Homeಕರೋನಾ ತಲ್ಲಣಗುಜರಾತ್‌: ವಡ‌ಗಾವ್‌‌‌ ಶಾಸಕ ಜಿಗ್ನೇಶ್ ಮೇವಾನಿ ಮಾದರಿ ಕೆಲಸ- ಕ್ಷೇತ್ರದ ಜನರಿಗಾಗಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ

ಗುಜರಾತ್‌: ವಡ‌ಗಾವ್‌‌‌ ಶಾಸಕ ಜಿಗ್ನೇಶ್ ಮೇವಾನಿ ಮಾದರಿ ಕೆಲಸ- ಕ್ಷೇತ್ರದ ಜನರಿಗಾಗಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ

- Advertisement -
- Advertisement -

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರ ವಿಧಾನಸಭಾ ಕ್ಷೇತ್ರವಾಗಿರುವ ಬನಸ್ಕಂತ ಜಿಲ್ಲೆಯ ವಡ‌ಗಾವ್‌‌‌ ತಾಲೂಕಿನಲ್ಲಿ ಶನಿವಾರ (ಆಗಸ್ಟ್ 28) ರಂದು ಜಿಲ್ಲೆಯ ಅತಿ ದೊಡ್ಡ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಲಿದ್ದಾರೆ. ಜನರ ನೆರವಿನಿಂದ ದೇಣಿಗೆ ಮೂಲಕ ಈ ಪ್ಲಾಂಟ್ ನಿರ್ಮಿಸಲಾಗಿದೆ.

ಕೊರೊನಾ ಎರಡನೇ ಅಲೆ ಸಮಯದಲ್ಲಿ ದೇಶದಲ್ಲಿ ಉಂಟಾದ ಆಕ್ಸಿಜನ್ ಬಿಕ್ಕಟ್ಟು, ಆಮ್ಲಜನಕ ಸಿಗದೆ ಪ್ರಾಣ ಬಿಟ್ಟವರ ಸಂಖ್ಯೆ ಅಧಿಕವಾಗಿತ್ತು. ಆಕ್ಸಿಜನ್‌ಗಾಗಿ ಎಲ್ಲಾ ರಾಜ್ಯಗಳಲ್ಲೂ ಹಾಹಾಕಾರ ಎದ್ದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಮೂರನೇ ಅಲೆ ಎದುರಿಸಲು, ತಮ್ಮ ವಿಧಾನಸಭಾ ಕ್ಷೇತ್ರದ ಜನರ ಜೀವ ರಕ್ಷಣೆಗಾಗಿ ಈ ಕಾರ್ಯ ಮಾಡಲಾಗುತ್ತಿದೆ ಎಂದು ಜಿಗ್ನೇಶ್ ಹೇಳಿದ್ದಾರೆ.

“ವಿ ದಿ ಪೀಪಲ್ ಚಾರಿಟಬಲ್ ಟ್ರಸ್ಟ್” ಮೂಲಕ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಶಾಸಕ ಜಿಗ್ನೇಶ್ ಮೇವಾನಿ ಆರಂಭಿಸಿದ್ದರು. 60 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯನ್ನು ಈ ಅಭಿಯಾನ ಹೋಂದಿತ್ತು. ಗುಜರಾತ್‌ನ ವಡ್ಗಾಮ್‌ನಲ್ಲಿ ಆಕ್ಸಿಜನ್ ಪ್ಲಾಂಟ್ ಮತ್ತು 15 ಆಮ್ಲಜನಕ ಸಾಂದ್ರಕಗಳನ್ನು ಸ್ಥಾಪಿಸಲು ನಿರ್ಧರಿಸಿಲಾಗಿತ್ತು.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆ: ಜಿಗ್ನೇಶ್ ಮೇವಾನಿ ಪ್ರತಿನಿಧಿಸುವ ವಡಗಾವ್ ತಾಲೂಕಿಗೆ ಮೊದಲ ಸ್ಥಾನ

ಖುದ್ದು ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನದ ಜೊತೆಯಾಗಿದ್ದರು ಶಾಸಕ ಜಿಗ್ನೇಶ್ ಮೇವಾನಿ. ಶಾಸಕರ ಕಲ್ಯಾಣ ನಿಧಿ ಬಿಡುಗಡೆಯಾಗಲು ಸಮಯ ತೆಗೆದುಕೊಳ್ಳುತ್ತದೆ. ಅಷ್ಟರಲ್ಲಿ ಸಾವಿರಾರು ಜೀವಗಳು ಬಲಿಯಾಗುತ್ತವೆ. ಇದನ್ನು ತಪ್ಪಿಸಲು, ನನ್ನ ಊರಿನ ಬಡವರು, ಕಾರ್ಮಿಕರ ಉಸಿರು ಉಳಿಸಲು ನೆರವಾಗಿ ಎಂದು ಮನವಿ ಮಾಡಿದ್ದರು.

ಈಗ ವಡಗಾವ್‌ನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದ್ದು, ದಿನಕ್ಕೆ 800 ಸಿಲಿಂಡರ್‌ಗಳನ್ನು ತುಂಬುವ ಸಾಮರ್ಥವನ್ನು ಈ ಆಮ್ಲಜನಕ ಸ್ಥಾವರ ಹೊಂದಿದೆ ಎಂದು ಜಿಗ್ನೇಶ್ ಮಾಹಿತಿ ನೀಡಿದ್ದಾರೆ. ಎಲ್ಲಾ ತೊಂದರೆಗಳನ್ನು ದಾಟಿ, ನನ್ನ ಕ್ಷೇತ್ರದ ಜನರಿಗೆ ಮೂಲ ಆರೋಗ್ಯ ಸೌಲಭ್ಯ ನೀಡುವಲ್ಲಿ ಸಫಲವಾಗಿದ್ದೇವೆ ಎಂದು ಊನಾ ಚಳವಳಿಯ ನಾಯಕ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ನಮ್ಮ ಮೇಲೆ ದಾಳಿ ನಡೆಸಿದರೆ ಹೋರಾಟವನ್ನು ನಿಲ್ಲಿಸುತ್ತೇವೆಂದು ಭಾವಿಸಿದ್ದೀರಾ, ಮನುವಾದಿಗಳೇ ?- ಜಿಗ್ನೇಶ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...