ಟೋಕಿಯೋ ಒಲಿಂಪಿಕ್ಸ್ 2020 ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಮೀರಾಬಾಯಿ ಚಾನು ಭಾರತೀಯರ ಪ್ರೀತಿ ಮನ್ನಣೆಗೆ ಪಾತ್ರವಾಗಿದ್ದರು. ಈಗ ಹಂಗೇರಿಯಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಾಲಿಕ್ ಚಿನ್ನದ ಪದಕ ಗೆದ್ದು ದೇಶದ ಕ್ರೀಡಾಪ್ರೇಮಿಗಳ ಖುಷಿ ಹೆಚ್ಚಾಗಲು ಕಾರಣವಾಗಿದ್ದಾರೆ.
ಹಂಗೇರಿಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಅವರು ಚಿನ್ನವನ್ನು ಗೆದ್ದಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಮಹಿಳೆಯರ 73 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ 5-0 ಗೋಲುಗಳಿಂದ ಬೆಲಾರಸ್ ಕುಸ್ತಿಪಟು ಕ್ಸೆನಿಯಾ ಪಟಪೋವಿಚ್ ಅವರನ್ನು ಸೋಲಿಸುವ ಮೂಲಕ ಪ್ರಿಯಾ ಮಾಲಿಕ್ ಚಿನ್ನದ ಪದಕ ಗೆದ್ದಿದ್ದಾರೆ.
#WrestleBudapest WW 73kg medal bouts results
?PRIYA ?? df Kseniya PATAPOVICH ??, 5-0
?Lillian FREITAS ?? df Bukrenaz SERT ??, 4-0
?Mariia AKULINCHEVA ?? df Veronika NYIKOS ??, via fall— United World Wrestling (@wrestling) July 22, 2021
ಪ್ರಿಯಾ ಮಾಲಿಕ್ ಅವರು 2019 ರಲ್ಲಿ ಪುಣೆಯಲ್ಲಿ ನಡೆದ ಖೇಲೋ ಇಂಡಿಯಾದ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ದೆಹಲಿಯಲ್ಲಿ ನಡೆದ 17 ನೇ ಶಾಲಾ ಕ್ರೀಡಾಕೂಟದಲ್ಲಿ ಅದೇ ವರ್ಷ ಸುವರ್ಣ ಪದಕ ಗೆದ್ದಿದ್ದಾರೆ. ಇದರ ಹೊರತಾಗಿ ಅದೇ ವರ್ಷ ಮತ್ತೆರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಚಾಂಪಿಯನ್‌ಶಿಪ್ ಮತ್ತು ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಪ್ರಿಯಾ ಮಾಲಿಕ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ಗೆದ್ದಿದ್ದಾರೆ. ಆದರೆ, ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಟೋಕಿಯೋ ಒಲಿಂಪಿಕ್ಸ್ 2020ಯಲ್ಲಿ ಚಿನ್ನ ಗೆದ್ದಿದ್ದಾರೆ ಎಂದು ತಪ್ಪಾದ ಸುದ್ದಿಯನ್ನು ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ತಪ್ಪಿದ ಆರ್ಚರ್ ತರಬೇತಿ: ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು ಯಾರು?
ಇದನ್ನೂ ಓದಿ: ಟೋಕಿಯೋ ಒಲಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಪದಕ: ಬೆಳ್ಳಿ ಗೆದ್ದ ಮೀರಾಬಾಯಿ ಚಾನು


