್ಯವಿದ್ದ ಕಾರ್ಯಕರ್ತ

ಈ ನಡುವೆ ಯುಜಿಸಿ ಕೂಡ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟುವ ಅಗತ್ಯವಿಲ್ಲ. ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಗ್ರೇಡ್‌ಗಳನ್ನು ನೀಡಲಾಗುವುದು ಎಂದು ಹೇಳಿತು. ಆದರೆ ಈಗ 2 ಮತ್ತು 4ನೇ ಸೆಮಿಸ್ಟರ್‌ಗೂ ಪರೀಕ್ಷೆ ನಡೆಸಲು ಶುಲ್ಕ ಕಟ್ಟಿಸಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡುವಂತೆ ಮಾಡಿದೆ. ಯುಜಿಸಿ ಮತ್ತು ವಿವಿಗಳ ತೀರ್ಮಾನಗಳು ಭಿನ್ನವಾಗಿರುವುದು ಇಂಥ ಗೊಂದಲಕ್ಕೆ ಕಾರಣವಾಗಿದೆ.

ಈ. ಶಿವಣ್ಣ (ಎಸ್‌ಎಫ್‌ಐ ತುಮಕೂರು ಜಿಲ್ಲಾಧ್ಯಕ್ಷ)

ಎಸ್‌ಎಫ್‌ಐ ತುಮಕೂರು ಜಿಲ್ಲಾಧ್ಯಕ್ಷ ಈ. ಶಿವಣ್ಣ ನಾನುಗೌರಿ.ಕಾಂ ಜೊತೆ ಮಾತನಾಡಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಿಡಿಸಿಟ್ಟರು. ಸಿಲಬಸ್ ಪೂರ್ಣಗೊಂಡಿಲ್ಲ, ವಿದ್ಯಾರ್ಥಿಗಳು ದೀರ್ಘಾವಧಿಯಾಗಿ ತರಗತಿಗೆ ಹೋಗಲು ಆಗಿಲ್ಲ. ಆದರೂ ಪರೀಕ್ಷೆಗಳನ್ನು ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ 2 ಮತ್ತು 4ನೇ ಸೆಮ್ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಯ ಅಂಕಗಳ ಆಧಾರದ ಮೇಲೆ ಗ್ರೇಡ್ ನೀಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!

ಬೆಂಗಳೂರು ವ್ಯಾಪ್ತಿಯ ನಾಲ್ಕು ವಿವಿಗಳು ಮತ್ತು ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಈ ವಿವಿಗಳನ್ನು ಹೊರತುಪಡಿಸಿ ಬೇರೆ ವಿವಿಗಳಲ್ಲಿ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳು ಮೂರು ವರ್ಷದ ಎಲ್ಲಾ ಪರೀಕ್ಷೆಗಳಿಗೆ ಶುಲ್ಕ ಕಟ್ಟಿ ಬರೆಯಲು ಅವಕಾಶವಿದೆ. ಅಂದರೆ 2, 4 ಮತ್ತು 5ನೇ ಸೆಮ್ ಫೇಲ್ ಆಗಿದ್ದರೂ ಅವರು ಎಲ್ಲಾ ಪರೀಕ್ಷೆಗಳಿಗೆ ಏಕಕಾಲಕ್ಕೆ ಶುಲ್ಕ ಕಟ್ಟಬಹುದು.

ಆದರೆ ತುಮಕೂರು ಮತ್ತು ಬೆಂಗಳೂರು ವ್ಯಾಪ್ತಿ ವಿವಿಗಳಲ್ಲಿ 6ನೇ ಸಮಿಸ್ಟರ್ ವಿದ್ಯಾರ್ಥಿಗಳು 2, 3, 4 ಮತ್ತು 5ನೇ ಸೆಮಿಸ್ಟರ್‌ಗಳಲ್ಲಿ ಫೇಲಾಗಿದ್ದರೆ ಆ ಪರೀಕ್ಷೆಗಳಿಗೆ ಶುಲ್ಕ ಕಟ್ಟಲು ಅವಕಾಶವಿಲ್ಲ. ಇದು ವಿದ್ಯಾರ್ಥಿಗಳಿಗೆ ಒಂದು ವರ್ಷ ನಷ್ಟವಾಗುತ್ತದೆ. ಇದು ತಾಂತ್ರಿಕ ಸಮಸ್ಯೆ ಇದನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.

‘ವಿಜಯೀಭವ’ ವೆಬ್ ಸೈಟ್‌ಗೆ ಹೋದರೆ ಎಲ್ಲಾ ವಿಷಯಗಳ ಆನ್‌ಲೈನ್ ತರಗತಿಗಳ  ಮಾಹಿತಿ ಸಿಗುತ್ತದೆ. ವಿದ್ಯಾರ್ಥಿಗಳು ಅದರ ಪ್ರಯೋಜ ಪಡೆಯುವ ವ್ಯವಸ್ಥೆ ಆಯಾ ವಿವಿಗಳು ಕಲ್ಪಿಸಿವೆ. ಸಮಸ್ಯೆ ಏನೆಂದರೆ ಆಂಡ್ರಾಯಿಡ್ ಮೊಬೈಲ್, ಇಂಟರ್ ನೆಟ್ ಸೌಲಭ್ಯವಿಲ್ಲದ ವಿದ್ಯಾರ್ಥಿಗಳು ಏನು ಮಾಡಬೇಕು. ಇದಕ್ಕೆ ಪ್ರಾಧ್ಯಾಪಕರು ಮತ್ತು ವಿವಿಗಳ ಬಳಿ ಉತ್ತರವಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.


ಓದಿ: ಭೀಮಾ ಕೋರೆಗಾಂವ್; ಪ್ರಾಧ್ಯಾಪಕರ ಮೇಲಿನ NIA ಕಿರುಕುಳಕ್ಕೆ ವಿದ್ಯಾರ್ಥಿಗಳ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...