Homeಥೂತ್ತೇರಿಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

ಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮಿಗಳು ಭಕ್ತರನ್ನು ಮೀರಿಸಿ ಮೋದಿಯವರನ್ನ ಹಿಗ್ಗಾಮುಗ್ಗ ಹೊಗಳಿದ ಒಂದು ಸಾಲನ್ನು ತೆಗೆದು ನಾವು ಟಿಕೀಸಿದ್ದಕ್ಕೆ ಸಿದ್ದೇಶ್ವರ ಸ್ವಾಮಿ ಮಠೋಪಜೀವಿಗಳು ನಮ್ಮನ್ನ ಹಂದಿಗೆ ಹೋಲಿಸಿವೆ. ಇದು ನಮಗೆ ಅವಮಾನಕರವಲ್ಲ, ಯಾಕೆಂದರೆ ಪರಮಾತ್ಮನೆ ಒಮ್ಮೆ ವರಾಹ ಅವತಾರವೆತ್ತಿದ್ದ ಎನ್ನುತ್ತಾರಲ್ಲಾ. ಅಂತಹ ಮಹಾತ್ಮನಿಗೆ ಹೋಲಿಸಿದ್ದು ಸರಿ. ಯಾಕೆಂದರೆ ಹಂದಿಯಿದ್ದರೆ ಕೇರಿ ಚಂದ ಎಂದು ಹಳ್ಳಿಯ ಕಡೆ ಗಾದೆಯಿದೆ. ಕೇರಿ ಸ್ವಚ್ಛ ಮಾಡಲು ಬಂದ ಹಂದಿಯನ್ನ ನೋಡಿ ನಾಯಿಗಳು ಬೊಗಳುತ್ತವೆ, ಅದರಲ್ಲೂ ಮಠೋಪ ಜೀವಿ ಶ್ವಾನಗಳು ದೊಡ್ಡ ಗಂಟಲಲ್ಲಿ ಬೊಗಳುತ್ತವೆ. ಏಕೆಂದರೆ ತಮ್ಮ ದನಿ ಮಠದ ಮಾಲೀಕರಿಗೆ ತಿಳಿಯಬೇಕೆಂಬುದೇ ಅವುಗಳ ಇಂಗಿತವಾಗಿರುತ್ತದೆ. ನಾವು ಕೂಡ ಸಿದ್ದೇಶ್ವರ ಸ್ವಾಮಿಗ: ಅಭಿಮಾನಿಗಳೆ. ಆದರೆ,
ಈಗ ಅಭಿಮಾನಕ್ಕೆ ಕುಂದುಂಟಾಗಿದೆ, ಯಾಕೆಂದರೆ ಸಿದ್ದೇಶ್ವರ ಶ್ರೀಗಳು ಮೋದಿ ಹೊಗಳುವುದರಲ್ಲಿ ಚಕ್ರವರ್ತಿ ಸೂಲಿಬೆಲೆ ಸೈಡ್ ಹೊಡೆದಿದ್ದಾರೆ. ನಮ್ಮ ಮಾತಂತಿರಲಿ. ಕರ್ನಾಟಕದ ಸಾವಿರಾರು ಸ್ವಾಮಿಗಳು ಸಿದ್ದೇಶ್ವರ ಸ್ವಾಮಿ ಮಾತಿಗೆ ದಂಗುಬಡಿದುಹೋಗಿದ್ದಾರೆ. ಏಕೆಂದರೆ ಅವರಾಡಿರುವ ಮಾತು ಹಾಗಿವೆ, “ಮೋದಿ ಅತ್ಯಂತ ಜನಪ್ರಿಯ ಪ್ರಧಾನಿ. ಅವರನ್ನು ನೋಡುವುದೇ ನಮ್ಮ ಸೌಭಾಗ್ಯ. ಅವರು ಬರುತ್ತಾರೆ ಎಂದರೆ ನಿಮಗೆಷ್ಟು ಸಂತೋಷವಾಗಿದೆಯೊ ಅಷ್ಟೇ ಸಂತೋಷ ನಮಗೂ ಆಗಿದೆ. ಇಂತಹ ಬಲ್ಲ ಪ್ರಧಾನಿ ನಮ್ಮ ದೇಶಕ್ಕೆ ದೊರೆತದ್ದು ನಮ್ಮ ಸುದೈವ, ದಿನದ ಎಲ್ಲ ತಾಸುಗಳನ್ನು ಜನರ ಚಿಂತನೆಗೆ ಬಳಸಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿರುವ ಈ ನಮ್ಮ ಪ್ರಧಾನಿಯನ್ನ ಜಗತ್ತೇ ಪ್ರೀತಿಸುತ್ತಿದೆ” ಎಂದರಲ್ಲದೆ, “ಅವರು ಜೇಬನ್ನು ತುಂಬಿಸುವ ಬಗ್ಗೆ ಯೋಚಿಸದೆ ಜನರ ಹೃದಯವನ್ನು ತುಂಬಿದ್ದಾರೆ” ಎಂಬ ಭಾಷಣ ದೇಶದಲ್ಲೇ ದಾಖಲಾಗಿದೆಯಂತಲ್ಲಾ, ಥೂತ್ತೇರಿ.

ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದಂತೆ ಪ್ರಧಾನಿಯ ಜುಬ್ಬಕ್ಕೆ ಜೇಬುಗಳಿದ್ದರೂ ಅವು ಖಾಲಿ ಇರಬಹುದು, ಆದರೆ ಅವರನ್ನು ಪ್ರಧಾನಿ ಮಾಡಿದವರ ಜೇಬು ತುಂಬಿತುಳುಕುತ್ತಿರುವುದು ದಿವ್ಯದೃಷ್ಟಿಯ ಸಿದ್ದೇಶ್ವರರಿಗೆ ಅರಿವಾಗಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ಯಾರವಾನ್ ಪತ್ರಿಕೆ ಮೂವತ್ತು ಪುಟದಲ್ಲಿ ರಫೇಲ್ ಹಗರಣ ಬರೆದ ಲೇಖನವನ್ನು ಸಿದ್ದೇಶ್ವರರು ಓದಬೇಕಿತ್ತು. ಓದದಿರುವುದು ಅಪರಾಧವಲ್ಲ, ಏಕೆಂದರೆ ಎಲ್ಲಾ ಪತ್ರಿಕೆಯನ್ನು ಓದಲಾಗುವುದಿಲ್ಲ. ಜೊತೆಗೆ ಬಿಜೆಪಿಗಳನ್ನ ಹೊಗಳುವ ಬಿಜೆಪಿ ಪತ್ರಿಕೆಗಳನ್ನ ಓದಿದರೆ ಏನೂ ಸಿಗುವುದಿಲ್ಲ. ಆದರೆ ಸಿದ್ದೇಶ್ವರ ಶ್ರೀಗಳು ನಿಂತು ಮಾತನಾಡುತ್ತಿದ್ದ ಜಾಗ ನಲವತ್ತು ಪರಸೆಂಟಿನ ಜಾಗ. ಮೋದಿಯವರದ್ದೇ ಸರಕಾರ ಕರ್ನಾಟಕದಲ್ಲಿದ್ದು ಅದು ಸಿದ್ದರಾಮಯ್ಯನ ಸರಕಾರದ ಕಾಲದಲ್ಲಿದ್ದ ಹತ್ತು ಪರಸೆಂಟು ಕಮಿಷನ್ನನ್ನು ನಲವತ್ತು ಪರಸೆಂಟಿಗೆ ತಲುಪಿ, ಅದನ್ನ ಕೊಡಲಾಗದವನೊಬ್ಬ ಆತ್ಮಹತ್ಯೆಗೆ ಶರಣಾಗಿ, ಬಿಜೆಪಿಯ ದೊಡ್ಡಗಂಟಲ ರಾಜಕಾರಣಿಯೊಬ್ಬ ರಾಜಿನಾಮೆ ನೀಡಿದ್ದು ಪ್ರಧಾನಿಗಾಗಲಿ ಸಿದ್ದೇಶ್ವರರಿಗಾಗಲಿ ಗೊತ್ತಿಲ್ಲದ ಸಂಗತಿಗಳಲ್ಲ. ಸದಾ ಮಠದೂಳಗಿದ್ದು ಮುಂದಿನ ಸಭೆಗೆ ಮನಮುಟ್ಟುವಂತಹ ಭಾಷಣ ತಯಾರಿಸಿಕೊಂಡು ಹೋಗಿ ಜನರನ್ನ ಮರುಳ ಮಾಡುವ ಸಿದ್ದೇಶ್ವರರು ಈ ದೇಶವನ್ನಾಳುವತ್ತಿರುವ ಮೋದಿಯವರ ಆಡಳಿತ ವೈಖರಿಯನ್ನ ಗಮನಿಸಿ ಮಾತನಾಡಬೇಕಿತ್ತು. ಈಗ ಎಲ್ಲರಿಗೂ ತಿಳಿದಿರುವ ಸಂಗತಿಯ ಪ್ರಕಾರ ಬಸವಣ್ಣ ವೈದಿಕ ಧರ್ಮದ ಕಂದಾಚಾರದ ಶೋಷಣೆಯಿಂದ ಸಿಡಿದು ಬಂದು ವಚನ ದೀವಿಗೆ ಕೊಟ್ಟವರು. ಆ ವಚನ ಸಂಪ್ರದಾಯ ಬಂಡಾಯದಿಂದ ಕೂಡಿವೆ. ಆದರೆ ಸಿದ್ದೇಶ್ವರರು ಎಂದೂ ಬಂಡಾಯದ ಮಾತನಾಡಿದವರಲ್ಲ. ಯಥಾಸ್ಥಿತಿಯ ಅನಾವರಣ ಮಾಡಿ ಅನಂದಪಟ್ಟವರು. ಆದ್ದರಿಂದ ಅವರ ಮೋದಿಯ ಅಂಧಾಭಿಮಾನದ ಮಾತುಗಳಿಗೆ ತಲೆಕೆಡಿಸಿಕೊಳ್ಳ ಬೇಡಿರೆಂದು ಸಾಧಾರಣ ಸ್ವಾಮಿಗಳ ಸೂಚನೆಯಾಗಿದೆಯಲ್ಲಾ, ಥೂತ್ತೇರಿ.
ಇದನ್ನೂ ಓದಿ: ಜೈ ಸಿದ್ದೇಶ್ವರ ಸ್ವಾಮಿ

ಕರ್ನಾಟಕದಲ್ಲಿ ಮುಂಗಾರಿನ ದೆಸೆಯಿಂದ ಅತಿವೃಷ್ಟಿ ಸಂಭವಿಸಿದೆ. ಸಮುದ್ರ ಕಡಲನ್ನ ಕೊರೆಯುತ್ತಿದೆ. ಒಮ್ಮೆ ಸಮುದ್ರಕ್ಕೆ ಜಾರಿದ ಮಣ್ಣು ಮರಳಿ ಬರಲಾರದು. ಮಳೆಯಿಂದ ಸಂತ್ರಸ್ತರಾದವರು ಮಳೆ ದೂರುತ್ತಾರೆಯೇ ಹೊರತು ನಮಗ್ಯಾರಾದರೂ ಇದ್ದಾರೆ ಎಂದು ಭಾವಿಸುವುದಿಲ್ಲ. ಇಂತಹ ಭಾವನೆ ಬರಬೇಕಾದರೆ ಆಳುವ ಸರಕಾರ ಸತ್ತು ಹೋಗಿರಬಹುದು. ಸರಕಾರವನ್ನು ಎಚ್ಚರಿಸಿ ಸಂತ್ರಸ್ತರಿಗೆ ಸಹಾಯ ಮಾಡಬಹುದಾದ ನಮ್ಮ ದೃಶ್ಯಮಾಧ್ಯಮಗಳು ಹೆಗಲ ಮೇಲೆ ಕ್ಯಾಮರಾ ಹೊತ್ತು ಪವಿತ್ರ ಲೋಕೇಶ್ ಮತ್ತು ನರೇಶ್ ಯಾವ ಲಾಡ್ಜಿನಲ್ಲಿದ್ದಾರೆ ಎಂದು ಹುಡುಕತೊಡಗಿದರಂತಲ್ಲಾ. ಕಡೆಗೂ ಪವಿತ್ರ ಮತ್ತು ನರೇಶ್ ಮೈಸೂರಿನ ಲಾಡ್ಜ್‌ವೊಂದರಲ್ಲಿ ಇದ್ದದ್ದನ್ನ ಏನೋ ಬಹಳ ವೀಶೆಷವೆಂಬಂತೆ ಇಡೀ ಭಾನುವಾರ ಪ್ರಸಾರ ಮಾಡಿದರಂತಲ್ಲಾ. ಈ ಪೈಕಿ ಪವರ್ ಟಿವಿಯ ಸಂಸ್ಥಾಪಕನೇ ಬಂದು ಕುಳಿತುಕೊಂಡು ಚರ್ಚಿಸಿದ ಕಾರ್ಯಕ್ರಮ ಬಿತ್ತರಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದು ನೋಡಿದರೆ, ಇವರು ತಲುಪಿರುವ ಗಟಾರ ಇನ್ನೆಂತಹದ್ದಿರಬಹುದೆಂದು ನೋಡುಗರೇ ಅಚ್ಚರಿ ಪಡತೊಡಗಿದ್ದಾರಂತಲ್ಲ. ಮೀಡಿಯಾದವರ ಹೊಟ್ಟೆ ತುಂಬಿಸುವ ಕನ್ನಡದ ಜನ ಸುಮ್ಮನಿದ್ದರೆ ಈ ಮೀಡಿಯಾದವರು ಪ್ರತಿಯೊಬ್ಬರ ಖಾಸಗಿ ಕೋಣೆಗೆ ಕ್ಯಾಮರ ಹೊತ್ತು ಬರುವ ದಿನ ದೂರವಿಲ್ಲವಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನುರಿತ ರಾಜಕಾರಣಿ ರಾಜಣ್ಣ ದೇವೇಗೌಡರ ವಿಷಯದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ರಂಜನೆಯೊದಗಿಸಲು ಮಾತನಾಡಿದರೆ ಕಾರ್ಯಕರ್ತರಿಗಿಂತಲೂ, ವಾರಸುದಾರರಿಗೆ ನೋವಾಗುತ್ತದೆ. ಮಾನ್ಯ ದೇವೇಗೌಡರು ಸೊಪ್ಪು ಸಾರು ಮುದ್ದೆ ಅವಲಂಬಿಸಿ ನಿರೋಗಿಗಳಾಗಿ ನೂರರ ಗಡಿಯಕಡೆ ಹೊರಟಿದ್ದಾರೆ. ಇದು ಹೆಮ್ಮೆಯ ಸಂಗತಿ ಇಂತಿರುವಾಗ ದೇವೇಗೌಡರೀಗ ಇಬ್ಬರನ್ನು ಆಶ್ರಯಿಸಿ ನಡೆಯುತ್ತಾರೆ, ಮುಂದೆ ನಾಲ್ಕು ಜನ ಬೇಕಾಗಬಹುದು ಎಂಬುದು ಅನಾಗರಿಕ ಮಾತೆಂದು ಕಾಂಗೈನವರೇ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ದೇವೇಗೌಡರ ಮಗ ಮತ್ತು ಮೊಮ್ಮಗನ ಪ್ರತಿಕ್ರಿಯೆ ಕುತೂಹಲಕಾರಿ. ರಾಜಣ್ಣನ ಮಾತು ಸಿದ್ದರಾಮಯ್ಯನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರೆ, ಪ್ರಜ್ವಲ ರೇವಣ್ಣ ಆ ರಾಜಣ್ಣನಿಗೆ ಜನರೆ ಹುಚ್ಚುನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದುಬಿಟ್ಟಿದ್ದಾರಲ್ಲಾ. ಹೀಗೆ ಪ್ರತಿಕ್ರಿಯಿಸುವ ಮುನ್ನ ದೇವೇಗೌಡರು ಟೀಕಿಸಿದ ಎದುರಾಳಿಗಳಿಗೆ ಹೇಗೆ ಉತ್ತರ ಕೊಡುತ್ತಿದ್ದರು ಎಂಬುದನ್ನು ಮಗ ಮೊಮ್ಮಗ ಗ್ರಹಿಸಬೇಕಿತ್ತು. ಹಿಂದೊಮ್ಮೆ ಪಟೇಲರು ಮತ್ತು ಹೆಗಡೆ ಹಾಸನದಲ್ಲಿ ಸಭೆ ಮಾಡುತ್ತಿದ್ದಾಗ ಕಲ್ಲು ಬೀರಿ ಓಡಿಸಲಾಯ್ತು. ಸಿಟ್ಟುಗೊಂಡ ಪಟೇಲರು “ಈ ದೇವೆಗೌಡ ದಾವಣಗೆರೆಗೆ ಬರ್ಲಿ, ಕಾಲು ಮುರಿದು ಕಳುಸ್ತಿನಿ” ಅಂದರು.

ಅದಕ್ಕೆ ದೇವೇಗೌಡರು “ಪಟೇಲರು ನನ್ನ ಗೆಳೆಯರು, ನನ್ನ ಕಾಲು ಮುರಿದಾಗ ಅವರು ಸುಮ್ಮನಿದ್ದಾರೆಯೇ, ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ” ಎಂದರು. ಅಲ್ಲಿಗೆ ಎಲ್ಲವೂ ಶಮನವಾಯ್ತು. ಹಾಗೆ ನೋಡಿದರೆ ಸೇಡಿನ ಮಾತುಗಳು, ಹಲ್ಲೆ ಮಾತುಗಳು ಈ ಬಿಜೆಪಿಗಳು ಉದ್ಭವಿಸಿದ ಮೇಲೆ ಜಾಸ್ತಿಯಾದವಂತಲ್ಲಾ. ಇದರ ಉದ್ಘಾಟಕರು ಈಶ್ವರಪ್ಪನಾದರೆ ಮುಂದುವರೆಸಿಕೊಂಡು ಹೋಗುತ್ತಿರುವವರ ಪೈಕಿ ಸಿ.ಟಿ ರವಿ, ಪ್ರತಾಪ ಸಿಮ್ಮ, ರೇಣುಕಾಚಾರಿ ಇನ್ನ ಮುಂತಾದವುಗಳಿವೆಯಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...