Homeಕರ್ನಾಟಕಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ ಮಾರಾಟಗಾರರ ಗೋಳು ಕೇಳುವವರ್ಯಾರು?

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ ಮಾರಾಟಗಾರರ ಗೋಳು ಕೇಳುವವರ್ಯಾರು?

- Advertisement -
- Advertisement -

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೊದಲ ದಿನವೇ ಜನ ಸಾಗರ ಹರಿದುಬಂದಿದೆ. ಕೆಲವು ಪುಸ್ತಕ ಮಾರಾಟಗಾರರಿಗೆ ತಕ್ಕಮಟ್ಟಿಗಿನ ಲಾಭವೂ ಆಗುತ್ತಿದೆ. ಆದರೆ ಪುಸ್ತಕ ಮಾರಾಟಗಾರರತ್ತ ಕನ್ನಡ ಸಾಹಿತ್ಯ ಪರಿಷತ್ತಿನ ಯಾವೊಬ್ಬ ಪ್ರತಿನಿಧಿಯೂ ಸುಳಿದಿಲ್ಲ. ಜೊತೆಗೆ ವಾಣಿಜ್ಯ ಮಳಿಗೆಯೊಳಗೆ ಒಂದಿಷ್ಟು ಪುಸ್ತಕ ಮಳಿಗೆಗಳನ್ನು ಹಾಕಿರುವುದರಿಂದಾಗಿ ಕೆಲವು ಪ್ರಕಾಶಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಸಮ್ಮೇಳನದ ಆರಂಭದ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಮಳಿಗೆಗಳತ್ತ ಜನರು ಹರಿಬಂದಿದ್ದರು. ಎರಡನೇ ದಿನ ಮತ್ತಷ್ಟು ಪುಸ್ತಕ ಪ್ರೇಮಿಗಳು ಮಳಿಗೆಗಳತ್ತ ಧಾವಿಸುವ ನಿರೀಕ್ಷೆ ಇದೆ. ಆದರೆ ಸಮ್ಮೇಳನದ ಸಂಘಟಕರು ಪುಸ್ತಕ ಮಾರಾಟಗಾರರಿಗೆ ಬೇಕಾದ ಅಗತ್ಯತೆಗಳ ಕುರಿತು ಕೇಳುತ್ತಿಲ್ಲ. ಪ್ರತಿಸಲವೂ ಒಂದಲ್ಲ, ಒಂದು ಸಮಸ್ಯೆಯನ್ನು ಪ್ರಕಾಶಕರು ಅನುಭವಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಮಳಿಗೆಯಲ್ಲಿ ಸಿಕ್ಕಿಕೊಂಡು ಸಮಸ್ಯೆ ಅನುಭವಿಸುತ್ತಿರುವ ಸಾಧನ ಪ್ರಕಾಶನದ ರವಿಚಂದ್ರ ರಾವ್ ಮಾತನಾಡಿ, “ಮಳಿಗೆಯೊಂದಕ್ಕೆ ಮೂರು ಸಾವಿರ ರೂಪಾಯಿಯನ್ನು ಕೊಡುತ್ತೇವೆ. ಪೋನ್ ಪೇ, ಗೂಗಲ್ ಪೇ ಮಾಡುವವರಿಗೆ ಇಂಟರ್ ನೆಟ್ ಸೌಲಭ್ಯವಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಳಿಗೆಗಳನ್ನು ರೂಪಿಸುತ್ತೀರಿ. ಸಾವಿರಾರು ಜನ ಸೇರುವ ಜಾಗದಲ್ಲಿ ನೆಟ್ ವರ್ಕ್ ಸಮಸ್ಯೆಯಾಗುತ್ತದೆ ಎಂಬ ಎಚ್ಚರಿಕೆ ಇರಬೇಕಿತ್ತಲ್ಲವೇ? ತಾತ್ಕಲಿಕವಾಗಿ ನೆಟ್ ವರ್ಕ್ ಸೌಲಭ್ಯ ಕಲ್ಪಿಸಬೇಕಿತ್ತು. ಕಸಾಪ ಅಧ್ಯಕ್ಷರಾದ ಜೋಶಿಯವರ ಮನೆಯಲ್ಲಿ ಏನಾದರೂ ಸಮಸ್ಯೆಯಾದರೆ, ತಕ್ಷಣಕ್ಕೆ ಕರೆ ಮಾಡಿ ಮಾತನಾಡಲು ಆಗದ ಪರಿಸ್ಥಿತಿ ಉಂಟಾಗಿದೆ’’ ಎಂದರು.

“ಇಲ್ಲಿ ವಾಣಿಜ್ಯ ಮಳಿಗೆ ಎಂದು ಬೋರ್ಡ್ ಹಾಕಿ ಪುಸ್ತಕ ಮಾರಾಟ ಮಾಡಲು ಅವಕಾಶ ನೀಡಿದ್ದಾರೆ. ಪುಸ್ತಕ ಮಳಿಗೆಗಳೆಲ್ಲ ಒಂದೇ ಕಡೆ ಇರಬೇಕು. ಇಲ್ಲಿಗೆ ಬರುವ ಗ್ರಾಹಕರು ಪುಸ್ತಕವನ್ನು ಖರೀದಿಸುವುದಕ್ಕಿಂತ ಬೇರೆ ವಸ್ತುಗಳ ಖರೀದಿಗೆ ಗಮನ ಕೊಡುತ್ತಾರೆ. ಪ್ರಕಾಶಕರನ್ನು ಕೆಳ ದರ್ಜೆಯಲ್ಲಿ ಕಸಾಪ ನೋಡುತ್ತಿದೆ. ಪ್ರಕಾಶಕರು, ಸಾಹಿತ್ಯ ಸಮ್ಮೇಳನ ಒಂದೇ ನಾಣ್ಯದ ಎರಡು ಮುಖಗಳು. ವೇದಿಕೆಗಳಲ್ಲಿ ನೀವಿದ್ದು, ನಿಮ್ಮ ಪ್ರಚಾರಕ್ಕೆ ಮಾತ್ರ  ಗಮನ ಕೊಡುತ್ತಿರುವುದಕ್ಕೆ ನಮ್ಮ ಧಿಕ್ಕಾರ’’ ಎಂದು ಕಿಡಿಕಾರಿದರು.

“ಮಹೇಶ ಜೋಶಿಯವರು ಯಾವುದೇ ಹೊಸ ನಿಯಮವನ್ನು ಜಾರಿಗೆ ತರುವಾಗ ಸೂಕ್ತ ಮಾಹಿತಿಯನ್ನು ನೀಡಬೇಕಿತ್ತು. ಪರಿಷತ್ ಸದಸ್ಯರಾಗಿದ್ದರಷ್ಟೇ ಪುಸ್ತಕ ಮಳಿಗೆ ಹಾಕಲು ಅವಕಾಶ ನೀಡುವುದಾಗಿ ನಿಯಮ ತಂದರು. ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿತ್ತು. ಎಷ್ಟೋ ಮಂದಿ ಪ್ರಕಾಶಕರಿಗೆ ಮಾಹಿತಿ ಇರಲಿಲ್ಲ. ಹೊಸದಾಗಿ ತಯಾರಿ ಮಾಡಿರುವ ಆಪ್ ಸರಿಯಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಬಹುತೇಕ ಮಾರಾಟಗಾರರು ಬಂದಿಲ್ಲ. ನಿಮಗೆ ವೇದಿಕೆ ಮತ್ತು ನಿಮ್ಮ ಹೆಸರು ಮುಖ್ಯವಷ್ಟೇ. ಜನಸಾಮಾನ್ಯರು ಮತ್ತು ಪುಸ್ತಕ ವ್ಯಾಪಾರಿಗಳು ಏನು ಮಾಡಬೇಕು?’’ ಎಂದು ಪ್ರಶ್ನಿಸಿದರು.

ಕನ್ನಡದ ಬಗ್ಗೆ ಆಸೆ, ಆಸಕ್ತರಾದವರು ಕಸಾಪ ಅಧ್ಯಕ್ಷರಾಗುವುದು ಮುಖ್ಯ. ಐಎಎಸ್, ಐಪಿಎಸ್ ಅಧಿಕಾರಿಗಳಲ್ಲ. ಕನ್ನಡ ಪುಸ್ತಕ ಮತ್ತು ಪ್ರಕಾಶನದ ಬಗ್ಗೆ ಆಸಕ್ತಿ ಇರುವವರು ಅಧ್ಯಕ್ಷರಾಗಬೇಕು. ಜೋಶಿಯವರು ಕನ್ನಡ, ಕನ್ನಡ ಎನ್ನುತ್ತಾರೆ. ಇಲ್ಲಿನ ಮಳಿಗೆಗಳಿಗೆ ಕ್ರಮಾಂಕ ಕೊಡುವಾಗ ಎ, ಬಿ, ಸಿ, ಡಿ ಅಂತ ನೀಡಿದ್ದಾರೆ. ಅದನ್ನೇ ಅ, ಆ, ಇ, ಈ ಅಂತ ಕೊಡಬಹುದಿತ್ತಲ್ಲ’’ ಎಂದು ಬೇಸರ ವ್ಯಕ್ತಪಡಿಸಿದರು.

ಮಳಿಗೆಗಳಲ್ಲಿ ಬಿದ್ದಿರುವ ಕಸದ ವಿಲೇವಾರಿಗೆ ಕ್ರಮ ಜರುಗಿಸಿಲ್ಲ. ಮಳಿಗೆಗಳ ಮುಂದೆ ಕಸವನ್ನು ಗುಡ್ಡೆ ಹಾಕಿಕೊಂಡ ಪುಸ್ತಕ ಪ್ರೇಮಿಗಳನ್ನು ಒಳಗೆ ಕರೆಯುವಂತಾಗಿದೆ. ಈ ಹಿಂದಿನ ಸಮ್ಮೇಳನಗಳಲ್ಲಿ ಕಸಾಪ ಪ್ರತಿನಿಧಿಗಳು ನಮ್ಮತ್ತ ಬಂದು, ನಮ್ಮ ಅಗತ್ಯತೆಗಳ ಕುರಿತು ಕನಿಷ್ಠ ವಿಚಾರಿಸಿಕೊಳ್ಳುತ್ತಿದ್ದರು ಎಂದು ಪ್ರಕಾಶಕರೊಬ್ಬರು ತಿಳಿಸಿದರು.

ಮೊದಲೆಲ್ಲ ಪುಸ್ತಕ ಮಾರಾಟಗಾರರು ಜಿಲ್ಲಾ ಕಸಾಪ ಕಚೇರಿಯಲ್ಲಿ ನೊಂದಣಿ ಮಾಡಿಕೊಂಡಿದ್ದರೆ ಮುಗಿಯುತ್ತಿತ್ತು. ಆಪ್ ಮೂಲಕ ನೊಂದಣಿ ಎಂಬ ನಿಯಮ ತಂದು ಸಮ್ಮೇಳನ ಆರಂಭದಿಂದಲೇ ಪುಸ್ತಕ ಮಾರಾಟಗಾರರ ಮೇಲೆ ಪ್ರಹಾರ ಮಾಡಲಾಯಿತು. ಈಗ ಸಮ್ಮೇಳನದ ಸಮಯದಲ್ಲೂ ಕಸಾಪ ಪ್ರತಿನಿಧಿಗಳು ಪುಸ್ತಕ ಮಳಿಗೆಗಳತ್ತ ಸುಳಿಯದೆ ಮತ್ತದೇ ಧೋರಣೆ ಮುಂದುವರಿಸಿದ್ದಾರೆ ಎಂದು ಮಾರಾಟಗಾರರು ವಿಷಾಧಿಸಿದರು.

ಮತ್ತೊಬ್ಬ ಪ್ರಕಾಶಕರು ಪ್ರತಿಕ್ರಿಯಿಸಿ, “ಅಕ್ಷರ ಜಾತ್ರೆಗೆ ಜನಸಾಗರ ಹರಿದುಬರುತ್ತಿದೆ. ಧೂಳು ಎದ್ದೇಳದಂತೆ ಹಸಿರು ಕಾರ್ಪೇಟ್ ಹಾಸಿರುವುದರಿಂದ ಧೂಳಿನ ಸಮಸ್ಯೆ ತಲೆದೋರಿಲ್ಲದಿರುವುದು ಖುಷಿಯ ಸಂಗತಿ. ವಿಚಾರ ಸಾಹಿತ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾವೇರಿ ಸಮ್ಮೇಳನ ಸ್ವಲ್ಪಮಟ್ಟಿಗೆ ಲಾಭವನ್ನು ಮಾಡಿಕೊಟ್ಟಿದೆ’’ ಎಂದರು.

ಇದನ್ನೂ ಓದಿ; ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...