ಸಚಿವಾಲಯದ ಸಂಕೀರ್ಣ ಮತ್ತು ರಾಜ್ಯ ವಿಧಾನಸಭಾ ಭವನದೊಳಗೆ ಪ್ರವೇಶಿಸುವಾಗ ಪೊಲೀಸ್ ಸಿಬ್ಬಂದಿಯಿಂದ ತಾನು ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಗುಜರಾತ್ ವಿಧಾನಸಭೆಯ ಕಾಂಗ್ರೆಸ್ ಶಾಸಕರೊಬ್ಬರು ಸೋಮವಾರ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರಿಗೆ ಬಗ್ಗೆ ದೂರು ನೀಡಿದ್ದಾರೆ.
ಗಾಂಧಿನಗರದ ಎಂಎಲ್‌ಎ ಕ್ವಾರ್ಟರ್ಸ್‌ನಲ್ಲಿಯೂ ಹಲವು ಶಾಸಕರು ಇದೇ ರೀತಿ ಕಿರುಕುಳಕ್ಕೆ ಒಳಗಾಗಿದ್ದಾಗಿ ದೂರಿಕೊಂಡಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಮಾಜಿ ಅಧ್ಯಕ್ಷ ಅಮಿತ್ ಚಾವ್ಡಾ ಅವರು ಸ್ಪೀಕರ್‌ಗೆ ಈ ವಿಷಯ ಪ್ರಸ್ತಾಪಿಸಿ, “ಸಚಿವಾಲಯ ಸಂಕೀರ್ಣ ಮತ್ತು ರಾಜ್ಯ ವಿಧಾನಸಭೆ ಕಟ್ಟಡದ ಪ್ರವೇಶದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ನಮ್ಮೊಂದಿಗೆ ಭಯೋತ್ಪಾದಕರಂತೆ ವ್ಯವಹರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೋಷಿತರ ವಲಸೆ ಮತ್ತು ಪ್ರಭುತ್ವ; ಮರದೊಳಗಣ ಬೆಂಕಿ
“ಅಮಿತ್‌ಭಾಯಿ ಭಾಗಭಾಯ್ ಬರಾದ್ ಅವರು ಕೂಡ ನನ್ನನ್ನು ಖುದ್ದಾಗಿ ಭೇಟಿ ಮಾಡಿ ಇದೇ ರೀತಿ ದೂರು ನೀಡಿದ್ದಾರೆ. ಇನ್ನು ಮುಂದೆ ಯಾರೊಂದಿಗೂ ಈ ರೀತಿ ನಡೆದುಕೊಳ್ಳಬಾರದು, ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಸ್ಪೀಕರ್ ಹೇಳಿದ್ದಾರೆ.
ಪ್ರತಿಪಕ್ಷದ ಉಪನಾಯಕ ಶೈಲೇಶ್ ಪರ್ಮಾರ್ ಮಾತನಾಡಿ, “ಸಚಿವಾಲಯದ ಗೇಟ್‌ನಲ್ಲಿ ನಮ್ಮನ್ನು ಪೊಲೀಸ್ ಸಿಬ್ಬಂದಿ ಬಲವಂತವಾಗಿ ತಡೆದರು. ಕೇಳಿದಾಗ ಅವರು ಸ್ಪೀಕರ್ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ” ಎಂದು ಹೇಳಿದ್ದಾರೆ.
ಆದರೆ ಸ್ಪೀಕರ್ ಅವರು, ‘ನಾನು ಅಂತಹ ಯಾವುದೇ ಸೂಚನೆ ನೀಡಿಲ್ಲ’ ಎಂದು ಹೇಳಿದ್ದಾರೆ.
ಜಾಮ್‌ನಗರದ ಶಾಸಕ ವಿಕ್ರಮ್ ಮಡಮ್ ಅವರು ಮಾತನಾಡಿ, “ಬೆಳಿಗ್ಗೆಯೇ ಪೊಲೀಸ್ ಅಧಿಕಾರಿಗಳು ಶಾಸಕರ ಕ್ವಾರ್ಟರ್ಸ್‌ಗೆ ಆಗಮಿಸಿದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಆಗಿರುವ ಜಡೇಜಾ ಅವರು ಸ್ಪೀಕರ್ ಸೂಚನೆಯ ಮೇರೆಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರು ನಿಮ್ಮನ್ನು ಸುಮ್ಮನೆ ಯಾಕೆ ಹೆಸರಿಸಿದ್ದಾರೆ?” ಎಂದು ಕೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, “ಪ್ರತಿಯೊಬ್ಬ ಶಾಸಕರು ಗೌರವಕ್ಕೆ ಅರ್ಹರು. ಈ ಘಟನೆಯು ದುರದೃಷ್ಟಕರವಾಗಿದ್ದು, ನಾವು ಖಂಡಿತವಾಗಿಯೂ ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: 40% ಕಮಿಷನ್ ಭ್ರಷ್ಟಾಚಾರದಿಂದ ಕರ್ನಾಟಕಕ್ಕೇನು ಕಾದಿದೆ?: ಸಂವಾದ ಕಾರ್ಯಕ್ರಮ ನಾಳೆ


