Homeಕರ್ನಾಟಕಗ್ರಾ.ಪಂ ಚುನಾವಣೆ: ಯುವ, ಮಹಿಳಾ, ರೈತವರ್ಗಕ್ಕೆ ವಿಶೇಷ ಪ್ರಣಾಳಿಕೆ ತಯಾರಿಸಿದ ಸ್ಪರ್ಧಿ!

ಗ್ರಾ.ಪಂ ಚುನಾವಣೆ: ಯುವ, ಮಹಿಳಾ, ರೈತವರ್ಗಕ್ಕೆ ವಿಶೇಷ ಪ್ರಣಾಳಿಕೆ ತಯಾರಿಸಿದ ಸ್ಪರ್ಧಿ!

ಗ್ರಾಮ ಎಂಬ ಪುಟ್ಟ ಸಮಾಜದೊಳಗಿರುವ ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವ ವೆಂಕಟೇಶ್‌ ಬಾಬು ಎಂ ಎ, (ಪಿಎಚ್‌ಡಿ) ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎನ್ನುವಂತೆ ಆಡಳಿತ ನಡೆಸುವುದಾಗಿ ಆಶ್ವಾಸನೆ ನೀಡಿದ್ದಾರೆ

- Advertisement -
- Advertisement -

ಕರ್ನಾಟಕದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಸಿದ್ಧತೆಗಳು ಭರದಲ್ಲಿ ಸಾಗಿವೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಗಳೂ ಸಹ ದೊಡ್ಡ-ದೊಡ್ಡ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಆದರೆ ಇವುಗಳಲ್ಲಿ ಕೆಲವು ಅಭ್ಯರ್ಥಿಗಳು ಗೆದ್ದರೆ ತಾವು ಮಾಡುವಂತಹ ಕೆಲಸಗಳನ್ನು ಅತ್ಯಂತ ಜಾಣ್ಮೆಯಿಂದ, ವೈಚಾರಿಕವಾಗಿ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ತುಂಬಾ ವಿಶೇಷವಾದ ಮತ್ತು ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಮ ಎಂಬ ಪುಟ್ಟ ಸಮಾಜದೊಳಗಿರುವ ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವ ವೆಂಕಟೇಶ್‌ ಬಾಬು ಎಂ.ಎ, (ಪಿಎಚ್‌ಡಿ), ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎನ್ನುವಂತೆ ಆಡಳಿತ ನಡೆಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮ ಪಂಚಾಯಿತಿಯ ಬಸವನದುರ್ಗದ 5 ನೇ ವಾರ್ಡಿನಿಂದ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ:ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗುತ್ತಿಗೆದಾರರು ಸ್ಪರ್ಧಿಸುವಂತಿಲ್ಲ; ಚುನಾವಣಾ ಆಯೋಗ

“ಪ್ರಜಾಪ್ರಭುತ್ವದಲ್ಲಿ ಗೌರವದ ಬದುಕು ಪ್ರತಿಯೊಬ್ಬ ಮನುಷ್ಯನ ಹಕ್ಕು. ಹಾಗೆಯೇ ಬಸವನದುರ್ಗದ ಗ್ರಾಮದ ಜನತೆ ಶ್ರಮಿಕರು, ರೈತರು, ಮಹಿಳೆಯರು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದನ್ನು ನಾನು ತೀರಾ ಹತ್ತಿರದಿಂದ ಬಲ್ಲವನಾಗಿದ್ದೇನೆ. ಆದ ಕಾರಣ ತಮ್ಮ ಈ ಕೆಲಸದಲ್ಲಿರುವ ವಿವಿಧ ಸಮಸ್ಯೆಗಳನ್ನು ಮತ್ತು ತಮ್ಮ ಅವಶ್ಯಕತೆಗಳನ್ನು ಅರಿತು ಗ್ರಾಮದ ಜನತೆಯ ಸೇವೆ ಸಲ್ಲಿಸಲು ಇಚ್ಛಿಸಿ 2020ರ  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಆಯ್ಕೆಯ ಗುರುತಾದ ಟ್ರ್ಯಾಕ್ಟರ್‌ ಚಿಹ್ನೆಗೆ ಮತ ನೀಡಿ, ಗ್ರಾಮದ ತಮ್ಮ ಕೆಲಸದ ಕ್ಷೇತ್ರದಲ್ಲಿ ಸಿಗಬಹುದಾದ ಅನೇಕ ಯೋಜನೆಗಳನ್ನು ತಮಗೆ ಮುಟ್ಟಿಸಲು ಮತ್ತು ಗೌರವಾನ್ವಿತ ಬದುಕಿಗಾಗಿ ತಮ್ಮ ಸೇವೆ ಮಾಡಲು ನನಗೆ ಅವಕಾಶ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ.

“ಗ್ರಾಮದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ, ಚರಂಡಿ, ವಿದ್ಯುತ್, ಉದ್ಯೋಗ ಸೇರಿದಂತೆ ಮೂಲಸೌಕರ್ಯಗಳು ಒದಗಿಸುವ ಮೂಲಕ ಸರ್ವರಿಗೂ ಸಮಬಾಳು- ಸಮಪಾಲು ಎನ್ನುವಂತೆ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸರಕಾರಿ ಯೋಜನೆಗಳ ಪರಿಣಾಮಕಾರಿ ಜಾರಿ ಮಾಡಿ ಸ್ವಚ್ಚ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಟ್ರ್ಯಾಕ್ಟರ್‌ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯತ್‌ ಚುನಾವಣೆ: ಈ ಮಹಿಳಾ ಅಭ್ಯರ್ಥಿ ಸೋತರೆ ಏನು ಮಾಡುತ್ತಾರೆ ಗೊತ್ತೇ?

ಸಮಾಜದ ಪ್ರತಿ ವರ್ಗಕ್ಕೂ ಪ್ರತ್ಯೇಕ ಪ್ರಣಾಳಿಕೆ:

ಯುವ ಜನತೆಗೆ;

“ಯುವಕರು ಭವಿಷ್ಯದಲ್ಲಿ ಮಾತ್ರವಲ್ಲ ವರ್ತಮಾನದ ಶಕ್ತಿ ಕೂಡ. ಯುವಕರ ಪ್ರಜ್ವಲ ಜೀವನಕ್ಕೆ ಶಿಕ್ಷಣ, ಉದ್ಯೋಗ, ಆರೋಗ್ಯ ಇವು ಬಹುಮುಖ್ಯ ಆದ್ಯತೆ ಎಂದು ಮನಗಂಡು ರಾಜಕೀಯ ಧ್ವನಿಯಾಗಿ ಗ್ರಾಮದ ಯುವಕರ ಅಭಿವೃದ್ಧಿಪರ ನಿಲ್ಲುತ್ತೇನೆ ಎಂದು ಈ ಮೂಲಕ ಪ್ರಮಾಣಿಕರಿಸುತ್ತೇನೆ. ಹಾಗಾಗಿ ಟ್ರಾಕ್ಟರ್ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಬಹುಮತದಿಂದ ಗೆಲ್ಲಿಸಿ”

  1. ಇಲಾಖೆಗಳ ಮೂಲಕ ಕಬಡ್ಡಿ, ಕ್ರಿಕೇಟ್, ಇತರೆ ಕ್ರೀಡೆಗಳ ಪ್ರೋತ್ಸಾಹ.
  2. ಜರ್ಸಿ, ಗ್ಲೌಸ್, ಕ್ರಿಕೆಟ್ ಬ್ಯಾಟ್, ಮುಂತಾದ ಕ್ರೀಡಾ ಸಾಮಗ್ರಿಗಳು ದೊರಕಿಸುವುದು.
  3. ಜಿಮ್ ಪರಿಕರಗಳ ವ್ಯವಸ್ಥೆಗೆ ಪ್ರಯತ್ನ.
  4. ಉದ್ಯೋಗ ಅವಕಾಶಕ್ಕಾಗಿ ಉದ್ಯೋಗ ಮೇಳ.
  5. ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ಸಹಾಯಧನ ಶೀಘ್ರ ಬಿಡುಗಡೆ.
  6. ಉಚಿತ ಕಂಪ್ಯೂಟರ್ ತರಬೇತಿ.
  7. ಗ್ರಂಥಾಲಯಕ್ಕೆ ಪ್ರಯತ್ನಿಸುವುದು.

ಇದನ್ನೂ ಓದಿ: ಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

ಮಹಿಳೆಯರಿಗೆ;

ಸಮಾಜದ ಪ್ರಗತಿಯನ್ನು ಮಹಿಳೆಯರನ್ನು ಹೊರತುಪಡಿಸಿ ನೋಡಲು ಸಾಧ್ಯವಿಲ್ಲ. ಅರ್ಧದಷ್ಟು ಜನಸಂಖ್ಯೆಯಲ್ಲಿರುವ ಮಹಿಳೆಯರು ಕೌಟುಂಬಿಕವಾಗಿ ಮಾತ್ರವಲ್ಲ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿಯೂ ಮಹಿಳೆಯರ ಕೊಡುಗೆ ಅಪಾರವಾದುದು. ಹಾಗಾಗಿ ಮಹಿಳೆಯ ಸ್ವಾವಲಂಬನೆ ಮತ್ತು ಆರೋಗ್ಯ ಬಹುಮುಖ್ಯವಾದದ್ದು ಎಂದು ನಂಬಿದ್ದೇನೆ. ಹಾಗೆಯೇ ಮಹಿಳೆಯರು ಅನೇಕ ಸಮಸ್ಯೆಗಳು, ತೊಳಲಾಟಗಳಲ್ಲಿ ಬದುಕುತ್ತಿರುವುದು ಅರ್ಥಮಾಡಿಕೊಳ್ಳದ ವಿಷಯವೇನಲ್ಲ. ಹಾಗಾಗಿ ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಟ್ರಾಕ್ಟರ್ ಚಿಹ್ನೆಗೆ ತಮ್ಮ ಅಮೂಲ್ಯವಾದ ಮತ ನೀಡಿ ನನ್ನನು ಆಯ್ಕೆ ಮಾಡಿ, ನಿಮ್ಮ ಸಹೋದರನಾಗಿ, ಮಗನಾಗಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಅವಕಾಶ ಮಾಡಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

  1. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ.
  2. ಸ್ವಯಂ ಉದ್ಯೋಗ ತರಬೇತಿ ಮತ್ತು ಮಾಹಿತಿ.
  3. ಮಹಿಳಾ ಮತ್ತು ಮಕ್ಕಳ ಆರೋಗ್ಯ ಕುರಿತು ಕಾಳಜಿ.

ರೈತರಿಗೆ;

  1. ಆಧುನಿಕ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸುವುದು.
  2. ಉದ್ಯೋಗ ಖಾತರಿ ಯೋಜನೆ ಅಡಿ 200 ಮಾನವ ದಿನ ಸೃಷ್ಟಿಗೆ ಮನವಿ ಸಲ್ಲಿಸುವುದು.
  3. MGNREG ಯೋಜನೆ ಮೂಲಕ ಕಾಲುವೆಗಳ ಸ್ವಚ್ಛತೆ ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸುವುದು.
  4. MGNREG ಮೂಲಕ ಕೃಷಿ ಮತ್ತು ಕೃಷಿಯೇತರ ಸ್ವಯಂ ಚಟುವಟಿಕೆಗೆ ಅನುಕೂಲ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಗ್ರಾಮಸ್ಥರು ತಮ್ಮ ಖಾಸಗಿ ಆಸ್ತಿ ನಿರ್ಮಿಸಿಕೊಳ್ಳಲು ಅವಕಾಶ ಮಾಡಿ ಕೊಡುವುದು.

ಇದನ್ನೂ ಓದಿ: ಬಿಜೆಪಿ ನಾಯಕರನ್ನೇ ‘ಆಪರೇಷನ್’ ಮಾಡಲಿರುವ ಎನ್‌ಸಿಪಿ: ಮಹಾ ಡಿಸಿಎಂ ಅಜಿತ್ ಪವಾರ್‌

ಒಟ್ಟು ಗ್ರಾಮಕ್ಕೆ;

  1. ವರ್ಷಕ್ಕೆ 2 ಸಾವಿರ ಗಿಡಗಳಂತೆ ಐದು ವರ್ಷಕ್ಕೆ 10 ಸಾವಿರ ಗಿಡ ನೆಡುವುದು (ಪಂಚಾಯತ್ ವ್ಯಾಪ್ತಿಯಲ್ಲಿ).
  2. ರಸ್ತೆ, ಚರಂಡಿ, ಕುಡಿಯುವ ನೀರು, ವಸತಿಗೆ ಆದ್ಯತೆ.
  3. ಹಕ್ಕು ಪತ್ರ ನೀಡಲು ಒತ್ತಾಯಿಸುವುದು.
  4. ಕಂದಾಯ ಅದಾಲತ್ ಪ್ರತಿ ಆರು ತಿಂಗಳಿಗೊಮ್ಮೆಳಿಗೊಮ್ಮೆ ಸಮಸ್ಯೆ ಬಗೆ ಹರಿಸುವುದು (ವಿಧವಾ, ವೃದ್ಧಾಪ್ಯ,ಅಂಗವಿಕಲ).
  5. ತಿಂಗಳಲ್ಲಿ ಒಂದು ದಿನ ಆಡಳಿತ ವ್ಯವಸ್ಥೆ ಗ್ರಾಮದಲ್ಲಿದ್ದು ಸಮಸ್ಯೆ ಬಗೆಹರಿಸುವುದು.
  6. ಗ್ರಾಮದಲ್ಲಿ ಆಡಳಿತ ಸಂಬಂಧಿ ದೂರುಗಳಿಗಾಗಿ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಅಲ್ಲಲ್ಲಿ ಬರೆಯುವುದು.
  7. ಸಮುದಾಯ ಭವನ ನಿರ್ಮಿಸುವುದು.
  8. ಆಧುನಿಕ ಬಸ್ ನಿಲ್ದಾಣ.
  9. ಗ್ರಾಮದಲ್ಲಿ ಎಟಿಎಂ/ಬ್ಯಾಂಕ್‌ಗಾಗಿ ಪ್ರಯತ್ನಿಸುವುದು.
  10. ನಿಗಮಗಳಲ್ಲಿನ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸುವುದು.
  11. ನಿರ್ಗತಿಕರಿಗೆ ಅಂತ್ಯ ಸಂಸ್ಕಾರಕ್ಕೆ ಪಂಚಾಯಿತಿಯಿಂದ ಸಹಾಯ ಒದಗಿಸುವುದು.
  12. ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಮೂಲಕ ಬಡತನ, ನಿರುದ್ಯೋಗ, ವಲಸೆಯನ್ನು ತಡೆಯುವುದು.
  13. ಗ್ರಾಮದ ಭೋವಿ ಸಮುದಾಯಕ್ಕೆ ಕಲ್ಲು ಕೆಲಸಕ್ಕೆ ಪ್ರತ್ಯೇಕ ಪರವಾನಗಿಗಾಗಿ ಒತ್ತಾಯಿಸುವುದು.
  14. ಗ್ರಾಮದ ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರದ ಇನ್ನೂರೆನ್ಸ್ ಬಗ್ಗೆ ಮಾಹಿತಿ ಒದಗಿಸುವುದು.
  15. ಜಾಗ ಇಲ್ಲದವರಿಗೆ ನಿವೇಶನ ಒದಗಿಸಲು ಪ್ರಯತ್ನಿಸುವುದು.

ಹೀಗೆ ಗ್ರಾಮದ ಪ್ರತಿ ವರ್ಗವನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯಲು ತಮ್ಮ ಯೋಚನೆಗಳನ್ನು ಪ್ರಣಾಳಿಕೆಯ ಮೂಲಕ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ದೇಶದ ಅತಿ ಕಿರಿಯ ಮೇಯರ್ ಆಗಿ ಕೇರಳ ಸಿಪಿಎಂನ ಆರ್ಯ ರಾಜೇಂದ್ರನ್ ಪ್ರಮಾಣ ವಚನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...