Homeಮುಖಪುಟಶಾಸಕ ಜಿಗ್ನೇಶ್‌‌ ಮೇವಾನಿ ಮೇಲೆ ಗುಜರಾತ್‌ ಮಾಜಿ ಗೃಹ ಸಚಿವರ ಗೂಂಡಾಗಳಿಂದ ಹಲ್ಲೆ

ಶಾಸಕ ಜಿಗ್ನೇಶ್‌‌ ಮೇವಾನಿ ಮೇಲೆ ಗುಜರಾತ್‌ ಮಾಜಿ ಗೃಹ ಸಚಿವರ ಗೂಂಡಾಗಳಿಂದ ಹಲ್ಲೆ

- Advertisement -
- Advertisement -

ದಲಿತ ಹಕ್ಕುಗಳ ಖ್ಯಾತ ಹೋರಾಟಗಾರ, ಗುಜರಾತ್‌‌ನ ವಡ್ಗಾಮ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಹಮದಾಬಾದ್‌ನ ಸಾರ್ವಜನಿಕ ಸಭೆಯೊಂದರಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರ ಆಪ್ತರು ಹಲ್ಲೆ ನಡೆಸಿದ್ದಾಗಿ ವರದಿಯಾಗಿದೆ.

ಈ ಬಗ್ಗೆ ಅವರ ಟ್ವಿಟರ್‌‌ ಅಕೌಂಟ್‌ ಸೋಮವಾರ ರಾತ್ರಿ ಮಾಹಿತಿ ನೀಡಿದ್ದು, ಈ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಗುಜರಾತ್ ಅಧ್ಯಕ್ಷ ಹಿತೇಂದ್ರ ಪಿತಾಡಿಯಾ ಕೂಡ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಹಮದಾಬಾದ್ ಜಿಲ್ಲೆಯ ವಸ್ತ್ರಾಲ್‌ನಲ್ಲಿರುವ ನರ್ಮದಾ ಅಪಾರ್ಟ್‌ಮೆಂಟ್‌ನಲ್ಲಿ ಜಿಗ್ನೇಶ್‌ ಮೇವಾನಿ ಮತ್ತು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಹಿತೇಂದ್ರ ಪಿತಾಡಿಯಾ ಭೇಟಿಯಾಗಿದ್ದರು. ಈ ವೇಳೆ ಗುಜರಾತ್ ಮಾಜಿ ಗೃಹ ಸಚಿವ ಪ್ರದೀಪ್‌ ಸಿಂಗ್‌ ಜಡೇಜಾ ಅವರ ಆಪ್ತ ಲಾಭು ದೇಸಾಯಿ ಸಭೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಿತೇಂದ್ರ ಆರೋಪಿಸಿದ್ದಾರೆ.

ಇದನ್ನೂ ಓದಿ: ಜಿಗ್ನೇಶ್‌ ಜಾಮೀನು: ಅಸ್ಸಾಂ ಪೊಲೀಸರನ್ನು ಕುಟುಕಿದ ಕೆಳ ನ್ಯಾಯಾಲಯದ ನಡೆಗೆ ಹೈಕೋರ್ಟ್ ಅಸಮ್ಮತಿ

“ಗೂಂಡಾಗಳು ಸಭೆಯನ್ನು ನಡೆಸದಂತೆ ಒತ್ತಾಯಿಸಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ತೋರಿಸುತ್ತದೆ” ಅವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೋಡ್ಸೆ ಭಕ್ತರು ಪ್ರಧಾನಿ ಕಾರ್ಯಾಲಯದಲ್ಲಿದ್ದಾರೆ, ಅವರೆ ನನ್ನ ಬಂಧನಕ್ಕೆ ನೇರ ಕಾರಣ: ಜಿಗ್ನೇಶ್ ಮೇವಾನಿ

ಮೇವಾನಿ ಮೇಲಿನ ದಾಳಿ ಬಗ್ಗೆ ಮಾಹಿತಿ ನೀಡಿದ ಅವರ ತಂಡ

ಶಾಸಕ ಜಿಗ್ನೇಶ್ ಮೇವಾನಿ ಅವರ ಮೇಲೆ ಅಹಮದಾಬಾದ್‌ನ ವಸ್ತ್ರಾಲ್ ಪ್ರದೇಶದಲ್ಲಿ ಪೊಲೀಸರ ಸಮ್ಮುಖದಲ್ಲಿ ದಾಳಿ ನಡೆಸಲಾಗಿದೆ ಎಂದು ಅವರ ತಂಡವು ಹೇಳಿದೆ. “ಅಹಮದಾಬಾದ್‌ನ ವಸ್ತ್ರಾಲ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರ ಮೇಲೆ ಗುಜರಾತ್ ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಗಾ ಅವರ ಗೂಂಡಾಗಳು ಪೊಲೀಸರ ಸಮ್ಮುಖದಲ್ಲಿ ಹಲ್ಲೆ ನಡೆಸಿದ್ದಾರೆ” ಎಂದು ಅವರ ತಂಡ ಟ್ವೀಟ್ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಹಲ್ಲೆ ಕಂಡನಾರ್ಹ. ಹಲ್ಲೆ ಮಾಡಿರುವವರನ್ನು ಗುಜರಾತ್ ಪೊಲೀಸರು ಈ ಕೂಡಲೇ ಬಂದಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...