Homeಮುಖಪುಟರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು

ರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು

- Advertisement -
- Advertisement -

ಇಸ್ರೇಲಿ ಪಡೆಗಳು ರಫಾದಲ್ಲಿ ವಿನ್ಯಾಸಗೊಳಿಸಲಾದ ಸುರಕ್ಷಿತ ವಲಯದಲ್ಲಿ ಸ್ಥಳಾಂತರಗೊಂಡ ಜನರು ವಾಸಿಸುವ ಟೆಂಟ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 40 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಅಲ್‌ ಜಝೀರಾ ವರದಿ ಮಾಡಿದೆ.

ಪ್ಯಾಲೆಸ್ತೀನ್ ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಪಡೆಗಳು ತಾಲ್ ಅಸ್-ಸುಲ್ತಾನ್, ಜಬಾಲಿಯಾ, ನುಸೆರಾತ್ ಮತ್ತು ಗಾಜಾ ನಗರ ಸೇರಿದಂತೆ ಹಲವೆಡೆ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯರ ಆಶ್ರಯಗಳ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲಿ ಸೇನೆಯು ದಾಳಿಯನ್ನು ದೃಢಪಡಿಸಿದ್ದು, ಹಮಾಸ್ ಅನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಈ ವೇಳೆ ಬೆಂಕಿಯಿಂದ ನಾಗರಿಕರು ಗಾಯಗೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದೆ.

ಅಕ್ಟೋಬರ್ 7,2023ರಿಂದ ಗಾಝಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣದಲ್ಲಿ ಇದುವರೆಗೆ ಸುಮಾರು 35,984 ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ ಮತ್ತು 80,643 ಜನರು ಗಾಯಗೊಂಡಿದ್ದಾರೆ.

ಗಾಝಾದ ಇತರ ಭಾಗಗಳಲ್ಲಿ ಇಸ್ರೇಲ್ ನಿರಂತರ ದಾಳಿ ನಡೆಸಿ ನರಕ ಮಾಡಿದೆ. ಜೀವ ಉಳಿಸಿಕೊಂಡ ಲಕ್ಷಾಂತರ ಜನರು ರಫಾದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಇಸ್ರೇಲ್ ಈ ಪ್ರದೇಶವನ್ನೂ ಗುರಿಯಾಗಿಸಿದ್ದು, ಹಮಾಸ್ ಮೇಲೆ ದಾಳಿ ಮಾಡುವ ನೆಪದಲ್ಲಿ ಅಮಾಯಕ ನಾಗರಿಕರನ್ನು ಕೊಲ್ಲುತ್ತಿದೆ.

ಇಸ್ರೇಲ್‌ನ ನಿರಂತರ ದಾಳಿ ಮತ್ತು ಮಾನವೀಯ ನೆರವಿಗೆ ಅಡ್ಡಿ ಮಾಡಿದ ಕಾರಣ, ಜನರು ಆಹಾರ, ನೀರು ಹುಡುಕಲು ತಿಂಗಳುಗಳ ಕಾಲ ಪರದಾಡಿದರು. ಈಗ ರಫಾದಲ್ಲಿ ಟೆಂಟ್ ನಿರ್ಮಿಸಿ ಕೊಂಚ ನಿಟ್ಟುಸಿರುವ ಬಿಡುವ ಹೊತ್ತಿಗೆ ಇಸ್ರೇಲ್ ಅತ್ಯಂತ ಸುಡುವ ವಸ್ತುಗಳಿಂದ ರಫಾದ ಮೇಲೆ ದಾಳಿ ನಡೆಸಿದೆ ಎಂದು ಪ್ಯಾಲೆಸ್ತೀನಿಯನ್ ರಾಜಕೀಯ ವಿಶ್ಲೇಷಕ ಮತ್ತು ನಿರೂಪಕ ನೂರ್ ಒಡೆಹ್ ಅಲ್ ಜಝೀರಾಗೆ ಹೇಳಿದ್ದಾರೆ.

ಗಾಝಾದ ಜನತೆಗೆ ಜೀವ ಉಳಿಸಿಕೊಳ್ಳಲು ಇನ್ನು ಯಾವುದೇ ಜಾಗವಿಲ್ಲ, ಯಾವುದೇ ಆಸ್ಪತ್ರೆ ಸೌಲಭ್ಯಗಳಿಲ್ಲ ಎಂದು ಇಸ್ರೇಲ್‌ಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯುಎಸ್ ಏನು ಹೇಳುತ್ತದೆ ಎಂದು ನೋಡಬೇಕು ಎಂದಿರುವ ಒಡೆಹ್, ಶಸ್ತ್ರಾಸ್ತ್ರ ಮತ್ತು ಆರ್ಥಿಕ ನಿರ್ಬಂಧ ಸೇರಿದಂತೆ ಹಣಕಾಸಿನ ಪರಿಣಾಮಗಳು ಮಾತ್ರ ಇಸ್ರೇಲಿ ದಾಳಿಯನ್ನು ಕೊನೆಗೊಳಿಸುವ ಏಕೈಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...

ವಾರಣಾಸಿಯಲ್ಲಿ ಆಚರಿಸುವ ಪ್ರಸಿದ್ಧ ‘ಭಸ್ಮ ಹೋಳಿ’ಗೆ ಸಂಸ್ಕೃತ ವಿದ್ವಾಂಸರು ಮತ್ತು ಕಾಶಿ ವಿದ್ವತ್ ಪರಿಷತ್ ವಿರೋಧ 

ವಾರಣಾಸಿ (ಉತ್ತರ ಪ್ರದೇಶ): ನಗರದ ಸ್ಮಶಾನ ಭೂಮಿಗಳಾದ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳಲ್ಲಿ 'ಮಸಾನೆ ಕಿ ಹೋ ಲಿ ' ನುಡಿಸುವ ಸಂಪ್ರದಾಯವನ್ನು ಸಂಸ್ಕೃತ ವಿದ್ವಾಂಸರು ಮತ್ತು ಹಿಂದೂ ಧರ್ಮಗ್ರಂಥಗಳ ತಜ್ಞರ ಪರಿಷತ್ತು...

ಮುಸ್ಲಿಮರೆಂದು ತಿಳಿದು ಮಹಿಳೆಯರಿಗೆ ವಿತರಿಸಿದ್ದ ಕಂಬಳಿ ವಾಪಸ್ ಪಡೆದ ಬಿಜೆಪಿ ಮಾಜಿ ಸಂಸದ

ಬಿಜೆಪಿಯ ಮಾಜಿ ಸಂಸದ ಸುಖ್‌ವೀರ್ ಸಿಂಗ್ ಜೌನ್‌ಪುರಿಯಾ ಅವರು, ಮುಸ್ಲಿಮರೆಂದು ಗೊತ್ತಾದ ಬಳಿಕ ಮಹಿಳೆಯರಿಗೆ ವಿತರಿಸಿದ್ದ ಕಂಬಳಿಯನ್ನು ವಾಪಸ್ ಪಡೆದಿದ್ದಾರೆ ಎಂದು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕರಾಮ್ ಜುಲ್ಲಿ ಭಾನುವಾರ...

ಜೆಎನ್‌ಯು: ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಮತ್ತು ಎಬಿವಿಪಿ ನಡುವೆ ಘರ್ಷಣೆ: ಉದ್ವಿಗ್ನತೆ  

ಸೋಮವಾರ ಮುಂಜಾನೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿ ಗುಂಪುಗಳು ಪರಸ್ಪರ ಹಿಂಸಾಚಾರವನ್ನು ಬಿಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಆವರಣದಲ್ಲಿ ಉದ್ವಿಗ್ನತೆ ಉಂಟಾಗಿದೆ.  ಸೋಮವಾರ ಬೆಳಗಿನ...

ಡ್ರಗ್ ದೊರೆ ‘ಎಲ್ ಮೆಂಚೊ’ ಹತ್ಯೆ : ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ

'ಎಲ್ ಮೆಂಚೊ' ಎಂದೇ ಪರಿಚಿತನಾಗಿದ್ದ ಡ್ರಗ್ ದೊರೆ ನೆಮೆಸಿಯೊ ಒಸೆಗುಯೆರಾನನ್ನು ಕಾರ್ಯಾಚರಣೆಯೊಂದರಲ್ಲಿ ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ (ಫೆ.22) ಘೋಷಿಸಿದೆ. ಆ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ ಎಂದು...

ನೇಪಾಳ ಬಸ್ ಅಪಘಾತ: ಧಾಡಿಂಗ್‌ನಲ್ಲಿ ತ್ರಿಶೂಲಿ ನದಿಗೆ ಬಸ್ ಬಿದ್ದು 18 ಮಂದಿ ಸಾವು; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಧಾಡಿಂಗ್ (ನೇಪಾಳ): ಸೋಮವಾರ ಮುಂಜಾನೆ ನೇಪಾಳದ ಧಾಡಿಂಗ್‌ನಲ್ಲಿ ಪ್ರಯಾಣಿಕರ ಬಸ್ ತ್ರಿಶೂಲಿ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ 24 ಕ್ಕೂ ಹೆಚ್ಚು ಪ್ರಯಾಣಿಕರು...

ಅಜಿತ್ ಪವಾರ್ ಸಾವು | ಪತನಗೊಂಡ ವಿಮಾನದ ನಿರ್ವಹಣಾ ಸಂಸ್ಥೆಗೂ ಟಿಡಿಪಿಗೂ ನಂಟು : ರೋಹಿತ್ ಪವಾರ್

ಅಜಿತ್ ಪವಾರ್ ಸಾವಿಗೆ ಕಾರಣವಾದ ಪತನಗೊಂಡ ವಿಮಾನದ ನಿರ್ವಾಹಕ ಸಂಸ್ಥೆ ವಿಎಸ್ಆರ್ ವೆಂಚರ್ಸ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಡುವೆ ಸಂಬಂಧವಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣದ)...

ಆಪರೇಷನ್ ಡೆಮಾಲಿಶ್‌ಮೆಂಟ್ ಅಡಿಯಲ್ಲಿ 200ಕ್ಕೂ ಹೆಚ್ಚು ನಕ್ಸಲ್ ಸ್ಮಾರಕಗಳನ್ನು ನೆಲಸಮಗೊಳಿಸಿದ ಭದ್ರತಾ ಪಡೆಗಳು 

ನವದೆಹಲಿ: ನಕ್ಸಲ್ ಚಟುವಟಿಕೆಗಳ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ಪ್ರವೇಶಿಸಿರುವುದಾಗಿ ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಆಪರೇಷನ್ ಡೆಮಾಲಿಶ್‌ಮೆಂಟ್ ಎಂದು ಕರೆಯಲ್ಪಡುವ ಇತ್ತೀಚಿನ ಕಾರ್ಯಾಚರಣೆಯ ಅಡಿಯಲ್ಲಿ ನಕ್ಸಲ್ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ಮರಿಸಲು ಮತ್ತು...

ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ 

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮುಂಬೈ ಮೂಲದ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಕೀಲ ಸೈಯದ್ ಎಜಾಜ್ ಅಬ್ಬಾಸ್ ನಖ್ವಿ ಅವರು ವಕೀಲ...

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...