Homeಅಂತರಾಷ್ಟ್ರೀಯಭಾರತದ ಕೆಮ್ಮು ಸಿರಪ್ ಮಕ್ಕಳ ಸಾವಿಗೆ ಕಾರಣವಾಗುತ್ತಿದೆ: ತನಿಖೆಗೆ ಕಾಂಗ್ರೆಸ್ ಒತ್ತಾಯ

ಭಾರತದ ಕೆಮ್ಮು ಸಿರಪ್ ಮಕ್ಕಳ ಸಾವಿಗೆ ಕಾರಣವಾಗುತ್ತಿದೆ: ತನಿಖೆಗೆ ಕಾಂಗ್ರೆಸ್ ಒತ್ತಾಯ

- Advertisement -
- Advertisement -

ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳು ಮಾರಕವೆಂದು ಕಾಣುತ್ತಿದೆ. ಇದರಿಂದ ಜಗತ್ತಿನ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಈ ಕುರಿತು ಮೋದಿ ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳು ಮಾರಕವಾಗುತ್ತಿದೆ. ಮೊದಲು ಈ ಸಿರಪ್ ಸೇವನೆಯಿಂದ ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವಿಗೀಡಾಗಿದ್ದರು ಮತ್ತು ಈಗ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಮೃತಪಟ್ಟಿದ್ದಾರೆ. ಮೋದಿ ಸರ್ಕಾರವು ಭಾರತವನ್ನು ಜಗತ್ತಿಗೆ ಔಷಧಾಲಯ ಎಂದು ಹೆಮ್ಮೆಪಡುವುದನ್ನು ನಿಲ್ಲಿಸಬೇಕು ಮತ್ತು ಈ ತಯಾರಕ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಈ ವರ್ಷದ ಸೆಪ್ಟಂಬರ್ 29 ರಂದು ಕೆಮ್ಮಿನ ಸಿರಪ್ ಸೇವಿಸಿದ ಗ್ಯಾಂಬಿಯಾದ 66 ಮಕ್ಕಳು ಸಾವನಪ್ಪಿದ್ದರು. ಈ ಕುರಿತು ಡಬ್ಲುಎಚ್‌ಓ ಭಾರತ ಸರ್ಕಾರದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು. ಹಾಗಾಗಿ ಹರಿಯಾಣ ಮೂಲಕ 4 ಔಷಧ ಕಂಪನಿಗಳ ಮೇಲೆ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಸರ್ಕಾರ ಹೇಳಿತ್ತು.

ಹರ್ಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಕಂಪನಿಯು ಕೆಮ್ಮಿನ ಸಿರಪ್ ಅನ್ನು ತಯಾರಿಸಿತ್ತು. ಅದನ್ನು ಸೇವಿಸಿದ ಗ್ಯಾಂಬಿಯಾದ ಮಕ್ಕಳು ಮೂತ್ರಪಿಂಡದ ಹಾನಿ ಸಮಸ್ಯೆಯಿಂದ ಪ್ರಾಣ ಬಿಟ್ಟಿದ್ದರು. ಈ ಸಿರಪ್‌ಗಳನ್ನು ಗ್ಯಾಂಬಿಯಾ ದೇಶಕ್ಕೆ ಮಾತ್ರ ರಫ್ತು ಮಾಡಲಾಗಿದೆಯೆ ಅಥವಾ ಇತರ ದೇಶಗಳಿಗೂ ಕಳುಹಿಸಲಾಗಿದೆಯೇ ಎಂಬುದರ ಕುರಿತು ಕಂಪನಿ ಇನ್ನು ಮಾಹಿತಿ ನೀಡಿಲ್ಲ. ಈ ಕುರಿತು ಎಚ್ಚರಿಕೆ ವಹಿಸುವಂತೆ ಇತರ ದೇಶಗಳಿಗೆ ಡಬ್ಲುಎಚ್‌ಓ ತಿಳಿಸಿತ್ತು. ಆದರೆ ಅದಾದ ಎರಡು ತಿಂಗಳ ನಂತರ ಸಿರಪ್ ಸೇವನೆಯಿಂದ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಸುದ್ದಿಗಾರರೊಂದಿಗೆ ಮಾತನಾಡಿ, “ಪ್ರೋಮೆಥಾಜಿನ್ ಓರಲ್ ಸಲ್ಯೂಷನ್, ಕೋಫೆಕ್ಸ್‌ಮಾಲಿನ್ ಮಕ್ಕಳ ಕೆಮ್ಮಿನ ಸಿರಪ್, ಮ್ಯಾಕೋಫ್ ಮಕ್ಕಳ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಔಷಧಿಗಳಾಗಿವೆ” ಎಂದು ಹೇಳಿದ್ದರು. ಈ ನಾಲ್ಕೂ ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಅವುಗಳು ಅಧಿಕ ಪ್ರಮಾಣದ ಡೈಥಿಲೀನ್ ಸ್ಟೈಕೋಲ್ ಮತ್ತು ಎಥಿಲೀನ್ ಗೈಕೋಲ್ ಅನ್ನು ಒಳಗೊಂಡಿವೆ ಎಂಬುದು ಖಚಿತಪಟ್ಟಿದೆ. ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಇದುವರೆಗೂ ಡಬ್ಲುಎಚ್‌ಓ ಗ್ಯಾರಂಟಿ ನೀಡಿಲ್ಲ” ಎಂದು ಆರೋಪಿಸಿದ್ದರು.

ಇದನ್ನೂ ಓದಿ; ಒಪಿಎಸ್ ಜಾರಿ ಸಾಧ್ಯವಿಲ್ಲ ಎಂಬ ಸಿದ್ಧ ಉತ್ತರ ಬದಿಗಿಟ್ಟು ಸದನದಲ್ಲಿ ಚರ್ಚೆ ಮಾಡಲಿ: ಹೋರಾಟಗಾರರ ಪಟ್ಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದ್ವೇಷ’ ಬಿತ್ತುವ ಮೂರನೇ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡ ಬಿಜೆಪಿ: ಮೌನವಹಿಸಿರುವ ಚು. ಆಯೋಗ

0
ಲೋಕಸಭೆಯ ಹೊಸ್ತಿಲಲ್ಲಿ ಬಿಜೆಪಿ ಮೀಸಲಾತಿ ಬಗ್ಗೆ ಮುಸ್ಲಿಮರು ಮತ್ತು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಮೂರನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಚು.ಅಯೋಗ ಮಾತ್ರ  ಮೌನವಾಗಿರುವುದು ಕಂಡು ಬಂದಿದೆ. ಕರ್ನಾಟಕ ಬಿಜೆಪಿ, ಮೀಸಲಾತಿ...