Homeಮುಖಪುಟಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!

ಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!

- Advertisement -
- Advertisement -

ರಾಜ್ಯ ಸರಕಾರವು ಹಲವಾರು ಪ್ರತಿಭಟನೆಗಳನ್ನು ಮತ್ತು ಚಳವಳಿಗಳನ್ನು ಎದುರಿಸುತ್ತಿರುವುದರೊಂದಿಗೆ ಗುಜರಾತ್ ಬಿಜೆಪಿಯ ಮುಂದಿನ ಪ್ರದರ್ಶನವು ಕೇವಲ ನರೇಂದ್ರ ಮೋದಿಯನ್ನು ಅವಲಂಬಿಸಿದೆ. ಸರಕಾರದ ಎದುರು ಹೋರಾಟದ ಕಣಕ್ಕೆ ಧುಮುಕಿರುವವರಲ್ಲಿ ರೈತರು, ಪಶುಗಳನ್ನು ಸಾಕುತ್ತಿರುವವರು, ಆದಿವಾಸಿಗಳು, ವೈದ್ಯರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮಾಜಿ ಸೇನಾ ಸಿಬ್ಬಂದಿಗಳು, ಮಧ್ಯಾಹ್ನದ ಬಿಸಿಯೂಟದ ಸಿಬ್ಬಂದಿ, ಸರಕಾರದ ಎಲ್ಲಾ ಗುತ್ತಿಗೆ ಕೆಲಸಗಾರರು ಮತ್ತು ಇನ್ನೂ ಹಲವರು ಸೇರಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದ – ನಂತರ ಪ್ರಧಾನ ಮಂತ್ರಿಯಾದ ನಂತರದಿಂದ ಭಾರತೀಯ ಜನತಾ ಪಕ್ಷಕ್ಕೆ ಇಷ್ಟವಾದ ಸಮಜಾಯಿಷಿ ಎಂದರೆ, ‘ಮೋದಿ ಹೈ ತೋ ಮುಮ್ಕಿನ್ ಹೈ’ ಅಂದರೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದಾಗಿದೆ. ಆದರೆ, ಬಹುಶಃ ಮೋದಿ ಇದ್ದರೆ ಮಾತ್ರವೇ ಎಲ್ಲವೂ ಸಾಧ್ಯ ಎಂದು 2017ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಗೆ ಮನವರಿಕೆ ಆಗಿರಬೇಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಬೇರೆಯೇ ಮುಖ್ಯಮಂತ್ರಿಯ ಅಡಿಯಲ್ಲಿ 2022ರಲ್ಲಿ ಕಷ್ಟಕರವಾದ ಚುನಾವಣೆ ಎದುರಿಸುತ್ತಿದೆ ಎಂಬುದು ನಿಜವೆಂಬಂತೆ ಕಾಣುತ್ತಿದೆ. ಹಿಂದಿನ ವಿಜಯ್ ರೂಪಾನಿ ಆಡಳಿತದ ವೇಳೆ ಆರಂಭಗೊಂಡ ಸರಕಾರ ವಿರೋಧಿ ಭಾವನೆ, ಕೋವಿಡ್-19 ಅವಧಿಯಲ್ಲಿ ಇನ್ನಷ್ಟು ಉಲ್ಭಣಿಸಿ, ಒಂದು ವರ್ಷ ಹಿಂದೆಯಷ್ಟೇ ಮುಖ್ಯಮಂತ್ರಿ ಸ್ಥಾನದಲ್ಲಿ ಸ್ಥಾಪಿಸಲಾದ ಭೂಪೇಂದ್ರ ಪಟೇಲ್ ಅವಧಿಯಲ್ಲೂ ಮುಂದುವರಿದಿದೆ.

ಗುಜರಾತಿನಲ್ಲಿ ತನ್ನ 30 ವರ್ಷಗಳ ಗೆಲುವಿನ ಹಾದಿಯಲ್ಲಿ ಬಿಜೆಪಿಯು 2017ರಲ್ಲಿ ಮೊದಲ ಬಾರಿಗೆ ಎರಡಂಕೆಗೆ- ಅಂದರೆ, 99 ಸ್ಥಾನಗಳಿಗೆ ಇಳಿಯಿತು. ಅಂದರೆ, 182 ಸ್ಥಾನಗಳ ವಿಧಾನಸಭೆಯಲ್ಲಿ ಅದು ಹೇಗೋ ಸೋಲಿನಿಂದ ತನ್ನನ್ನು ಪಾರುಮಾಡಿಕೊಂಡಿತು. ಕಾಂಗ್ರೆಸ್ ಕೂಡಾ ತನ್ನ ಅತ್ಯಂತ ಕಠಿಣ ಸವಾಲಾದ ಗುಜರಾತಿನಲ್ಲಿ ಮೊತ್ತ ಮೊದಲ ಬಾರಿಗೆ ಆಗಲೇ ಒಂದು ಚಿಕ್ಕ ಆಶಾವಾದವನ್ನು ಕಂಡಿರಬೇಕೆಂದು ಬೇರೆ ಹೇಳಬೇಕಾಗಿಲ್ಲ. ಆದರೆ ಅದು ಹಾಗೆ ಆಗಲಿಲ್ಲ.

ಇದನ್ನೂ ಓದಿ: ಗುಜರಾತ್‌: ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು

ಒಂದು ವಿರೋಧ ಪಕ್ಷಕ್ಕಾಗಿ ಖಾಲಿಯಾಗಿ ಕಾಯುತ್ತಿದ್ದ ಗುಜರಾತಿನ ಬಯಲಿಗೆ ಪ್ರವೇಶಿಸಿದ ಆಮ್ ಆದ್ಮಿ ಪಾರ್ಟಿಯು ಒಂದು ಗಂಭೀರ ಸ್ಪರ್ಧಿಯಾಯಿತು. ದಿನಗಳು ಕಳೆದಂತೆ ಬೆಳೆಯುತ್ತಿರುವ ಈ ದಿಲ್ಲಿ ಪಕ್ಷವು ಬಿಜೆಪಿಯ ಕೊಠಡಿಯಲ್ಲಿ ಕುಳಿತ ಆನೆಯ ಕತೆಯಂತಾಯಿತು.

ಸದ್ಯಕ್ಕೆ ಪ್ರತಿಪಕ್ಷಗಳ ಸುದ್ದಿ ಬಿಡಿ. 1992ರ ಚುನಾವಣೆಗಳ ನಂತರದಿಂದ ಬಿಜೆಪಿಯ ಭರ್ಜರಿ ಗೆಲುವುಗಳ ದಾಖಲೆಯ ಹೊರತಾಗಿಯೂ, ಆಪ್ ಸಾರ್ವಜನಿಕವಾಗಿ ಮತ್ತು ಕಾಂಗ್ರೆಸ್ ನಾಯಕರು ಖಾಸಗಿ ಸಂಭಾಷಣೆಗಳಲ್ಲಿ 2022ರ ಚುನಾವಣೆಗಳಲ್ಲಿ ಒಂದು ಅವಕಾಶವನ್ನು ಕಾಣುವಂತೆ ಮಾಡಿರುವ ಬಿಜೆಪಿಯ ಸ್ಥಿತಿ ಏನು? 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೊಸ ಮುಖ್ಯಮಂತ್ರಿಯ ಅಡಿಯಲ್ಲಿ ಎದುರಿಸುತ್ತಿರುವ ಎರಡನೇ ವಿಧಾನಸಭಾ ಚುನಾವಣೆ ಇದೆಂಬುದು ಗಮನಾರ್ಹ.

ಈ ಎಂಟು ವರ್ಷಗಳ ಅವಧಿಯಲ್ಲಿ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ತಂದಿತು- ಆನಂದಿಬೆನ್ ಪಟೇಲ್, ವಿಜಯ್ ರೂಪಾನಿ ಮತ್ತು ಭೂಪಿಂದರ್ ಪಟೇಲ್. ಆನಂದಿ ಮತ್ತು ರೂಪಾನಿ ಇಬ್ಬರನ್ನೂ- ಸರಕಾರ ವಿರೋಧಿ ಅಲೆಯು ಬಿಜೆಪಿಯನ್ನು ದುರುಗುಟ್ಟಿ ನೋಡುತ್ತಿರುವಾಗ- ಕಿತ್ತು ಹಾಕಲಾಯಿತು. ಅದರಲ್ಲೂ ರೂಪಾನಿಯನ್ನು ಇಡೀ ಸಂಪುಟದ ಸಹಿತ. ಕೆಲವು ಈಗ ಪತನಗೊಂಡಿರುವ ಮುಖಗಳನ್ನು ಬಿಟ್ಟರೆ ಯಾರೊಬ್ಬರೂ ಪ್ರತಿಭಟಿಸಲಿಲ್ಲ. ಯಾಕೆ? ಯಾಕೆಂದರೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ!

ಇದನ್ನೂ ಓದಿ: ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

2015ರಲ್ಲಿ ಮೋದಿಯ ನಂತರ ಬಿಜೆಪಿಯು ಮೊದಲ ಬಾರಿಗೆ ಆನಂದಿಬೆನ್ ಪಟೇಲ್ ನೇತೃತ್ವದಲ್ಲಿ ಸ್ಥಳೀಯಾಡಳಿತ ಚುನಾವಣೆಗಳನ್ನು ಎದುರಿಸಿತು. ಹಾರ್ದಿಕ್ ಪಟೇಲ್ ನೇತೃತ್ವದ ಪಾಟೀದಾರ್ ಚಳವಳಿಯ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಅದು ಭಾರೀ ಹಿನ್ನಡೆ ಅನುಭವಿಸಿತು. ಆನಂದಿಗೆ ಕೆಳಗಿಳಿಯುವಂತೆ ಆದೇಶಿಸಿ, ರೂಪಾನಿಯನ್ನು ತರಲಾಯಿತು. ಆದರೆ, ಆಗಲೇ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದ ವೇದಿಕೆ ಸಿದ್ಧವಾಗಿತ್ತು. ಆದರೆ, ಬಿಜೆಪಿಯು ಆ ಚುನಾವಣೆಯಲ್ಲಿ ವಿಜಯ್ ರೂಪಾನಿ ನಾಯಕತ್ವದಲ್ಲಿ ಸೋಲಿಗೆ ಹತ್ತಿರ ಬಂದರೂ ಗೆದ್ದಿತ್ತು. ಇದಕ್ಕೆ ಏಕೈಕ ಕಾರಣವೆಂದರೆ, ಮೋದಿಯ ಆಕ್ರಮಣಕಾರಿ ಮಣ್ಣಿನ ಮಗ ಅಭಿಯಾನ. ಮೋದಿ ಇದ್ದರೆ ಎಲ್ಲವೂ ಸಾಧ್ಯ!

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ 26 ಸ್ಥಾನಗಳನ್ನು ಗೆದ್ದಿತು-ಅದೂ ಕೂಡಾ ನಂಬಲಸಾಧ್ಯ ಅಂತರಗಳಲ್ಲಿ. ಅತ್ಯಂತ ಕಡಿಮೆ ಅಂತರವೆಂದರೆ, 1.25 ಲಕ್ಷ ಮತಗಳು. ಆ ಹೊತ್ತಿಗೆ ಅಧಿಕಾರದಲ್ಲಿ ಇದ್ದದ್ದು ರೂಪಾನಿಯಾದರೂ ಮತ ಬಿದ್ದದ್ದು ಮಾತ್ರ ಮೋದಿಗೆ!

ಈಗ, ಬಿಜೆಪಿಯು 2017ಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿದೆ. ಆಪ್ ಮತ್ತು ಕಾಂಗ್ರೆಸ್ ಟೊಂಕಕಟ್ಟಿ ನಿಂತಿವೆ ಎಂಬ ಕಾರಣಕ್ಕಾಗಿ ಅಲ್ಲ. ಒಟ್ಟಾರೆಯಾಗಿ ರಾಜ್ಯವನ್ನು ಆವರಿಸಿರುವ ಅಸಮಾಧಾನದ ಕಾರಣದಿಂದ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 30ರಷ್ಟು ದೊಡ್ಡ ಮತ್ತು ಚಿಕ್ಕ ಮಟ್ಟದ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಅತಿದೊಡ್ಡ ಜನವಿಭಾಗಗಳೆಂದರೆ, ಪೊಲೀಸ್ ಮತ್ತು ಲೋಕರಕ್ಷಕ ದಳದ ಸಿಬ್ಬಂದಿಗಳು ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಿಗೆ ಸೇರಿದ ನೌಕರರು.

ಇದನ್ನೂ ಓದಿ: ಅದಾನಿ ಸಂಸ್ಥೆಗೆ ಅಕ್ರಮ ಭೂ ಮಂಜೂರಾತಿ: ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂ ನಷ್ಟ

ಸರಕಾರದ ವಿರುದ್ಧ ಹೋರಾಟದ ಹಾದಿ ಹಿಡಿದಿರುವವರಲ್ಲಿ ರೈತರು, ರಾಸುಗಳನ್ನು ಸಾಕುತ್ತಿರುವವರು, ಆದಿವಾಸಿಗಳು, ವೈದ್ಯರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಕೋವಿಡ್ ಪಿಡುಗಿನ ಕಾಲದಲ್ಲಿ ಜೀವವನ್ನೇ ಪಣಕ್ಕಿಟ್ಟು ದುಡಿದ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮಾಜಿ ಸೇನಾ ಸಿಬ್ಬಂದಿಗಳು, ಮಧ್ಯಾಹ್ನದ ಬಿಸಿಯೂಟದ ಸಿಬ್ಬಂದಿ, ಸರಕಾರದ ಎಲ್ಲಾ ಗುತ್ತಿಗೆ ಕೆಲಸಗಾರರು, ಸರಕಾರಿ ಪರೀಕ್ಷೆ ಬರೆಯಲು ಬಯಸುವವರು, ಆಟೋರಿಕ್ಷಾ ಚಾಲಕರು, ರಸ್ತೆ ಬದಿಯಲ್ಲಿ ಮೊಟ್ಟೆ ಮತ್ತು ಮಾಂಸಾಹಾರದ ಗಾಡಿಗಳನ್ನು ಇಟ್ಟವರು ಮತ್ತು ಮಾರಾಟಗಾರರು, ವಿದ್ಯಾ ಸಹಾಯಕರು ಅಂದರೆ, ಗುತ್ತಿಗೆ ಶಿಕ್ಷಕರು ಸೇರಿದ್ದಾರೆ.

ಇವರೆಲ್ಲಾ ಹೋರಾಟಗಳು ಹಳೆಯ ಪಿಂಚಣಿ ನೀತಿ ಜಾರಿಗಾಗಿ ನಡೆಯುತ್ತಿರುವ ರಾಜ್ಯ ಸರಕಾರಿ ನೌಕರರ ಪ್ರಭಾವಿ ಹೋರಾಟಕ್ಕೆ ಹೆಚ್ಚುವರಿಯಾಗಿ ನಡೆಯುತ್ತಿವೆ. ಅವರ ಬೇಡಿಕೆಗಳು ಹಲವಿವೆ. ಅವುಗಳಲ್ಲಿ ಮುಖ್ಯವಾದವು ಎಂದರೆ, ಹಲವು ವರ್ಷಗಳಿಂದ ಬಾಕಿ ಇರುವ ವೇತನ ಪರಿಷ್ಕರಣೆ, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿ ರದ್ದು. ಏಕೆಂದರೆ, ಬಹುತೇಕ ಸರಕಾರಿ ನೌಕರರು ವರ್ಷಗಳಿಂದ ಜುಜುಬಿ ಸಂಬಳಕ್ಕೆ ಪೂರ್ಣಾವಧಿ ಕೆಲಸ ಮಾಡುತ್ತಿದ್ದಾರೆ. ಇಂತವರಲ್ಲಿ ಸರಕಾರಿ ಶಾಲೆಗಳ ಶಿಕ್ಷಕರೂ ಸೇರಿದ್ದಾರೆ. 1995ರಲ್ಲಿ ಮೊದಲ ಬಿಜೆಪಿ ಸರಕಾರದೊಂದಿಗೆ ಬಂದ ಹೊರ ಗುತ್ತಿಗೆ ಪಿಡುಗು ಈಗ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಎಲ್ಲಾ ಸರಕಾರಿ ಇಲಾಖೆಗಳಿಗೆ ವ್ಯಾಪಿಸಿದೆ.

2017ರಲ್ಲಿ ಬಿಜೆಪಿಯು 99 ಸ್ಥಾನಗಳಿಗೆ ಕುಸಿಯುವುದಕ್ಕೆ ಆಗಲೂ ನಡೆಯುತ್ತಿದ್ದ ಈ ಹೋರಾಟಗಳು ಕೂಡಾ ಕಾರಣವಾಗಿದ್ದರೂ, ಹಾರ್ದಿಕ್ ಪಟೇಲರ ಪಾಟೀದಾರ್ ಚಳವಳಿ, ಅಲ್ಪೇಶ್‌ ಠಾಕೂರ್‌ ಅವರ ಹಿಂದುಳಿದ ವರ್ಗಗಳ ಚಳವಳಿ ಮತ್ತು ಜಿಗ್ನೇಶ್ ಮೇವಾನಿಯವರ ದಲಿತ ಚಳವಳಿಯ ಹಿನ್ನೆಲೆಯಲ್ಲಿ ಅವು ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ.

ಇದನ್ನೂ ಓದಿ: ಶಾಸಕ ಜಿಗ್ನೇಶ್‌‌ ಮೇವಾನಿ ಮೇಲೆ ಗುಜರಾತ್‌ ಮಾಜಿ ಗೃಹ ಸಚಿವರ ಗೂಂಡಾಗಳಿಂದ ಹಲ್ಲೆ

ಈ ಬಾರಿ ಅದು ಎದುರಿಸುತ್ತಿರುವ ಗಂಭೀರ ಹೆಚ್ಚವರಿ ಸಮಸ್ಯೆ ಎಂದರೆ, ಆರೆಸ್ಸೆಸ್ ಅಂಗಸಂಸ್ಥೆಯಾಗಿರುವ ಭಾರತೀಯ ಕಿಸಾನ್ ಸಂಘ (ಬಿಕೆಎಸ್)ವು ಸರಕಾರದ ಎದುರು ಬಿದ್ದಿರುವುದು. 26 ಬೇಡಿಕೆಗಳನ್ನು ಮುಂದಿಟ್ಟು ತಿಂಗಳಿಂದ ಗಾಂಧಿನಗರದಲ್ಲಿ ಧರಣಿ ನಡೆಸುತ್ತಿರುವ ಬಿಕೆಎಸ್‌ನ ಬಿಕ್ಕಟ್ಟು- ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನಡೆಸಿದ “ನಮೋ ಖೇದುತ್ (ರೈತ) ಪಂಚಾಯತ್ಗೆ” ಬಿಕೆಎಸ್ ನಾಯಕರನ್ನು ಕರೆಯದೇ ಅವಗಣಿಸಿರುವುದರಿಂದ ಇನ್ನಷ್ಟು ಉಲ್ಭಣಿಸಿದೆ.

ನಡ್ಡಾ ಜೊತೆಗೆ ಮಾತುಕತೆಯ ಬೇಡಿಕೆಯಿಟ್ಟು ಬಂದ ಬಿಕೆಎಸ್ ರೈತನಾಯಕರನ್ನು ಪೊಲೀಸ್ ವಾಹನಗಳಲ್ಲಿ ತುಂಬಿ ಕೂಡಿಟ್ಟು, ಸಮಾವೇಶ ಮುಗಿದ ನಂತರ ಬಿಡುಗಡೆ ಮಾಡಲಾಯಿತು. ಬಿಕೆಎಸ್‌ನ ಸಹ ಪ್ರಚಾರ ಪ್ರಮುಖ್ ಮನ್‌ಸುಖ್ ಪಟೋಲಿಯಾ ಸೇರಿದಂತೆ ಅದರ ನಾಯಕರು ಜೆ‌.ಪಿ. ನಡ್ಡಾರನ್ನು ಮಾಧ್ಯಮಗಳಲ್ಲಿ ಕಟುವಾಗಿ ಟೀಕಿಸಿ,‘‘ಕೊನೆಯ ಎಚ್ಚರಿಕೆ”ಯನ್ನೂ ನೀಡಿದ್ದರು.

ಅದೇ ರೀತಿಯಲ್ಲಿ ಗುಜರಾತ್- ಕೆಳಹಂತದ ಪೊಲೀಸ್ ಸಿಬ್ಬಂದಿ ಮತ್ತು ಲೋಕರಕ್ಷಕ (ಗೃಹರಕ್ಷಕ) ದಳದ ಸಿಬ್ಬಂದಿಗಳ ಅಸಾಧಾರಣವಾದ ಪ್ರತಿಭಟನೆಯನ್ನೂ ಕಂಡಿದೆ. ಶಿಸ್ತಿನ ತರಬೇತಿ ಹೊಂದಿರುವ ಅವರು ಸಾಮಾನ್ಯವಾಗಿ ಪ್ರತಿಭಟನೆಗೆ ಇಳಿಯುವುದಿಲ್ಲ. ಆದರೆ, ಈ ಬಾರಿ ಅವರ ಕುಟುಂಬದವರೂ ಬೀದಿಗಿಳಿದಿದ್ದರು. ಇದರ ಲಾಭಪಡೆಯುವ ಸಲುವಾಗಿ ಅರವಿಂದ ಕೇಜ್ರಿವಾಲ್, ಪೊಲೀಸರಿಗೆ ದೇಶದಲ್ಲೇ ಅತ್ಯುತ್ತಮ ಸಂಬಳದ ಭರವಸೆ ನೀಡಿದ ಬೆನ್ನಲ್ಲೇ, ಭೂಪಿಂದರ್ ಪಟೇಲ್ ಪೊಲೀಸರಿಗೆ 550 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದರು. ಇದು ತಾತ್ಕಾಲಿಕ ಕ್ರಮವೇ ಹೊರತು, ವೇತನ ಪರಿಷ್ಕರಣೆ ಅಲ್ಲವೆಂದು ಪೊಲೀಸರು ಇನ್ನೂ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ‘ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿ’ – ಗುಜರಾತ್ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ವಾಗ್ದಾಳಿ

ಮಾರ್ಚ್ 31, 2022ರ ಬಜೆಟ್ ಅಧಿವೇಶನದ ಕೊನೆಯ ದಿನ ಮಧ್ಯರಾತ್ರಿಯ ತನಕ ಚರ್ಚಿಸಿ ಜಾರಿಗೊಳಿಸಿದ್ದ ಬೀಡಾಡಿ ದನಗಳ ನಿಯಂತ್ರಣ ಕುರಿತ ಕಠಿಣ ಕಾನೂನನ್ನೂ ಸರಕಾರ ಹಿಂದೆಗೆದುಕೊಂಡಿತು. ಈ ಕಾನೂನು ಬಂದ ತಕ್ಷಣವೇ ಮಾಲ್‌ದಾರಿಗಳು (ಪಶುಪಾಲಕರು) ಉಗ್ರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ, ಸರಕಾರ ಈ ಕಾಯಿದೆಯನ್ನು ಅಮಾನತಿನಲ್ಲಿ ಇರಿಸಿತ್ತು. ಇದರಿಂದ ತೃಪ್ತರಾಗದ ಅವರು ಬಿಜೆಪಿಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದುದರಿಂದ, ವಿಧಾನಮಂಡಲದ ಎರಡು ದಿನಗಳ ವಿಶೇಷ ಅಧಿವೇಶನದ ನಂತರ, ಸೆಪ್ಟೆಂಬರ್ 21ರಂದು ಸರಕಾರ ಈ ಕಾಯಿದೆಯನ್ನೇ ಹಿಂತೆಗೆದುಕೊಳ್ಳಬೇಕಾಯಿತು.

ಅದೇ ರೀತಿಯಲ್ಲಿ ಮಹಾರಾಷ್ಟ್ರ ಸಹಯೋಗದ ಪಾರ್-ತಾಪಿ-ನರ್ಮದಾ ನದಿ ಜೋಡಣೆ ಯೋಜನೆಯನ್ನೂ ದಕ್ಷಿಣ ಗುಜರಾತಿನ ಆದಿವಾಸಿಗಳ ಭಾರೀ ಪ್ರತಿಭಟನೆಯ ನಂತರ ಹಿಂತೆಗೆದುಕೊಳ್ಳಬೇಕಾಯಿತು. ಈ ಯೋಜನೆಯನ್ನು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಭಾರೀ ವಾಲಗದೊಂದಿಗೆ 2022-23ರ ಬಜೆಟಿನಲ್ಲಿ ಘೋಷಿಸಿದ್ದರು. ಇಂತಾ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ.

ಮೂಲ: ದರ್ಶನ್ ದೇಸಾಯಿ
ಲೇಕಖರು ಗುಜರಾತಿನ ಡೆವಲಪ್‌ಮೆಂಟ್ ನ್ಯೂಸ್ ನೆಟ್‌ವರ್ಕ್‌ನ ಸ್ಥಾಪಕ ಸಂಪಾದಕರು
ಇಮೈಲ್: [email protected]
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...