HomeಮುಖಪುಟFilm Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

- Advertisement -
- Advertisement -

“ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತ ಅಥವಾ ಬಹುಸಂಖ್ಯಾತದ ಕಾನೂನಿಗೆ ಜಾಗವಿಲ್ಲ” ಎಂದಿದ್ದರು ಮಹಾತ್ಮ ಗಾಂಧೀಜಿ. ಇಂದಿನ ರಾಜಕೀಯ, ಸಾಮಾಜಿಕ ವಾತಾವರಣವನ್ನು ನೋಡಿದರೆ ಗಾಂಧೀಜಿಯವರ ಮಾತನ್ನು ಮತ್ತೆ ಮತ್ತೆ ಮನನ ಮಾಡಬೇಕಾದ ತುರ್ತು ಸೃಷ್ಟಿಯಾಗಿದೆ.

ವೈಚಾರಿಕತೆ, ವಿಮರ್ಶಾ ದೃಷ್ಟಿಗಿಂತ ಭಾವನಾತ್ಮಕತೆಯೇ ಮುಖ್ಯವಾದಾಗ ಮೋಸ ಮಾಡುವವರು ಹೆಚ್ಚಾಗುತ್ತಾರೆ. ವಿದ್ಯಮಾನವೊಂದರ ಒಳಸುರಳಿಯನ್ನು ಊಹಿಸುವಲ್ಲಿ ವಿಫಲವಾದ ಜನತೆಯನ್ನು ಒಂದು ವ್ಯವಸ್ಥೆ ಸುಲಭವಾಗಿ ಯಾಮಾರಿಸುತ್ತದೆ. ಹೀಗಾಗಿ ಸದಾ ಎಚ್ಚರದ ಕಣ್ಣುಗಳನ್ನು ಇಟ್ಟುಕೊಂಡಿರಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಯಾರು, ಯಾವುದನ್ನು, ಯಾವ ಉದ್ದೇಶಕ್ಕಾಗಿ ಹೇಳುತ್ತಿದ್ದಾರೆಂದು ತರ್ಕಿಸಿ ನೋಡಲೇಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ಎದುರಾಗಲಿದೆ. ಇದರ ಪೂರ್ವ ತಯಾರಿಯಾಗಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಮತೀಯ ಗೂಂಡಾಗಿರಿಯ ಸಮರ್ಥನೆಯಿಂದ ಹಿಡಿದು ನಿನ್ನೆ ಮೊನ್ನೆಯ  ಹಿಜಾಬ್‌ ವಿವಾದ, ಭಿನ್ನ ಮತದವರ ವ್ಯಾಪಾರಕ್ಕೆ ಅಡ್ಡಿ, ಹಲಾಲ್‌, ಜಟ್ಕಾ ಕಟ್‌ ತನಕವೂ ಕೋಮು ಭಾವನೆ, ಕೋಮು ಪ್ರಚೋದನೆ, ಅಸಹಿಷ್ಣುತೆ ರಾಚಿದೆ. ದೃಶ್ಯಮಾಧ್ಯಮಗಳಿಗೆ ಇವೆಲ್ಲವೂ ಟಿಆರ್‌ಪಿಯ ಸರಕಾಗಿವೆ.

“ಮಾಧ್ಯಮ ಹೇಳಿದ್ದು ನಿಜವೋ ಅಥವಾ ನಿಜವನ್ನು ಮಾಧ್ಯಮಗಳು ಹೇಳುತ್ತಿವೆಯೋ?” ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. “ಮಾಧ್ಯಮದಲ್ಲಿ ಬಂದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ, ಸುಳ್ಳು ಸತ್ಯವಾಗುವುದಿಲ್ಲ. ಸತ್ಯವೇ ಎಂದಿಗೂ ಗೆಲ್ಲುತ್ತದೆ” ಎಂಬ ಆಶಾವಾದ ದೊಡ್ಡದು. ನೂರು ಜನ ಏನೇ ಹೇಳಿದರೂ ಆತ್ಮಸಾಕ್ಷಿಗೆ ವಿರುದ್ಧವಾದದ್ದು ಸುಳ್ಳಾಗಿಯೇ ಇರುತ್ತದೆ ಅಲ್ಲವೆ?

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ. ಪ್ರಕರಣ ತೀವ್ರ ಸ್ವರೂಪ ಪಡೆಯಿತು. ಹರ್ಷ ಕೊಲೆಯಾಗಿದ್ದು ಏತಕ್ಕೆ? ಇದರ ಹಿಂದೆ ಯಾರ್‍ಯಾರು ಇದ್ದಾರೆ? ಇದು ವೈಯಕ್ತಿಕ ಕಾರಣಕ್ಕೆ ಆದ ಕೊಲೆಯೋ, ಕೋಮು ಪ್ರಚೋದಿತ ಕೊಲೆಯೋ? ಇತ್ಯಾದಿಗಳನ್ನು ವಿಮರ್ಶಿಸುವ ತಾಳ್ಮೆಯನ್ನು ಯಾರೂ ತೋರಲಿಲ್ಲ. ಶವದ ಮೆರವಣಿಗೆ ಮಾಡಿ, ಮುಸ್ಲಿಮರ ಮನೆಗಳಿಗೆ, ಮದ್ರಾಸಗಳಿಗೆ ಕಲ್ಲು ಎಸೆಯಲಾಯಿತು. ರಾಜಕಾರಣಿಗಳು ಮೆರವಣಿಗೆಯ ಮುಂದಾಳತ್ವ ವಹಿಸಿದರು. ಅಶಾಂತಿಯ ವಾತಾವರಣವನ್ನು ನೋಡುತ್ತಾ ಪೊಲೀಸರು ಕೈ ಚೆಲ್ಲಿ ಕುಳಿತ್ತಿದ್ದರು. ತನಿಖೆ ನಡೆದು ವಿಷಯ ಹೊರಬರುವ ಮುನ್ನವೇ ತೀರ್ಪು ನೀಡಿಯಾಗಿತ್ತು. ರಾಜ್ಯದಲ್ಲಿ ಇನ್ಯಾವುದೇ ಸಮಸ್ಯೆ ಇಲ್ಲವೆಂಬಂತೆ ಮಾಧ್ಯಮಗಳು ದಿನಪೂರ್ತಿ ಇದನ್ನೇ ವರದಿ ಮಾಡಿದವು. ಜನಸಮೂಹ ಕೂಡ ಇದರ ಸುತ್ತಲೇ ಗಿರಕಿ ಹಾಕಿತು.

‘ಜನಗಣಮನ’ ಸಿನಿಮಾದ ಒಂದು ದೃಶ್ಯ

ಸಮೂಹ ಸನ್ನಿಯ ವಿಚಾರವಾಗಿ ಚರ್ಚಿಸುವಾಗ ತೆಲಂಗಾಣದಲ್ಲಾದ ಎನ್‌ಕೌಂಟರ್‌ ಪ್ರಕರಣ ಗಮನಿಸಲೇಬೇಕು. ಕನ್ನಡಿಗರೇ ಆದರೆ ವಿಶ್ವನಾಥ್‌ ಸಜ್ಜನರ್‌ ಸೈಬರಾಬಾದ್‌ ಪೊಲೀಸ್ ಆಯುಕ್ತರಾಗಿದ್ದರು. ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಗೈದಿದ್ದಾರೆಂದು 2019ರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಘಟನೆಯ ಪುನರ್‌ ಸೃಷ್ಟಿಯ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೆಂದು ನಾಲ್ವರನ್ನೂ ಎನ್‌ಕೌಂಟರ್‌ ಮಾಡಲಾಗಿತ್ತು. “ಸಜ್ಜನರಿಂದ ದುರ್ಜನರ ಸಂಹಾರ”- ಎಂದೆಲ್ಲ ಮಾಧ್ಯಮಗಳು ವರ್ಣಿಸಿದವು. ನ್ಯಾಯದಾನ ವ್ಯವಸ್ಥೆಯ ವಿಳಂಬದಿಂದಾಗಿ ಜನರು ಈ ಎನ್‌ಕೌಂಟರ್‌‌ ಮೆಚ್ಚಿಕೊಂಡಿದ್ದಾರೆಂಬ ಚರ್ಚೆಯಾಯಿತು. ಆದರೆ ಅನೇಕ ಪ್ರಜ್ಞಾವಂತರು ಪೊಲೀಸರ ವರ್ತನೆಯನ್ನು ಖಂಡಿಸಿದರು. ಕೊಲ್ಲುವ ಅಧಿಕಾರವನ್ನು ಈ ಪೊಲೀಸರಿಗೆ ಕೊಟ್ಟಿದ್ದು ಯಾರು? ಎನ್‌ಕೌಂಟರ್‌ ಆದವರು ನಿಜವಾಗಿಯೂ ತಪ್ಪಿತಸ್ಥರೇ? ಆರೋಪ ಸಾಬೀತಾಗದ ಹೊರತು ಯಾರೂ ಅಪರಾಧಿಗಳಲ್ಲ ಎಂಬ ನ್ಯಾಯಾಂಗದ ಉದಾತ್ತ ಚಿಂತನೆಯನ್ನು ನಾವು ಮರೆತೆವೆ? ಈ ಎನ್‌ಕೌಂಟರ್‌ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಸರಿಯೇ? ಅತ್ಯಾಚಾರ ಮಾಡಿದವರನ್ನೆಲ್ಲ ಶೂಟ್ ಮಾಡಬೇಕು ಎನ್ನುವುದಾದರೆ ಘಟನಾನುಘಟಿಗಳ ತಲೆಗಳೇಕೆ ಉರುಳುವುದಿಲ್ಲ?- ಇತ್ಯಾದಿ ಪ್ರಶ್ನೆಗಳು ಮುನ್ನೆಲೆಗೆ ಬಂದವು.

ಹಿಂದುತ್ವ, ದೇಶಭಕ್ತಿ, ಸೈನ್ಯ, ಹಿಜಾಬ್‌, ವ್ಯಾಪಾರ ಎಲ್ಲವೂ ಈಗ ಸೆನ್ಸೇಷನ್‌. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿತವಾದದ್ದೇ ದೊಡ್ಡ ಸುದ್ದಿಯಾಗಿ ಉಳಿದೆಲ್ಲ ನಿತ್ಯದ ಸಮಸ್ಯೆಗಳು ಗೌಣವಾಗುತ್ತವೆ. ಜನಸಾಮಾನ್ಯರ ನಿತ್ಯದ ಸಂಕಷ್ಟದೊಂದಿಗೆ ಪ್ರಭುತ್ವ ಚೆಲ್ಲಾಟವಾಡುತ್ತಿದ್ದರೂ ಅವುಗಳನ್ನು ಮುಚ್ಚಿಹಾಕಲು ಒಂದು ಕೋಮು ಸಂಘರ್ಷ ಸಾಕೆನ್ನುವ ಮಟ್ಟಕ್ಕೆ ವ್ಯವಸ್ಥೆ ಬಂದು ನಿಂತಿರುವಂತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಕೆಲವು ಮತೀಯ ಶಕ್ತಿಗಳು ಬಹುಸಂಖ್ಯಾತವಾದದ ಅಸ್ತ್ರವಿಡಿದು ಸೃಷ್ಟಿಸುತ್ತಿರುವ ಗಲಾಟೆಗಳನ್ನು ನೋಡಿದಾಗ ಗಾಂಧಿಯ ಮಾತು ನೆನಪಾಗಲೇಬೇಕು- “ಆತ್ಮಸಾಕ್ಷಿಯ ಸಂಗತಿಯಲ್ಲಿ ಬಹುಮತದ ಕಾನೂನಿಗೆ ಬೆಲೆ ಇಲ್ಲ”.

ಇದನ್ನೂ ಓದಿರಿ: ಜೈ ಭೀಮ್‌ ವಿವಾದ: ಸೂರ್ಯ, ಜ್ಞಾನವೇಲ್‌, ಜ್ಯೋತಿಕಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್ ಆದೇಶ

ಇತ್ತೀಚೆಗೆ ಬಿಡುಗಡೆಯಾದ ‘ಜನ ಗಣ ಮನ’ (ಮಲಯಾಳಂ) ಸಿನಿಮಾ ಜನರ ಆತ್ಮಸಾಕ್ಷಿಯನ್ನು, ಸಮೂಹ ಸನ್ನಿಯ ಹಿಂದಿರುವ ತಪ್ಪು ಹೆಜ್ಜೆಗಳನ್ನು ದಟ್ಟವಾಗಿ ತೆರೆದಿಡುವ ಪ್ರಯತ್ನ ಮಾಡಿದೆ. ಮನರಂಜನಾ ಪರಿಭಾಷೆಗಳನ್ನು ಸಶಕ್ತಿಯವಾಗಿ ಬಳಸಿಕೊಂಡೇ ದೇಶದ ಹಲವು ಸಮಸ್ಯೆಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಹತ್ತಾರು ಘಟನೆಗಳನ್ನು ಕಥೆಯೊಳಗೆ ತಂದಿದ್ದರೂ ಯಾವುವೂ ಬಿಡಿಬಿಡಿ ಸಂಗತಿಗಳಾಗಿ ಉಳಿಯುವುದಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವವಿದ್ಯಾನಿಲಯಗಳಿಗೆ ಮತೀಯವಾದಿಗಳ ಪ್ರವೇಶ, ಕೇಸರಿ ರಾಜಕಾರಣ, ಶಿಕ್ಷಣ ಮಾಫಿಯಾ, ಶೈಕ್ಷಣಿಕ ವ್ಯವಸ್ಥೆಯೊಳಗೆ ತುಂಬಿದ ತರತಮ, ಪ್ರಜಾತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ವಿದ್ಯಾರ್ಥಿಗಳಿಗೆ ದೇಶದ್ರೋಹದ ಪಟ್ಟ, ನ್ಯಾಯಾಧೀಶರಂತೆ ವರ್ತಿಸುವ ಮಾಧ್ಯಮಗಳು, ಬಹುಮತದ ಸನ್ನಿಯೊಳಗೆ ಕಳೆದು ಹೋದ ಸೂಕ್ಷ್ಮ ಪ್ರಜ್ಞೆ, ಭಾವನಾತ್ಮಾಕ ವಿಷಯಗಳನ್ನು ಎಳೆತಂದು ನಿಜ ಸಮಸ್ಯೆಗಳನ್ನು ಮರೆಮಾಚುವ ರಾಜಕಾರಣಿಗಳು, ಅಧಿಕಾರಶಾಹಿಯ ದರ್ಪ ಹಾಗೂ ಸುಳ್ಳುಗಳು, ಪ್ರಭತ್ವದ ಸುಳ್ಳುಗಳನ್ನು ಪ್ರಶ್ನಿಸಿದ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ಶಿಕ್ಷೆ- ಹೀಗೆ ಹಲವಾರು ಸಂಗತಿಗಳನ್ನು ಒಂದು ಕೋನದೊಳಗೆ ತರುವ ಪ್ರಯತ್ನವನ್ನು ನಿರ್ದೇಶಕ ಡಿಜೊ ಜೋಸ್‌ ಆಂಟೊನಿ ಸಶಕ್ತವಾಗಿ ಮಾಡಿದ್ದಾರೆ.

ಜನಗಣಮನ ಸಿನಿಮಾದ ಒಂದು ದೃಶ್ಯ

ಈ ಘಟನೆಯನ್ನು ಎಲ್ಲೋ ನೋಡಿದಂತಿದೆಯಲ್ಲ ಅನಿಸುತ್ತಿರುವಾಗಲೇ, ಮತ್ತೊಂದು ದೃಶ್ಯ ನಮ್ಮ ಮುಂದೆ ಬರುತ್ತದೆ. ಇದನ್ನೂ ಎಲ್ಲೋ ನೋಡಿದಂತಿದೆಯಲ್ಲ ಅನಿಸುತ್ತದೆ. ಆದರೆ ಪ್ರತ್ಯೇಕ ಘಟನೆಗಳನ್ನು ಒಂದಕ್ಕೊಂದು ಪೋಣಿಸಿರುವ ರೀತಿ ಮೆಚ್ಚುಗೆ ಪಡೆಯುತ್ತದೆ. ರಾಜಕಾರಣದ ವೃತ್ತದೊಳಗೆ ಎಲ್ಲ ಬಿಂದುಗಳು ಸೇರಿಕೊಂಡಿವೆ. ಶರೀನ್‌ ಮೊಹಮ್ಮದ್‌ ಸೊಗಸಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಪ್ರಸ್ತಾಪಿಸಲಾಗುವ ಸಂಗತಿಗಳು ಅತ್ಯಂತ ಗಂಭೀರವಾದರೂ, ‘ಕಲಾತ್ಮಕ ಸಿನಿಮಾ’ ಎಂಬ ಕ್ಯಾಟಗರಿಗೇನೂ ಒಳಪಡುವುದಿಲ್ಲ. ‘ಬ್ರಿಡ್ಜ್‌ ಸಿನಿಮಾ’ ಎಂದರೆ ತಪ್ಪಾಗಲಾರದು. ಚಿಂತನೆ ಹಾಗೂ ರಂಜನೆ ಹದವಾಗಿ ಬೆರೆತಿದೆ. ಅರ್ಥಪೂರ್ಣ ಹಾಗೂ ಪಂಚಿಂಗ್‌ ಎನ್ನಬಹುದಾದ ಸಂಭಾಷಣೆಯನ್ನು ಕಟ್ಟಿಕೊಡಲಾಗಿದೆ. ಭಾವುಕತೆ ಹಾಗೂ ವಿಚಾರವಂತಿಕೆಯನ್ನು ಸಮ ತೂಕದಲ್ಲಿ ಬೆರೆಸಲಾಗಿದೆ. ಜೇಕ್ಸ್‌ ಬೆಜಾಯ್‌ ಅವರ ಹಿನ್ನಲೆ ಸಂಗೀತವಂತೂ ಮೈ ನವಿರೇಳಿಸುವಂತಿದೆ.

ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ಮತ್ತೊಂದು ಗಮನಿಸಲೇಬೇಕಾದ ಅಂಶ- ಇಡೀ ಸಿನಿಮಾ ಕಥೆಯನ್ನು ಕರ್ನಾಟಕ ರಾಜ್ಯವನ್ನು ಕೇಂದ್ರೀಕರಿಸಿ ಎಣೆಯಲಾಗಿದೆ. ದಕ್ಷಿಣ ಭಾರತದ ಬಹುದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದ್ದು, ಕೋಮು ಸಂಘರ್ಷ ಒಳಗೊಂಡ ಕಥೆಯನ್ನು ಉದ್ದೇಶಪೂರ್ವಕವಾಗಿಯೇ ಕರ್ನಾಟಕದ ಮೂಲಕ ಹೇಳಲಾಗಿದೆಯೇನೋ? ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು, ಮತೀಯ ಸಂಘರ್ಷಗಳು ಹಾಗೂ ಜಮ ಗಣ ಮನ ಸಿನಿಮಾದ ಕಥೆಗೂ ಕಾಕತಾಳೀಯವೆಂಬಂತೆ ಹೋಲಿಕೆ ಕಾಣುತ್ತದೆ. ಆದರೆ ‘ಕಾಲ್ಪನಿಕ ಕಥೆ’ ಎಂಬ Anticipatory bail ಕೂಡ ಇದೆ.

ಟೀಸರ್‌ ಹಾಗೂ ಟ್ರೈಲರ್‌ನಲ್ಲಿ ತೋರಿಸಿದ ಕೆಲವು ದೃಶ್ಯಗಳನ್ನು ಸಿನಿಮಾದಲ್ಲಿ ತೆಗೆದು ಹಾಕಲಾಗಿದೆ. ಸಿನಿಮಾದ ಆರಂಭದಲ್ಲಿ ತೋರಿಸುವ ಕೆಲವು ದೃಶ್ಯಗಳ ಹಿನ್ನೆಲೆಯನ್ನು ಜೋಡಿಸುವುದಕ್ಕಾಗಿ ಕೊನೆಯ ಕೆಲವು ನಿಮಿಷಗಳನ್ನು ಮೀಸಲಿಡಲಾಗಿದೆ. ದ್ವಿತೀಯಾರ್ಧದ ಬಹುತೇಕ ಕಥೆ ಕೋರ್ಟ್ ಹಾಲ್‌ನೊಳಗೆ ನಡೆಯುತ್ತದೆ. ನ್ಯಾಯಾಧೀಶರ ಪಾತ್ರ ಪೂರ್ವಗ್ರಹ ಪೀಡಿತವಾಗಿದೆ ಏನೋ ಅನಿಸುತ್ತಿರುವಾಗಲೇ ನ್ಯಾಯಪ್ರಜ್ಞೆಯ ಹಾದಿಗೆ ಎಳೆದು ನಿಲ್ಲಿಸಲಾಗಿದೆ. ಕಥೆಯ ಸ್ವಾರಸ್ಯವನ್ನು ಕಾಪಾಡಲು ಬಹುಶಃ ಪಾತ್ರದ ಏರಿಳಿತ ಮಾಡಿದ್ದಾರೆ. ಕಥೆ ಕರ್ನಾಟಕ ಕೇಂದ್ರಿತವಾಗಿ ನಡೆಯುವುದರಿಂದ ಮಲಯಾಳಂ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್‌, ಹಿಂದಿ ಭಾಷೆಗಳನ್ನು ಅಲ್ಲಲ್ಲಿ ಬಳಸಲಾಗಿದೆ. ಕನ್ನಡ ವಾಕ್ಯಗಳ ಉಚ್ಚರಣೆಯಲ್ಲಿ ಮಲಯಾಳಂ ಪ್ರಭಾವ ಕಂಡು ಬರುವುದು ಆಭಾಸವೆನಿಸುತ್ತದೆ.

ಅಕ್ವೊಕೇಟ್‌ ಅರವಿಂದ ಸ್ವಾಮಿನಾಥನ್‌ ಪಾತ್ರದಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಎಸಿಪಿ ಸಜ್ಜನ್‌ ಕುಮಾರ್ ಪಾತ್ರದಲ್ಲಿ ಸೂರಜ್‌ ವೆಂಜರಮೂಡು, ಪ್ರೊ.ಸಬಾ ಮರಿಯಮ್‌ ಪಾತ್ರದಲ್ಲಿ ಮಮತಾ ಮೋಹನ್‌ದಾಸ್‌, ಕರ್ನಾಟಕದ ಹೋಮ್‌ ಮಿನಿಸ್ಟರ್‌ ಆಗಿ ಜಿ.ಎಂ. ಸುಂದರ್‌, ವಕೀಲ ರಘುರಾಮ್ ಅಯ್ಯರ್‌ ಆಗಿ ಶಮ್ಮಿ ತಿಲಕನ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಸೂರಜ್‌ ಹಾಗೂ ಪೃಥ್ವಿಯವರು ‘ಡ್ರೈವಿಂಗ್ ಲೈಸೆನ್ಸ್‌‌’ ಸಿನಿಮಾ ಬಳಿಕ ಮತ್ತೊಮ್ಮೆ ತಮ್ಮ ಕಾಂಬೊವನ್ನು ಮುಂದುವರಿಸಿದ್ದಾರೆ. ಪೃಥ್ವಿರಾಜ್‌ ಪ್ರೊಡಕ್ಷನ್‌ನಲ್ಲಿ ಜನಗಣಮನ ನಿರ್ಮಾಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರೀನ್ ಕೇವ್ ನಿಂದ ಪ್ರವಾಸಿಗರನ್ನು ದೂರವಿಡಿ: ಛತ್ತೀಸ್‌ಗಢ ಸರ್ಕಾರಕ್ಕೆ ಪರಿಸರವಾದಿಗಳ ಎಚ್ಚರಿಕೆ

ರಾಯ್‌ಪುರ: ಒಂದು ಕಾಲದಲ್ಲಿ ಮಾವೋವಾದಿ ಪೀಡಿತ ಬಸ್ತಾರ್ ಜಿಲ್ಲೆಯ ಕಾಂಗರ್ ಕಣಿವೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಅಪರೂಪದ ಮತ್ತು ಪರಿಸರ ಸೂಕ್ಷ್ಮ 'ಹಸಿರು ಗುಹೆ'ಯನ್ನು ಪ್ರವಾಸಿಗರಿಗೆ ತೆರೆಯಲು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದ್ದು, ಈ ಕ್ರಮಕ್ಕೆ...

ಅಹಮದಾಬಾದ್: ಅಮೃತಸರದಿಂದ ಮುಂಬೈಗೆ ಚಲಿಸುತ್ತಿದ್ದ ರೈಲಿನಲ್ಲಿ ಭಾರೀ ಮೌಲ್ಯದ ಕೊಕೇನ್ ಜಾಲ ಪತ್ತೆ

ಅಹಮದಾಬಾದ್: ಅಮೃತಸರ-ಮುಂಬೈ ಗೋಲ್ಡನ್ ಟೆಂಪಲ್ ಮೇಲ್ ರೈಲಿನ ಮೇಲೆ ತಡರಾತ್ರಿ ನಡೆದ ದಾಳಿಯಲ್ಲಿ ಮಿಜೋರಾಂ ಯುವಕನೊಬ್ಬ 2.19 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕೊಕೇನ್ ಮತ್ತು ಮೆಥಾಂಫೆಟಮೈನ್‌ನೊಂದಿಗೆ ಸಿಕ್ಕಿಬಿದ್ದ ನಂತರ ಬಹು ನಗರ,...

ನಿಲುವು ಬದಲಿಸಿದ ಸಿಪಿಐ(ಎಂ) : ವಿಎಸ್ ಅಚ್ಯುತಾನಂದನ್ ಅವರ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ನಿರ್ಧಾರ

ತನ್ನ ದೀರ್ಘಕಾಲದ ಸೈದ್ಧಾಂತಿಕ ನಿಲುವಿಗಿಂತ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಐ(ಎಂ), ಪಕ್ಷದ ದಂತಕಥೆ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರ್ಧರಿಸಿದೆ. ಕಮ್ಯುನಿಸ್ಟರು ಆಡಳಿತ ಅಥವಾ...

2024ರ ಪ್ರತಿಭಟನೆ ದಮನ ಪ್ರಕರಣ: ಬಾಂಗ್ಲಾದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್‌ಗೆ ಮರಣದಂಡನೆ

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಳ್ವಿಕೆಯಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶ ನ್ಯಾಯಾಲಯವು ಸೋಮವಾರ ಢಾಕಾದ ಮಾಜಿ ಪೊಲೀಸ್ ಮುಖ್ಯಸ್ಥ ಮತ್ತು ಇಬ್ಬರು ಹಿರಿಯ ಸಹೋದ್ಯೋಗಿಗಳಿಗೆ ಮರಣದಂಡನೆ ವಿಧಿಸಲಾಗಿದೆ.  ರಾಜಧಾನಿಯ...

ಕೇರಳ, ತಮಿಳುನಾಡು, ಪ. ಬಂಗಾಳದ 32 ಮಂದಿಗೆ ‘ಪದ್ಮ’ ಪ್ರಶಸ್ತಿ : ವಿಧಾನಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣು?

ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾದ 131 'ಪದ್ಮ ಪ್ರಶಸ್ತಿ'ಗಳಲ್ಲಿ, 38 ಪ್ರಶಸ್ತಿಗಳು ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯ ಪಾಲಾಗಿವೆ. ದೇಶದ ಎರಡನೇ ಅತ್ಯುನ್ನತ...

‘ಏಕರೂಪ ಭಾರತವನ್ನಲ್ಲ, ಏಕೀಕೃತ ಭಾರತವನ್ನ ಸಂಭ್ರಮಿಸೋಣ’: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ 

ಚೆನ್ನೈ: ಗಣರಾಜ್ಯೋತ್ಸವವನ್ನು ಏಕರೂಪ ಭಾರತದಂತಲ್ಲದೇ ಏಕೀಕೃತ ಭಾರತವಾಗಿ ಆಚರಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.  ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸ್ಟಾಲಿನ್, "ಏಕರೂಪದ ಭಾರತವಲ್ಲ, ಏಕೀಕೃತ ಭಾರತವನ್ನು...

ಗಣರಾಜ್ಯೋತ್ಸವ ಪರೇಡ್ : ಸಿಆರ್‌ಪಿಎಫ್ ಪುರುಷರ ತುಕಡಿ ಮುನ್ನಡೆಸಿ ಗಮನಸೆಳೆದ ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ

ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರು ಅರೆಸೈನಿಕ ಪಡೆಯ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯವರಾದ...

ಉತ್ತರಾಖಂಡ: ಸೂಫಿ ಕವಿ ಬಾಬಾ ಬುಲ್ಲೆ ಶಾ ಅವರ ಮಂದಿರವನ್ನು ಧ್ವಂಸಗೊಳಿಸಿದ ಹಿಂದೂ ರಕ್ಷಣಾ ದಳದ ದುಷ್ಕರ್ಮಿಗಳು

ಉತ್ತರಾಖಂಡದ ಮಸ್ಸೂರಿಯಲ್ಲಿರುವ 18 ನೇ ಶತಮಾನದ ಸೂಫಿ ಕವಿ ಬಾಬಾ ಬುಲ್ಲೆಹ್ ಷಾ ಅವರ ದೇವಾಲಯವನ್ನು ಶುಕ್ರವಾರ ಹಿಂದೂ ರಕ್ಷಾ ದಳದೊಂದಿಗೆ ಸಂಪರ್ಕ ಹೊಂದಿರುವವರು ಧ್ವಂಸಗೊಳಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. "ಜೈ...

ಅಕ್ಷರಧಾಮ ದೇವಾಲಯ ದಾಳಿ ಪ್ರಕರಣ: 6 ವರ್ಷಗಳ ನಂತರ ಮೂವರ ಮುಸ್ಲಿಂ ವ್ಯಕ್ತಿಗಳನ್ನು ಖುಲಾಸೆಗೊಳಿಸಿದ ಅಹಮದಾಬಾದ್ ಪೋಟಾ ನ್ಯಾಯಾಲಯ

ಅಕ್ಷರಧಾಮ ದೇವಾಲಯದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೂವರು ಮುಸ್ಲಿಂ ಪುರುಷರನ್ನು ಕಳೆದ ವಾರ ಅಹಮದಾಬಾದ್‌ನ ವಿಶೇಷ ಭಯೋತ್ಪಾದನಾ ತಡೆ ಕಾಯ್ದೆ (ಪೋಟಾ) ನ್ಯಾಯಾಲಯವು ಖುಲಾಸೆಗೊಳಿಸಿದ್ದು, ವರ್ಷಗಳ ಕಾನೂನು ಪ್ರಕ್ರಿಯೆಗಳ ನಂತರ...

ಡಿಜಿ-ಐಜಿಪಿ ಎಂ.ಎ ಸಲೀಂ ವಿರುದ್ಧ ಸುಳ್ಳಾರೋಪ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು

ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ (ಡಿಜಿ-ಐಜಿಪಿ) ಎಂ.ಎ ಸಲೀಂ ಅವರ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ದ ಬೆಂಗಳೂರಿನ ಸೈಬರ್ ಅಪರಾಧ ಪೊಲೀಸರು...