ಹಿಮಾಲಯದ ಹಳ್ಳಿಗಳ ಜನರಿಗೆ ಲಸಿಕೆ ನೀಡುವುದು ಒಂದು ಸಾಹಸದ ಕೆಲಸವಾಗಿ ಮಾರ್ಪಟ್ಟಿದೆ. ಹಿಮಾಚಲ ಪ್ರದೇಶದ ಮಲಾನಾ ಗ್ರಾಮಕ್ಕೆ ಭೇಟಿ ನೀಡಿ, ಲಸಿಕೆ ನೀಡಲು ಹೊರಟಿದ್ದ ಆರೋಗ್ಯ ಕಾರ್ಯಕರ್ತರ ತಂಡ ಸುಮಾರು ಮೂರು ಗಂಟೆಗಳ ಕಾಲ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು ಸಾಹಸ ಮಾಡಿದೆ.
ಮಲಾನಾ ಗ್ರಾಮಕ್ಕೆ ಇದ್ದ ರಸ್ತೆ ಭೂಕುಸಿತದಿಂದ ನಾಶವಾಗಿರುವ ಕಾರಣ ಇಂತಹ ಸಾಹಸಕ್ಕೆ ಅಧಿಕಾರಿಗಳು ಮುಂದಾಗಬೇಕಾಗಿತ್ತು. ಮೂರು ಗಂಟೆಗಳ ಸಾಹಸದ ಬಳಿಕ ಹಳ್ಳಿಗೆ ತೆರಳಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡಿದಾದ ಭೂಪ್ರದೇಶದ ಹೊರತಾಗಿಯೂ, ಹಿಮಾಚಲ ಪ್ರದೇಶದ ಮಲಾನಾ ಗ್ರಾಮವೂ, ಎಲ್ಲಾ ವಯಸ್ಕರು ಒಂದು ಡೋಸ್ ಲಸಿಕೆ ಪಡೆದ ಭಾರತದ ಮೊದಲ ಗ್ರಾಮವಾಗಿದೆ.
ಹಿಮಾಚಲ ಪ್ರದೇಶದ ಕಡಿದಾದ ಭೌಗೋಳಿಕತೆಯಿಂದಾಗ ದೂರವಿರುವ ಹಳ್ಳಿಗಳನ್ನು ತಲುಪಲು ಗಂಟೆಗಟ್ಟಲೆ ಅಥವಾ ಇಡೀ ದಿನ ನಡೆದು ಹೋಗುವುದು ಆರೋಗ್ಯ ಕಾರ್ಯಕರ್ತರಿಗೆ ಒಂದು ಸವಾಲಾಗಿದೆ. ಇದರ ಜೊತೆಗೆ ಧಾರ್ಮಿಕ ನಂಬಿಕೆಗಳು ಕೂಡ ಲಸಿಕೆ ನೀಡುವಲ್ಲಿ ಸವಾಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಕಾರ್ಮಿಕರಿಗೆ ಕೋವಿಡ್ ಲಸಿಕೆ ನೆಪದಲ್ಲಿ 312 ಕೋಟಿ ದುರ್ಬಳಕೆ: ಹರೀಶ್ ನಾಯ್ಕ್ ಆರೋಪ
ಸೆಪ್ಟೆಂಬರ್ 14 ರಂದು, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅತುಲ್ ಗುಪ್ತಾ ನೇತೃತ್ವದ ಐವರ ತಂಡವು ಎರಡನೇ ಲಸಿಕೆ ಡೋಸ್‌ಗಳನ್ನು ನೀಡಲು ಮಲಾನಾಗೆ ಹೊರಟಿತ್ತು. ಭೂಕುಸಿತದಿಂದ ರಸ್ತೆ ಹಾಳಾಗದ್ದ ಕಾರಣ ವಾಹನಗಳನ್ನು ಬಿಟ್ಟು, ಲಸಿಕೆ ಪೆಟ್ಟಿಗೆಗಳನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಬೆಟ್ಟ ಗುಡ್ಡಗಳನ್ನು ಹತ್ತಿ, ಇಳಿದು, ನದಿಯನ್ನು ದಾಟಿ ಹಳ್ಳಿಗೆ ಸೇರಿದೆ.
ಇತ್ತ, ಒಕ್ಕೂಟ ಸರ್ಕಾರ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆಯನ್ನು ನೀಡುವುದಾಗಿ ಘೋಷಿಸಿದೆ. ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಗ್ರಾಮ ಗ್ರಾಮಗಳಿಗೆ ತೆರಳಿ ಲಸಿಕೆ ನೀಡುವ ಪ್ರಯತ್ನವನ್ನೂ ಮಾಡುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಲಸಿಕೆಯನ್ನು ಖರೀದಿಸಲು ಕಾರ್ಮಿಕ ನಿಧಿಯನ್ನು ಸರ್ಕಾರ ಬಳಸುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಆ.27ರಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಯಾದೇಶ ಹೊರಡಿಸಿದ್ದು, “ಪ್ರತಿ ಡೋಸ್‌ಗೆ 780 ರೂ. ಪಡೆದು, ಕೋವಿಶೀಲ್ಡ್ ಲಸಿಕೆಯ 2 ಲಕ್ಷ ಡೋಸ್ ಗಳನ್ನು ಪೂರೈಸುವಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳ ಸಂಘಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅದಕ್ಕಾಗಿ 15.60 ಕೋಟಿ ರೂ. ವಿನಿಯೋಗಿಸಲು ಯೋಜಿಸಲಾಗಿದೆ” ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಇದನ್ನೂ ಓದಿ: ಲಸಿಕೆ ನೀಡಲು ಕಾರ್ಮಿಕ ನಿಧಿ ದುರ್ಬಳಕೆ; ‘ದಿ ಪ್ರಿಂಟ್’ ವರದಿಯಲ್ಲಿ ಬಹಿರಂಗ


