Homeಅಂತರಾಷ್ಟ್ರೀಯಬಹ್ರೈನ್: ಶಾಲು ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಣೆ; ಭಾರತೀಯ ಮೂಲದ ರೆಸ್ಟೋರೆಂಟ್‌ ಮುಚ್ಚಿದ ಅಧಿಕಾರಿಗಳು

ಬಹ್ರೈನ್: ಶಾಲು ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಣೆ; ಭಾರತೀಯ ಮೂಲದ ರೆಸ್ಟೋರೆಂಟ್‌ ಮುಚ್ಚಿದ ಅಧಿಕಾರಿಗಳು

- Advertisement -
- Advertisement -

ಶಾಲು ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪದ ಮೇಲೆ ಬಹ್ರೈನ್‌‌ನ ಅಧಿಕಾರಿಗಳು ಭಾರತೀಯ ರೆಸ್ಟೋರೆಂಟ್‌ ಅನ್ನು ಮುಚ್ಚಿದ್ದಾರೆ ಎಂದು ‘‘ಗಲ್ಫ್‌ ಡೈಲಿ ನ್ಯೂಸ್‌ ಆನ್‌ಲೈನ್‌’’ ವರದಿ ಮಾಡಿದೆ. ಘಟನೆಯ ಕುರಿತು ಬಹ್ರೈನ್‌ ಪ್ರವಾಸೋದ್ಯಮ ಮತ್ತು ವಸ್ತುಪ್ರದರ್ಶನಗಳ ಪ್ರಾಧಿಕಾರ (BTEA) ತನಿಖೆಯನ್ನು ಪ್ರಾರಂಭಿಸಿದೆ. ಬಹ್ರೈನ್‌ನ ರಾಜಧಾನಿ ಮನಾಮಾದ ಅದ್ಲಿಯಾ ಪ್ರದೇಶದಲ್ಲಿರುವ ‘ಲ್ಯಾಂಟರ್ನ್ಸ್ ರೆಸ್ಟೋರೆಂಟ್‌’ನಲ್ಲಿ ಈ ಘಟನೆ ನಡೆದಿದೆ.

“ಜನರ ವಿರುದ್ಧ ತಾರತಮ್ಯ ಮಾಡುವ ಎಲ್ಲಾ ನಡೆಗಳನ್ನು ನಾವು ತಿರಸ್ಕರಿಸುತ್ತೇವೆ. ವಿಶೇಷವಾಗಿ ಅವರ ರಾಷ್ಟ್ರೀಯ ಗುರುತಿನ ತಾರತಮ್ಯವನ್ನು ನಾವು ತಿರಸ್ಕರಿಸುತ್ತೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುತ್ತಿರುವ ಕನ್ನಡ ಮಾಧ್ಯಮಗಳು: ಜನಾಕ್ರೋಶ

ಕರ್ತವ್ಯದಲ್ಲಿದ್ದ ಮ್ಯಾನೇಜರ್‌ ಭಾರತೀಯ ಎಂದು ವರದಿಗಳು ಉಲ್ಲೇಖಿಸಿದೆ. ಆತನನ್ನು ರೆಸ್ಟೋರೆಂಟ್ ಅಮಾನುತುಗೊಳಿಸಿದೆ ಎಂದು ಹೇಳಿದ್ದು, ಘಟನೆಗೆ ವಿಷಾದ ವ್ಯಕ್ತಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಕ್ಷಮೆ ಕೇಳಿರುವ ರೆಸ್ಟೋರೆಂಟ್‌‌, “ಬಹ್ರೈನ್‌ನ ಸುಂದರ ಸಾಮ್ರಾಜ್ಯದಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ನಾವು ಎಲ್ಲಾ ದೇಶಗಳ ಜನರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಲ್ಯಾಂಟರ್ನ್ಸ್‌‌ ಪ್ರತಿಯೊಬ್ಬರೂ ತಮ್ಮ ಕುಟುಂಬಗಳೊಂದಿಗೆ ಬಂದು ಆನಂದಪಡುವ ಮನೆಯ ಅನುಭವ ನೀಡುವ ಒಂದು ಸ್ಥಳವಾಗಿದೆ” ಎಂದು ಹೇಳಿದೆ.

“ಈ ನಿದರ್ಶನದಲ್ಲಿ, ಈಗ ಅಮಾನತುಗೊಂಡಿರುವ ನಿರ್ವಾಹಕರಿಂದ ತಪ್ಪಾಗಿದ್ದು, ಈ ಘಟನೆಯು ನಮ್ಮನ್ನು ಪ್ರತಿನಿಧಿಸುವುದಿಲ್ಲ. ಸದ್ಭಾವನೆಯ ಸೂಚಕವಾಗಿ, ನಾವು ನಮ್ಮ ಎಲ್ಲಾ ಬಹ್ರೈನ್‌ನ ಪೋಷಕರನ್ನು ಮಾರ್ಚ್ 29 ರ ಮಂಗಳವಾರದಂದು ಲ್ಯಾಂಟರ್ನ್ಸ್‌‌ ಸ್ವಾಗತಿಸುತ್ತಿದ್ದು ಅಂದು ಕಾಂಪ್ಲಿಮೆಂಟರಿ ಆಹಾರ ನೀಡಲಿದ್ದೇವೆ” ಎಂದು ಲ್ಯಾಂಟರ್ನ್ಸ್‌‌‌ ರೆಸ್ಟೋರೆಂಟ್‌ ಹೇಳಿದೆ.

 

View this post on Instagram

 

A post shared by LanternsBahrain (@lanternsbahrain)

ಪ್ರವಾಸೋದ್ಯಮ ಸಂಬಂಧಿತ ಸಂಸ್ಥೆಗಳಿಗೆ ಸಂಬಂಧಿಸಿದ 1986 ರ ಡಿಕ್ರಿ ಕಾನೂನು ಸಂಖ್ಯೆ 15 ರ ಪ್ರಕಾರ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದೆ ಎಂದು BTEA ಹೇಳಿದೆ.

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ನಡುವೆಯೇ ಬಹ್ರೈನ್‌ನಲ್ಲಿ ಈ ಘಟನೆ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಾಯೋಜಿತ ಇಸ್ಲಾಮೊಫೋಬಿಯಾ ವಿರುದ್ದ ಈಗಾಗಲೆ ಅಂತರಾಷ್ಟ್ರೀಯವಾಗಿ ಖಂಡನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹರ್ಷ ಹತ್ಯೆ ಬಳಿಕ ಹಿಂಸಾಚಾರ: ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯದಲ್ಲಿ ಖಾಸಗಿ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ದೇಶ ತೊರೆಯುವುದನ್ನು ಪ್ರಧಾನಿ ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ

0
ಹಾಸನ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭಾರತ ತೊರೆಯುವುದನ್ನು ಪ್ರಧಾನಿ ನರೇಂದ್ರ ಮೋದಿ ತಡೆದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಅಸ್ಸಾಂನ...