Homeಮುಖಪುಟ‘ಕೂ’ ಆಪ್ ಸುರಕ್ಷಿತವೆ? ಪ್ರಶ್ನೆಗೆ ’ರಾಷ್ಟ್ರೀಯತೆ’ ಹೆಸರು ಹೇಳಿ ತಪ್ಪಿಸಿಕೊಂಡ ’ಕೂ’ ಸಂಸ್ಥಾಪಕ!

‘ಕೂ’ ಆಪ್ ಸುರಕ್ಷಿತವೆ? ಪ್ರಶ್ನೆಗೆ ’ರಾಷ್ಟ್ರೀಯತೆ’ ಹೆಸರು ಹೇಳಿ ತಪ್ಪಿಸಿಕೊಂಡ ’ಕೂ’ ಸಂಸ್ಥಾಪಕ!

ನಿಜಕ್ಕೂ ’ಕೂ’ ಸುರಕ್ಷಿತವೆ? ಸಾಮಾಜಿಕ ಜಾಲತಾಣಗಳ ಭದ್ರತಾ ಸಂಶೋಧಕರು ಹೇಳುತ್ತಿರುವುದೇನು?

- Advertisement -
- Advertisement -

ಕೇಂದ್ರ ಸರ್ಕಾರವು ಟ್ವಿಟರ್‌ ಜೊತೆ ಅಸಮಧಾನಗೊಂಡಿದ್ದು, ಟ್ವಿಟರ್ ಮಾದರಿಯ ಸಾಮಾಜಿಕ ಜಾಲತಾಣವಾದ ’ಕೂ’ ಆಪ್‌ಗೆ ಪ್ರೋತ್ಸಾಹಿಸಿದೆ. ಈ ಹಿನ್ನಲೆಯಲ್ಲಿ ಈ ಆಪ್‌‌ ಅನ್ನು ಹಲವಾರು ಜನರು ಡೌನ್‌ಲೋಡ್ ಮಾಡಿದ್ದಾರೆ. ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 30 ಲಕ್ಷ ಡೌನ್‌ಲೋಡ್‌ಗಳಾಗಿದೆ ಎನ್ನಲಾಗಿದೆ. ಆದರೆ ಈ ಆಪ್‌ ಬಗ್ಗೆ ಹಲವಾರು ಅಘಾತಕಾರಿ ಮಾಹಿತಿಗಳು ಹೊರಬಿದ್ದಿದ್ದು, ಆಪ್‌ ಸುರಕ್ಷಿತ ಅಲ್ಲ ಎಂದು ಫ್ರೆಂಚ್ ಸಂಶೋಧಕರು ಬಹಿರಂಗ ಪಡಿಸಿರುವುದ ಜೊತೆಗೆ, ಆಪ್‌‌ಗೆ ಚೀನಾದೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳ ಭದ್ರತಾ ಸಂಶೋಧಕರು, ’ಕೂ’ ಆಪ್‌ ಹೆಚ್ಚು ಸುರಕ್ಷಿತವಲ್ಲ, ಅದು ಬಳಕೆದಾರರ ಇಮೇಲ್ ಐಡಿ, ಫೋನ್‌ ಸಂಖ್ಯೆಗಳು, ಹುಟ್ಟಿದ ದಿನಾಂಕ ಸೇರಿದಂತೆ ಬಹಳಷ್ಟು ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಎಲಿಯಟ್ ಆಂಡರ್ಸನ್ ಎಂದು ಜನಪ್ರಿಯವಾಗಿರುವ ಫ್ರೆಂಚ್ ಸೈಬರ್‌ ಸೆಕ್ಯುರಿಟಿ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್, ’ಕೂ’ ಅಪ್ಲಿಕೇಷನ್‌ನಲ್ಲಿ  ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತದೆ ಎಂದು ಕಂಡು ಹಿಡಿದಿದ್ದಾರೆ. ಬ್ಯಾಪ್ಟಿಸ್ಟ್ ಈ ಹಿಂದೆ ಆಧಾರ್ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ಎತ್ತಿ ತೋರಿಸಿದ್ದು, ಇದರ ನಂತರ ಅವರು ಜನಪ್ರಿಯರಾಗಿದ್ದರು. ಇಷ್ಟೇ ಅಲ್ಲದೆ, ಇತರ ತಂತ್ರಜ್ಞಾನಗಳಲ್ಲಿನ ಹಲವಾರು ಭದ್ರತಾ ದೋಷಗಳು ಅವರು ಎತ್ತಿ ತೋರಿಸಿದ್ದರು.

ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ಯ್ರ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಸದಾ ಬದ್ಧ: ಟ್ವಿಟರ್‌ ಬೆಂಬಲಕ್ಕೆ ಅಮೆರಿಕ

ಕಳೆದ ರಾತ್ರಿ ಬ್ಯಾಪ್ಟಿಸ್ಟ್ ಮಾಡಿದ್ದ ಟ್ವೀಟ್‌ನಲ್ಲಿ, “ಹೊಸ ‘ಕೂ’ ಅಪ್ಲಿಕೇಶನ್‌ ಜೊತೆ ನಾನು ಕೇವಲ 30 ನಿಮಿಷ ಕಳೆದೆ. ಈ ಅಪ್ಲಿಕೇಷನ್ ತನ್ನ ಬಳಕೆದಾರರ, ಇಮೇಲ್, ಹುಟ್ಟಿದ ದಿನಾಂಕ, ಹೆಸರು, ಅವರ ವೈವಾಹಿಕ ಮಾಹಿತಿ, ಲಿಂಗ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುತ್ತದೆ. ನೀವು ಕೇಳಿದ್ದರಿಂದ ಇದನ್ನು ಮಾಡಿದ್ದೇನೆ” ಎಂದು ಬರೆದಿದ್ದಾರೆ.

ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳನ್ನು ನೋಡಿದರೆ, ‘ಕೂ’ ಆಪ್‌ ಕೆಲವು ಸೂಕ್ಷ್ಮ ವಿವರಗಳನ್ನು ಸೋರಿಕೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈಗಾಗಲೆ ‘ಕೂ’ ಆಪ್‌ನಲ್ಲಿ ಖಾತೆಗಳನ್ನು ಸೃಷ್ಟಿಸಿರುವ ಭಾರತ ಸರ್ಕಾರದ ಇಲಾಖೆಗಳು, ಮಂತ್ರಿಗಳು ಸೇರಿದಂತೆ ಲಕ್ಷಾಂತರ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿರಬಹುದು ಎನ್ನಲಾಗಿದೆ.

ಬ್ಯಾಪ್ಟಿಸ್ಟ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ‘ಕೂ’ ಸಂಸ್ಥಾಪಕ ಅಪ್ರಮೇಯ, “ಕೂ ಪ್ರೋಫೈಲ್‌ನಲ್ಲಿ ಬಳಕೆದಾರರು ತಾವಾಗಿಯೆ ಈ ಮಾಹಿತಿಯನ್ನು ಬಹಿರಂಗ ಪಡಿಸಿದರಷ್ಟೇ ಅದು ಬಹಿರಂಗವಾಗುತ್ತದೆ” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಬ್ಯಾಷ್ಟಿಸ್ಟ್, ಸೋನಾಲ್ ಗೋಯಲ್ ಎಂಬ ಐಎಎಸ್ ಅಧಿಕಾರಿಯ ‘ಕೂ’ ಫ್ರೋಫೈಲ್‌ ಒಂದರ ಸ್ಕ್ರೀನ್ ಶಾರ್ಟ್ ಹಾಕಿ ಉತ್ತರಿಸಿದ್ದಾರೆ. ಅದರಲ್ಲಿ “ಮೊದಲಿಗೆ ಕಂಡು ಹಿಡಿದ ಫ್ರೋಫೈಲ್ ಇದು.  ಈ ಪ್ರೋಫೈಲ್‌‌ನಲ್ಲಿ ಇವರು ಯಾವುದೆ ಹುಟ್ಟಿದ ದಿನಾಂಕ, ಅವರ ಲಿಂಗ, ಅವರ ವೈವಾಹಿಕ ಸ್ಥಿತಿಯ ಬಗ್ಗೆ ಬಹಿರಂಗಪಡಿಸಿದ್ದಾರೆಯೆ ಎಂದು” ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳ ಡಬಲ್‌ಸ್ಟ್ಯಾಂಡರ್ಡ್‌ ಅನ್ನು ಸಹಿಸಲ್ಲ: ಕೇಂದ್ರ ಸರ್ಕಾರ

 

ಆದರೆ ಬ್ಯಾಪ್ಟಿಸ್ಟ್ ಅವರು ಎತ್ತಿದೆ ಪ್ರಶ್ನೆಗೆ ಕೂ ಸಂಸ್ಥಾಪಕ ಉತ್ತರಿಸದೆ, “ನಾವು ನಮ್ಮ ದೇಶ, ಭಾರತಕ್ಕಾಗಿ ಏನಾದರೂ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಈ ಪ್ರಯಾಣದಲ್ಲಿ ನೀವು ಸಹಾಯ ಮಾಡಲು ಬಯಸಿದರೆ ದಯವಿಟ್ಟು ನನಗೆ ಪತ್ರ ಬರೆಯಿರಿ. ನಿಮ್ಮ ಎಲ್ಲಾ ಪ್ರತಿಕ್ರಿಯೆಯನ್ನು ನಾವು ನೋಡುತ್ತೇವೆ” ಎಂದು ಹೇಳಿದ್ದಾರೆ. ಅಪ್ರಮೇಯ ಅವರ ಈ ಉತ್ತರಕ್ಕೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

 

ರೈತರ ಹೋರಾಟದ ಬಗ್ಗೆ ಟ್ವೀಟ್ ಮಾಡುವ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ ನಿರಾಕರಿಸಿದ ನಂತರ, ಕೇಂದ್ರ ಸರ್ಕಾರ ಸೇರಿದಂತೆ ಲಕ್ಷಾಂತರ ಜನರು ‘ಕೂ’ ಅಪ್ಲಿಕೇಶನ್‌‌‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಪ್ರಸ್ತುತ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಗಳ ಹ್ಯಾಂಡಲ್‌ಗಳನ್ನು ‘ಕೂ’ ವೇರಿಫೈ ಮಾಡಿದೆ. ನಾನು ಈಗ ‘ಕೂ’ ಆಪ್‌‌ನಲ್ಲಿದ್ದೇನೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್‌ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರೈತರನ್ನು ಬೆಂಬಲಿಸುವ ಖಲಿಸ್ತಾನಿ-ಪಾಕಿಸ್ತಾನಿ ಟ್ವಿಟ್ಟರ್‌ ಖಾತೆಗಳನ್ನು ಕಿತ್ತುಹಾಕಿ: ಟ್ವಿಟರ್‌ಗೆ ಕೇಂದ್ರ ತಾಕೀತು

‘ಕೂ’ ಆಪ್‌ನಲ್ಲಿನ ದೋಷವನ್ನು ಬ್ಯಾಪ್ಟಿಸ್ಟ್ ಮಾತ್ರವಲ್ಲದೆ ಬೇರೊಬ್ಬರೂ ಕಂಡು ಹಿಡಿದಿದ್ದಾರೆ. ಪ್ರಣವ್ ಎಂಬವರು, ಈ ಆಪ್‌ನಲ್ಲಿ ತಾನು ಯಾವುದೆ ಖಾತೆಯನ್ನು ಮಾಡದೆ ಪೋಸ್ಟ್‌ ಮಾಡಿದೆ ಎಂದು ಹೇಳಿದ್ದಾರೆ.

 

 

 

ಚೀನೀ ಸಂಪರ್ಕ?

ಬ್ಯಾಪ್ಟಿಸ್ಟ್ ‘ಕೂ’ ಆಪ್‌ಗೆ ಚೀನಾ ಸಂಪರ್ಕವಿದೆ ಎಂಬ ಟ್ವೀಟ್ ಅನ್ನು ಕೂಡಾ ಹಂಚಿಕೊಂಡಿದ್ದಾರೆ. ಆದರೆ ಅದು ಅಷ್ಟೊಂದು ನಿಖರವಾಗಿಲ್ಲ ಎನ್ನಲಾಗಿದೆ. ‘ಕೂಆಪ್‌.ಕಾಮ್’ ಡೊಮೇನ್‌‌‌ ಅನ್ನು ನಾಲ್ಕು ವರ್ಷಗಳ ಹಿಂದೆ ರಚಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಇದರ ಮಾಲಿಕತ್ವ ಹಲವು ಬಾರಿ ಬದಲಾಗಿದೆ ಎಂದು ಈ ದಾಖಲೆ ತಿಳಿಸುತ್ತದೆ. ಅದರ ಇತ್ತೀಚೆನ ಮಾಲಿಕರು ಬಾಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಆಗಿದೆಯಾದರೂ, ಅದು ಅದನ್ನು 2019 ರಲ್ಲಷ್ಟೇ ಸ್ವಾಧೀನ ಪಡಿಸಿಕೊಂಡಿದೆ.

ಆದರೆ ಕೂ ಅಪ್ಲಿಕೇಶನ್‌ನಲ್ಲಿ ಚೀನೀ ಹೂಡಿಕೆ ಇದ್ದು, ಚೀನಾ ಮೂಲದ ಶಿಯೋಮಿ ಕಂಪೆನಿಯೊಂದಿಗೆ ಸಂಬಂಧವಿರುವ ಶುನ್‌ವೇಯು ಇದರಲ್ಲಿ ಹಣವನ್ನು ಹೂಡಿಕೆ ಮಾಡಿದೆ. ಆದರೆ ಕೂವನ್ನು ಸಂಪೂರ್ಣ ಸ್ವದೇಶಿ ಅಪ್ಲಿಕೇಶನ್ ಮಾಡುತ್ತಿದ್ದು ಅಲ್ಪ ಪಾಲಷ್ಟೆ ಶುನ್‌ವೆ ಅವರಲ್ಲಿದೆ, ಅವರು ಅದನ್ನು ಶೀಘ್ರದಲ್ಲೇ ಮಾರಾಟ ಮಾಡಲಿದ್ದಾರೆ ಎಂದು ‘ಕೂ’ ಸಿಇಒ ಅಪ್ರಮೇಯ ಹೇಳಿದ್ದಾರೆ.

ಇದನ್ನೂ ಓದಿ: ‘ರೈತರ ನರಮೇಧ ನಡೆಸುತ್ತಿರುವ ಮೋದಿ’ – ಟ್ವಿಟರ್‌ನಲ್ಲಿ ಭುಗಿಲೆದ್ದ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನನ್ನಲ್ಲಿ ಇತ್ತು.
    ಅದು ಒಂದು ಪಕ್ಷದ ಪರವಾಗಿದೆ ಎಂದು ಅಲ್ಲಿಂದ ವರ್ಷಗಳ ಹಿಂದೆ ತೊರೆದಿದ್ದೇನೆ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...