Homeಮುಖಪುಟಗುಜರಾತ್​: ಗೋಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರ್ - ಹಾಲು ಗಂಜಲದ ಔಷಧಿ!

ಗುಜರಾತ್​: ಗೋಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರ್ – ಹಾಲು ಗಂಜಲದ ಔಷಧಿ!

- Advertisement -
- Advertisement -

ಕೊರೊನಾ ಎರಡನೇ ಅಲೆಗೆ ಇಡೀ ದೇಶವೇ ತತ್ತಿರಿಸಿಹೋಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್, ಔಷಧಗಳಿಗೆ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ಗುಜರಾತ್​ನ ಹಳ್ಳಿಯೊಂದರಲ್ಲಿ ಗೋಶಾಲೆಯಲ್ಲೇ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಹಾಲು ಗಂಜಲದ ಔಷಧಿ ನೀಡಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಗುಜರಾತ್​ನ ಬನಸ್ಕಾಂತ ಜಿಲ್ಲೆಯ ದೀಸಾ ತಾಲೂಕಿನ ತೆಟೋಡಾ ಗ್ರಾಮದ ಗೋಶಾಲೆಯಲ್ಲಿ ‘ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್ ಐಷೋಲೇಶನ್ ಕೇಂದ್ರ’ ತೆರೆಯಲಾಗಿದ್ದು ಇದರಲ್ಲಿ ರೋಗಿಗಳಿಗೆ ಹಸುವಿನ ಶುದ್ಧ ಹಾಲು ಮತ್ತು ಗಂಜಲಗಳಿಂದ ತಯಾರಿಸಲಾದ ಔಷಧಗಳ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

“ರೋಗಲಕ್ಷಣಗಳ ತೀವ್ರತೆ ಕಡಿಮೆ ಇರುವ ಕೋವಿಡ್-19 ರೋಗಿಗಳಿಗೆ ಹಸುವಿನ ಹಾಲು, ತುಪ್ಪ ಮತ್ತು ಗಂಜಲದಿಂದ ತಯಾರಿಸಲಾದ ಎಂಟು ಆಯುರ್ವೇದ ಔಷಧಗಳನ್ನ ಇಲ್ಲಿ ನೀಡುತ್ತಿದ್ದೇವೆ. ದೇಸೀ ತಳಿಯ ಹಸುವಿನ ಗಂಜಲದಿಂದ ಮಾಡಿದ ಗೋ ತೀರ್ಥ ಇತ್ಯಾದಿ ಔಷಧಗಳನ್ನ ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ. ರೋಗ ನಿರೋಧಕ ಶಕ್ತಿಗಾಗಿ ಹಸು ಹಾಲಿನಿಂದ ಮಾಡಿದ ಚ್ಯವನಪ್ರಾಶವನ್ನ ರೋಗಿಗಳಿಗೆ ನೀಡಲಾಗುತ್ತದೆ” ಎಂದು ಗೋಧಾಮ್ ಮಹಾತೀರ್ಥ ಪಾಠಮೇದ ಎಂಬ ಗೋಶಾಲಾ ಘಟಕದ ಮೋಹನ್ ಜಾಧವ್ ಹೇಳಿದ್ದಾರೆ.

ಗುಜರಾತ್ ಸರ್ಕಾರ ಸ್ಥಳೀಯ ಗ್ರಾಮಗಳ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್​ಗಳನ್ನ ಸ್ಥಾಪಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ತೆಟೋಡಾ ಗ್ರಾಮದಲ್ಲಿ ಈ ಐಸೋಲೇಶನ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಿದ್ದು, ಇಬ್ಬರು ಆಯುರ್ವೇದ ವೈದ್ಯರು ಮತ್ತು ಇಬ್ಬರು ಆಲೋಪಥಿ ವೈದ್ಯರು ಇಲ್ಲಿ ಇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಬನಸ್ಕಂತ ಜಿಲ್ಲಾಧಿಕಾರಿ ಆನಂದ್ ಪಟೇಲ್ ಮಾತನಾಡಿ “ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಯಾವುದೇ ಅನುಮತಿ ಅಗತ್ಯವಿಲ್ಲದಿದ್ದರೂ, ಅವರು ನಮಗೆ ಮಾಹಿತಿ ನೀಡಿದ್ದರು ಮತ್ತು ನಾವು ಅವರಿಗೆ ಅನುಮತಿ ನೀಡಿದ್ದೇವೆ. ತೆಟೋಡಾ ಗ್ರಾಮದಲ್ಲಿರುವ ಈ ಕೇಂದ್ರವು ಗೋಶಾಲೆಯಲ್ಲಿದೆ” ಎಂದಿದ್ದಾರೆ.


ಇದನ್ನೂ ಓದಿ: 10 ಲಕ್ಷ ಭಾರತೀಯರು ಈಗಾಗಲೇ ಕೋವಿಡ್‌ಗೆ ಬಲಿಯಾಗಿದ್ದಾರೆ, ಶೇ. 80ರಷ್ಟು ಸಾವು ದಾಖಲಾಗುತ್ತಿಲ್ಲ: ಗಣಿತ ತಜ್ಞ ಮುರಾದ್ ಬನಾಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ‘ಪ್ರಗತಿಪರ ಸೌಹಾರ್ದ ಸಂಘಟನೆಗಳ’ ಆಗ್ರಹ

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನ ಬಾಬಾ ಬುಡನ್‌...

ಖಮೇನಿ ನಿಧನಕ್ಕೆ ತಡವಾಗಿ ಸಂತಾಪ ಸೂಚಿಸಿದ ಭಾರತ; ಇರಾನ್‌ ರಾಯಭಾರ ಕಚೇರಿಯಲ್ಲಿನ ಪುಸ್ತಕದಲ್ಲಿ ವಿಕ್ರಮ್ ಮಿಶ್ರಿ ಸಹಿ

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ತಡವಾಗಿ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಗುರುವಾರ ನವದೆಹಲಿಯ ಇರಾನಿನ ರಾಯಭಾರ ಕಚೇರಿಯಲ್ಲಿ ಸಂತಾಪ ಸೂಚಿಸುವ ಪುಸ್ತಕಕ್ಕೆ...

ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ತ್ವರಿತವಾಗಿ ಕೊನೆಗೊಳಿಸಲು ಬೆಂಬಲಿಸುತ್ತೇನೆ: ಫಿನ್ಲೆಂಡ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಗಳಿಗೆ "ತ್ವರಿತ ಅಂತ್ಯ" ವನ್ನು ತರಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ, ಯಾವುದೇ ಸಮಸ್ಯೆಯನ್ನು ಮಿಲಿಟರಿ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು...

ಮಹಾರಾಷ್ಟ್ರ| ಬಣ್ಣ ಎರಚಿದ ಮೊಮ್ಮಗನ ಮೇಲೆ ಬಿಸಿ ನೀರು ಸುರಿದ ಮಹಿಳೆ; ಬಾಲಕನ ಸ್ಥಿತಿ ಗಂಭೀರ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೊರಾಡಿ ಪ್ರದೇಶದಲ್ಲಿ ಹೋಲಿ ಆಡುತ್ತಿದ್ದಾಗ ನಾಲ್ಕು ವರ್ಷದ ಮೊಮ್ಮಗ ತನ್ನ ಮೇಲೆ ಬಣ್ಣ ಎರಚಿದ್ದರಿಂದ ಕೋಪಗೊಂಡ ಅಜ್ಜಿ ಮಗುವಿನ ಮೇಲೆ ಕುದಿಯುವ ನೀರನ್ನು ಸುರಿದಿರುವ ವಿಡಿಯೋ ಇದೀಗ ವೈರಲ್...

ಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ ಮೋದಿ ಸರ್ಕಾರ ಮೌನ!

ಭಾರತದಿಂದ ಕೇವಲ 300 ಕಿಲೋ ಮೀಟರ್ ದೂರದಲ್ಲಿ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ 'ಐಆರ್‌ಐಎಸ್ ದೆನಾ' ಮೇಲೆ ಅಮೆರಿಕ ಜಲಾಂತರ್ಗಾಮಿ ಬುಧವಾರ (ಮಾ.4) ಭೀಕರ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇರಾನ್‌ ನೌಕೆಯಲ್ಲಿದ್ದ 180 ಸಿಬ್ಬಂದಿಯ...

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ‘ರಾಜಿ ಮಾಡಿಕೊಂಡ ಪ್ರಧಾನಿ ಕಾರ್ಯತಂತ್ರದ ಸ್ವಾಯತ್ತತೆ ಬಿಟ್ಟುಕೊಟ್ಟರು: ರಾಹುಲ್ ಟೀಕೆ

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ...

ಟ್ರಂಪ್ ಬೆದರಿಕೆಗೆ ಹೆದರದ ಸ್ಪೇನ್ ಪ್ರಧಾನಿ; ಇರಾನ್ ಮೇಲಿನ ದಾಳಿಗೆ ಸೇನಾ ನೆಲೆ ಬಳಸಲು ಅನುಮತಿ ನಿರಾಕರಿಸಿದ ಪೆಡ್ರೊ ಸ್ಯಾಂಚೆಜ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಿಮಾನಗಳು ತನ್ನ ನೆಲೆಗಳನ್ನು ಬಳಸಲು ಅನುಮತಿಸಲು ಮ್ಯಾಡ್ರಿಡ್ ನಿರಾಕರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟೀಕೆಗಳಿಗೆ ಬುಧವಾರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿರುಗೇಟು...

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...

ತಮಿಳುನಾಡು: ಜಾತಿ ಜಗಳದಲ್ಲಿ ದಲಿತ ವ್ಯಕ್ತಿ, ಒಡಿಶಾ ವಲಸೆ ಕಾರ್ಮಿಕನ ಹತ್ಯೆ; ಹಿಂದೆಯೂ ಜಾತಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಿಂದ ಜಾತಿ ಹಿಂಸಾಚಾರದ ಭಯಾನಕ ಘಟನೆ ವರದಿಯಾಗಿದೆ, ಪೆರುಂಪತ್ತು ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಅಂಗವಿಕಲ ದಲಿತ ವ್ಯಕ್ತಿ ಮತ್ತು ಒಡಿಶಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಆರೋಪಿಗಳಲ್ಲಿ ಇಬ್ಬರು ಕೆಲವು...