Homeಅಂತರಾಷ್ಟ್ರೀಯಕೆನಡಾ: ದ್ವೇಷಪೂರಿತ ದಾಳಿಗೆ ಒಂದೇ ಕುಟುಂಬದ ನಾಲ್ವರು ಬಲಿ

ಕೆನಡಾ: ದ್ವೇಷಪೂರಿತ ದಾಳಿಗೆ ಒಂದೇ ಕುಟುಂಬದ ನಾಲ್ವರು ಬಲಿ

- Advertisement -
- Advertisement -

ಕೆನಡಾದ ಒಂಟಾರಿಯೊ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಟ್ರಕ್ ಹರಿಸಿ ನಾಲ್ವರು ಸದಸ್ಯರನ್ನು ಕೊಲೆ ಮಾಡಲಾಗಿದೆ. ಅಪಘಾತ ಎಂಬಂತೆ ತೋರಿಸಲು ಯತ್ನಿಸಿರುವ ಈ ಘಟನೆ “ಪೂರ್ವನಿಯೋಜಿತ” ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ.

ರಕ್ಷಾಕವಚದಂತಹ ಉಡುಪನ್ನು ಧರಿಸಿದ 20 ವರ್ಷದ ಶಂಕಿತ ಟ್ರಕ್‌ನಿಂದ ಡಿಕ್ಕಿ ಹೊಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ದುರ್ಘಟನೆ ನಡೆದ ಒಂಟಾರಿಯೊದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಮಾಲ್‌ ಒಂದರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಪಾಲ್ ವೇಟ್ ಹೇಳಿದ್ದಾರೆ.

“ಇದು ದ್ವೇಷ ಪೂರಿತವಾದ ಯೋಜಿತ, ಪೂರ್ವನಿರ್ಧರಿತ ಕೃತ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಸಂತ್ರಸ್ತರು ಮುಸ್ಲಿಮರಾಗಿದ್ದರಿಂದ ಅವರನ್ನು ಗುರಿಯಾಗಿಸಲಾಗಿತ್ತು ಎಂದು ತಿಳಿದುಬಂದಿದೆ” ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಮಗ್ರ ಪ್ಯಾಕೇಜ್ ನೀಡದಿದ್ದರೆ ಸಿಎಂ ನಿವಾಸದ ಮುಂದೆ ಖಾಲಿ ಚೀಲ ಹಿಡಿದು ಪ್ರತಿಭಟನೆ: ಜನಾಗ್ರಹ ಆಂದೋಲನ ಎಚ್ಚರಿಕೆ

ಮೃತಪಟ್ಟವರ ಹೆಸರನ್ನು ಬಿಡುಗಡೆ ಮಾಡಲಾಗಿಲ್ಲ, ಆದರೆ ಅವರಲ್ಲಿ 74 ವರ್ಷದ ಮಹಿಳೆ, 46 ವರ್ಷದ ವ್ಯಕ್ತಿ, 44 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕಿ ಸೇರಿದ್ದಾರೆ. ಒಟ್ಟಿಗೆ ಮೂರು ತಲೆಮಾರುಗಳನ್ನು ಈ ಕುಟುಂಬ ಪ್ರತಿನಿಧಿಸುತ್ತದೆ ಲಂಡನ್ ಮೇಯರ್ ಎಡ್ ಹೋಲ್ಡರ್ ಹೇಳಿದ್ದಾರೆ.

’ದಾಳಿಯಲ್ಲಿ ಒಂಬತ್ತು ವರ್ಷದ ಬಾಲಕ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಸ್ಪಷ್ಟವಾಗಿ ಇದು ಮುಸ್ಲಿಮರ ವಿರುದ್ಧ, ಲಂಡನ್ನರ ವಿರುದ್ಧ ದ್ವೇಷಪೂರಿತವಾಗಿ ನಡೆದ ದಾಳಿ” ಎಂದಿದ್ದಾರೆ.

ಶಂಕಿತ ಆರೋಪಿ ಮೇಲೆ ನಾಲ್ವರ ಕೊಲೆ ಆರೋಪ ಮತ್ತು ಒಂದು ಕೊಲೆ ಯತ್ನದ ಆರೋಪಗಳನ್ನು ದಾಖಲಿಸಲಾಗಿದೆ. ಘಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ’ಈ ದಾಳಿಯಿಂದ ಗಾಬರಿಗೊಂಡಿದ್ದೇವೆ. ಈ ಘಟನೆಯಿಂದ ಗಾಬರಿಗೊಳಗಾಗಿರುವವರ ಜೊತೆಗೆ ನಾವಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

“ಲಂಡನ್ನಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಮತ್ತು ದೇಶಾದ್ಯಂತದ ಮುಸ್ಲಿಮರಿಗೆ ಹೇಳುವುದೇನೆಂದರೆ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನಮ್ಮ ಯಾವುದೇ ಸಮುದಾಯಗಳಲ್ಲಿ ಇಸ್ಲಾಮೋಫೋಬಿಯಾಕ್ಕೆ ಸ್ಥಾನವಿಲ್ಲ. ಈ ದ್ವೇಷವು ಕಪಟ ಮತ್ತು ತುಚ್ಛವಾಗಿದೆ ಮತ್ತು ಅದು ನಿಲ್ಲಬೇಕು” ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ಸುಮಾರು 8:40 ಗಂಟೆಗೆ, ಮುಸ್ಲಿಂ ಕುಟುಂಬದ ಐವರು ಸದಸ್ಯರು ಕಾಲುದಾರಿಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಪಿಕ್-ಅಪ್ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿತ್ತು.ಕೆನಡಾದ ಮುಸ್ಲಿಂ ಅಸೋಸಿಯೇಷನ್ ​​ಈ ಭಯಾನಕ ದಾಳಿಯನ್ನು ದ್ವೇಷ ಮತ್ತು ಭಯೋತ್ಪಾದನೆಯ ಕೃತ್ಯವೆಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದೆ.


ಇದನ್ನೂ ಓದಿ: ಅರಣ್ಯ ಅತಿಕ್ರಮಣದಾರರ ಜೊತೆ ಯಾವುದೇ ರಾಜಿ ಇಲ್ಲ: 10,000 ಕಟ್ಟಡಗಳ ತೆರವಿಗೆ ಆದೇಶಿಸಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...