Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಸರ್ಕಾರ ಮಾಡಬೇಕಾದ್ದನ್ನು ಮಾಡಿ, ಜನರನ್ನೂ ಕ್ರಿಯಾಶೀಲರನ್ನಾಗಿಸುವ ಸಮಯವಿದು

ಸರ್ಕಾರ ಮಾಡಬೇಕಾದ್ದನ್ನು ಮಾಡಿ, ಜನರನ್ನೂ ಕ್ರಿಯಾಶೀಲರನ್ನಾಗಿಸುವ ಸಮಯವಿದು

- Advertisement -
- Advertisement -

ಕೊರೋನಾ ಮಹಾಮಾರಿ ವಿರುದ್ಧ ಸಮರ ಹೂಡಿ ಆಗಿದೆ. ರೋಗದ ಪತ್ತೆಯ ಕೆಲಸವನ್ನು ಇನ್ನೂ ಮೊದಲೇ ಆರಂಭಿಸಬಹುದಿತ್ತು. 40 ಕೋಟಿ ಜನರನ್ನು ಬಡತನದಲ್ಲಿಡಲಾಗಿದೆ. ಇವರಿಗೆ ಯಾವ ಜೀವಭದ್ರತೆಯೂ ಇಲ್ಲ. ಊಟ ಮೊದಲೇ ಇಲ್ಲ. ಇವರು ಹೇಗೆ ಜೀವಿಸಬೇಕು? ವಲಸಿಗ ಕಾರ್ಮಿಕರ ಪರಿಸ್ಥಿತಿಯಂತೂ ಇನ್ನೂ ಘನಘೋರ; ಮಹಮದೀಯರೆ ರೋಗ ಹರಡಲು ಕಾರಣರು ಎಂದು ಜನತೆಯ ಮನಸ್ಸಿನಲ್ಲಿ ವಿಷ ಬಿಜ ಬಿತ್ತಿ ಹಿಂದುರಾಷ್ಟ್ರ ಆಗಬೇಕೆನ್ನುವ ಹುಂಬರು, ತಲೆಕೆಟ್ಟವರಂತೆ ಮಾತನಾಡುತ್ತಾ, ಜನರ ಮನಸ್ಸಿನಲ್ಲಿ ಕೋಮುವ್ಯಾಧಿ ಕೆರಳುವಂತೆ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ತನ್ನ ಮೌನದ ಮೂಲಕ ಅವರ ನಿಲುವನ್ನು ಸಮರ್ಥಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಸ್ಥಾಪನೆಯ 40ನೇ ವರ್ಷದ ದಿನದಂದೇ ಎಲ್ಲರು ರಾತ್ರಿ ಒಂಭತ್ತು ಘಂಟೆಯಿಂದ 9 ನಿಮಿಷ ಕಾಲ ಮೋಂಬತ್ತಿ ಹತ್ತಿಸಬೇಕೆಂದು ಫರ್ಮಾನ್ ಹೊರಡಿಸುವ ಮೂಲಕ ಕೊರೋನಾದ ದುರುಪಯೋಗ ಮಾಡಿಕೊಂಡದ್ದು ಸರಿಯೇ ಎಂದು ಪ್ರಶ್ನಿಸುವವರಿದ್ದಾರೆ. ಭಾರತದ ಕೊನೇ ಪಕ್ಷ ಹತ್ತು ಕೋಟಿ ಜನ ಆ ದಿನ ಮೋಂಬತ್ತಿ ಹಚ್ಚಿದ್ದರೆ, ಮೋಂಬತ್ತಿಗೆ 20 ಕೋಟಿ ರೂಗಳನ್ನು ವೆಚ್ಚ ಮಾಡಿದಂತಾಯಿತು. ಅದೇ 20 ಕೋಟಿಯನ್ನು ಕೊರೋನಾ ತಡೆಗಟ್ಟುವುದಕ್ಕೆ ಉಪಯೋಗಿಸಬಹುದಿತ್ತು, ಇಲ್ಲವೇ ಒಂದಷ್ಟು ಜನರಿಗೆ ಊಟ ಕೊಡಬಹುದಾಗಿತ್ತಲ್ಲವೇ ಎಂದು ಕೇಳುವವರೂ ಇದ್ದಾರೆ. ಇವೆಲ್ಲಕ್ಕಿಂತ ಮೊದಲು ಕೇಳುವ ಪ್ರಶ್ನೆ ಒಂದು ತಿಂಗಳ ಹಿಂದೆಯೇ ಕೊರೋನಾ ಹರಡುತ್ತಿರುವ ಸುದ್ದಿ ಸರ್ಕಾರಕ್ಕೆ ಗೊತ್ತಾದರೂ ಕೂಡಲೆ ಕ್ರಮ ಕೈಗೊಳ್ಳಲಿಲ್ಲ ಎಂಬುದು. ಇದೆಲ್ಲದಕ್ಕೂ ಮೋದಿ ಅವರ ಉತ್ತರ ‘ದಿವ್ಯಮೌನ’. ಇದು ಎಲ್ಲರಿಗೂ ತಿಳಿದ ವಿಷಯ; ಮೋದಿಜಿ ತಮಗೆ ತೋಚಿದ್ದನ್ನು ಹೇಳುವವರೇ ಹೊರತು ಜನ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಜಾಯಮಾನದವರಲ್ಲ. ತಮಗೆ ಬೇಕಾದರೆ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಕೇಳಿದ ಪ್ರಶ್ನೆಗೂ ಉತ್ತರ ಕೊಡುತ್ತಾರೆ. ಆದರೆ ಈ ಗಹನ ವಿಚಾರಕ್ಕಲ್ಲ. ಬಿಜೆಪಿ ಸಂಘಪರಿವಾರದ ಕೆಲವರನ್ನು ಸಾಕಿಕೊಂಡಿದ್ದಾರೆ ಮೋದಿ. ಈ ಮತಾಂಧರು ನೂರು ಸಾರಿ ವಿಷಕಾರಿದರೂ ಮೋದಿ ಮತ್ತು ಷಾ ಅವರನ್ನು ಪ್ರಶ್ನಿಸುವುದಿಲ್ಲ. ಅದಕ್ಕೆ ಕಾರಣ ಅವರೆಲ್ಲ Hidden Agendaಗೆ ಅನುಗುಣವಾಗಿ ಮಾತನಾಡುವ (ಅಪ) ಪ್ರಚಾರಕರು!

ಇವೆಲ್ಲ ಒತ್ತಟ್ಟಿಗಿರಲಿ. ಈಗ ಸರ್ಕಾರ ಮಾಡಬೇಕಾದ್ದೇನು? ನಾವು ಅದನ್ನು ಕುರಿತು ಯೋಚನೆ ಮಾಡುವ. ಎಂದಿನಂತೆಯೇ ನಾವು ಮುಂದೆಯೂ People’s curfew, 144ನೇ ಸೆಕ್ಷನ್ ಜಾರಿ ಇವುಗಳನ್ನೇ ಮುಂದುವರೆಸಿಕೊಂಡೇ ಹೋಗುವುದೇ? ಇಲ್ಲವೇ ಜನರಿಗೆ ರೋಗದ ಬಗ್ಗೆ ತಿಳುವಳಿಕೆ ಕೊಟ್ಟು, ಅವರನ್ನು ಜಾಗೃತಗೊಳಿಸುವುದೇ? ಇದುವರೆಗೆ ಸರ್ಕಾರ ಮಾಡಿರುವುದೆಲ್ಲ ಇದನ್ನೆ. ಇದು ಮಾಬಾಪ್ ಸರ್ಕಾರ ಎಂದು ಜನ ಭಾವಿಸಿದ್ದಾರೆ. ರೋಗ ಬಂದರೆ ಸರ್ಕಾರ ಅದನ್ನು ತಡೆ ಹಿಡಿಯುತ್ತದೆ. ನಾವ್ಯಾಕೆ ಅದಕ್ಕೆ ತಲೆ ಕೆಡಿಸಿಕೊಳ್ಳಬೇಕು ಎಂದುಕೊಂಡು ಜನ ಜಡರಾಗುತ್ತಿದ್ದಾರೆ. ಬಿಹಾರದಲ್ಲಿ ಗಂಗಾ ನದಿ ಪ್ರವಾಹ ಬಂದು ಕೊಚ್ಚಿಕೊಂಡು ಹೋಗುವ ಸೂಚನೆ ಇದ್ದಾಗಲೂ ಜನ ಸಿನಿಮಾಕ್ಕೆ ಹೋಗಿ ಕೂತಿರುತ್ತಾರಂತೆ. ಮಾಬಾಪ್ ಗೌರ್ನಮೆಂಟ್ ನಮ್ಮನ್ನು ಪ್ರವಾಹದಿಂದ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿಂದ. ಪ್ರವಾಹ ಬರುವುದಿದ್ದರೆ ಎಲ್ಲಿಗೆ ಹೋಗಬೇಕು? ಮರ ಹತ್ತಿ ಕೂಡೋಣವೇ, ಗಂಗಾ ನದಿಯಿಂದ ದೂರವಿರುವ ಗ್ರಾಮಕ್ಕೆ ಹೋಗಿ ತಾತ್ಕಾಲಿಕವಾಗಿ ರಕ್ಷಣೆ ಪಡೆಯಬೇಕೇ ಎಂದು ಹಿಂದಿನ ದಿನಗಳಲ್ಲಿ ಜನ ಯೋಚಿಸುತ್ತಿದ್ದರು. ಈಗಿನ ಜನ ಸರ್ಕಾರ ನಮ್ಮ ರಕ್ಷಣೆ ಮಾಡುತ್ತದೆ, ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುತ್ತಾರೆ.

ಸರ್ಕಾರ ತಾನೇನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ ಇನ್ನಾದರೂ ಜನತೆಗೆ ‘ನಿಮ್ಮ ಜವಾಬ್ದಾರಿ ನಿರ್ವಹಿಸಿ, ರೋಗ ಹರಡದಂತೆ ತಡೆಗಟ್ಟಲು ನೀವೇನೂ ಮಾಡಬೇಕೋ ವಿಚಾರ ಮಾಡಿ’ ಎಂದು ತಿಳಿಸಬೇಕು. ಕರ್ತವ್ಯ ನಿರ್ವಹಣೆ ಮಾಡಿ ಎಂದು ತಿಳುವಳಿಕೆ ನೀಡಿ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಪರಿವರ್ತಿಸಬೇಕು. ಈಗ ಜನರನ್ನ ಮೋದಿ ವಿಚಾರ ಶೂನ್ಯರನ್ನಾಗಿ ಮಾಡಿದೆ. ಬೇಜವಾಬ್ದಾರಿಯಿಂದ ನಡೆಸಿಕೊಳ್ಳಲು ಬೇಕಾದ ವಾತಾವರಣ ಸೃಷ್ಟಿ ಮಾಡಿದೆ. ಇನ್ನಾದರೂ ಎಚ್ಚೆತ್ತು ಸರ್ಕಾರ ಸಮಾಜದ ವಿಚಾರವಂತರು ಏನು ಮಾಡಬೇಕು? ಕಾರ್ಮಿಕರು ಏನು ಮಾಡಬೇಕು, ವಿದ್ಯಾರ್ಥಿಗಳು ಯುವಕರು ಏನು ಮಾಡಬಹುದು? ಜನಸಾಮಾನ್ಯರು ಅನುಸರಿಸಬೇಕಾದ ನಿಯಮಗಳೇನು? ಎಂಬುದನ್ನು ಕುರಿತು ಅವರಿಗೆಲ್ಲ ಹೇಳಬೇಕು. ರಚನಾತ್ಮಕ ಸಲಹೆಗಳನ್ನು ಅವರಿಗೆ ನೀಡಬೇಕು. ಒಟ್ಟಿನಲ್ಲಿ ಜನಜಾಗೃತಿ ಮೂಡಿಸಿ ಅವರೆಲ್ಲ ಜವಬ್ದಾರಿಯಿಂದ ವರ್ತಿಸುವಂತೆ ಪ್ರೇರಣೆ ನೀಡಬೇಕು.


ಇದನ್ನು ಓದಿ: ಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಒಳ್ಳೆ ಉಡುಪು, ಮೇಕಪ್…ಅಪರೂಪಕ್ಕೊಮ್ಮೆ ಬೆಚ್ಚಿಬೀಳಿಸುವ ಮವ್ನಿ ಬಾಬಾನಂತೆ…ಅಬ್ಬಾ! ನಾಡಿಗೆ ಉಳಿಗಾಲವುಂಟೆ!

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...