Homeಅಂಕಣಗಳುಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

- Advertisement -
- Advertisement -

ಸಾಮಾನ್ಯ ಮನುಷ್ಯನೂ ಕೂಡ ಅಸಹ್ಯ ಪಟ್ಟುಕೊಳ್ಳುವುದು ಯಾವುದಕ್ಕೆಂದರೆ ಅನವಶ್ಯಕವಾದ ಭಟ್ಟಂಗಿತನಕ್ಕಂತಲ್ಲಾ. ಅದು ಯಂಗೋ ಏನೋ ಭಟ್ಟಂಗಿಗಳು ಎಡೂರಪ್ಪನನ್ನು ರಾಜಾಹುಲಿ ಎಂದು ಕರೆದುಬಿಟ್ಟವು. ಸೂಕ್ಷ್ಮಜ್ಞರು ಆಲೋಚಿಸಿದಾಗ ಎಡೂರಪ್ಪ ಬರಿ ಹುಲಿಯಷ್ಟೆ; ಏಕೆಂದರೆ ಇಪ್ಪತ್ತಮೂರು ದಿನ ಕಂಬಿ ಹಿಂದೆ ಇದ್ದ ಈ ಹುಲಿ, ಬಿಡುಗಡೆಯ ನಂತರ ಕಾಡಿಗೇ ಕಾಂಪೌಂಡ್ ಹಾಕಿ ದಕ್ಕಿಸಿಕೊಂಡಿತು. ಜೊತೆಗೆ ಪತ್ರಕರ್ತರಿಗೂ ಮನೆ, ಸೈಟು ಮಾಡಿಕೊಟ್ಟಾಗ ಅವರೆಲ್ಲಾ ರಾಜಾಹುಲಿಯೆಂಬ ಬಿರುದು ಬರೆದುಕೊಟ್ಟರು. ಈಗ ರಾಜಾಹುಲಿಯ ಹಲ್ಲು ಮತ್ತು ಉಗುರುಗಳನ್ನ ಬಿಜೆಪಿಗಳು ಕಿತ್ತು ಕೂರಿಸಿವೆ. ಆದರೂ ನಿರಾಶೆಗೊಳ್ಳದೆ ಭಟ್ಟಂಗಿ ಮಾಧ್ಯಮದವರು ಯಡ್ಡಿ ಮಗನನ್ನಾಗಲೇ ಮರಿ ರಾಜಾಹುಲಿ ಎಂದು ನಾಮಕರಣ ಮಾಡಿ, ಸದನವನ್ನು ನಡುಗಿಸಿದ ಮರಿ ರಾಜಾಹುಲಿ ಎಂದು ನರಿಗಳಂತೆ ಊಳಿಟ್ಟಿವೆ. ಈ ಭಟ್ಟಂಗಿಗಳ ಬತ್ತಳಿಕೆಯಲ್ಲಿ ಇನ್ನು ಎಂತೆಂತಹ ಪದಪುಂಜಗಳಿವೆಯೆಂದರೆ, ಶಿಸ್ತಿನ ಪಕ್ಷ ಬಿಜೆಪಿ ಎಂದೇ ಯಾವಾಗಲೂ ನಮೂದಿಸುವ ಇವಕ್ಕೆ ಬಿಜೆಪಿ ಶುದ್ಧ ಅಶಿಸ್ತಿನ ಪಕ್ಷ ಎಂಬುದು ತಿಳಿದೇ ಇಲ್ಲವಂತಲ್ಲ. ಅಲ್ಲದೆ ಬಿಜೆಪಿಗಳನ್ನ ಸಂಬೋಧಿಸಬೇಕಾದರೆ ಕೇಸರಿ ಕಲಿಗಳು, ಕೇಸರಿಪಡೆ ಎನ್ನುತ್ತಿದ್ದ ಇವಕ್ಕೆ ಆ ಕಲಿಗಳು ಕಿಸುಗೊಂಡು ಬಿದ್ದು ಕ್ಷೇತ್ರ ಮರೆತು ಅಲೆಯುತ್ತಿರುವುದೇ ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ವಿಕೃತಭಟ್ಟನ ವಿಕೃತ ಪುಸ್ತಕಗಳನ್ನು ಬಿಡುಗಡೆ ಮಾಡಲು ಹೋಗುವ ಸಿದ್ದರಾಮಯ್ಯನವರ ಬೌದ್ಧಿಕ ಪತನ ಆರಂಭವಾಗಲಿದೆಯಂತಲ್ಲಾ. ಏಕೆಂದರೆ ವಿಕೃತಭಟ್ಟನ ಇತಿಹಾಸವೇ ಹಾಗಿದೆ. ಈತ ಪತ್ರಿಕೆಯಲ್ಲಿ ಸಿದ್ದರಾಮಯ್ಯನ ಉಚ್ಛಾರಣೆ ಆಡಿಕೊಂಡ ದಾಖಲೆಯಿದೆ. ಸಿದ್ದುಗೆ ಶ,ಷ,ಸ,ಗಳ ವ್ಯತ್ಯಾಸ ಗೊತ್ತಿಲ್ಲವೆಂದು ಆಡಿಕೊಂಡ ಉದಾಹರಣೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣಿನ ದ್ವೇಷಿಯಾದ ಈತ ಗೌರಿ ಸಂಘಿಗಳ ಗುಂಡೇಟಿನಿಂದ ಹುತಾತ್ಮಳಾದಾಗ, “ಆಕೆ ಗುಂಡಿಗೆ ಬಲಿಯಾಗದೆ ಗುಂಡುಹಾಕಿ ಬಲಿಯಾಗಿದ್ದರೆ ಸಿಂಗಲ್ ಕಾಲಮ್ಮಿನ ಸುದ್ದಿಯಾಗುತ್ತಿದ್ದಳು” ಎಂದು ಬರೆದ. ಗೌರಿ ಸಿದ್ದು ಅಭಿಮಾನಿಯಾಗಿದ್ದರೆ ವಿಕೃತಭಟ್ಟ ಸಿದ್ದು ವಿರೋಧಿಯಾಗಿದ್ದ. ಗೌರಿ ಹುತಾತ್ಮಳಾದಾಗ ಸರಕಾರಿ ಗೌರವದೊಂದಿಗೆ ಸಂಸ್ಕಾರ ನೆರವೇರಿಸಿದ ಸಿದ್ದು ಆಕೆಗೆ ಗೌರವ ಕೊಡಲೋಸ್ಕರವಾಗಿಯಾದರೂ ವಿಕೃತಭಟ್ಟನ ಪುಸ್ತಕ ಬಿಡುಗಡೆಗೆ ಬಂದಿದ್ದ ಕರೆಯನ್ನು ನಿರಾಕರಿಸಬೇಕಿತ್ತು. ಸಿದ್ದುಗೆ ವಿರೋಧಿಗಳನ್ನ ಒಲಿಸಿಕೊಳ್ಳುವ ತಂತ್ರವಿದಾಗಿರಬಹುದು ಆದರೆ ಭಟ್ಟನ ವಿಷ ಹುಟ್ಟಿನಿಂದಲೇ ಬಂದಿದ್ದು. ಈತ ಹೆಣ್ಣಿನ ಬಗ್ಗೆ ಎಷ್ಟು ವಿಕೃತಿ ಮೆರೆದಿದ್ದಾನೆಂಬುದಕ್ಕೆ ಇನ್ನೂ ನೂರಾರು ಉದಾಹರಣೆಗಳಿವೆ. ಮಮತಾ ಬ್ಯಾನರ್ಜಿ ಮಂಚ್‌ಗೆ (ವೇದಿಕೆ) ಬರುವಂತೆ ಕರೆಕೊಟ್ಟಾಗ ಭಟ್ಟ ಮಂಚ್‌ಅನ್ನು ಮಂಚ ಎಂದು ತಿರುಚಿ ಬರೆದು ಮೋದಿ ವಿರೋಧಿಗಳಿಗೆ ಮಂಚಕ್ಕೆ ಬರುವಂತೆ ಮಮತಾ ಕರೆ ಎಂದು ವಿಕೃತ ಮೆರೆದ. ಆ ಮಟ್ಟಿನ ವಿಕೃತ ಭಟ್ಟನ ಮನಸ್ಸನ್ನ ಮುಂದೆ ಸಿದ್ದು ಬದಲಿಸಿದರೆ, ಆತನ ಪುಸ್ತಕ ಬಿಡುಗಡೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಅದು ಸಾಧ್ಯವೇ, ಥೂತ್ತೇರಿ.

ಇದನ್ನೂ ಓದಿ: ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಒಂದು ಕಡೆ ಗೋಹತ್ಯೆ ನಿಷೇಧದ ಕಾಯಿದೆ ತಂದು ಗೋವುಗಳನ್ನೆಲ್ಲಾ ಗೋಶಾಲೆಗೆ ಹೊಡೆದು, ಅವು ನೀರು ಮೇವಿಲ್ಲದೆ ಸಾಯುತ್ತಿದ್ದರೂ, ಗೋರಕ್ಷಣೆಯ ಅನುದಾನ ಪಡೆಯುತ್ತ ಸುಳ್ಳು ಲೆಕ್ಕ ತೋರಿಸುತ್ತ ಗೋವಿನ ಹೆಸರಲ್ಲಿ ಕೊಳ್ಳೆಹೊಡೆಯುತ್ತ ಕುಳಿತಿರುವ ಬಿಜೆಪಿಗಳು ಗೋವುಗಳೆಲ್ಲಾ ಗೋಶಾಲೆ ಸೇರಿದ ಮೇಲೆ ಗೋಮಾಳವೇಕೆ ಎಂದು ಆರೆಸ್ಸೆಸ್ ಸಂಸ್ಥೆಗೆ ಖಾತೆಮಾಡಿ ಕೊಟ್ಟಿದ್ದಾರಂತಲ್ಲಾ. ಇದನ್ನ ಪತ್ತೆ ಹಚ್ಚಿದ ಸರಕಾರ ತಡೆಯೊಡ್ಡಿದರೆ ಚಡ್ಡಿಗಳ ಬದಲು ಪೈಜಾಮಿನ ಬೊಮ್ಮಾಯಿಂದ ಖಂಡನಾ ಹೇಳಿಕೆ ಕೊಡಿಸಿದ್ದಾರಲ್ಲಾ. ಒಂದೇ ಅವಧಿಗೆ ರಾಜ್ಯದ ಗೋಮಾಳಗಳನ್ನೆಲ್ಲಾ ಕಬಳಿಸಿ ಹೊರಟ ಬಿಜೆಪಿಗಳು ಕಬಳಿಸಿದ ಜಾಗದಲ್ಲಿ ಏನೇನು ಮಾಡಬೇಕೆಂದು ನೀಲಿನಕ್ಷೆಯ ತಯಾರಿ ನಡೆಸುತ್ತಿದ್ದಾಗ, ಕರ್ನಾಟಕದ ಕತೆಯೇ ಇಷ್ಟಿದ್ದರೆ ಇನ್ನು ದೇಶದ ನಾನಾ ಕಡೆಗಳಲ್ಲಿ ಸರ್ಕಾರ ನಡೆಸುತ್ತಿರುವ ಚೆಡ್ಡಿಗಳು ಇನ್ನೆಷ್ಟು ಭೂಮಿ ಲಪಟಾಯಿಸಿರಬಹುದೆಂಬುದು ಊಹೆಗೂ ಸಿಲುಕುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ಸದ್ಯಕ್ಕೆ ಸದನದ ವಿರೋಧಪಕ್ಷವನ್ನ ಆವರಿಸಿರುವ ಕುಮಾರಣ್ಣನವರು ಸದರಿ ಸರಕಾರದ ಎಲ್ಲ ನಡೆಗಳನ್ನು ಟೀಕಿಸುವ ಭರದಲ್ಲಿ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ವರ್ಗಾವಣೆ ಪಟ್ಟಿಯನ್ನ ಮರೆತು, ಈ ಸರಕಾರದ ವರ್ಗಾವಣೆ ದರಪಟ್ಟಿಯನ್ನ ಪತ್ರಿಕೆಗೆ ಬಿಡುಗಡೆ ಮಾಡಿದ್ದಲ್ಲದೆ ಸದನದಲ್ಲೂ ಬಿಡುಗಡೆಗೊಳಿಸಿದರಂತಲ್ಲಾ. ಆದರೇನು ಹಿಂದೆ ಕುಮಾರಣ್ಣನ ಸರಕಾರ ವರ್ಗಾವಣೆಗೆ ದರ ನಿಗದಿ ಮಾಡಿ ವಸೂಲಿ ಮಾಡಿದ್ದ ಪತ್ರಿಕಾ ವರದಿಯನ್ನೇ ಚಲುವರಾಯಸ್ವಾಮಿ ಬಿಡುಗಡೆ ಮಾಡಲಾಗಿ ಸಿಟ್ಟಾದ ಕುಮಾರಣ್ಣ ಜೆಡಿಎಸ್‌ಅನ್ನೆ ಬಿಜೆಪಿಯಲ್ಲಿ ಲೀನಗೊಳಿಸಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಲು ಹೊರಟಿದ್ದಾರಂತಲ್ಲಾ. ಹಾಗೇನಾದರು ಆದರೆ ದೇವೇಗೌಡರು ಮಕ್ಕಳಿಗಾಗಿ ಕಟ್ಟಿಬೆಳೆಸಿದ ಪಾರ್ಟಿಯ ಕತೆಯೇನು ಎಂದು ನಿರಾಶ್ರಿತರಂತಾಗಿರುವ ಜೆಡಿಎಸ್‌ನವರು ಆತಂಕಗೊಂಡಿದ್ದಾರಂತಲ್ಲಾ. ಕುಮಾರಣ್ಣ ಪಂಚರತ್ನ ಮುಂದಿಟ್ಟುಕೊಂಡು ಕರ್ನಾಟಕ ಸುತ್ತುವಾಗ ನನಗೆ ನೀವು ನೂರ ಇಪ್ಪತ್ತುಮೂರು ಸೀಟು ಗೆಲ್ಲಿಸಿಕೊಡದಿದ್ದರೆ ಪಾರ್ಟಿಯನ್ನೆ ವಿಸರ್ಜನೆ ಮಾಡುತ್ತೇನೆ ಎಂದು ಶಪಥಗೈದಿದ್ದರು ಎಂದು ಕಾಂಗ್ರೆಸ್‌ನವರು ಪದೇಪದೇ ಆರೋಪಿಸುತ್ತಿದ್ದಾರೆ. ಈಗ ಕುಮಾರಣ್ಣ ಬಿಜೆಪಿ ಸೇರಿದರೆ ಪಾರ್ಟಿ ತಂತಾನೆ ವಿಸರ್ಜನೆಯಾಗುತ್ತದಂತಲ್ಲಾ. ಹಾಗೇನಾದರು ಆದರೆ ರೇವಣ್ಣ, ಜಿ.ಟಿ.ದೇವೇಗೌಡ ಇನ್ನು ಮುಂತಾದವರು ಸಿದ್ದು ಸನಿಹಕ್ಕೆ ಬಂದರೆ ಆಶ್ಚರ್ಯವಿಲ್ಲ. 123 ಸೀಟು ಬರದಿದ್ದರೆ ಪಾರ್ಟಿಯನ್ನೇ ವಿಸರ್ಜಿಸುವೆನೆಂದು ಕುಮಾರಸ್ವಾಮಿ ಹೇಳಿದ್ದರು ಎಂದು ಸದನದಲ್ಲಿಯೇ ಸಿದ್ದು ಹೇಳಿದ ಮಾತಿಗೆ ಕುಮಾರಣ್ಣನ ಕಡೆ ಇರುವ ನಾಗಮಂಗಲ ಕಡೆಯ ಕಾರ್ಯಕರ್ತರು, “ಹೌದು ಕುಮಾರಣ್ಣ ಅಂಗೇಳಿದ್ರು. ಆದ್ರೆ ಅಕಸ್ಮಾತ್ 19 ಸೀಟು ಬಂದ್ರೆ ವಿಸರ್ಜನೆ ಮಾಡ್ತಿನಿ ಅಂತ ಎಲ್ಲೇಳಿದ್ರು ಎಂದವಂತಲ್ಲಾ. ಇದಲ್ಲವೆ ಬಿಜೆಪಿ ಸೇರುವ ತಯಾರಿ, ಥೂತ್ತೇರಿ.

*****

ಬಿಜೆಪಿ ಜೊತೆ ಸೇರಿ ರಾಜಕೀಯ ಕೂಡಾವಳಿ ಜೀವನ ನಡೆಸಲು ಹೊರಟಿರುವ ಕುಮಾರಣ್ಣನ ಬಗ್ಗೆ ಸಹಜವಾಗಿ ಕರ್ನಾಟಕದ ಕೆಲ ಮನಸ್ಸುಗಳು ಮಮ್ಮಲ ಮರುಗಿವೆ. ಏಕೆಂದರೆ ಇದೇ ಕುಮಾರಣ್ಣ ಪ್ರಹ್ಲಾದ ಜೋಶಿ ಟೀಮನ್ನು ಪೇಶ್ವೆ ಸಂತತಿಗೆ ಹೋಲಿಸಿದ್ದರು ಮತ್ತು ಆರೆಸ್ಸೆಸ್ಸಿಗರ ಮೇಲೆ ದಾಳಿ ಮಾಡಿದ್ದರು. ಆದರೆ ಈಗ ಈ ಮಾತುಗಳು ಅರ್ಥ ಕಳೆದುಕೊಳ್ಳತೊಡಗಿವೆ. ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಬಿಜೆಪಿಗಳಿಗೆ ಕುಮಾರಣ್ಣನೇ ಆದರ್ಶ, ಏಕೆಂದರೆ ಎಮ್ಮೆ ನಡಿಗೆಯಲ್ಲಿ ಹೋಗುತ್ತಿದ್ದ ಧರ್ಮಸಿಂಗ್ ಸರಕಾರ ಕೆಡವಿ ಮುಖ್ಯಮಂತ್ರಿಯಾದ ಕುಮಾರಣ್ಣನಿಗೆ ಕೆಲ ಸತ್ಯಸಂಗತಿಗಳು ಗೊತ್ತಿವೆ. ಅದೇನೆಂದರೆ ತಾನು ಯಾವತ್ತೂ ಜನಾಭಿಪ್ರಾಯದ ಮುಖ್ಯಮಂತ್ರಿಯಾಗಲೂ ಸಾಧ್ಯವಿಲ್ಲ ಎಂದು; ಒಂದೋ ಕಾಂಗೈ ತೆಕ್ಕೆಗೆ ಬೀಳಬೇಕು, ಇಲ್ಲ ಬಿಜೆಪಿ ಆಲಿಂಗನಕ್ಕೆ ಅರ್ಪಿಸಿಕೊಳ್ಳಬೇಕು. ಆದರೆ ಬಿಜೆಪಿಯದ್ದು ದೃತರಾಷ್ಟ್ರಲಿಂಗನ. ಅವರು ಕುಮಾರಣ್ಣನನ್ನ ಆಲಂಗಿಸಿ ಜೆಡಿಎಸ್ ಸಮಾಧಿಯ ಮೇಲೆ ಪಾಪಾಸು ಕಳ್ಳಿಯಂತೆ ಬೆಳೆಯಬಲ್ಲರಂತಲ್ಲಾ. ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆಯ ಉದಾಹರಣೆ ಕಣ್ಣಮುಂದೆಯಿದ್ದರೂ, ಕುಮಾರಸ್ವಾಮಿಯವರಿಗೆ ಅದು ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...