Homeಮುಖಪುಟದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

- Advertisement -
- Advertisement -

ಕೆ.ಎಂ.ಕಮಲ್ ನಿರ್ದೇಶಿಸಿದ ಮಲಯಾಳಂ ಚಿತ್ರ ‘ಪಡ’  ನೈಜ ಘಟನೆಗಳನ್ನು ಆಧರಿಸಿದ ಮೂಡಿ ಮಂದಿದೆ. ಅಕ್ಟೋಬರ್ 4, 1996ರಂದು, ಆಗಿನ ಪಾಲಕ್ಕಾಡ್ ಜಿಲ್ಲಾಧಿಕಾರಿಯಾಗಿದ್ದ ಡಬ್ಲ್ಯುಆರ್ ರೆಡ್ಡಿ ಅವರನ್ನು ನಾಲ್ವರು ಆದಿವಾಸಿ ಹಕ್ಕುಗಳ ಕಾರ್ಯಕರ್ತರು ಒತ್ತೆಯಾಳಾಗಿ ಇರಿಸಿಕೊಂಡ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ.

“ತಮಿಳು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದ ದಮನಿತರ ಭೂಮಿ ಹಕ್ಕು ಕಥನ, ಈಗ ಮಲಯಾಳಂಗೂ ಕಾಲಿಟ್ಟಿದೆ” ಎಂದು ಸಿನಿಮಾ ನಿರ್ದೇಶಕ ಕಮಲ್ ಹೇಳಿರುವುದಾಗಿ ‘ದಿ ನ್ಯೂಸ್‌ ಮಿನಿಟ್‌’ ಜಾಲತಾಣ ವರದಿ ಮಾಡಿದೆ.

1996ರಲ್ಲಿ ಇ.ಕೆ.ನಾಯನಾರ್ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌‌ (ಎಲ್‌ಡಿಎಫ್‌) ಸರ್ಕಾರವು ಅಂಗೀಕರಿಸಿದ ಆದಿವಾಸಿ ಭೂ ಕಾಯಿದೆ 1975ರ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂಬ ಹೋರಾಟ ನಡೆದಿತ್ತು. ಅನೇಕ ಬುಡಕಟ್ಟು ಜನರು ತಿದ್ದುಪಡಿಯನ್ನು ವಿರೋಧಿಸಿದರು. ಎರಡು ಗಂಟೆಗಳ ಪಡ ಸಿನಿಮಾ ಈ ಕಥಾ ಹಂದರವನ್ನು ಹೊಂದಿದೆ.

ಕುಂಚಾಕೊ ಬೋಬನ್, ವಿನಾಯಕನ್, ದಿಲೀಶ್ ಪೋತನ್ ಮತ್ತು ಜೋಜು ಜಾರ್ಜ್ ಮುಖ್ಯಭೂಮಿಯಲ್ಲಿ ನಟಿಸಿರುವ ಈ ಸಿನಿಮಾಕ್ಕೆ ವಿಮರ್ಶಕರಿಂದ ಭಾರೀ ಮೆಚ್ಚುಗೆ ಸಿಕ್ಕಿದೆ. ತುಳಿತಕ್ಕೊಳಗಾದವರ ಭೂಮಿಯ ಹಕ್ಕುಗಳ ಬಗ್ಗೆ ಮಾತನಾಡುವ ಕೆಲವು ಮಲಯಾಳಂ ಚಲನಚಿತ್ರಗಳಲ್ಲಿ ಇದೂ ಒಂದಾಗಿದೆ ಎಂದು ಬಣ್ಣಿಸಲಾಗಿದೆ.

2016ರಲ್ಲಿ ತೆರೆಕಂಡ, ರಾಜೀವ್ ರವಿ ನಿರ್ದೇಶನದ ‘ಕಮ್ಮಟ್ಟಿ ಪಾಡಂ’ ಸಿನಿಮಾ ಕೊಚ್ಚಿಯ ಕೊಳೆಗೇರಿ ಪ್ರದೇಶದಲ್ಲಿ ದಲಿತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದನ್ನು ಹೇಳುತ್ತದೆ. ರಿಯಲ್ ಎಸ್ಟೇಟ್ ಮಾಫಿಯಾಗಳಿಂದಾಗಿ ದಮನಿತರು ಭೂಮಿ ವಂಚಿತರಾಗುವುದನ್ನು ಕಮ್ಮಟ್ಟಿಪಾಡಂ ಚಿತ್ರಿಸಿತ್ತು. ಮಲೆಯಾಳಂ ಚಿತ್ರರಂಗದಲ್ಲಿ ಭೂಮಿ ಹಕ್ಕನ್ನು ಪ್ರತಿಪಾದಿಸುವ ಮತ್ತೊಂದು ಸಿನಿಮಾವಾಗಿ ‘ಪಡ’ ಹೊರಹೊಮ್ಮಿದೆ.

ನೆರೆಯ ತಮಿಳು ಚಿತ್ರರಂಗ ದಮನಿತ ಸಮುದಾಯದ ಪ್ರತಿರೋಧವನ್ನು ದೊಡ್ಡ ಮಟ್ಟದಲ್ಲಿ ತೋರಿಸುತ್ತಿದೆ. ಮಲಯಾಳಂ ಚಿತ್ರರಂಗವು ಈ ವಿಷಯದಲ್ಲಿ ಅಷ್ಟಾಗಿ ಗಮನ ಸೆಳೆದಿಲ್ಲ. ಆದರೆ ತಮಿಳುನಾಡಿನಲ್ಲಿ ದಮನಿತರ ಕಥೆಗಳು ಯಶಸ್ವಿಯಾಗಿವೆ. ರಾಜಕೀಯ ವಿದ್ಯಮಾನವಾಗಿ ಹೊಮ್ಮಿವೆ. ಉದಾಹರಣೆಗೆ ನಿರ್ದೇಶಕ ಪಾ.ರಂಜಿತ್ ಅವರು ಕಾಲಾ (2018) ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮೂಲಕ ದಲಿತರ ಭೂಮಿಯ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ. ನಟ ಧನುಷ್ ಅಭಿನಯದ ವೆಟ್ರಿಮಾರನ್ ನಿರ್ದೇಶನದ ಅಸುರನ್‌, ಮಾರಿ ಸೆಲ್ವರಾಜ್ ನಿರ್ದೇಶನದ ಕರ್ಣನ್ (2021) ಪ್ರತಿರೋಧದ ಕಥನಗಳನ್ನು ಹೊಂದಿವೆ. ಟಿ.ಜಿ.ಜ್ಞಾನವೇಲ್ ಅವರ ‘ಜೈ ಭೀಮ್’ (2021) ಇರುಳ ಬುಡಕಟ್ಟಿನ ಮಹಿಳೆಯ ಪರವಾಗಿ ನ್ಯಾಯಕ್ಕಾಗಿ ಹೋರಾಡುವ ವಕೀಲರ ಕುರಿತ್ತಾದ್ದಾಗಿದೆ.

‘ದಿ ನ್ಯೂಸ್‌ ಮಿನಿಟ್‌’ ಜಾಲತಾಣದೊಂದಿಗೆ ಮಾತನಾಡಿರುವ ಪಡ ನಿರ್ದೇಶಕ ಕಮಲ್, “ಮಲಯಾಳಂ ಚಿತ್ರರಂಗವು ಯಾವಾಗಲೂ ಜಾತಿಯ ಬಗ್ಗೆ ಮಾತನಾಡುವುದರಿಂದ ದೂರವಿರುತ್ತದೆ. ವರ್ಗ ವ್ಯತ್ಯಾಸಗಳು ಸಾಮಾನ್ಯವಾಗಿ ಸಿನಿಮಾ, ರಂಗಭೂಮಿ ಮತ್ತು ಸಂಗೀತದಲ್ಲಿ ಪ್ರತಿಫಲಿಸುತ್ತದೆ. ಆದರೆ ಸಮಾಜದಲ್ಲಿನ ಅಧಿಕಾರ ರಚನೆಗಳನ್ನು ವ್ಯಾಖ್ಯಾನಿಸುವ ಜಾತಿಯ ವಿಷಯಕ್ಕೆ ಬಂದರೆ, ಮಲಯಾಳಂ ಚಿತ್ರರಂಗ ಈ ವಿಷಯದಿಂದ ವಿಮುಖವಾಗಿತ್ತು. ಆದರೆ ಜಾತಿ ಸಮಸ್ಯೆಯನ್ನು ಸಕ್ರಿಯವಾಗಿ ಒಡೆದುಹಾಕುವಲ್ಲಿ ತಮಿಳು ಚಿತ್ರರಂಗ ಮಾತ್ರ ಯಶಸ್ವಿಯಾಗಿದೆ” ಎಂದಿದ್ದಾರೆ.

ಐತಿಹಾಸಿಕವಾಗಿ, ಆದಿವಾಸಿ ಜನರು ಹಿಂದೂ ಎಂದು ಗುರುತಿಸಿಕೊಳ್ಳಲಿಲ್ಲ. ಆದ್ದರಿಂದ ಹಿಂದೂ ಸಮಾಜದ ಜಾತಿ ರಚನೆಗಳಿಂದ ಹೊರಗಿದ್ದರು. ಆದರೆ ಅವರ ಸಂಸ್ಕೃತಿಯ ಅಳಿವಿನಿಂದಾಗಿ ಅವರು ಜಾತಿ ಪದ್ಧತಿ ಮತ್ತು ಬಹಿಷ್ಕಾರಕ್ಕೆ ಒಳಗಾಗುತ್ತಾರೆ. ಪಡ ಸಿನಿಮಾದ ಒಂದು ಒಂದು ಪಾತ್ರವು ಆದಿವಾಸಿ ಜನರ ಹಕ್ಕುಗಳನ್ನು ನಿರ್ಲಕ್ಷಿಸುವ ‘ಸವರ್ಣ ರಾಜ್ಯ’ವನ್ನು ಪ್ರಶ್ನಿಸುತ್ತದೆ. ಮುಖ್ಯವಾಹಿನಿಯ ಮಲಯಾಳಂ ಚಲನಚಿತ್ರದಲ್ಲಿ ಸರ್ಕಾರವನ್ನು ಹೀಗೆ ವಿವರಿಸಿರುವುದು ಬಹುಶಃ ಇದೇ ಮೊದಲು ಎಂದು ನ್ಯೂಸ್‌ ಮಿನಿಟ್‌ ವರದಿ ಹೇಳುತ್ತದೆ.

ಈ ಘಟನೆ ನಡೆದಾಗ ಪತ್ರಿಕೋದ್ಯಮದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದೆ ಎನ್ನುವ ಕಮಲ್ ಘಟನೆಯನ್ನು ನೆನೆದಿದ್ದಾರೆ. “ಆ ಸಮಯದಲ್ಲಿ, ಕೇರಳದಲ್ಲಿ ಮಿಲಿಟೆಂಟ್ ಕ್ರಮಗಳು ವಿರಳವಾಗಿತ್ತು. ಈ ಘಟನೆಯು ತೀವ್ರತೆಯನ್ನು ಪಡೆದುಕೊಂಡಿತು. ಹಲವಾರು ಗಂಟೆಗಳ ಕಾಲ ಒತ್ತೆ ಇಟ್ಟುಕೊಳ್ಳಲಾಗಿತ್ತು. ನನಗೆ ನೆನಪಿರುವಂತೆ, ರಾಜಕೀಯ ವರ್ಗವು ಈ ವಿಷಯದಲ್ಲಿ ಮೌನವಾಗಿದೆ. ರಾಜಕೀಯ ವರ್ಗ ಈ ಪ್ರಕರಣವನ್ನು ಆಗಿನ ಮುಖ್ಯ ಕಾರ್ಯದರ್ಶಿ ಒಳಗೊಂಡ ಬಿಕ್ಕಟ್ಟು ನಿರ್ವಹಣಾ ತಂಡಕ್ಕೆ ಬಿಟ್ಟು ಜಾರಿಕೊಂಡಿತು. ನಂತರ, ಘಟನೆಯ ಬಗ್ಗೆ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಧಾನವಾಗಿ ನಡೆದಿದ್ದರಿಂದ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಆದರೆ ಆರೋಪ ಪ್ರತ್ಯಾರೋಪಗಳು ನಡೆದವು. ಅವರು ಕಾನೂನಿನ ಕುರಿತಾಗಲಿ, ಆದಿವಾಸಿಗಳು ಎತ್ತಿರುವ ಪ್ರಶ್ನೆಗಳ ಕುರಿತಾಗಲೀ ಆಸಕ್ತಿ ಹೊಂದಿರಲಿಲ್ಲ” ಎಂದು ನಿರ್ದೇಶಕರು ತಿಳಿಸಿದ್ದಾರೆ.


ಇದನ್ನೂ ಓದಿರಿ: ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುತ್ತಿರುವ ಕನ್ನಡ ಮಾಧ್ಯಮಗಳು: ಜನಾಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಪ್ರತಿಭಟನೆ: ಮತ್ತೊಬ್ಬ ರೈತ ಮೃತ್ಯು; 15 ದಿನಗಳಲ್ಲಿ ಆರನೇ ಸಾವು

0
ಪಂಜಾಬ್-ಹರಿಯಾಣದ ಖನೌರಿ ಗಡಿಯಲ್ಲಿ ಮತ್ತೋರ್ವ ರೈತ ಸಾವನ್ನಪ್ಪಿದ್ದು, ಈ ಮೂಲಕ ಕಳೆದ 15 ದಿನಗಳಲ್ಲಿ 'ದೆಹಲಿ ಚಲೋ' ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಟ್ಟು ಆರು ಮಂದಿ ರೈತರು ಮೃತಪಟ್ಟಂತಾಗಿದೆ. ಮೃತ ರೈತನನ್ನು ಕರ್ನೈಲ್ ಸಿಂಗ್ (62)...