Homeಅಂತರಾಷ್ಟ್ರೀಯಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

ಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

- Advertisement -
- Advertisement -

 

| ಭರತ್ ಹೆಬ್ಬಾಳ |

ಕಳೆದ ಹಲವಾರು ವರ್ಷಗಳಿಂದ ಅಮೆರಿಕ ಮತ್ತು ಇರಾನ್‍ನ ಸಂಬಂಧಗಳು ಹದಗೆಡುತ್ತಲೇ ಇವೆ. ಇದನ್ನೇ ಮುಂದುವರೆಸಿ, ಏಪ್ರಿಲ್ 22ರಂದು ಅಮೆರಿಕ ದೇಶವು ಇರಾನಿನ ಮೇಲೆ ಸಂಪೂರ್ಣ ಆರ್ಥಿಕ ಸಮರವನ್ನೇ ಘೋಷಿಸಿದೆ. ‘ಇರಾನಿನಿಂದ ಇತರ ದೇಶಗಳಿಗೆ ರಫ್ತು ಆಗುವ ತೈಲದ ಪ್ರಮಾಣವನ್ನು ಸೊನ್ನೆಗೆ ಇಳಿಸುವುದೇ ಈ ನಿರ್ಧಾರದ ಉದ್ದೇಶ. ಅದರಿಂದ ಆ ದೇಶದ ಆದಾಯದ ಪ್ರಮುಖ ಮೂಲವನ್ನು ಇಲ್ಲವಾಗಿಸುವುದು’. ಈ ಹೇಳಿಕೆ ಬಂದಿದ್ದು ಅಮೇರಿಕದ ವೈಟ್‍ಹೌಸ್‍ನಿಂದ. ತೈಲವೇ ಇರಾನಿನ ಪ್ರಮುಖ ರಫ್ತು ಆಗಿದ್ದು, ಅಮೇರಿಕದಲ್ಲಿ ಟ್ರಂಪ್ ಆಡಳಿತ ಬಂದನಂತರ ಇರಾನ್ ದೇಶದ ಕತ್ತುಹಿಸುಕಿ ತನ್ನ ತಾಳಕ್ಕೆ ಕುಣಿಯುವಂತೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದೆ. ಪ್ರಸ್ತುತ ಸಮಯದಲ್ಲಿ ಇರಾನ್ ಪ್ರತಿನಿತ್ಯ 10 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. 2018ರ ನವೆಂಬರ್ 5ರಂದು ಮೊದಲ ಬಾರಿ ನಿರ್ಬಂಧನೆಗಳನ್ನು ಹೇರಲಾಗಿತ್ತು. ಆಗ ಅಮೆರಿಕ 8 ದೇಶಗಳಿಗೆ ತೈಲದ ಆಮದನ್ನು ನಿಲ್ಲಿಸಲು 6 ತಿಂಗಳ ಸಮಯಾವಕಾಶವನ್ನು ನೀಡಲಾಗಿತ್ತು. ಒಂದೇ ಬಾರಿ ಸಂಪೂರ್ಣ ನಿರ್ಬಂಧ ಹೇರಿದರೆ ಮಾರುಕಟ್ಟೆಗಳು ಅತಂತ್ರಗೊಳ್ಳುವವು ಎನ್ನುವ ಆತಂಕದ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ನಿರ್ಬಂಧನೆಗಳಿಗಿರುವ ಈ ವಿನಾಯಿತಿಗಳು ಏಪ್ರಿಲ್ 30 ರಂದು ಕೊನೆಗೊಳ್ಳುತ್ತವೆ, ಮೇ 1ರಿಂದ ಎಲ್ಲ ಎಂಟೂ ದೇಶಗಳು ನಿರ್ಬಂಧನೆಗಳಿಗೆ ಬದ್ಧವಾಗಬೇಕಿದೆ.

ಚೈನಾ, ಭಾರತ, ಜಪಾನ್, ದಕ್ಷಿಣ ಕೋರಿಯಾ, ತೈವಾನ್, ಟರ್ಕಿ, ಇಟಲಿ ಮತ್ತು ಗ್ರೀಸ್ ಈ ನಿರ್ಬಂಧನೆಯಿಂದ 6 ತಿಂಗಳು ವಿನಾಯಿತಿ ಪಡೆದ ದೇಶಗಳು. ಜಪಾನ್, ದಕ್ಷಿಣ ಕೋರಿಯಾ ಮತ್ತು ತೈವಾನ್ ದೇಶಗಳು ಎರಡನೇ ಮಹಾಯುದ್ಧದ ನಂತರ ಅಮೇರಿಕವೇ ಈ ದೇಶಗಳ ರಕ್ಷಕ ದೇಶವಾಗಿರುವುದರಿಂದ ದಿಗ್ಬಂಧನೆಗಳಿಗೆ ಒಪ್ಪಿಕೊಳ್ಳುತ್ತವೆ. ಇಟಲಿ ಮತ್ತು ಗ್ರೀಸ್ ದೇಶಗಳು ಇರಾನ್‍ನಿಂದ ತುಂಬಾ ಕಡಿಮೆ ತೈಲ ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಚೈನಾ ದೇಶ ಈ ದಿಗ್ಬಂಧನೆಗಳಿಗೆ ಬದ್ಧವಾಗುವುದೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಡೆಯುತ್ತಿರುವ ಟ್ರೇಡ್ ವಾರ್ ಮೇಲೆ ಅವಲಂಬಿತವಾಗಿದೆ. ಭಾರತದ ಪೆಟ್ರೋಲಿಯಮ್ ಸಚಿವರು ಅಮೆರಿಕ ವಿಧಿಸಿದ ದಿಗ್ಬಂಧನೆಗಳಿಗೆ ಬದ್ಧರಿರುವುದಾಗಿ ಹೇಳಿಕೆ ನೀಡಿದ್ದರಾದರೂ ಅಂತಿಮ ನಿರ್ಣಯ ಹೊಸ ಸರಕಾರ ಬಂದ ನಂತರವೇ. ಇರಾನ್‍ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ದೇಶ ಟರ್ಕಿ. ಈಗ ಬೇರೆ ಮೂಲಗಳಿಂದ ಇಷ್ಟು ಕಡಿಮೆ ಸಮಯದಲ್ಲಿ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದಾಗಿ, ಅದರ ಪರಿಣಾಮಗಳನ್ನು ಎದುರಿಸಬೇಕಾಗುವುದು.

ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಲಾನ್ ಆಫ್ ಆಕ್ಷನ್ (ಜೆಸಿಪಿಓಏ) ಎಂದು ಕರೆಯಲಾಗುವ ಬಹುಪಕ್ಷೀಯ ನ್ಯೂಕ್ಲಿಯರ್ ಒಪ್ಪಂದದಿಂದ ಮೇ 2018ರಲ್ಲಿ ಅಮೇರಿಕವು ಏಕಪಕ್ಷೀಯವಾಗಿ ಹಿಂತೆಗೆದು ಕೊಂಡಿತು, ಅಂದಿನಿಂದ ಈ ಬಿಕ್ಕಟ್ಟು ಉಲ್ಬಣಿಸುತ್ತಲೇ ಇದೆ. ಬರಾಕ್ ಒಬಾಮಾ ಆಡಳಿತದ ಕಾಲದಲ್ಲಿ(2015) ಇರಾನ್ ಮತ್ತು ಆರು ವಿಶ್ವಶಕ್ತಿಗಳ ಮಧ್ಯೆ ಜೆಸಿಪಿಓಏ ರಚಿಸಲಾಗಿತ್ತು. ಆ ಒಪ್ಪಂದದಲ್ಲಿ ಹಿಂಪಡೆಯಲಾದ ಏಕಪಕ್ಷೀಯ ದಿಗ್ಬಂಧನೆಗಳನ್ನು ಟ್ರಂಪ್ ಆಡಳಿತ ಮತ್ತೆ ವಿಧಿಸಿದೆ. ಇತ್ತೀಚಿಗೆ ಹಲವಾರು ಷರತ್ತುಗಳ ಅಡಿಯಲ್ಲಿ ಈ ಒಪ್ಪಂದವನ್ನು ಇನ್ನೊಂದು ಸುತ್ತು ಚರ್ಚಿಸುವ ಪ್ರಸ್ತಾಪ ಇಟ್ಟಿದೆ. ಸಿರಿಯಾದಲ್ಲಿ ಆಳ್ವಿಕೆ ಬದಲಾವಣೆಗಾಗಿ ಅಮೆರಿಕ ಮಾಡಿದ ಯತ್ನಗಳು, ವೆನೆಜುವೆಲಾದಲ್ಲೂ ಮಾಡಿದ ಪ್ರಯತ್ನ ಹಾಗೂ ಸದ್ಯಕ್ಕೆ ನಡೆಯುತ್ತಿರುವ ಯುದ್ಧಗಳ ಮಧ್ಯೆ ಇರಾನ್ ಅನ್ನು ಒಂದು ದುಷ್ಟ ಭಯೋತ್ಪಾದಕ ದೇಶವನ್ನಾಗಿ ಚಿತ್ರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನಿನ ಆಳ್ವಿಕೆಯು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೆಂದೂ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಅಮೆರಿಕ ವಿರೋಧಿ ಭಾವನೆಗಳನ್ನು ಹರಡಿಸುವ ಪ್ರಯತ್ನ ಇರಾನ್ ಮಾಡುತ್ತಿದೆ ಎಂದು ಅಮೆರಿಕ ಚಿತ್ರಿಸುತ್ತಿದೆ. 2002ರಲ್ಲಿ ಪ್ರಾರಂಭಿಸಿದ ಇರಾಕ್‍ನ ಯುದ್ಧವನ್ನೂ ಇದೇ ರೀತಿಯಲ್ಲಿ ಪ್ರಾರಂಭಿಸಲಾಗಿತ್ತು. ಆಗಲೂ ಈಗಿರುವ ರಕ್ಷಣಾ ಸಲಹಾಕಾರರಾದ ಜಾನ್ ಬೋಲ್ಟನ್ ಅವರೇ ಸಲಹಾಕಾರರಾಗಿದ್ದರು.

ಈಗ ಅಮೇರಿಕವು ಮಾತುಕತೆಗಳಿಗೆ ಇಟ್ಟಿರುವ ಷರತ್ತುಗಳನ್ನು ‘ಸುಳ್ಳುಗಳ ಸರಮಾಲೆ, ಇರಾನ್ ದೇಶವನ್ನು ತನ್ನ ಮಂಡಿಯೂರಿಸುವ ಉದ್ದೇಶದಿಂದ ವಿಧಿಸಲಾಗಿದ್ದು’ ಎಂದು ಇರಾನ್‍ನ ಅಧ್ಯಕ್ಷ ಹಸನ್ ರೋಹಾನಿ ಹೇಳಿದರು. ‘ಈ ಮುಂಚೆ ಮಾಡಿದ ಒಪ್ಪಂದಗಳಿಂದ ಅಮೆರಿಕ ಹಿಂದಕ್ಕೆ ಹೋಗಿರುವಾಗ ಇನ್ನೊಂದು ಹೊಸ ಒಪ್ಪಂದಕ್ಕೆ ಇರಾನ್ ದೇಶ ಏಕೆ ಸೇರಬೇಕು’ ಎಂದು ಇರಾನ್‍ನ ವಿದೇಶಾಂಗ ಸಚಿವ ಕೇಳಿದರು. ಅವರು ಸ್ಪಷ್ಟವಾಗಿ ಹೇಳಿದ ಇನ್ನೊಂದು ವಿಷಯವೇನೆಂದರೆ, ‘ಟ್ರಂಪ್ ಯುದ್ಧವನ್ನು ಬಯಸುವುದಿಲ್ಲ ಎನ್ನುವ ನಂಬಿಕೆ ಇದೆ ಆದರೆ ಅವರ ಸಲಹಾಕಾರರೆ (ಬಿ-ಟೀಮ್) ಈ ಬಿಕ್ಕಟ್ಟಿಗೆ ಕಾರಣ’. ಇಲ್ಲಿ ಬಿ ಟೀಮ್ ಎಂದರೆ, ಇಸ್ರೇಲಿನ ಬಿಬಿ, ಸೌದಿಯ ಬಿನ್ ಸಲ್ಮಾನ್, ಯು.ಏ.ಈ.ಯ ಬಿನ್ ಖಾಲೆದ್ ಹಾಗೂ ಅಮೇರಿಕದ ಜಾನ್ ಬೋಲ್ಟನ್. ಇಂತಹ ಒತ್ತಡದ ತಂತ್ರಗಾರಿಕೆಯಿಂದ ಇರಾನ್ ದೇಶವನ್ನು ಮಂಡಿಯೂರುವ ಪರಿಸ್ಥಿತಿಗೆ ತರಲಾಗದು ಎಂತಲೂ ವಿದೇಶಾಂಗ ಸಚಿವ ಹೇಳಿದ್ದಾರೆ.

‘ಸ್ಟ್ರೇಟ್ ಆಫ್ ಹೊರ್ಮುಝ್’ ಎಂದು ಕರೆಯಲಾಗುವ ಪರ್ಷಿಯನ್ ಕೊಲ್ಲಿಯಿಂದಲೇ ವಿಶ್ವದ 35% ತೈಲ ಹಾದುಹೋಗಬೇಕಿದೆ. ಆ ಕೊಲ್ಲಿ ಇರಾನ್‍ನ ಜಲಭಾಗವನ್ನು ಹೊಂದಿದೆ. ಇರಾನಿನ ರೆವಲೂಷನರಿ ಗಾಡ್ರ್ಸ್ ಆ ಕೊಲ್ಲಿಯ ರಕ್ಷಣೆ ಮಾಡುತ್ತಾರೆ. ಏಪ್ರಿಲ್ 8 ರಂದು ಟ್ರಂಪ್ ಆಡಳಿತವು ಇರಾನಿಯನ್ ರೆವಲೂಷನರಿ ಗಾಡ್ರ್ಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಅಮೆರಿಕವು ಈ ರೀತಿ ಬೇರೊಂದು ದೇಶದ ಸೈನ್ಯವನ್ನು ‘ಭಯೋತ್ಪಾದಕ ಗುಂಪು’ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು. ಇರಾನ್ ಅದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ದೇಶವನ್ನು ‘ಭಯೋತ್ಪಾದನೆಯ ಪ್ರಾಯೋಜಕ ದೇಶ’ ಎಂದು ಕರೆದು, ಆ ಭಾಗದಲ್ಲಿರುವ ಅಮೆರಿಕದ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪು’ಗಳು ಎಂದು ಕರೆದಿದೆ.

ಐತಿಹಾಸಿಕವಾಗಿ, ಭಾರತ ಮತ್ತು ಇರಾನ್ ಒಳ್ಳೆಯ ಬಾಂಧವ್ಯಗಳನ್ನು ಹೊಂದಿವೆ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯ ಆಳ್ವಿಕೆಯ ಕಾಲದಲ್ಲಿ ಇರಾನ್ ವಿರುದ್ಧ ದಿಗ್ಬಂಧನೆಗಳನ್ನು ಹೇರಿದ್ದಾಗ ಭಾರತವು ಇರಾನ್ ಜೊತೆಗೆ ನಿಂತು, ಆ ದೇಶಕ್ಕೆ ಸಹಾಯ ನೀಡಿದೆ. ಅಮೆರಿಕದ ಒತ್ತಡದ ಪರಿಸ್ಥಿತಿಯಲ್ಲಿ ಮುಂದೆ ಈ ಪ್ರಾದೇಶಿಕ ಸಂಬಂಧವನ್ನು ಗಟ್ಟಿಗೊಳಿಸುವುದೋ ಅಥವಾ ಅಮೆರಿಕಾದ ಒತ್ತಡಕ್ಕೆ ಮಣಿದು ಎರಡು ದೇಶಗಳ ಐತಿಹಾಸಿಕ ಸ್ನೇಹಕ್ಕೆ ದ್ರೋಹಬಗೆಯುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...