Homeಮುಖಪುಟ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

ನಾನು ಅರೆಬಿಯನ್‍ ಆತಂಕವಾದಿಗಳ ವಿರುದ್ಧ ಯುದ್ಧ ಮಾಡಬೇಕಿದೆ. ನನಗೆ ಯೋಧರು ಅಥವಾ ನೇತಾಗಳ ಅಗತ್ಯವಿಲ್ಲ. ಕೈಯಲ್ಲಿ ಹತ್ಯಾರ್ (ಆಯುಧ) ಹಿಡಿದಿರುವವರು ನನ್ನ ಸಹಚರರಾಗಬಹುದು.

- Advertisement -
- Advertisement -

ದೆಹಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಯತಿ ನರಸಿಂಗಾನಂದರು ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರು ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’ ಎಂಬ ಹೇಳಿಕೆ ನೀಡಿರುವುದು ಬಹಿರಂಗ ಭಯೋತ್ಪಾದನೆಗೆ ಕರೆಯಲ್ಲವೇ ಎಂದು ಹಲವಾರು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಯತಿ ನರಸಿಂಗಾನಂದರು ಪ್ರಚೋದನಾಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಅವರ ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಮತ್ತೊಂದು ಖಾತೆಯಲ್ಲಿ ಅವರು ಮತ್ತೆ ಹಿಂಸೆಗೆ ಪ್ರಚೋದನೆ ನೀಡುವು ಹೇಳಿಕೆ ನೀಡಿದ್ದಾರೆ.

ಹಿಂದಿಯಲ್ಲಿರುವ ಆತನ ಟ್ವೀಟ್‍ ಸಾರಾಂಶ ಇಲ್ಲಿದೆ:

ಹರಹರ ಮಹಾದೇವ, ನಾನು ಅರೆಬಿಯನ್‍ ಆತಂಕವಾದಿಗಳ ವಿರುದ್ಧ ಯುದ್ಧ ಮಾಡಬೇಕಿದೆ. ನನಗೆ ಯೋಧರು ಅಥವಾ ನೇತಾಗಳ ಅಗತ್ಯವಿಲ್ಲ. ಕೈಯಲ್ಲಿ ಹತ್ಯಾರ್ (ಆಯುಧ) ಹಿಡಿದಿರುವವರು ನನ್ನ ಸಹಚರರಾಗಬಹುದು. ನಮ್ಮ ಧರ್ಮವನ್ನು ಕೊಲ್ಲುವವರನ್ನು ನಾಶ ಮಾಡಲು ಬಯಸುವವರು ನನ್ನ ಸಹಚರರಾಗಬಹುದು…

ನನಗೆ ರಾಜಕೀಯ ಬೇಕಿಲ್ಲ. ನಾನು ನನ್ನ ಜನರನ್ನು ರಕ್ಷಿಸಬೇಕಿದೆ. ನನ್ನ ಮಕ್ಕಳು, ಹೆಣ್ಣು ಮಕ್ಕಳಿಗಾಗಿ ಯುದ್ಧ ಮಾಡಬೇಕಿದೆ… ಸನಾತನಕ್ಕಾಗಿ, ಹಿಂದೂ ಧರ್ಮ‍ಕ್ಕಾಗಿ ಕೆಲಸ ಮಾಡುವವರನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಹಿಂದೂ ಧರ್ಮಕ್ಕೆ ದ್ರೋಹ ಬಗೆಯುವವರನ್ನು ಪ್ರಶ್ನಿಸುತ್ತೇನೆ ಮತ್ತು ವಿರೋಧಿಸುತ್ತೇನೆ…

ಇದಿಷ್ಟು ಈತನ ಕರೆ! ಅಂದರೆ, ಈತ ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ಹಿಂಸೆಗೆ ಪ್ರಚೋದಿಸುವ ತನ್ನ ಕಸುಬನ್ನು ಇಲ್ಲೂ ಮುಂದುವರೆಸಿದ್ದಾನೆ. ಹತ್ಯಾರ ಹಿಡಿದ ಯುವಕರು ಈತನಿಗೆ ಬೇಕಂತೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಇದನ್ನು ಉಪೇಕ್ಷಿಸುವಂತಿಲ್ಲ. ಈತನ ವಿಡಿಯೋ ನೋಡಿ, ಈತನ ಪ್ರಭಾವಕ್ಕೆ ಒಳಗಾದ ಎಷ್ಟೋ ಯುವಕರು 2020ರ ಫೆಬ್ರುವರಿಯ ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಹಿಂಸೆಗೆ ಈತ ಪ್ರಚೋದನೆ ನೀಡಿದ ವಿಡಿಯೋಗಳು ಸಾರ್ವಜನಿಕವಾಗಿ ಲಭ್ಯವಿದ್ದಾಗಲೂ ದೆಹಲಿ ಪೊಲೀಸರು ಒಂದು ದೂರು ದಾಖಲಿಸುವುದಿರಲಿ, ಈತನನ್ನು ಪ್ರಶ್ನಿಸಲೂ ಇಲ್ಲ. ದೆಹಲಿ ಗಲಭೆಯಲ್ಲಿ 53 ಜನ ಸಾವಿಗೀಡಾದರು ಮತ್ತು ಅಪಾರ ಆಸ್ತಿ ನಾಶವಾಗಿತು. ಇಲ್ಲಿ ಜೀವ ನಷ್ಟ ಮತ್ತು ಆಸ್ತಿ ನಷ್ಟ ಅನುಭವಿಸಿದವರು ಮುಸ್ಲಿಮರು. ಈ ಗಲಭೆಯ ಟಾರ್ಗೆಟ್‍ ಅವರೇ ಆಗಿದ್ದರು.

ನರಸಿಂಗಾನಂದನಿಗೆ ರಾಜಕೀಯದಲ್ಲಿರುವ ಹಿಂದೂತ್ವವಾದಿ ಉನ್ನತ ನಾಯಕರ ಬೆಂಬಲವೂ ಇದೆ ಎಂಬುದು ‘ ‘ದಿ ವೈರ್’’ ಪ್ರಕಟಿಸಿದ ತನಿಖಾ ವರದಿಯಲ್ಲಿ ಸಾಬೀತಾಗಿತ್ತು.

ಗಾಜಿಯಾಬಾದ್‌ನ ದೇವಮಾನವ!

ಯತಿ ನರಸಿಂಗಾನಂದ್ ಉಗ್ರ ಹಿಂದೂತ್ವ ನಾಯಕರಾಗಿದ್ದು, ಅವರ ಪ್ರಧಾನ ಕಚೇರಿ ಉತ್ತರಪ್ರದೇಶದ ಗಾಜಿಯಾಬಾದ್‌ನ ದಾಸ್ನಾದಲ್ಲಿದೆ. ಅವರ ದೇವಸ್ಥಾನವೊಂದರಲ್ಲಿ ಮುಸ್ಲಿಂ ಬಾಲಕ ನೀರು ಕುಡಿದಿದ್ದದಕ್ಕಾಗಿ ಆ ಬಾಲಕನ ಮೇಲೆ ಅಮಾನು‍ಷ ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿ, ತೀವ್ರ ಖಂಡನೆಗೆ ಒಳಗಾಗಿತ್ತು. ಕಪಿಲ್ ಮಿಶ್ರಾ ಅವರಂತಹ ಭಾರತೀಯ ಜನತಾ ಪಕ್ಷದ ಉನ್ನತ ನಾಯಕರೊಂದಿಗಿನ ಒಡನಾಟದಿಂದಾಗಿ ದೆಹಲಿಯ ಭೂಗತ ಹಿಂದುತ್ವ ಜಾಲಗಳಲ್ಲಿ ನರಸಿಂಗಾನಂದನ ಪ್ರಭಾವವು ಮಹತ್ತರವಾಗಿ ಬೆಳೆದಿದೆ.

ಉದಾಹರಣೆಗೆ,  2020ರ ಫೆಬ್ರುವರಿ ದೆಹಲಿ ಗಲಭೆಗೆ ಎರಡು ತಿಂಗಳ ಮೊದಲು, ನರಸಿಂಗಾನಂದ ಮುಸ್ಲಿಮರನ್ನು ರಾಕ್ಷಸರು ಎಂದು ಬಣ್ಣಿಸಿದ್ದ. “ನಮ್ಮ ಪ್ರಸ್ತುತ ಯುಗದಲ್ಲಿ ನಾವು ಮುಸ್ಲಿಮರು ಎಂದು ಕರೆಯುವವರನ್ನು ಹಿಂದಿನ ಯುಗಗಳಲ್ಲಿ ರಾಕ್ಷಸರು ಎಂದು ಕರೆಯಲಾಗುತ್ತಿತ್ತು”  ಎಂದು ಭಾಷಣ ಮಾಡುತ್ತಿದ್ದರು.

ನರಸಿಂಹಾನಂದ್ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅಭಿಮಾನಿ: ‘ನಾಥುರಾಮ್ ಗೋಡ್ಸೆ ಜಿ, ವೀರ್ ಸಾವರ್ಕರ್ ಜಿ ನನ್ನ ದೊಡ್ಡ ನಾಯಕರು ಎಂದು ನಾನು ಪರಿಗಣಿಸುತ್ತೇನೆ’ ಎಂದು ವೇದಿಕೆಗಳಲ್ಲಿ ಹೇಳುತ್ತ ಬಂದಿದ್ದಾರೆ.

ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ನರಸಿಂಗಾನಂದನ ಕರೆಗಳು ವಾಸ್ತವವಾಗಿ ಸಿಎಎ ಮತ್ತು ಅದರ ವಿರುದ್ಧದ ಪ್ರತಿಭಟನೆಗಳಿಗೆ ಮುಂಚೆಯೇ ಆರಂಭವಾಗಿದ್ದವು.  2019 ರ ಅಕ್ಟೋಬರ್‌ನಲ್ಲಿ ಲಖನೌದಲ್ಲಿ ಉಗ್ರಗಾಮಿ ಹಿಂದುತ್ವ ನಾಯಕ ಕಮಲೇಶ್ ತಿವಾರಿ ಇರಿತಕ್ಕೊಳಗಾದ ನಂತರ, “ಹಿಂದೂ ಸಿಂಹವನ್ನು ಕೊಲ್ಲಲಾಗಿದೆ ಮತ್ತು ನಮ್ಮ ಎಲ್ಲಾ ಮನೆಗಳು ಶೋಕದಲ್ಲಿರುವುದರಿಂದ ವಿಶ್ವದಾದ್ಯಂತ ಮುಸ್ಲಿಮರು ಸಂಭ್ರಮ ಆಚರಿಸುತ್ತಿದ್ದಾರೆ. ನಾನು ಆ ಎಲ್ಲ ಕಿಡಿಗೇಡಿಗಳಿಗೆ ಹೇಳುತ್ತಿದ್ದೇನೆ, ಮುಸ್ಲಿಮರಿಗೆ ಹೇಳುತ್ತಿದ್ದೇನೆ, ಕಮಲೇಶ್ ತಿವಾರಿ ಅವರ ಮನೆ ಇಂದು ಶೋಕಿಸುತ್ತಿರುವ ರೀತಿಯಲ್ಲಿ ನಾನು ನಿಮ್ಮನ್ನು ಶೋಕಿಸದಿದ್ದರೆ, ನಾನು ನನ್ನ ತಂದೆಯ ಮಗನಲ್ಲ. ನಾನು ಬದುಕಿರುವವರೆಗೂ ಶಸ್ತ್ರಾಸ್ತ್ರಗಳನ್ನು ಬಳಸುತ್ತೇನೆ. ನಾನು ಪ್ರತಿಯೊಬ್ಬ ಮುಸ್ಲಿಮರಿಗೂ ಹೇಳುತ್ತಿದ್ದೇನೆ, ನಾವು ಒಂದು ದಿನ ಇಸ್ಲಾಂ ಧರ್ಮವನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ’ ಎಂದು ಇವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು.

ನರಸಿಂಗಾನಂದನ ಸಹಚರನಾಗಿರುವ  ಹಿಂದುತ್ವ ನಾಯಕ ದೀಪಕ್ ಸಿಂಗ್ ಹಿಂದೂ, ದೆಹಲಿಯ ಮೌಜ್‌ಪುರ್ ಚೌಕ್‌ನಲ್ಲಿ ಗಲಭೆ ಶುರುವಾದ ದಿನದ ಮಧ್ಯಾಹ್ನ 2.30ಕ್ಕೆ ಜನಸಮೂಹವನ್ನು ಒಟ್ಟುಗೂಡಿಸಲು ಕರೆ ನೀಡಿದ್ದ.. ನಂತರ ದೆಹಲಿ ಗಲಭೆ ಶೀಘ್ರದಲ್ಲೇ ಪ್ರಾರಂಭವಾಯಿತು.

ಫೆಬ್ರವರಿ 2020ರ  ದೆಹಲಿ ಗಲಭೆಗೆ ವಾರಗಳು ಮತ್ತು ತಿಂಗಳುಗಳ ಮೊದಲಿನಿಂದ  ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಯತಿ ನರಸಿಂಗಾನಂದನ ಸಾರ್ವಜನಿಕ ಮಾತುಗಳು  ಪ್ರಚೋದನಾಕಾರಿ ಆಗಿದ್ದವು. ಮುಸ್ಲಿಮರಿಗೆ ಪಾಠ ಕಲಿಸಲು, ಗಲಭೆ ಉಂಟಾಗುವಂತೆ ಹಿಂದೂಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ಬೀದಿಗೆ ತರುವುದು ಅವರ ಉದ್ದೇಶವಾಗಿತ್ತು.

ನರಸಿಂಗಾನಂದನ  ಪ್ರಚೋದನೆಗೆ ನೆರವಾಗಿದ್ದು ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಬಳಕೆ. ನ್ಯೂಸ್ ನೇಷನ್, ಸುದರ್ಶನ್ ಟಿವಿ ಮತ್ತು ಆಜ್‌ತಕ್‌ನಂತಹ ಪ್ರಮುಖ ಹಿಂದಿ ಸುದ್ದಿ ವಾಹಿನಿಗಳ ಚರ್ಚಾ ಪ್ಯಾನೆಲ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದ ಮತ್ತು ಈಗಲೂ ಕಾಣಿಸಿಕೊಳ್ಳುತ್ತಾನೆ. ಯೂಟ್ಯೂಬ್‌ನಲ್ಲಿ ಹಲವಾರು ಉಗ್ರಗಾಮಿ ಹಿಂದುತ್ವ ಜಾಲಗಳಿಗೆ ಯತಿ ಹೀರೋ ಆಗಿದ್ದಾನೆ. ಹಿಂಸಾಚಾರದ ಕರೆಗಳು ಲಕ್ಷಾಂತರ ಜನರನ್ನು ತಲುಪುವಂತೆ ನರಸಿಂಗಾನಂದ ನೋಡಿಕೊಳ್ಳುತ್ತಾರೆ ಎಂದು ಆತನ ಬಗ್ಗೆ  ಹಿಂದೂತ್ವ ಕಾರ್ಯಕರ್ತರಿಗೆ ಅಭಿಮಾನವಿದೆ.

2019 ರ ಡಿಸೆಂಬರ್‌ನಲ್ಲಿ ಮತ್ತು ನಂತರ ಜನವರಿ ಮತ್ತು ಫೆಬ್ರವರಿ 2020 ರಲ್ಲಿ ಆತನ ಭಾಷಣಗಳು ದ್ವೇಷ ಭಾಷಣಗಳೇ ಆಗಿದ್ದವು. ಆದರೆ ಅಂತಿಮವಾಗಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಹಿನ್ನೆಲೆಯಲ್ಲಿ ನೋಡಿದಾಗ, ಆತನ ಭಾಷಣಗಳು ಹಿಂಸಾಚಾರಕ್ಕೆ ನೂರಾರು ಮತ್ತು ಸಾವಿರಾರು ಜನರನ್ನು ಆಮೂಲಾಗ್ರಗೊಳಿಸಲು ಮತ್ತು ಸಜ್ಜುಗೊಳಿಸಲು ಒಂದು ಪ್ರಮುಖ ಸಾಧನವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಯತಿ ನರಸಿಂಗಾನಂದ್ ಸರಸ್ವತಿಯನ್ನು ಗಲಭೆಯ ಪ್ರಮುಖ ಸಂಚುಕೋರ ಎಂದು ಪೊಲೀಸರು ಪರಿಗಣಿಸುವುದಿಲ್ಲ ಎಂಬುದು ವಿಚಿತ್ರ.

ನರಸಿಂಗಾನಂದ ಮುಸ್ಲಿಮರಿಗೆ ‘ಸುವ್ವರ್’ ಮತ್ತು ‘ಕಟುವಾಸ್‍ನಂತಹ ನಿಂದನೀಯ ಪದಗಳನ್ನು ಬಳಸುತ್ತಾರೆ ಮತ್ತು ನಂತರ ಅವರ ಕಣ್ಣುಗಳನ್ನು ಕಿತ್ತುವಂತೆ ಕರೆ ನೀಡುತ್ತಾನೆ.

ದೆಹಲಿ ಗಲಭೆಗೆ ಎಂಟು ವಾರಗಳ ಮೊದಲು ಆತ ಡಿಸೆಂಬರ್ 25, 2019ರಂದು ಹೀಗೆ ಹೇಳಿದ್ದರು:

“ನಾನು ಮತ್ತೊಮ್ಮೆ ಹಿಂದೂಗಳಿಗೆ ಮನವಿ ಮಾಡುತ್ತಿದ್ದೇನೆ, ಇಂದು ಸಮಯ ಬಂದಿದೆ, ಇಂದಿಗೂ ನಾವು ಎದ್ದು ನಿಲ್ಲದಿದ್ದರೆ ನಾವು ಬದುಕುಳಿಯುವುದಿಲ್ಲ. ಇದು ಅಂತಿಮ ಯುದ್ಧ ಎಂದು ನಾನು ಹಿಂದೂಗಳಿಗೆ ಹೇಳಲು ಬಯಸುತ್ತೇನೆ, ನೀವು ಈ ಯುದ್ಧವನ್ನು ಕಳೆದುಕೊಂಡರೆ ಏನೂ ಉಳಿಯುವುದಿಲ್ಲ. ”

“ಈ ಮುಸ್ಲಿಮರು ದೇಶದ ಶತ್ರುಗಳು, ಅವರನ್ನು ಜೈಲಿಗೆ ಹಾಕಬೇಕು. ಮತ್ತು ಜೈಲಿನಲ್ಲಿದ್ದ ನಂತರ ಅವರು ಸುಧಾರಣೆ ಆಗದಿದ್ದರೆ, ಅವರಿಗೆ ಮರಣದಂಡನೆ ವಿಧಿಸಬೇಕು’ ಎಂದೂ ಯುಟ್ಯೂಬ್‍ ಚಾನೆಲ್‍ಗಳಿಗೆ ಸಂದರ್ಶನ ನೀಡುತ್ತಿದ್ದ ಇವರನ್ನು ದೆಹಲಿ ಪೊಲೀಸರು ಬಂಧಿಸಿದ್ದರೆ ದೆಹಲಿ ಗಲಭೆಗಳೇ ನಡೆಯುತ್ತಿರಲಿಲ್ಲವೇನೋ?

ಈಗ ಮತ್ತೆ ಟ್ವೀಟ್‍ ಮೂಲಕ ಹಿಂಸೆಯನ್ನು ಉತ್ತೇಜಿಸುವ ಮಾತುಗಳನ್ನು ಬಹಿರಂಗವಾಗಿ ಆಡಿದ್ದಾನೆ. ಗಾಜಿಯಾಬಾದ್‍ ಅಥವಾ ದೆಹಲಿ ಪೊಲೀಸರು ಈಗಲಾದರೂ ಸ್ವಯಂಪ್ರೇರಿತ ದೂರು ದಾಖಲಿಸುವರೇ?

ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...