Homeಅಂತರಾಷ್ಟ್ರೀಯಕ್ಯಾಪಿಟಲ್ ಮೇಲೆ ದಾಳಿ: ಟ್ರಂಪ್ ಮತ್ತು ಬಲಪಂಥೀಯ ಗುಂಪುಗಳ ವಿರುದ್ಧ ಮೊಕದ್ದಮೆ ಹೂಡಿದ ಪೊಲೀಸರು

ಕ್ಯಾಪಿಟಲ್ ಮೇಲೆ ದಾಳಿ: ಟ್ರಂಪ್ ಮತ್ತು ಬಲಪಂಥೀಯ ಗುಂಪುಗಳ ವಿರುದ್ಧ ಮೊಕದ್ದಮೆ ಹೂಡಿದ ಪೊಲೀಸರು

- Advertisement -
- Advertisement -

ಜನವರಿ 6 ರಂದು ಅಮೆರಿಕದ ಕ್ಯಾಪಿಟಲ್‌‌ನಲ್ಲಿ ನಡೆದ ಗಲಭೆಯ ಸಂದರ್ಭ ದಾಳಿಗೊಳಗಾದ ಪೊಲೀಸ್ ಅಧಿಕಾರಿಗಳು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪರವಾಗಿರುವ ತೀವ್ರವಾದಿ ಗುಂಪುಗಳಾದ ಪ್ರೌಡ್ ಬಾಯ್ಸ್ ಮತ್ತು ಓತ್ ಕೀಪರ್ಸ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಟ್ರಂಪ್‌‌ ಅವರ ಬೆಂಬಲಿಗ, ರಾಜಕೀಯ ಸಹಾಯಕರಾಗಿರುವ ರೋಜರ್ ಸ್ಟೋನ್ ಮತ್ತು ಬಲಪಂಥೀಯ ತೀವ್ರಗಾಮಿ ಗುಂಪುಗಳ ಸದಸ್ಯರು, ನವೆಂಬರ್ 2020 ರ ಚುನಾವಣೆಯಲ್ಲಿ ಜೋ ಬಿಡೆನ್ ಅವರ ವಿಜಯವನ್ನು ಅಧೀಕೃತಗೊಳಿಸುವ ಕಾರ್ಯಕ್ರಮವನ್ನು ಅಡ್ಡಿಪಡಿಸಲು, ಉದ್ದೇಶಪೂರ್ವಕವಾಗಿ ಹಿಂಸಾತ್ಮಕ ಗುಂಪನ್ನು ಕಳುಹಿಸಿದ್ದಾರೆ ಎಂದು, ಪ್ರಕರಣ ದಾಖಲಿಸಿರುವ ಏಳು ಪೊಲೀಸ್ ಅಧಿಕಾರಿಗಳು ಆರೋಪಿಸುತ್ತಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಇದನ್ನೂ ಓದಿ: 2023ರವರೆಗೆ ಟ್ರಂಪ್‌ ಖಾತೆ ಬ್ಯಾನ್‌ ವಿಸ್ತರಿಸಿದ ಫೇಸ್‌ಬುಕ್: ಅವಮಾನವೆಂದ ಟ್ರಂಪ್

2016 ರ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಅಪರಾಧಗಳಿಗಾಗಿ ರೋಜರ್ ಸ್ಟೋನ್ ಜೈಲಿನಲ್ಲಿದ್ದರು. ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯುವುದಕ್ಕಿಂತ ಮುಂಚೆ ಅವರಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಲಾಗಿತ್ತು.

ನವೆಂಬರ್ 2020 ರ ಚುನಾವಣೆಯಲ್ಲಿ ಜೋ ಬಿಡೆನ್ ಅವರ ವಿಜಯವನ್ನು ಅಧೀಕೃತಗೊಳಿಸುವ ಕಾರ್ಯಕ್ರಮವನ್ನು ಅಡ್ಡಿಪಡಿಸಲು, ಉದ್ದೇಶಪೂರ್ವಕವಾಗಿ ಹಿಂಸಾತ್ಮಕ ಗುಂಪನ್ನು ಕಳುಹಿಸುವಲ್ಲಿ ಟ್ರಂಪ್ ಕೂಡಾ ಕೆಲಸ ಮಾಡಿದ್ದಾರೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಮಾಜಿ ಅಧ್ಯಕ್ಷರು ಅಧಿಕಾರದಲ್ಲಿ ಉಳಿಯಲು ಕಾನೂನುಬಾಹಿರ ಪ್ರಯತ್ನ ಮಾಡಿದ್ದು, ಆಂತರಿಕವಾಗಿ ಭಯೋತ್ಪಾದನೆಯ ಕೃತ್ಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಅಮೆರಿಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತು ಅವರ ಪಕ್ಷವು ಪದೇ ಪದೇ ಆರೋಪಿಸಿದ್ದವು. ಇದರ ನಂತರ ಜೊ ಬೈಡನ್ ಅಲ್ಲಿಯ ಅಧ್ಯಕ್ಷನಾಗಿ ಆಯ್ಕೆಯಾದರು. ಈ ಸಮಯದಲ್ಲಿ ಅವರ ವಿಜಯವನ್ನು ಅಧೀಕೃತವಾಗಿ ಘೋಷಿಸುವ ಕಾರ್ಯಕ್ರಮದಲ್ಲಿ ಟ್ರಂಪ್ ಬೆಂಬಲಿಗರು ಅಲ್ಲಿನ ಕ್ಯಾಪಿಟಲ್‌ಗೆ ದಾಳಿ ನಡೆಸಿದ್ದರು.

ಇದನ್ನೂ ಓದಿ: ಟ್ರಂಪ್ ಆಡಳಿತದಲ್ಲಿ ಏಷ್ಯನ್ ಅಮೆರಿಕನ್ನರ ವಿರುದ್ಧ ದ್ವೇಷ ಹರಡಲಾಗಿತ್ತು: ಜೋ ಬೈಡೆನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...