Homeಮುಖಪುಟಗುಜರಾತ್| 200ಕ್ಕೆ 212 ಅಂಕ ಪಡೆದ ವಿದ್ಯಾರ್ಥಿನಿ: ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಪ್ರಶ್ನಿಸಿದ ಜನ

ಗುಜರಾತ್| 200ಕ್ಕೆ 212 ಅಂಕ ಪಡೆದ ವಿದ್ಯಾರ್ಥಿನಿ: ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಪ್ರಶ್ನಿಸಿದ ಜನ

- Advertisement -
- Advertisement -

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಪರೀಕ್ಷೆಯ ಫಲಿತಾಂಶಗಳಲ್ಲಿ ಕಂಡು ಬಂದ ದೋಷಗಳು ಭಾರೀ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ.

ವರದಿಗಳ ಪ್ರಕಾರ, ನಾಲ್ಕನೇ ತರಗತಿಯ ವಿದ್ಯಾರ್ಥಿನಿ ವಂಶಿಬೆನ್ ಮನೀಶ್‌ಭಾಯ್ ತನ್ನ ಅಂಕ ಪಟ್ಟಿಯನ್ನು ನೋಡಿ ಆಶ್ಚರ್ಯಚಕಿತಳಾಗಿದ್ದಾಳೆ. ಏಕೆಂದರೆ, ಆಕೆಗೆ 200 ಅಂಕದ ಗುಜರಾತಿ ವಿಷಯದಲ್ಲಿ 211 ಅಂಕ ಸಿಕ್ಕಿತ್ತು. ಇನ್ನು 200 ಅಂಕದ ಗಣಿತದಲ್ಲಿ 212 ಅಂಕ ದೊರೆತಿತ್ತು.

ಫಲಿತಾಂಶ ಸಂಕಲನದ ವೇಳೆ ದೋಷ ಸಂಭವಿಸಿದೆ ಎಂದು ನಂತರ ತಿಳಿದು ಬಂದಿದೆ. ಪರಿಷ್ಕೃತ ಫಲಿತಾಂಶ ಅಂಕ ಪಟ್ಟಿಯಲ್ಲಿ ವಿದ್ಯಾರ್ಥಿನಿಗೆ ಗುಜರಾತಿಯಲ್ಲಿ 200ಕ್ಕೆ 191 ಅಂಕಗಳು ಮತ್ತು ಗಣಿತದಲ್ಲಿ 200ಕ್ಕೆ 190 ಅಂಕಗಳು ದೊರೆತಿವೆ. ಉಳಿದ ವಿಷಯಗಳ ಅಂಕಗಳು ಬದಲಾಗದೆ ಉಳಿದಿವೆ.

ವಂಶಿಬೆನ್ ತನ್ನ ಫಲಿತಾಂಶಗಳನ್ನು ತನ್ನ ಕುಟುಂಬದೊಂದಿಗೆ ಹೆಮ್ಮೆಯಿಂದ ಹಂಚಿಕೊಂಡ ನಂತರ ಅಂಕಪಟ್ಟಿಯಲ್ಲಿನ ತಪ್ಪು ವೈರಲ್ ಆಗಿದೆ.

ಪ್ರಮಾದಕ್ಕೆ ಪ್ರತಿಕ್ರಿಯೆಯಾಗಿ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ದೋಷದ ಕಾರಣವನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆ:

ವಿದ್ಯಾರ್ಥಿನಿಯ ಅಂಕಪಟ್ಟಿಯನ್ನು ಸಂಕಲನ ಮಾಡುವಾಗ ಅಂಕಗಳಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ. ಆದರೆ, ಸಾರ್ವಜನಿಕರು ಸಂಕಲನ ಮಾಡಿದ ಶಿಕ್ಷಕರ ಪಾಠದ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ. ಗಮನಾರ್ಹವಾಗಿ ಗಣಿತ ವಿಷದಲ್ಲಿ ವಿದ್ಯಾರ್ಥನಿಗೆ 200ಕ್ಕೆ 212 ಅಂಕ ನೀಡಲಾಗಿತ್ತು.

ವೈರಲ್ ಆದ ಬಳಿಕ ವಿದ್ಯಾರ್ಥಿನಿಯ ಅಂಕಪಟ್ಟಿಯನ್ನು ತಿದ್ದಲಾಗಿದೆ. ಆದರೆ, ಈ ರೀತಿಯ ಪ್ರಮಾದಗಳು ಇನ್ನೆಷ್ಟು ವಿದ್ಯಾರ್ಥಿಗಳಲ್ಲಿ ಸಂಭವಿಸಿದೆ ಎಂದು ಗೊತ್ತಿಲ್ಲ.

ಗುಜರಾತ್ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾಗಿರುವುದರಿಂದ ಈ ಹಿಂದೆ ಮೋದಿ ಹೇಳಿದ 2ab ಫಾರ್ಮುಲಾವನ್ನು ನೆನಪಿಸಿ ಸಾಮಾಜಿಕ ಜಾಲತಾಣ ಬಳಕೆದಾರರು, ಗುಜರಾತ್ ಮಾದರಿಯ ಶಿಕ್ಷಣ, ಹೆಚ್ಚುವರಿ 2ab ಎಲ್ಲಿಂದ ಬಂತು ಎಂದು ನಿಮಗೆ ಈಗ ಗೊತ್ತಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ಕೇಜ್ರಿವಾಲ್‌ ನ್ಯಾಯಾಂಗ ಬಂಧನದ ಅವಧಿ ಮೇ.20ರವರೆಗೆ ವಿಸ್ತರಣೆ: ಮಧ್ಯಂತರ ಜಾಮೀನು ನೀಡುತ್ತಾ ಸುಪ್ರೀಂಕೋರ್ಟ್‌?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...