Homeಕರ್ನಾಟಕಕನ್ನಡದಲ್ಲಿ ತೀರ್ಪು ಬರೆದರೆ ಜನರ ವಿಶ್ವಾಸ ಹೆಚ್ಚುತ್ತದೆ: ಜಸ್ಟಿಸ್ ಅರಳಿ ನಾಗರಾಜ

ಕನ್ನಡದಲ್ಲಿ ತೀರ್ಪು ಬರೆದರೆ ಜನರ ವಿಶ್ವಾಸ ಹೆಚ್ಚುತ್ತದೆ: ಜಸ್ಟಿಸ್ ಅರಳಿ ನಾಗರಾಜ

- Advertisement -
- Advertisement -

ನ್ಯಾಯಾಲಯ ನೀಡುವ ತೀರ್ಪುಗಳು ಜನ ಸಾಮಾನ್ಯರಿಗೆ ಅರ್ಥವಾಗುವಂತಿದ್ದರೆ ಕಾನೂನಿನ ಮೇಲೆ ಜನರಿಗೆ ನಂಬಿಕೆ ಉಳಿಯಲು ಸಾಧ್ಯ. ಈ ದಿಸೆಯಲ್ಲಿ ಕನ್ನಡ ಭಾಷೆಯಲ್ಲಿ ನ್ಯಾಯದಾನ ಮಾಡಿದರೆ, ನಮ್ಮಲ್ಲಿನ ಜನರಿಗೆ ನ್ಯಾಯಾಲಯದ ಮೇಲೆ ಹೆಚ್ಚು ನಂಬಿಕೆ, ವಿಶ್ವಾಸ ಬೆಳೆಯುತ್ತದೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜರವರು ಅಭಿಪ್ರಾಯಪಟ್ಟರು.

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಕನಕ-ಶರೀಫ- ಸರ್ವಜ್ಷ ಪ್ರಧಾನ ವೇದಿಕೆಯಲ್ಲಿ ಎರಡನೆ ಇದನ ನಡೆದ “ಕನ್ನಡದಲ್ಲಿ ಕಾನೂನು ಸಾಹಿತ್ಯ” ಕುರಿತ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಾಲಯ ನೀಡುವಂತಹ ತೀರ್ಪುಗಳು ಇಂದಿನ ದಿನಗಳಲ್ಲಿ ಕಕ್ಷಿದಾರರಿಗೆ, ಶ್ರೀಸಾಮಾನ್ಯರಿಗೆ ಅರ್ಥವಾಗದ ಕಾರಣ, ಪ್ರಕರಣಗಳು ದೀರ್ಘಕಾಲ ಎಳೆಯುತ್ತಿವೆ. ನ್ಯಾಯಾಲಯದಲ್ಲಿ ಪ್ರಕರಣಗಳ ತೀರ್ಪುಗಳು ವಿಳಂಬವಾಗುತ್ತವೆ. ಆದ್ದರಿಂದ ಶ್ರೀಸಾಮಾನ್ಯರಿಗೆ ಕಥೆಗಳ ಮೂಲಕ, ನಾಟಕಗಳ ಮೂಲಕ, ಸಾಹಿತ್ಯಗಳ ಮೂಲಕ ಅವರ ಮಾತೃಭಾಷೆಯಲ್ಲಿ ತಿಳಿವಳಿಕೆ ಮೂಡುಸುವುದರ ಮೂಲಕ ಸಾಮಾನ್ಯ ಕಾನೂನುಗಳ ಬಗ್ಗೆ ಅರಿವು ಮೂಡಸಬೇಕಿದೆ ಎಂದು ಹೇಳಿದರು.

ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜ ಮಾತನಾಡಿ, “ಕಾನೂನಾತ್ಮಕ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಹೊರಬರುವಂತೆ ಮಾಡಲು ಸರ್ಕಾರ ಕನ್ನಡ ಕಾನೂನು ಪ್ರಾಧಿಕಾರ ರಚನೆ ಮಾಡಬೇಕು. ಕನ್ನಡ ಕಾನೂನು ಪ್ರಾಧಿಕಾರ ರಚಿಸುವುದರ ಮೂಲಕ ಹೆಚ್ಚು ಸಂಶೋಧನಾತ್ಮಕ ಕನ್ನಡ ಕಾನೂನು ಪುಸ್ತಕಗಳು ರಚಿಸುವುದ ಮೂಲಕ ಯುವ ಸಾಹಿತಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಕರ್ನಾಟಕದಲ್ಲಿ ಇಂದು ಸುಮಾರು 109 ಕಾನೂನು ಕಾಲೇಜುಗಳಿದ್ದು, ಕಾನೂನಾತ್ಮಕ ಕನ್ನಡ ಪುಸ್ತಕಗಳು ದೊರಕದೇ ಇರುವುದು ದುರ್ದೈವದ ಸಂಗತಿಯಾಗಿದೆ. ಕಾನೂನು ವ್ಯಾಸಂಗಕ್ಕೆ ಹೆಚ್ಚು ಸಂಶೋಧನಾತ್ಮಕ ಪುಸ್ತಕಗಳು ದೊರಕಿಸಿಕೊಡುವುದರ ಮೂಲಕ ಕನ್ನಡ ಭಾಷಾಭಿಮಾನ ಹೆಚ್ಚಿಸುವುದಲ್ಲದೇ, ಕನ್ನಡ ಕಾನೂನಾತ್ಮಕ ಸಾಹಿತ್ಯ ಬೆಳಿಸುವುದರಲ್ಲಿ ಸಹಕಾರಿಯಾಗುತ್ತದೆ. ಇದಲ್ಲದೇ ಕಾನೂನಾತ್ಮಕ ಸಾಹಿತ್ಯ ಬರೆಯುವ ಯುವ ಸಾಹಿತಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಎಂದರು.

‘ಶ್ರೀಸಾಮಾನ್ಯರಿಗೆ ಕನ್ನಡದಲ್ಲಿ ಕಾನೂನು ಅರಿವು’ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪಗೌಡರ ಮಾತನಾಡಿ, “ನ್ಯಾಯಾಲಯಗಳು ಇರುವುದು ನ್ಯಾಯಾಧೀಶರಿಗಲ್ಲ, ನ್ಯಾಯಾಲಯ ಇರುವುದು ಶ್ರೀಸಾಮಾನ್ಯರಿಗೆ. ಆದ್ದರಿಂದ ಪ್ರತಿಯೊಬ್ಬ ಶ್ರೀಸಾಮಾನ್ಯರಿಗೂ ಸಾಮಾನ್ಯ ಕಾನೂನು ತಿಳುವಳಿಕೆ ಅಗತ್ಯವಾಗಿದೆ. ಸಾಮಾನ್ಯ ಜನರು ‘ನನಗೆ ಕಾನೂನು ಗೊತ್ತಿಲ್ಲ ಎನ್ನಬಾರದು, ಕಾನೂನು ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ. ನ್ಯಾಯಾಧೀಶರು ಕೇವಲ ಪ್ರಶಸ್ತಿಗಾಗಿ ಕನ್ನಡ ಭಾಷೆಯಲ್ಲಿ ತೀರ್ಪು ನೀಡುವುದಲ್ಲ, ನ್ಯಾಯಾಧೀಶರಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ. ತಾವು ನೀಡುವ ತೀರ್ಪುಗಳು ಕನ್ನಡದಲ್ಲಿದ್ದರೆ ಶ್ರೀಸಾಮಾನ್ಯರಿಗೂ, ಕಕ್ಷಿದಾದರಿಗೂ ನ್ಯಾಯ ಒದಗಿಸಿದಂತೆ ಮತ್ತು ಕನ್ನಡ ಭಾಷಾಭಿಮಾನ ಬೆಳಿಸಿದಂತೆ ಎಂದರು.

ಇದನ್ನೂ ಓದಿ:  ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ ಮಾರಾಟಗಾರರ ಗೋಳು ಕೇಳುವವರ್ಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...