ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಸೋತಿದ್ದು, ಒಪ್ಪಂದದಂತೆ ತನ್ನ ಗೆಳಯರೊಟ್ಟಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ. ಇದನ್ನು ನಿರಾಕರಿಸಿದ್ದಕ್ಕೆ ಆಕೆಯ ಆಸಿಡ್ ದಾಳಿ ಮಾಡಿರುವ ಅಘಾತಕಾರಿ ಘಟನೆ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು ಒಂದೂವರೆ ತಿಂಗಳ ಹಿಂದೆ ತನ್ನ ಹೆಂಡತಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಸೋತಿದ್ದೇನೆ ಎಂದು ಆರೋಪಿಯು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉಪಸಭಾಪತಿಯನ್ನು ಎಳೆದಾಡಿದ ಕಾಂಗ್ರೆಸ್-ಬಿಜೆಪಿ ಸದಸ್ಯರು: ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲ
ಒಪ್ಪಂದದಂತೆ ಜೂಜಾಟದಲ್ಲಿ ಗೆದ್ದವರ ಜೊತೆ ಒಂದು ತಿಂಗಳವರೆಗೆ ಆಕೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕಿತ್ತು. ಎರಡು-ಮೂರು ಬಾರಿಯ ನಂತರ ಆಕೆ ಇದನ್ನು ಬಲವಾಗಿ ನಿರಾಕರಿಸಿದ್ದಾಳೆ. ಇದನ್ನು ಸಹಿಸದ ಗಂಡ 30 ವರ್ಷದ ಸಂತ್ರಸ್ತೆಯ ಆಸಿಡ್ ದಾಳಿ ಮಾಡಿದ್ದಾನೆ ಎಂದು ಮೊಜಾಹಿದ್‌ಪುರ್ ಪೊಲೀಸ್ ಠಾಣಾಧಿಕಾರಿ ರಾಜೇಶ್ ಕುಮಾರ್ ಝಾ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಹಾಗೂ ಆರೋಪಿಯಾದ ಸೋನು ಹರಿಜನ್‌ನನ್ನು ಬಂಧಿಸಲಾಗಿದ್ದು, ಭಾನುವಾರ ಸಂಜೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗೋವಾ ಜಿಲ್ಲಾ ಪಂಚಾಯಿತಿಯಲ್ಲಿ ಖಾತೆ ತೆರೆದ ಆಪ್: ಇದು ಕೇವಲ ಆರಂಭವಷ್ಟೇ ಎಂದ ಕೇಜ್ರಿವಾಲ್
ಮತ್ತೊಂದು ಮೂಲದ ಪ್ರಕಾರ ತನ್ನ ಹೆಂಡತಿಯನ್ನು ಶುದ್ಧೀಕರಣಗೊಳಿಸಲು ಆಸಿಡ್ ಎರಚಿದ್ದಾನೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಹಿಳೆ ಭಾನುವಾರ ಮನೆಯಿಂದ ತಪ್ಪಿಸಿಕೊಂಡು ತನ್ನ ತಂದೆಯ ಮನೆಗೆ ತಲುಪಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರೈತ ಹೋರಾಟವನ್ನು ಹತ್ತಿಕ್ಕಲು ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷ ಹರಡಲು ಪ್ರಯತ್ನ – ಸುಖ್‌ಬೀರ್ ಸಿಂಗ್


