Homeಅಂತರಾಷ್ಟ್ರೀಯಭಾರತ ವಿಭಜನೆ ಆಗಿರದಿದ್ದರೆ ಮೋದಿ-ಶಾ ಪರಿಸ್ಥಿತಿ ಹೇಗಿರುತ್ತಿತ್ತು? ಭಕ್ತರಿಗೊಂದು ಉತ್ತರ

ಭಾರತ ವಿಭಜನೆ ಆಗಿರದಿದ್ದರೆ ಮೋದಿ-ಶಾ ಪರಿಸ್ಥಿತಿ ಹೇಗಿರುತ್ತಿತ್ತು? ಭಕ್ತರಿಗೊಂದು ಉತ್ತರ

- Advertisement -

| ಪ್ರವೀಣ್ ಎಸ್ ಶೆಟ್ಟಿ |

ಯಾವುದೇ ಆರೆಸ್ಸೆಸ್ ಕಾರ್ಯಕರ್ತನಿಗೆ ಕೇಳಿ ನೋಡಿ- ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲು ಕಾರಣವೇನು ಎಂದು.  ಪ್ರತಿಯೊಬ್ಬ ಆರೆಸ್ಸೆಸ್ಸ್ ಕಾರ್ಯಕರ್ತನೂ ಒಂದೇ ತರದ ಉತ್ತರ ಕೊಡುತ್ತಾನೆ – ಗಾಂಧೀಜಿ ಭಾರತದ ವಿಭಜನೆ ಆಗಲು ಕಾರಣ, ಅದಕ್ಕಾಗಿ ಗೋಡ್ಸೆ ದೇಶದ ಮೇಲಿನ ಪ್ರೇಮದಿಂದ ಗಾಂಧೀಜಿಯನ್ನು ಕೊಂದಿದ್ದು ಎಂದು.  ಆರೆಸ್ಸೆಸ್ಸಿನವರು ಕೊಡುವ ಈ ಕಾರಣ ನಿಜವಲ್ಲವಾದರೂ ಒಂದು ಕ್ಷಣ ಈ ಕಾರಣವನ್ನು ಹಿಮ್ಮುಖವಾಗಿ ಸಾಗಿ ವಿಶ್ಲೇಶಿಸುವುದು ಒಳಿತು.  ಒಂದು ವೇಳೆ 1947 ರಲ್ಲಿ ಭಾರತದ ವಿಭಜನೆ ಆಗಿರದಿದ್ದರೆ ಇಂದಿನ ಅಖಂಡ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿ ಹೇಗಿರುತ್ತಿತ್ತು ಎಂದು ಸ್ವಲ್ಪ ಕಲ್ಪಿಸಿಕೊಳ್ಳಿ.

ಭಾರತದ 130 ಕೋಟಿ, ಬಾಂಗ್ಲಾದೇಶದ 16 ಕೋಟಿ ಮತ್ತು ಪಾಕಿಸ್ತಾನದ 14 ಕೋಟಿ ಜನಸಂಖ್ಯೆ ಕೂಡಿ ಒಟ್ಟು ಜನ ಸಂಖ್ಯೆ ಒಟ್ಟು 160 ಕೋಟಿ ಆಗುತ್ತಿತ್ತು. ಭೌಗೋಳಿಕ ವಿಸ್ತಾರದಲ್ಲಿ ಚೀನಾ ನಮಗಿಂತ ಎರಡು ಪಟ್ಟು ದೊಡ್ಡದಿದ್ದರೂ ಜನಸಂಖ್ಯೆಯಲ್ಲಿ ನಾವು ವಿಶ್ವಗುರು ಆಗಿರುತ್ತಿದ್ದೆವು. ಇನ್ನು ಧರ್ಮವಾರು ಜನಸಂಖ್ಯೆ ನೋಡಿದರೆ, 160 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ 50 ಕೋಟಿಗೂ ಹೆಚ್ಚಿರುತ್ತಿತ್ತು. ಇಂತಹಾ ಸನ್ನಿವೇಶದಲ್ಲಿ ಒಂದು ವೇಳೆ ಅಡ್ವಾಣಿ ರಾಮ ಜನ್ಮಭೂಮಿ ರಥಯಾತ್ರಾ ಹೊರಡಿಸುತ್ತಿದ್ದರೆ ಅವರ ಗತಿ ಎನಾಗುತ್ತಿತ್ತು ಊಹಿಸಿ.

2002 ರಲ್ಲಿ ಮೋದಿ ಗೋಧ್ರಾದಲ್ಲಿ ತನ್ನವರಿಂದಲೇ ಕರಸೇವಕರ ರೈಲಿಗೆ ಬೆಂಕಿ ಹಾಕಿಸಿ ನಂತರ ಭೀಕರ ಕೋಮು ಗಲಭೆ ಹಬ್ಬಿಸಿದ್ದರೆ ಮೋದಿ ಸಹಿತ ಎಲ್ಲಾ ಬನಿಯಾ ಮತ್ತು ಜೈನರು ಗುಜರಾತ್ ಬಿಟ್ಟು ಓಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಜನಾಂಗೀಯ ಯುದ್ಧ ನಡೆಯುತ್ತಿತ್ತು, ಬ್ರಿಟಿಷರು ಮುಸ್ಲಿಮರನ್ನು “ಮಾರ್ಷಿಯಲ್ ರೇಸ್” ಎಂದು ವರ್ಗೀಕರಿಸಿದ್ದು ಸುಮ್ಮನೆ ಅಲ್ಲ. ಗುಜರಾತಿಗಳು ಬಾಲ ಬಿಚ್ಚಿದ್ದರೆ ಬಲೂಚಿಸ್ತಾನದ ಪಠಾಣರು ಗುಜರಾತಿಗೆ ನುಗ್ಗಿ ಬುದ್ದಿ ಕಲಿಸಿ ಮೋದಿ ಅಮಿತ್ ಶಾ ಇಬ್ಬರನ್ನೂ ಗುಜರಾತಿನಿಂದ ಓಡಿಸುತ್ತಿದ್ದರು. ಅಖ್ಲಾಕ್ ಮುಂತಾದವರನ್ನು ಗೋಮಾಂಸದ ಹೆಸರಲ್ಲಿ ಬಜರಂಗಿಗಳು ಚಚ್ಚಿ ಕೊಂದಾಗ ಅದಕ್ಕೆ ಪ್ರತಿಕಾರವನ್ನು ಉತ್ತರ ಪ್ರದೇಶದ ಮುಸ್ಲಿಮರೇ ತೀರಿಸಿಕೊಳ್ಳುತ್ತಿದ್ದರು. ಬೀಫ್-ಗೋಮೂತ್ರದ ಹೆಸರಲ್ಲಿ ಮುಸ್ಲಿಮರ ರಕ್ತಪಾತ ಮಾಡಿದ್ದರೆ ಅವರೂ ತಿರುಗಿ ಸೇಡು ತೀರಿಸಿಕೊಳ್ಳುತ್ತಿದ್ದರು. ಯೋಗಿಯಂತವರು ಎಂದೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಮೋದಿಗಂತೂ ಆರು ತಿಂಗಳೂ ಗುಜರಾತ್ ಮುಖ್ಯಮಂತ್ರಿ ಆಗಿರಲು ಕೇಂದ್ರ ಸರಕಾರ ಬಿಡುತ್ತಿರಲಿಲ್ಲ. ಆರೆಸ್ಸೆಸ್ಸಿನ ನಾಗಪುರ ಹೆಡ್ ಆಫೀಸ್ ಪಕೋಡಾ ಮಾರುವ ಕೇಂದ್ರವಾಗಿರುತ್ತಿತ್ತು. ಮುಸ್ಲಿಮರ ಹೆಸರಲ್ಲಿ ದ್ವೇಷ ಸಾಧಿಸಿ ಬಿ‌ಜೆ‌ಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ಮೋದಿಯಂತಹಾ ಗುಜರಾತಿ ವ್ಯಾಪಾರಿ ಭಾರತದ ಜನತೆಗೆ ಅತ್ತ ಪಾಕಿಸ್ತಾನ ತೋರಿಸಿ ಇತ್ತ ದೇಶದ ಖನಿಜ ಸಂಪತ್ತನ್ನು ಹಾಗೂ ಸಾರ್ವಜನಿಕ  ಉದ್ಯಮಗಳನ್ನು ಕವಡೆ ಕಾಸಿಗೆ ತನ್ನ ಬನಿಯಾ ಉದ್ಯಮಿಗಳಿಗೆ ಮಾರಲು ಸಾಧ್ಯ ಆಗುತ್ತಲೇ ಇರಲಿಲ್ಲ.

ಪಾಕಿಸ್ತಾನವೇ ಇರದಿದ್ದರೆ ತನ್ನ ವಿಫಲತೆಗೆ ಮೋದಿ ಯಾರನ್ನು ಹೊಣೆ ಮಾಡಿ ಬಯ್ಯುತ್ತಿದ್ದರು? “ಘರ್ ಮೆ ಗುಸ್ ಕೆ ಮಾರೇಂಗೆ” ಎಂದು ಯಾರ ಮುಂದೆ ಮೋದಿ ಬಡಾಯಿ ಕೊಚ್ಚಲು ಸಾಧ್ಯವಾಗುತ್ತಿತ್ತು? ಭಾರತದ ಸೇನೆಯಲ್ಲಿ ಅರ್ಧಕರ್ಧ ಮುಸ್ಲಿಮರೇ ಇರುತ್ತಿದ್ದರು. ಕಾರಣ ಉತ್ತಮ ದೇಹ ಧಾರ್ಢ್ಯ ಹೊಂದಿರುವ ಮ್ಜುಸ್ಲಿಮರೇ ಮಿಲಿಟರಿಯಲ್ಲಿ  ಹೆಚ್ಚಿರುತ್ತಿದ್ದರು. 1947 ರಲ್ಲಿ ಭಾರತ ವಿಭಜನೆ ಆಗಿರದಿದ್ದರೆ ಯಾರ ವಿರುದ್ಧ ದ್ವೇಷ ಭೋಧಿಸಿ ಬಿ‌ಜೆ‌ಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತು? ಭಾರತದಲ್ಲಿ ಯಾವುದೇ ಹಿಂದುತ್ವವಾದಿ ಸರಕಾರ ಎಂದೂ ಅಧಿಕಾರಕ್ಕೆ ಬರುತ್ತಿರಲಿಲ್ಲ.

1857ರಲ್ಲಿ ಝಾನ್ಸಿ ಲಕ್ಷ್ಮೀಬಾಯಿ ಮತ್ತು ಮೋಘಲರ ಕೊನೆಯ ದೊರೆ ಬಹದೂರ್ ಶಾ ಜಫರ್ ಬ್ರಿಟಿಷರ ವಿರುದ್ಧ ಎದ್ದ ಬಂಡಾಯ ಹಾಗೂ ಸಿಪಾಯಿ ದಂಗೆಯನ್ನು “ಮೊದಲನೇ ಸ್ವಾತಂತ್ರ್ಯ ಯುದ್ಧ” ಎಂದು ಕರೆಯಲಾಗುತ್ತದೆ. ಒಂದು ವೇಳೆ ಅಂದು ಝಾನ್ಸಿ ಲಕ್ಷ್ಮೀಬಾಯಿ, ಮೋಘಲರು ಮತ್ತು ಇತರ ರಾಜರ-ನವಾಬರ ಒಕ್ಕೂಟ ಬ್ರಿಟಿಷರ ವಿರುದ್ಧ ಗೆದ್ದು ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ್ದರೆ ಎನಾಗುತ್ತಿತ್ತು ಊಹಿಸಿ. ಝಾನ್ಸಿ ಲಕ್ಷ್ಮಿ ಅಥವಾ ಮೋಘಲರು ಅಂದು ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿದ್ದು ಭಾರತ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ಅಲ್ಲವೇ ಅಲ್ಲ. ಅವರು ಬಂಡಾಯ ಎದ್ದಿದ್ದು ತಮ್ಮ ತಮ್ಮ ರಾಜ್ಯಗಳನ್ನು ಬ್ರಿಟಿಷರಿಂದ ಉಳಿಸಿಕೊಳ್ಳಲು. ಅಂದು ಈ ರಾಜರು-ನವಾಬರು ಗೆದ್ದಿದ್ದರೆ, ನಂತರ ಅವರು ತಮ್ಮ ತಮ್ಮ ರಾಜಗಳನ್ನು ಪ್ರತ್ಯೇಕವಾಗಿಯೇ ಉಳಿಸಿ ಕೊಳ್ಳುತ್ತಿದ್ದರು. ಆಗ ಭಾರತದಲ್ಲಿ ಸುಮಾರು 550 ಸಂಸ್ಥಾನಗಳು ಹಾಗೂ ನವಾಬರು ಇರುತ್ತಿದ್ದರು. ಒಂದೊಂದು ಸಂಸ್ಥಾನಕ್ಕೆ ಒಂದೊಂದು ಕರೆನ್ಸಿ ಇರುತ್ತಿತ್ತು, ಬೆಂಗಳೂರಿನಿಂದ ಮುಂಬೈ ಗೆ ಹೋಗಲು ಪಾಸ್ಪೋರ್ಟಿನ ಅಗತ್ಯ ಬೀಳುತ್ತಿತ್ತು. ಕಾಶ್ಮೀರ ಎಂದೋ ಪ್ರತ್ಯಕವಾಗಿ ಹೋಗಿರುತ್ತಿತ್ತು. ಪ್ರತಿಯೊಂದು ಸಂಸ್ಥಾನವೂ ತಮ್ಮದೇ ಆದ ಪ್ರತ್ಯೇಕ ಮಿಲಿಟರಿ ಹೊಂದಿರುತ್ತಿದ್ದವು, ಜತೆಗೆ ಗಡಿ ಕಲಹದಿಂದಾಗಿ ಯಾವಾಗಲೂ ಸಂಸ್ಥಾನಗಳ ನಡುವೆ ಯುದ್ಧ ನಡೆಯುತ್ತಲೇ ಇರುತ್ತಿತ್ತು. ಸಮಸ್ತ ಭಾರತ ಸೊಮಾಲಿಯಾಕ್ಕಿಂತ ಕಡೆಯಾಗಿರುತ್ತಿತ್ತು. ಮುಕ್ಕಾಲು ಪಾಲು ಜನತೆ ಹಸಿವಿನಿಂದ ಬಳಲುತ್ತಿತ್ತು. “ಘರ್ ಮೆ ಗುಸ್ ಕೆ ಮಾರೆಂಗೆ” ಅನ್ನುವ ಪುಕ್ಕಲು ಬನಿಯಾ ಎಲ್ಲಿಯೋ ಒಂದು ಸಣ್ಣ ನಗರದಲ್ಲಿ ಪಕೋಡಾ ಅಂಗಡಿ ನಡೆಸುತ್ತಾ ಜನರನ್ನು ಯಾಮಾರಿಸುತ್ತಾ ಜೀವನ ನಡೆಸುತ್ತಿದ್ದ ಅಷ್ಟೇ. 550 ರಾಜ ಸಂಸ್ಥಾನಗಳಿದ್ದ ಇಷ್ಟು ದೊಡ್ಡ ಭಾರತ ದೇಶ ವಿಛಿದ್ರವಾಗದೇ ಇಂದು ಒಂದಾಗಿ ಇದ್ದರೆ ಅದಕ್ಕೆ ನಾವು ಬ್ರಿಟಿಷರಿಗೆ ಹಾಗೂ ಗಾಂಧೀಜಿಗೆ ಋಣಿಯಾಗಿರಬೇಕು. ಗೋಡ್ಸೆ ಭಕ್ತ ಆರೆಸ್ಸೆಸ್ಸಿನವರಿಗೆ ಮತ್ತು ವಾಟ್ಸಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ದೂರಗಾಮಿ ವಿಶ್ಲೇಷಣೆ ಸಾಧ್ಯವಿಲ್ಲ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸರ್ ತುಂಬಾ ಉಪಯುಕ್ತ ವಿಚಾರಗಳನ್ನು
    ತಿಳಿಸಿದ್ದೀರಿ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

Must Read

ರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

0
ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆರವುಗೊಳಿಸಿ, ಧ್ವಜಾರೋಹಣ ನಡೆಸಿರುವ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ನಾಡಿನ ಚಿಂತಕರು, ಸಾಹಿತಿಗಳು, ವಕೀಲರು ತಮ್ಮ...
Wordpress Social Share Plugin powered by Ultimatelysocial