Homeಮುಖಪುಟಉತ್ತರಪ್ರದೇಶದಲ್ಲಿ ಕಡಿಮೆ ಮತದಾನ: ಬಿಜೆಪಿಗೆ ಕಾದಿದೆಯ ಆಘಾತ?

ಉತ್ತರಪ್ರದೇಶದಲ್ಲಿ ಕಡಿಮೆ ಮತದಾನ: ಬಿಜೆಪಿಗೆ ಕಾದಿದೆಯ ಆಘಾತ?

- Advertisement -
- Advertisement -

ಮೊದಲ ಹಂತದ ಮತದಾನ ಮುಗಿದಿದ್ದು, ದಹಲಿಯಲ್ಲಿ ಗದ್ದುಗೆ ಹಿಡಿಯಲು ‘ಹೆಬ್ಬಾಗಿಲು’ ಎನಿಸಿರುವ ಉತ್ತರಪ್ರದೇಶದ ಪಶ್ಚಿಮ ಭಾಗದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಅಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಇದು ಬಿಜೆಪಿ ಪಾಲಿಗೆ ಚಿಂತೆಯ ವಿಷಯವೇ ಆಗಿದೆ.

ಮತದಾನದ ಸಂಜೆ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಆ ಎಂಟು ಕ್ಷೇತ್ರಗಳಲ್ಲಿ ಈ ಬಾರಿ ಶೇ. 63.9 ಮತದಾನವಾಗಿದ್ದರೆ, ಕಳೆದ ಸಲ ಶೇ. 66ರಷ್ಟು ಮತದಾನವಾಗಿತ್ತು. ಇಲ್ಲಿ ವ್ಯತ್ಯಾಸ ಕೇವಲ ಶೇ. 2.1 ಇರಬಹುದು. ಆದರೆ ಇದು ನಿರ್ಲಕ್ಷಿಸುವ ವಿಷಯವಲ್ಲ ಬಿಜೆಪಿ ಪಾಲಿಗೆ! ಚುನಾವಣಾ ತಜ್ಞರ ಪ್ರಕಾರ, ಬಿಜೆಪಿಯ ಬೆಂಬಲಿಗರು ಕಳೆದ ಸಲದಷ್ಟು ಉತ್ಸಾಹದಿಂದ ಈ ಸಲ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

ಪರಂಪರಾಗತ ಬಿಜೆಪಿ ಬೆಂಬಲಿಗರು ತುಂಬ ಪ್ರಜ್ಞಾಪೂರ್ವಕವಾಗಿ ಮತದಾನ ಮಾಡುತ್ತಾರೆ. ಆದರೆ ಈ ಎಂಟು ಕ್ಷೇತ್ರಗಳಲ್ಲಿ 2014ರ ಉತ್ಸಾಹ ಕಂಡುಬಂದಿಲ್ಲ.
2014ರಲ್ಲಿ ಈ ಪಶ್ಚಿಮ ಯುಪಿಯಲ್ಲಿ ಎಲ್ಲ ಎಂಟೂ ಸ್ಥಾನಗಳನ್ನು ದೊಡ್ಡ ಲೀಡ್‍ನಿಂದ ಗೆದ್ದಿತ್ತು. ಆಗ ಮೋದಿಯ ಸೃಷ್ಟಿತ ಹವಾ ಅದರ ನೆರವಿಗೆ ಬಂದಿತ್ತು. ಅದಲ್ಲದೇ ವಿಪಕ್ಷಗಳಲ್ಲಿ ಯಾವುದೇ ಒಗ್ಗಟ್ಟಿರಲಿಲ್ಲ.

2014ರಲ್ಲಿ ಮೊದಲ ಹಂತದಲ್ಲಿ ಈ ಎಂಟು ಕ್ಷೇತ್ರಗಳಲ್ಲಿ –ಮೀರತ್, ಬಾಗಪಟ್, ಬಿಕ್ನೋರ್, ಘಾಜಿಯಾಬಾದ್, ಕೈರಾನ, ಗೌತಮ್ ಬುದ್ಧಿ ನಗರ, ಸಹ್ರಾನಪುರ್ ಮತ್ತು ಮುಜಾಫರ್ ನಗರ- ಬಿಜೆಪಿ ಶೇ. 49ರಷ್ಟು ಮತ ಪ್ರಮಾಣವನ್ನು ಪಡೆದಿತ್ತು. ಇಲ್ಲಿ ಮತದಾನಕ್ಕೆ ಕಂಡು ಬಂದ ಜೋಶ್ ಉಳಿದ ಹಂತಗಳಲ್ಲೂ ಮುಂದುವರೆದಿತ್ತು.

ಈಗ ಕುಸ್ತಿ ಅಖಾಡವೇ ಬೇರೆ!
2014ರ ಪರಿಸ್ಥಿತಿ ಈಗಿಲ್ಲ. ಮಾಯಾವತಿಯ ಬಿಎಸ್‍ಪಿ, ಅಖಲೇಶ ಯಾದವರ ಸಮಾಜವಾದಿ ಪಾರ್ಟಿ ಮತ್ತು ಅಜಿತ್‍ಸಿಂಗ್‍ರ ರಾಷ್ಟ್ರೀಯ ಲೋಕದಳ ಘಟಬಂಧನ ರಚಿಸಿಕೊಂಡಿವೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರಬಲ ಜಾಟರು ಎಂದಿಗೂ ಆರ್‍ಎಲ್‍ಡಿ ಪರವೇ ಇದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ದ್ವೇಷಪೂರಿತ ಆಡಳಿತದಿಂದ ತತ್ತರಿಸಿರುವ ದಲಿತರು ಮತ್ತೆ ಬಿಎಸ್ಪಿ ಕಡೆ ಮುಖ ಮಾಡಿದ್ದಾರೆ. ಎಂದಿನಂತೆ ಈ ಸಲ ಮುಸ್ಲಿಮರು ಎಸ್ಪಿಯ ಪರವಿದ್ದಾರೆ. ಹೀಗಾಗಿ ಈ ಭಾಗದಲ್ಲಿ ನಿರ್ಣಾಯಕ ಎನಿಸಿರುವ ದಲಿತರು ಮತ್ತು ಮುಸ್ಲಿಮರು ಈಗ ಒಂದಾಗಿದ್ದು, ಬಿಜೆಪಿಗೆ ತಲೆನೋವು ತಂದಿದ್ದಾರೆ. ಜಾಟರು, ದಲಿತರು ಮತ್ತು ಮುಸ್ಲಿಮರ ಈ ಘಟಬಂಧನ ಈ ಎಂಟು ಕ್ಷೇತ್ರಗಳಲ್ಲಿ ಫಲಿತಾಂಶ ನಿರ್ಧರಿಸಲಿದೆ.

ಆದರೆ, ಇಲ್ಲಿರುವ ಒಂದು ಸಣ್ಣ ತೊಡಕೆಂದರೆ, ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿರುವುದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಕ್ಕೆ ನೆರವಾಗಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‍ನ ಸಹ್ರಾನಪುರ್ ಅಭ್ಯರ್ಥಿ ಇಮ್ರಾನ್ ಮಸೂದ್ ಮತ್ತು ಬಜ್ನೋರ್‍ನ ಅಭ್ಯರ್ಥಿ ನಾಸಿರುದ್ದೀನ್ ಸಿದ್ದಿಕಿ ಮುಸ್ಲಿಮರ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ನೆರವಾಗುವ ಸಾಧ್ಯತೆ ಇವೆ ಎನ್ನಲಾಗಿದೆ.

ಜಾಟರ ‘ಪವರ್‍ಪ್ಲೇ’!
ಈ ಸಲದ ಚುನಾವಣೆಯಲ್ಲಿ ಜಾಟರ ಶಕ್ತಿ ಒಂಥರಾ ‘ಎಕ್ಸ್’ ಫ್ಯಾಕ್ಟರ್ ತರಹ ಕೆಲಸ ಮಾಡಲಿದೆ. ಮೊದಲಿಂದಲೂ ಜಾಟರು ಆರ್‍ಎಲ್‍ಡಿ (ಈಗ ಘಟಬಂಧನದ ಭಾಗ) ಪಕ್ಷಕ್ಕೆ ನಿಷ್ಟೇ ವ್ಯಕ್ತಪಡಿಸುತ್ತ ಬಂದಿದ್ದರು. ಆದರೆ, 2013ರಲ್ಲಿ ನಡೆದ ಮುಜಾಫರ್‍ನಗರ ಕೋಮು ಗಲಭೆಯಯ ನಂತರ ಬಿಜೆಪಿ ಅವರನ್ನು ಹಿಂದೂತ್ವದ ಬ್ಯಾನರಿನಡಿ ಸೆಳೆದುಕೊಂಡು 2014ರ ಚುನಾವಣೆಯಲ್ಲಿ ಲಾಭ ಮಾಡಿಕೊಂಡಿತ್ತು. ಅಲ್ಲಿ ಮೊದಲಿಂದ ಇದ್ದ ಜಾಟರು-ಮುಸ್ಲಿಮರ ನಡುವಿನ ಸೌಹಾರ್ದ ಬದುಕನ್ನು ಜಾತಿ-ಧರ್ಮಗಳ ಹೆಸರಲ್ಲಿ ಬಿಜೆಪಿ ಒಡೆದಿತ್ತು. ಆದರೆ ಈಗ ಜಾಟರು ಮತ್ತು ,ಮುಸ್ಲಿಮರು ಎಚ್ಚೆತ್ತುಕೊಂಡಿದ್ದಾರೆ. ಗೋ ಮಾರಾಟ ನಿಷೇಧದ ಪರಿಣಾಮವಾಗಿ ಹೆಚ್ಚಿರುವ ಬಿಡಾಡಿ ದನಗಳು ಒಕ್ಕಲು ಮಕ್ಕಳು ಜಾಟರ ಬೆಳೆಗಳನ್ನು ನಾಶ ಮಾಡುತ್ತಿವೆ. ಕಬ್ಬಿಗೆ ನ್ಯಾಯಯುತ ಬೆಲೆ ಕೊಡುವಲ್ಲಿ ಉತ್ತರಪ್ರದೇಶ ಸರ್ಕಾರ ವಿಫಲವಾಗಿದೆ. ಹಾಗೆಯೇ ಅವರ ನಿಷ್ಟೇಯ ಪಕ್ಷ ಆರ್‍ಎಲ್‍ಡಿ ಈಗ ಘಟಬಂಧನದ ಮೂಲಕ ಜಾಟರನ್ನು ಮತ್ತೆ ತನ್ನಲ್ಲಿ ಉಳಿಸಿಕೊಂಡಿದೆ.

ಹೀಗಾಗಿ ಉತ್ತರ ಪ್ರದೇಶದಲ್ಲಿ ಈ ಸಲ ಮೋದಿ ಹೆಅಸರು, ರಾಷ್ಟ್ರೀಯ ಸುರಕ್ಷತೆ ಜಪ ಬಿಟ್ಟರೆ ಬಿಜೆಪಿಗೆ ಇಶ್ಯೂಗಳೇ ಇಲ್ಲ. 2014ರ ಮೋದಿ ಹವಾ ಠುಸ್ ಆಗಿದೆ. ಪುಲ್ವಾಮಾ ಘಟನೆ ಮತ್ತು ಬಾರಾಕೋಟ್ ವಾಯುದಾಳಿಯ ಮೇಲೆಯೇ ನಿಜೆಪಿ ಕ್ಯಾಂಪೇನ್ ಮಾಡುತ್ತಿದೆ.
ಮೊದಲ ಹಂತದಲ್ಲಿ ಇಷ್ಟೆಲ್ಲ ‘ದೇಶಭಕ್ತಿಯ’ ಪ್ರಚಾರದ ನಂತರವೂ ಎಂಟು ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಬಿಜೆಪಿ ಪಾಲಿಗೆ ಇದು ‘ಅವಲಕ್ಷಣ’ವೇ ಅಲ್ಲವೇ? ಅಂದರೆ ರಾಜಕೀಯ ಅವಲಕ್ಷಣ!

ಕೃಪೆ: ದಿ ಕ್ವಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...

3ನೇ ಹಂತದ ‘SIR’ ಕರಡು ಮತದಾರರ ಪಟ್ಟಿ ಬಿಡುಗಡೆ: 12 ರಾಜ್ಯಗಳಲ್ಲಿ 1.58 ಕೋಟಿ ಮತದಾರರ ಹೆಸರು ಕೈಬಿಟ್ಟ ಆಯೋಗ, ಇನ್ನು ಕರ್ನಾಟಕ ಬಾಕಿ

3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು...

ದಾರುಲ್ ಉಲೂಮ್ ದಿಯೋಬಂದ್ ಆವರಣದಲ್ಲಿ ಶಿವಲಿಂಗವಿದೆ ಎಂದ ಹಿಂದುತ್ವ ಸಂಘಟನೆ : ಆ.11ರಂದು ಗಂಗಾಜಲ ಅರ್ಪಿಸುವುದಾಗಿ ಘೋಷಣೆ

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿರುವ ಪ್ರಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಆವರಣದಲ್ಲಿ ಶಿವಲಿಂಗವಿದೆ ಎಂದು ಪ್ರತಿಪಾದಿಸಿರುವ ಹಿಂದೂ ರಕ್ಷಾ ದಳ ಸಂಘಟನೆ, ಆಗಸ್ಟ್ 11 ರಂದು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ...

‘ಮೋದಿ ನಮ್ಮನ್ನು ಗುಂಡಿಕ್ಕಿ ಕೊಂದರೂ ಈ ಜೀವಿತಾವಧಿಯಲ್ಲಿ ವಂದೇ ಮಾತರಂ ಪೂರ್ಣ ಆವೃತ್ತಿ ಹಾಡುವುದಿಲ್ಲ’: ಕೇರಳ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತ್ತಾನ್

ಕಾಸರಗೋಡು (ಕೇರಳ): ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 'ಹರ್ ಘರ್ ತಿರಂಗಾ' ಅಭಿಯಾನದ ಸಮಯದಲ್ಲಿ ರಾಷ್ಟ್ರಗೀತೆ 'ವಂದೇ ಮಾತರಂ'ನ ಸಂಪೂರ್ಣ ವಾಗ್ವಾದ/ಆವೃತ್ತಿಯನ್ನು ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸಂವಹನದ ಸುತ್ತ ಭಾರಿ ವಿವಾದ...

ಮೊಜ್ತಬಾ ಖಾಮಿನೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಇಸ್ರೇಲ್ ಮಾಧ್ಯಮಗಳು : ವಿಡಿಯೋ ಬಿಡುಗಡೆ ಮಾಡಿ ಕೌಂಟರ್ ಕೊಟ್ಟ ಇರಾನ್

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಅವರ ಆರೋಗ್ಯ ಸ್ಥಿತಿ 'ಅತ್ಯಂತ ಗಂಭೀರವಾಗಿದೆ' ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಅವರು ಉತ್ತಮ ಆರೋಗ್ಯದಿಂದ ಇರುವಂತೆ ಕಾಣಿಸುವ ದಿನಾಂಕವಿಲ್ಲದ ವಿಡಿಯೋ ಒಂದನ್ನು...

‘ಬ್ರಿಟಿಷರಿಂದ ಕಠಿಣ ಶಿಕ್ಷೆ ಅನುಭವಿಸಿದವರು ಸಾವರ್ಕರ್’ ಎಂಬ ಕೇರಳ ಶಾಲೆಯೊಂದರ ಕ್ವಿಜ್‌ ಪ್ರಶ್ನೆ ತಂದಿಟ್ಟ ವಿವಾದ

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ಮತ್ತು ಕುಂಬಳೆ ಉಪಜಿಲ್ಲೆಗಳ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕ್ವಿಜ್‌ನಲ್ಲಿ ವಿ ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಪ್ರಶ್ನೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ....