Homeಕರ್ನಾಟಕ’ಮಹಿಳೆಯರು ಹಿಜಾಬ್ ಧರಿಸದಿರುವುದು ಅತ್ಯಾಚಾರ ಹೆಚ್ಚಾಗಲು ಕಾರಣ’: ಶಾಸಕ ಜಮೀರ್‌ ಅಹ್ಮದ್

’ಮಹಿಳೆಯರು ಹಿಜಾಬ್ ಧರಿಸದಿರುವುದು ಅತ್ಯಾಚಾರ ಹೆಚ್ಚಾಗಲು ಕಾರಣ’: ಶಾಸಕ ಜಮೀರ್‌ ಅಹ್ಮದ್

- Advertisement -
- Advertisement -

ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್- ಕೇಸರಿ ಶಾಲಿನ ತೀವ್ರ ವಿವಾದದ ನಡುವೆಯೇ ವಿವಿಧ ಪಕ್ಷಗಳ ನಾಯಕರು ಹಲವು ವಿವಾದಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಶಾಸಕ ರೇಣುಕಾಚಾರ್ಯರ ಬಳಿಕ ಈಗ ಕಾಂಗ್ರೆಸ್ ಶಾಸಕ ಜಮೀರ್‌ ಅಹ್ಮದ್ ’ಕೆಲವು ಮಹಿಳೆಯರು ಹಿಜಾಬ್ ಧರಿಸದ ಕಾರಣ ಅತ್ಯಾಚಾರದ ಪ್ರಮಾಣವು ದೇಶದಲ್ಲಿ ಅತ್ಯಧಿಕವಾಗಿದೆ’ ಎಂದು ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

“ಹಿಜಾಬ್ ಎಂದರೆ ಇಸ್ಲಾಂನಲ್ಲಿ ‘ಪರ್ದಾ’ (ಮುಸುಕು). ವಯಸ್ಸಿಗೆ ಬಂದ ಹುಡುಗಿಯರ ಸೌಂದರ್ಯವನ್ನು ಮರೆಮಾಚಲು ಇದನ್ನು ಎಷ್ಟೋ ಜಮಾನದಿಂದ ಬಳಸುತ್ತಿದ್ದಾರೆ. ಇದನ್ನು ಬಳಬೇಕೆಂಬುದು ಕಡ್ಡಾಯವಲ್ಲ. ಆದ್ರೆ, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಬಳಸಲಾಗುತ್ತದೆ. ಇದನ್ಜನು ಬೇಡ ಎನ್ನುತ್ತಿರುವವರ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೋ ಇಲ್ಲವೋ” ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಮುಂದುವರೆದು, “ಇಂದು ನಮ್ಮ ದೇಶದಲ್ಲಿ ಅತ್ಯಾಚಾರದ ಪ್ರಮಾಣವು ಅತ್ಯಧಿಕವಾಗಿರುವುದನ್ನು ನೀವು ನೋಡಬಹುದು. ಇದಕ್ಕೆ ಕಾರಣ ಏನು ಎಂದು ನೀವು ಭಾವಿಸುತ್ತೀರಿ. ಕಾರಣವೆಂದರೆ ಹಲವಾರು ಮಹಿಳೆಯರು, ಘೋಷಾ, ಹಿಜಾಬ್‌ನಲ್ಲಿ ಇಲ್ಲದಿರುವುದು. ಇನ್ನು ಹಿಜಾಬ್ ಧರಿಸಲೇ ಬೇಕು ಎಂಬುದಿಲ್ಲ. ಯಾರು ಇಷ್ಟ ಪಟ್ಟು ತೊಡುತ್ತಾರೆ, ತಮ್ಮ ಸೌಂದರ್ಯವನ್ನು ಮತ್ತೊಬ್ಬರಿಗೆ ತೋರಿಸಬಾರದು ಎಂಬುದಿರುತ್ತೋ ಅವರು ಧರಿಸುತ್ತಾರೆ. ಇದು ಇಂದಿನಿಂದ ಅಲ್ಲ ಜಮಾನದಿಂದಲೂ ಇದೆ ”ಎಂದು ಶಾಸಕ ಜಮೀರ್ ಅಹ್ಮದ್ ಎಎನ್‌ಐಗೆ  ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

 

’ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಇದರಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿವೆ ’ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಈ ಹಿಂದೆ ಹೇಳಿಕೆ ನೀಡಿದ್ದರು. ಖಂಡನೆ ವ್ಯಕ್ತವಾದ ಬಳಿಕ ’ನಾನು ಮಹಿಳೆಯರನ್ನು ಅವಮಾನಿಸಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೇ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದರು.

ಕರ್ನಾಟಕ ಹೈಕೋರ್ಟ್ ಶುಕ್ರವಾರ ನೀಡಿದ ಮಧ್ಯಂತರ ಆದೇಶದಲ್ಲಿ, ವಿದ್ಯಾರ್ಥಿಗಳು “ಮುಂದಿನ ಆದೇಶದವರೆಗೆ” ತರಗತಿಯಲ್ಲಿ ಹಿಜಾಬ್, ಕೇಸರಿ ಶಾಲು ಅಥವಾ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿದೆ. ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ವಿವಿಧ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಅರ್ಜಿಗಳ ವಿಚಾರಣೆ ಫೆಬ್ರವರಿ 14 ರಂದು ಮಧ್ಯಾಹ್ನ 2:3ಕ್ಕೆ ಮುಂದುವರಿಯಲಿದೆ.


ಇದನ್ನೂ ಓದಿ: ಹಿಜಾಬ್‌‌‌‌‌‌ ವಿರೋಧಿ ಹಿಂಸಾಚಾರವು ರಾಜ್ಯದ ಸಮ್ಮಿಶ್ರ ವೈವಿಧ್ಯ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ: ‘ಬಹುತ್ವ ಕರ್ನಾಟಕ’ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read