ಅಕ್ಟೋಬರ್ 7ರ ದಾಳಿಯಲ್ಲಿ ಗಾಜಾಕ್ಕೆ ಕರೆದೊಯ್ದ ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಭವಿಷ್ಯದ ಕುರಿತು ಕಳವಳವನ್ನು ವ್ಯಕ್ತಪಡಿಸಿವೆ. ಏಕೆಂದರೆ ಈ ಒತ್ತೆಯಾಳುಗಳಲ್ಲಿ ಎಷ್ಟು ಜನರು ಇನ್ನೂ ಜೀವಂತವಾಗಿದ್ದಾರೆ ಎಂಬ ಅನುಮಾನಗಳು ಅವರಲ್ಲಿ ಬೆಳೆಯುತ್ತಿವೆ.
ಒತ್ತೆಯಾಳುಗಳು “ಪ್ರತಿದಿನ” ಅಪಾಯದಲ್ಲಿದ್ದಾರೆ ಎಂದು ಒಂದು ಕುಟುಂಬ ಹೇಳಿದೆ. ಈ ವಾರ ಜೀವಂತವಾಗಿದ್ದಾರೆಂದು ನಂಬಲಾಗಿದ್ದ 24 ಒತ್ತೆಯಾಳುಗಳಲ್ಲಿ ಮೂವರ ಸ್ಥಿತಿಯ ಬಗ್ಗೆ “ಅನಿಶ್ಚಿತತೆ” ಇದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ನೇತೃತ್ವದ ದಾಳಿಯಲ್ಲಿ ಸೆರೆಹಿಡಿಯಲ್ಪಟ್ಟವರಲ್ಲಿ ಕೇವಲ 21 ಜನರು ಮಾತ್ರ ಇನ್ನೂ ಜೀವಂತವಾಗಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂಗಳವಾರದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಗಾಜಾದಲ್ಲಿ ವಿಸ್ತೃತ ದಾಳಿಯನ್ನು ಅನುಮೋದಿಸಿದ ನಂತರ ಈ ವರ್ಷ ಹಮಾಸ್‌ನಿಂದ ಬಿಡುಗಡೆಯಾದ ಒತ್ತೆಯಾಳುವಿನ ಸಹೋದರ ಸೇರಿದಂತೆ ಎರಡು ಕುಟುಂಬಗಳೊಂದಿಗೆ ‘ಬಿಬಿಸಿ’ ಸುದ್ದಿ ಸಂಸ್ಥೆ ಮಾತನಾಡಿತು. ಹಮಾಸ್ ಅನ್ನು ನಾಶಮಾಡಲು ಮತ್ತು ಒತ್ತೆಯಾಳುಗಳನ್ನು ರಕ್ಷಿಸಲು ಇಸ್ರೇಲ್ ಸಂಪುಟವು ಗಾಜಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವ “ಬಲವಂತದ ಕಾರ್ಯಾಚರಣೆ”ಗೆ ನಿರ್ಧರಿಸಿದೆ ಮತ್ತು ಗಾಜಾದ 2.1 ಮಿಲಿಯನ್ ಜನರ ರಕ್ಷಣೆಗಾಗಿ ಅವರನ್ನು ಸ್ಥಳಾಂತರಿಸಲಾಗುವುದು ಎಂದು ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸುವ ಉದ್ದೇಶದಿಂದ ಮಾತ್ರ ಸಹಾಯ ಮಾಡಲು ಸೈನಿಕ ಪಡೆಗಳನ್ನು ಬಳಸಲಾಗುತ್ತಿದೆ ಎಂದು ಒಂದು ಕುಟುಂಬ ಬಿಬಿಸಿಗೆ ತಿಳಿಸಿದೆ.
ಲಿರಾನ್ ಬೆರ್ಮನ್ ಅವರ ಅವಳಿ ಸಹೋದರರಾದ ಗಾಲಿ ಮತ್ತು ಜಿವ್ ಅವರನ್ನು ಅಕ್ಟೋಬರ್ 7, 2023ರಂದು ಕಿಬ್ಬುಟ್ಜ್ ಕ್ಫರ್ ಅಜಾದಲ್ಲಿರುವ ಅವರ ಮನೆಯಿಂದ ಅಪಹರಿಸಿದ ನಂತರ ಅವರನ್ನು 19 ತಿಂಗಳಿನಿಂದ ಇನ್ನೂ ಹಮಾಸ್ ಬಂಧನದಲ್ಲಿದ್ದಾರೆ. ಆ ದಿನ ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಸುಮಾರು 1,200 ಜನರನ್ನು ಕೊಂದಿದ್ದರು. ಆದರೆ ಒತ್ತೆಯಾಳುಗಳಾಗಿರಿಸಲ್ಪಟ್ಟ 251 ಇತರರಲ್ಲಿ ಗಾಲಿ ಮತ್ತು ಜಿವ್ ಸೇರಿದ್ದಾರೆ. ನಂತರದ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಪ್ಯಾಲೇಸ್ತೀನಿನ 52,780ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ಮಾರ್ಚ್ 2ರಿಂದ ಇಸ್ರೇಲ್ ಪ್ಯಾಲೇಸ್ತೀನಿಗೆ ಎಲ್ಲಾ ನೆರವು ಮತ್ತು ಇತರ ಸರಬರಾಜುಗಳನ್ನು ಕಡಿತಗೊಳಿಸಿದೆ ಮತ್ತು ಎರಡು ತಿಂಗಳ ಕದನ ವಿರಾಮವನ್ನು ಮುರಿದ ನಂತರ ಎರಡು ವಾರಗಳ ನಂತರ ತನ್ನ ದಾಳಿಯನ್ನು ಪುನರಾರಂಭಿಸಿತು. ಇದಕ್ಕೂ ಮೊದಲು ಇಸ್ರೇಲಿ ಜೈಲುಗಳಲ್ಲಿದ್ದ ಸುಮಾರು 1,900 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಐದು ಥಾಯ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು.

ಹಮಾಸ್ ಈ ತಕ್ಷಣವೇ ಹೊಸ ಕದನವಿರಾಮಕ್ಕೆ ಒಪ್ಪಿಕೊಂಡು ಉಳಿದ ಈ 24 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಗಾಜಾದಲ್ಲಿ ಸಾವಿರಾರು ಸೈನಿಕರನ್ನು ಬಳಸಿಕೊಂಡು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಲಿರಾನ್ ಬೆರ್ಮನ್ ಬಿಬಿಸಿ ನ್ಯೂಸ್‌ಗೆ ಹೇಳಿದರು. “ಹಮಾಸ್ ಮೇಲೆ ಒತ್ತಡ ಹೇರಲು ಇಸ್ರೇಲ್ ಪಡೆಗಳನ್ನು ಕಳುಹಿಸುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ತಮ್ಮ 27 ವರ್ಷದ ತನ್ನ ಸಹೋದರರು “ಪ್ರತಿದಿನ ಅಪಾಯದಲ್ಲಿದ್ದಾರೆ. ಅವರು ಜೀವಂತವಾಗಿದ್ದಾರೆಂದು ನಮಗೆ ತಿಳಿದಿದೆ. ಬಿಡುಗಡೆಯಾದ ಒತ್ತೆಯಾಳುಗಳು ಅವರನ್ನು ನೋಡಿದ್ದಾರೆ ಎಂದು ಬೆರ್ಮನ್ ಹೇಳಿದರು.
ಗಾಲಿ ಮತ್ತು ಜಿವ್ ಅವರನ್ನು ಬಂಧಿಸಿದಾಗ ಅವರು ಗಾಯಗೊಂಡಿದ್ದರು ಎಂದು ಅವರು ನಂಬಿದ್ದರು. ಆದರೆ ಇಷ್ಟು ದಿನ ಸೆರೆಯಲ್ಲಿದ್ದಾರೆಂದರೆ ಅವರು ಅಷ್ಟು ಗಾಯಗೊಂಡಿರಲಿಲ್ಲವೆನಿಸುತ್ತದೆ. ಇಷ್ಟು ದಿನದ ಒತ್ತೆಸೆರೆಯಿಂದಾಗಿ ಅವರ ಮಾನಸಿಕ ಸ್ಥಿತಿ “ಉತ್ತಮವಾಗಿಲ್ಲ ಎಂದು ತಾವು ಚಿಂತಿತರಾಗಿದ್ದೇವೆಂದು ಅವರು ಹೇಳಿದರು. ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಕೃಶ ಮತ್ತು ದುರ್ಬಲ ಒತ್ತೆಯಾಳುಗಳ ಬಿಡುಗಡೆಯೊಂದಿಗೆ ತಮ್ಮ ಸಹೋದರರ ಸ್ಥಿತಿಯ ಬಗ್ಗೆ ಚಿಂತಿತರಾಗಿರಾಗಿದ್ದೇವೆಂದು ಬೆರ್ಮನ್ ಹೇಳಿದರು.
ನಾವು ಹಮಾಸ್ ಮತ್ತು ಅದರ ಬೆಂಬಲಿಗರ ಮೇಲೆ ಒತ್ತಡ ಹೇರಬೇಕಾಗಿದೆ. ಅಕ್ಟೋಬರ್ 7 ರಂದು ನೋವಾ ಸಂಗೀತ ಉತ್ಸವದ ಮೇಲಿನ ದಾಳಿಯಿಂದ ಓರ್ ಲೆವಿ ಅವರ ಪತ್ನಿ ಐನಾವ್ ಬದುಕುಳಿದಿದ್ದಾರೆಯೇ ಎಂದು ತಿಳಿಯದೆ 491 ದಿನಗಳ ಕಾಲ ಹಮಾಸ್ ಅವರನ್ನು ಬಂಧಿಸಿತ್ತು. ಅವಳು ಬದುಕಲಿಲ್ಲ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಅವರ ಮೂರು ವರ್ಷದ ಮಗ ಅಲ್ಮೋಗ್ ಇಬ್ಬರೂ ಪೋಷಕರು ಇಲ್ಲದೆ ಇದ್ದನು. ಫೆಬ್ರವರಿಯಲ್ಲಿ ಸಣಕಲು ದೇಹದ ಓರ್ ಲೆವಿಯನ್ನು ಹಮಾಸ್ ಬಿಡುಗಡೆ ಮಾಡಿತು. ಇಸ್ರೇಲ್ ಗಾಜಾಗೆ ಹೆಚ್ಚಿನ ಸೈನಿಕರನ್ನು ಕಳುಹಿಸಿದರೆ ಒತ್ತೆಯಾಳುಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಅವರ ಸಹೋದರ ಮೈಕೆಲ್ ಲೆವಿ ಬಿಬಿಸಿ ನ್ಯೂಸ್‌ಗೆ ತಿಳಿಸಿದರು.
ಇದು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ಆಗ ಹಮಾಸ್ ಇವರನ್ನು ಏನಾದರೂ ಮಾಡಲು ನಿರ್ಧರಿಸಬಹುದು ಎಂದು ಅವರು ಹೇಳಿದರು. “ಸೇನೆಯು ತಾನು ಏನು ಮಾಡುತ್ತಿದೆ ಎಂದು ತಿಳಿದಿದೆ ಮತ್ತು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರದಂತೆ ಅವರು ಖಚಿತಪಡಿಸಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ, ಆದರೆ ಇದು ಯಾವಾಗಲೂ ಕಳವಳಕಾರಿಯಾಗಿದೆ ಎಂದು ಮೈಕೆಲ್ ಲೆವಿ ಹೇಳಿದರು. ಆದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಒತ್ತಡ ಹೇರಬೇಕೆಂದು ಅವರು ಅಭಿಪ್ರಾಯಿಸಿದರು.
ಮಾನವೀಯತೆಯ ವಿರುದ್ಧ ಅಪರಾಧವಿದೆ ಮತ್ತು ಅಧ್ಯಕ್ಷ ಟ್ರಂಪ್ ಸೇರಿದಂತೆ ಎಲ್ಲರೂ ಅವರನ್ನು ಮರಳಿ ಕರೆತರಲು ಹೆಚ್ಚಿನದನ್ನು ಮಾಡಬೇಕಾಗಿದೆ. ಗಾಜಾದಲ್ಲಿ ಹಮಾಸ್‌ನ ಭೂಗತ ಸುರಂಗಗಳಲ್ಲಿ ಒತ್ತೆಯಾಳುಗಳಾಗಿದ್ದಾಗ ತನ್ನ ಸಹೋದರನಿಗೆ ಸಾಕಷ್ಟು ಆಹಾರ ಸಿಗಲಿಲ್ಲ ಮತ್ತು ಸೂರ್ಯನ ಬೆಳಕನ್ನು ನೋಡಲಾಗಲಿಲ್ಲ. ಅವರು ಪ್ರತಿ ಎರಡು ತಿಂಗಳಿಗೊಮ್ಮೆ ಸ್ನಾನ ಮಾಡಿದರು ಎಂದು ಅವರು ಹೇಳಿದರು.
ಉಳಿದ ಒತ್ತೆಯಾಳುಗಳು ಸೆರೆಯಲ್ಲಿ ಸಾಯುತ್ತಾರೆ ಎಂಬ ಅಂಶದ ಕುರಿತು ನನ್ನ ಸಹೋದರ ಚಿಂತೆ ಮಾಡುತ್ತಾನೆ ಏಕೆಂದರೆ ಅದು ಅವನ ಭಯವಾಗಿದೆ. ಅಕ್ಟೋಬರ್ 7ರಂದು ಒತ್ತೆಯಾಳಾಗಿರಿಸಲ್ಪಟ್ಟ 251 ಜನರಲ್ಲಿ ಕೆಲವರು ಸೇರಿದಂತೆ ಈ ದಾಳಿಗೆ ಸುಮಾರು ಒಂದು ದಶಕದ ಮೊದಲು ಹಮಾಸ್ ವಶಪಡಿಸಿಕೊಂಡಿದ್ದ ಇತರ ನಾಲ್ವರು ಬಂಧಿತರು ಸೇರಿ 59 ಜನರು ಈಗ ಗಾಜಾದಲ್ಲಿಯೇ ಇದ್ದಾರೆ. ಇಸ್ರೇಲ್ ಸರ್ಕಾರವು 35 ಜನರ ಸಾವನ್ನು ಸಾರ್ವಜನಿಕವಾಗಿ ದೃಢಪಡಿಸಿದೆ, 24 ಜನರು ಮಾತ್ರ ಒತ್ತೆಯಾಳುಗಳಾಗಿ ಇರುವುದಾಗಿ ಹೇಳಿದೆ. ಅವರಲ್ಲಿ ಮೂವರ ಭವಿಷ್ಯದ ಬಗ್ಗೆ ಈಗ ಅನಿಶ್ಚಿತತೆ ಇದೆ ಎಂದಿದೆ.
ಏಪ್ರಿಲ್‌ನಲ್ಲಿ 48 ವರ್ಷ ತುಂಬಿದ ಓಮ್ರಿ ಮಿರಾನ್ ಹೊರತುಪಡಿಸಿ ಜೀವಂತ ಒತ್ತೆಯಾಳುಗಳು 20 ಅಥವಾ 30ರ ಹರೆಯದ ಪುರುಷರಾಗಿದ್ದಾರೆ. ಇಸ್ರೇಲ್ ದೃಢಪಡಿಸಿದ 35 ಜನರ ಮೃತದೇಹಗಳನ್ನು ಗಾಜಾದಲ್ಲಿ ಇರಿಸಲಾಗಿದ್ದು, ಬಹುತೇಕ ಎಲ್ಲರೂ 19ರಿಂದ 86 ವರ್ಷ ವಯಸ್ಸಿನ ಪುರುಷರಾಗಿದ್ದು, ಮೂವರು ಮಾತ್ರ ಮಹಿಳೆಯರು ಎಂದು ಹೇಳಿದೆ.
‘ದಿನಕ್ಕೆ ಒಂದು ಬ್ರೆಡ್’
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾದಾಗಿನಿಂದ, ಮಾಜಿ ಒತ್ತೆಯಾಳುಗಳು ಈಗ ಮಾಧ್ಯಮಗಳು ಮತ್ತು ಇತರರೊಂದಿಗೆ ತಮ್ಮ ಹಮಾಸ್ ನೊಂದಿಗಿನ ಸೆರೆವಾಸದ ಸಮಯದ ಬಗ್ಗೆ ಮಾತನಾಡುತ್ತಿದ್ದಾರೆ. 505 ದಿನಗಳ ನಂತರ ಫೆಬ್ರವರಿಯಲ್ಲಿ ಬಿಡುಗಡೆಯಾದ 49 ವರ್ಷದ ತಾಲ್ ಶೋಹಮ್ ಕಳೆದ ತಿಂಗಳು ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, “ಇಡೀ ದಿನಕ್ಕೆ ನಾವು ಒಂದೇ ಒಂದು ಪಿಟಾ ಬ್ರೆಡ್ ಅನ್ನು ಪಡೆದಿದ್ದೇವೆ. ಹಸಿವಿನಿಂದ ಆಘಾತಕ್ಕೊಳಗಾಗಿ, ನಾವು ಒಂದರ ನಂತರ ಒಂದರಂತೆ ತುಂಡುಗಳನ್ನು ಸಂಗ್ರಹಿಸಿದ್ದೇವೆ” ಎಂದಿದ್ದಾರೆ.
505 ದಿನಗಳ ಕಾಲ ಬಂಧನದಲ್ಲಿದ್ದ 28 ವರ್ಷದ ಎಲಿಯಾ ಕೊಹೆನ್, ಇಸ್ರೇಲ್‌ನ ಚಾನೆಲ್ 12ಗೆ ಮಾತನಾಡಿ, ವಾರಕ್ಕೊಮ್ಮೆ ಹಮಾಸ್ ಬಂದೂಕುಧಾರಿಗಳು ತನ್ನ ಮತ್ತು ಇತರ ಒತ್ತೆಯಾಳುಗಳಿಂದ ತಮ್ಮ ಎಲ್ಲಾ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದರು ಮತ್ತು ಅವರು ತಮಗೆ ಹೀಗೆ ಹೇಳುತ್ತಿದ್ದರು: “ನೀವು ಸಾಕಷ್ಟು ತೆಳ್ಳಗಿಲ್ಲ… ನಾನು ಆಹಾರವನ್ನು ಇನ್ನಷ್ಟು ಕಡಿತಗೊಳಿಸುವ ಕುರಿತು ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ನವೆಂಬರ್ 2023ರಲ್ಲಿ ಮತ್ತೊಂದು ಕದನ ವಿರಾಮದ ಸಮಯದಲ್ಲಿ ಇಲಾನಾ ಗ್ರಿಟ್ಜೆವ್ಸ್ಕಿಯನ್ನು ಬಿಡುಗಡೆ ಮಾಡಲಾಯಿತು. ಅವರ ಜೊತೆಗಿದ್ದ ಮತನ್ ಜಂಗೌಕರ್ ಇನ್ನೂ ಒತ್ತೆಯಾಳು ಆಗಿದ್ದಾರೆ. 31 ವರ್ಷದ ಮಹಿಳೆ ಮಾರ್ಚ್‌ನಲ್ಲಿ ತನ್ನ ಮನೆಯಿಂದ ಅಪಹರಿಸಲ್ಪಟ್ಟಾಗ ಅಪಹರಣಕಾರರಲ್ಲಿ ಒಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿದ್ದರು. ಗಾಜಾದಲ್ಲಿಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಹೇಳಿದ್ದಾಗಿ ಲೇಖನ ಹೇಳುತ್ತದೆ.
ನೋವಾ ಸಂಗೀತ ಉತ್ಸವದಿಂದ ಸೌಂಡ್ ಎಂಜಿನಿಯರ್ ರಾನ್ ಕ್ರಿವೊಯ್ ಅವರನ್ನು ಅಪಹರಿಸಲಾಯಿತು.
ಕಳೆದ ತಿಂಗಳು ಅವರು ದಿ ಟೈಮ್ಸ್ ಆಫ್ ಇಸ್ರೇಲ್ ಚಾನೆಲ್ 12ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹಮಾಸ್ ನಿರ್ಮಿಸಿದ ಸುರಂಗಗಳ ಕುರಿತು ವಿವರಿಸಿದ್ದರು. ನಾವು ತುಂಬಾ ಚಿಕ್ಕ ಪಂಜರದೊಳಗೆ ಇದ್ದೆವು ಮತ್ತು ನಾವು ಅದರಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕಾಗಿತ್ತು. ನಮಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಸುರಂಗವು ಎತ್ತರವಿರಲಿಲ್ಲ, ಅಲ್ಲಿ ಶೌಚಾಲಯವಿಲ್ಲ, ಆಹಾರವಿರಲಿಲ್ಲ. ಅಲ್ಲಿ ನಾವು ಐದು ಜನ ಒತ್ತೆಯಾಳಾಗಿದ್ದೆವು” ಎಂದಿದ್ದಾರೆ.


