Homeಕರ್ನಾಟಕಗ್ರಾಮ ಪಂಚಾಯತ್‌ ಚುನಾವಣೆ: ಇವರು ಸೋತರೆ ಮಾಡುವ ಕೆಲಸವೇನು ಗೊತ್ತೆ?

ಗ್ರಾಮ ಪಂಚಾಯತ್‌ ಚುನಾವಣೆ: ಇವರು ಸೋತರೆ ಮಾಡುವ ಕೆಲಸವೇನು ಗೊತ್ತೆ?

ತಾನು ಗೆದ್ದರೆ ಮಾಡಿಸುವ ಕೆಲಸಕ್ಕಿಂತ ಸೋತರೆ ಏನು ಮಾಡುತ್ತೇನೆ ಎಂಬ ಘೋಷಣೆಯಲ್ಲೇ ಅವರು ಅಚ್ಚರಿ ಮೂಡಿಸಿದ್ದಾರೆ.

- Advertisement -
- Advertisement -

ಗ್ರಾಮ ಪಂಚಾಯತ್‌ ಚುನಾವಣೆ ಪ್ರಾರಂಭವಾಗಲು ಇನ್ನೇನು ಎರಡೇ ದಿನವಿದೆ. ರಾಜ್ಯದಾದ್ಯಂತ ಗ್ರಾಮಗಳಲ್ಲಿ ರಾಜಕೀಯ ಚಟುವಟಿಗಳು ಗರಿಗೆದರಿವೆ. ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಸ್ಥಳೀಯ ವಿಷಯಗಳ ಬಗ್ಗೆ ಮಾತನಾಡುತ್ತಿದೆ. ಜೊತೆಗೆ ಆಶ್ವಾಸನೆ, ಭರವಸೆ, ತಂತ್ರ, ಕುತಂತ್ರಗಳು ಗ್ರಾಮ ಮಟ್ಟದಲ್ಲೇ ನಡೆಯುತ್ತಿದೆ. ಆದರೆ ಹೆಬ್ಬೂರು ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸ್ಪರ್ಧಿಯೊಬ್ಬರ ಪ್ರಣಾಳಿಕೆ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚುನಾವಣೆಯ ಮೊದಲ ಹಂತವಾದ ಡಿಸೆಂಬರ್‌ 22 ನಡೆಯಲಿರುವ ಚುನಾವಣೆಯಲ್ಲಿ ಹೆಬ್ಬೂರು ಗ್ರಾಮ ಪಂಚಾಯತ್‌‌ನ 7 ನೇ ಕಲ್ಕೆರೆ ಕ್ಷೇತ್ರದಿಂದ ಸ್ಫರ್ಧಿಸಿರುವ ಗಂಗಮ್ಮ ಹೆಚ್‌ ತಮ್ಮ ಚುನಾವಣಾ ಪ್ರಣಾಳಿಕೆ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ ಮಾತ್ರ ಏನು ಮಾಡುತ್ತೇನೆ ಎಂದು ಮಾತ್ರವಲ್ಲದೆ, ಸೋತರೆ ಏನು ಮಾಡುತ್ತೇನೆ ಎಂದು ಕೂಡಾ ಘೋಷಿಸಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗುತ್ತಿಗೆದಾರರು ಸ್ಪರ್ಧಿಸುವಂತಿಲ್ಲ; ಚುನಾವಣಾ ಆಯೋಗ

ತಾನು ಗೆದ್ದರೆ ಮಾಡಿಸುವ ಕೆಲಸಕ್ಕಿಂತ ಸೋತರೆ ಏನು ಮಾಡುತ್ತೇನೆ ಎಂಬ ಘೋಷಣೆಯಲ್ಲೇ ಅವರು ಅಚ್ಚರಿ ಮೂಡಿಸಿದ್ದಾರೆ. ತಾನು ಸೋತರೆ “‌ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿಯನ್ನು ರದ್ದು ಮಾಡಿಸುವುದು, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ ಮೈತ್ರಿ, ಮನಸ್ವಿನಿ, ವಿಧವಾ ವೇತನ ಹಣವನ್ನು ನಿಲ್ಲಿಸುವುದು, ಸರ್ವೇ ನಂ. 86 ರಲ್ಲಿ ಹಳೇ ದಾಖಲೆಯಂತೆ ಸ್ವಶಾನ ಮಾಡಿಸುವುದು, ಕಲ್ಕೆರೆ ಗ್ರಾಮದ ಜಾಗವನ್ನು ಯಾವುದೆ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಹೋರಾಟ ಮಾಡವುದು” ಎಂದಿದ್ದಾರೆ.

ಜೊತೆಗೆ ತನ್ನ ಆಶ್ವಾಸನೆಗೆ ಅವರು ಸಾಕ್ಷಿಯಾಗಿ, ಅಕ್ರಮವಾಗಿ ಕಾನೂನಿಗೆ ವಿರುದ್ದವಾಗಿದ್ದ 6 ಮನೆಗಳ ಬಿಲ್ ನಿಲ್ಲಿಸಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಣಾಳಿಕೆಯ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಇವರು ಗೆಲ್ಲುವುದಕ್ಕಿಂತ ಸೋಲುವುದೇ ಒಳ್ಳೆಯದು. ಇವರ ವಿರುದ್ದ ಗೆದ್ದವರಿಂದ ಇತರ ಕೆಲಸವನ್ನು ಮಾಡಿಸಬಹುದು ಮತ್ತು ಇವರಿಂದ, ಸೋತರೆ ಮಾಡುವ ಕೆಲಸವನ್ನು ಮಾಡಿಸಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ:  ಕೊಳವೆ ಬಾವಿ ತೋಡಿಸಿದ್ದಕ್ಕೆ ದಲಿತ ವ್ಯಕ್ತಿಯ ಕೈ ಕಾಲು ಮುರಿದ ಗ್ರಾ.ಪಂ ಅಧ್ಯಕ್ಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...