Homeನಿಜವೋ ಸುಳ್ಳೋಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದು ನಿಜವೇ? ಈ ನಕ್ಷೆ ಯಾವಾಗಿನದು?

ಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದು ನಿಜವೇ? ಈ ನಕ್ಷೆ ಯಾವಾಗಿನದು?

- Advertisement -
- Advertisement -

ಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾ ರೋಗವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದನ್ನು ಸರಳವಾಗಿ ತೋರಿಸಲು ಅಮೆರಿಕದ ಸಿಇಒ ಭಾರತದ ಈ ನಕ್ಷೆಯನ್ನು ರಚಿಸಿದ್ದಾರೆ. ಆ ಮೂಲಕ ಭಾರತಕ್ಕೆ ಧನ್ಯವಾದಗಳ್ನನು ಅರ್ಪಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಭಾರತದ ನಕ್ಷೆಯೊಂದು ಇತ್ತೀಚಿನದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಈ ನಕ್ಷೆಯಲ್ಲಿ ಪ್ರತಿ ರಾಜ್ಯವನ್ನು ಜನಸಂಖ್ಯೆಯ ಆಧಾರದ ಮೇಲೆ ಬೇರೆ ದೇಶಕ್ಕೆ ಹೋಲಿಸಲಾಗಿದೆ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯ ಕಾರಣದಿಂದಾಗಿ, ಅನೇಕ ದೇಶಗಳ COVID-19 ಬಿಕ್ಕಟ್ಟನ್ನು ಎದುರಿಸುವಲ್ಲಿ ಎಷ್ಟು ಪ್ರಯತ್ನ ಹಾಕುತ್ತಿವೆಯೋ ಅಷ್ಟನ್ನೂ ಭಾರತವೊಂದೇ ಹಾಕುತ್ತಿದೆ ಎಂದು ಹೇಳಲಾಗಿದೆ.

“ಇದು ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸುವ ಬಗೆ ಎಂದು ಅಮೆರಿಕಾದ ಸಿಇಒ ಮೋದಿಜಿಯನ್ನು ಈ ವಿಶಿಷ್ಟ ರೀತಿಯಲ್ಲಿ ಶ್ಲಾಘಿಸಿದರು. ಮೋದಿಜಿಯ ಪ್ರಯತ್ನಗಳನ್ನು ಜಗತ್ತು ಗುರುತಿಸುತ್ತಿದೆ ಆದರೆ ಕೆಲವು ಆಂತರಿಕ ಗುಲಾಮರು ಮತ್ತು ದೇಶದ್ರೋಹಿಗಳು ಇನ್ನೂ ಟೀಕಿಸುತ್ತಿದ್ದಾರೆ” ಎಂದೆಲ್ಲಾ ಟೈಟಲ್‌ನಲ್ಲಿ ಈ ನಕ್ಷೆಯನ್ನು ಕಳೆದ ಮೂರ್‍ನಾಲ್ಕು ದಿನಗಳಿಂದ ಹರಡಲಾಗುತ್ತಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕೂಡ ಇದೇ ರೀತಿಯ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. 13 ಸಾವಿರಕ್ಕೂ ಹೆಚ್ಚು ಜನ ಈ ಪೋಸ್ಟ್‌ ಅನ್ನು ಇಷ್ಟಪಟ್ಟಿದ್ದು 3 ಸಾವಿರ ಜನ ಹಂಚಿಕೊಂಡಿದ್ದಾರೆ.

 

ಫ್ಯಾಕ್ಟ್ ಚೆಕ್

ಈ ಚಿತ್ರ ಇತ್ತೀಚಿನದೆ ಮತ್ತು ಕೊರೊನಾ ವಿಷಯಕ್ಕೆ ಚಿತ್ರಿಸಲಾಗಿದೆಯೇ ಎಂದು ಕಂಡುಹಿಡಿಯಲು ಹಲವಾರು ಕೀವರ್ಡ್ ಮೂಲಕ ಹುಡುಕಾಟ ನಡೆಸಿದರೂ ಸಹ ಅಮೇರಿಕನ್ ಸಿಇಒ ಅಂತಹ ನಕ್ಷೆಯನ್ನು ಚಿತ್ರಿಸುವ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿ ಲಭ್ಯವಾಗಿಲ್ಲ.

ನಂತರ ಗೂಗಲ್‌ನಲ್ಲಿ ನಕ್ಷೆಯ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಈ ನಕ್ಷೆಯ ಚಿತ್ರವು 2016 ರ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದನ್ನು ಕಾಣಬಹುದಾಗಿದೆ.

ಟ್ವಿಟರ್ ಬಳಕೆದಾರ ಅಮಿತ್ ರಂಜನ್ ಎಂಬುವವರು 2016ರ ಏಪ್ರಿಲ್‌ 13ರಂದೇ ಇದೇ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. “ಚಿಂತನೆಯನ್ನು ಪ್ರಚೋದಿಸುವ ನಕ್ಷೆ! ” ಭಾರತೀಯ ರಾಜ್ಯಗಳು ಹೊಂದಿರುವ ಜನಸಂಖ್ಯೆಯಷ್ಟೇ ಸಮಾನ ಜನಸಂಖ್ಯೆಯ ದೇಶಗಳನ್ನು ಮ್ಯಾಪ್ ಮಾಡಲಾಗಿದೆ” ಎಂದು ಬರೆದಿದ್ದಾರೆ. ಆದರೆ  ಆ ಪೋಸ್ಟ್‌ನಲ್ಲಿ “ಯಾವುದೇ ಎನ್ಆರ್‌ಐ ಅಥವಾ ಅಮೇರಿಕನ್ ಸಿಇಒ ಈ ನಕ್ಷೆಯನ್ನು ಚಿತ್ರಿ‍ಸಿರುವ ಬಗ್ಗೆ” ಯಾವುದೇ ಉಲ್ಲೇಖವಿಲ್ಲ.

ಅದೇ 2016ರಲ್ಲಿ ಇದೇ ನಕ್ಷೆಯನ್ನು ಈ ಹಿಂದೆ ನಾರ್ವೆಯಿಂದ ಭಾರತಕ್ಕೆ ರಾಜತಾಂತ್ರಿಕರಾಗಿದ್ದ ಎರಿಕ್ ಸೊಲ್ಹೈಮ್ ಕೂಡ ಹಂಚಿಕೊಂಡಿದ್ದಾರೆ. ಯಾರು ನಕ್ಷೆಯನ್ನು ರಚಿಸಿದರು ಎಂಬುದರ ಬಗ್ಗೆ ಸೋಲ್ಹೈಮ್ ಕೂಡ ಯಾವುದೇ ಉಲ್ಲೇಖವನ್ನು ನೀಡಿಲ್ಲ.

ವರ್ಷ ಕಳೆದಂತೆ ನಕ್ಷೆಯು ಹೆಚ್ಚು ವೈರಲ್ ಆಗುತ್ತಲೇ ಅದಕ್ಕೆ “ಅಮೇರಿಕನ್ ಸಿಇಒ” ಮತ್ತು “ಎನ್ಆರ್‌ಐ” ರಚಿಸಿದರು ಎಂಬ ಶೀರ್ಷಿಕೆ ಸೇರಿಕೊಂಡಿದೆ. 2018ರ ಮೇಲಿನ ಟ್ವೀಟ್‌ ಗಮನಿಸಿ.

ಏಪ್ರಿಲ್, 2020 ರಲ್ಲಿ, ನಕ್ಷೆಯು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು – ಮತ್ತು ಈ ಸಮಯದಲ್ಲಿ ನಡೆಯುತ್ತಿರುವ COVID-19 ಸಾಂಕ್ರಾಮಿಕದ ರೋಗದ ವಿರುದ್ಧದ ಹೋರಾಟ ಹೀಗೆ ನಡೆಯುತ್ತಿದೆ ಎಂದು ಸೇರಿಸುವ ಮೂಲಕ ಹೊಸದಾಗಿ ರಚನೆಯಾಯಿತು ಎಂಬ ಸುಳ್ಳು ಹರಡಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ನೆಲತಿಟ್ಟದಲ್ಲಿರುವ ನಾಡುಗಳಲ್ಲಿ ಕೊರೊನಾ ಸೋಂಕಿನ ಒರೆತ(test)ದ ಕುರಿತು ಬರೆದರೆ ಬಾರತದ ಬಣ್ಣ ಬಯಲಾಗಲಿದೆ. ???

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...