HomeUncategorizedಜೆಎನ್‌ಯು ಹಿಂಸೆ: ಪ್ರಜಾತಂತ್ರದ ಸೌಂದರ್ಯದ ಮೇಲಿನ ದಾಳಿ - ಸರೋವರ್‌ ಬೆಂಕಿಕೆರೆ

ಜೆಎನ್‌ಯು ಹಿಂಸೆ: ಪ್ರಜಾತಂತ್ರದ ಸೌಂದರ್ಯದ ಮೇಲಿನ ದಾಳಿ – ಸರೋವರ್‌ ಬೆಂಕಿಕೆರೆ

ಪ್ರತಿ ದಮನದ ನಂತರವೂ ಧೂಳಿನಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಪ್ರತಿಬಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟವೂ ಎದ್ದು ಬರುತ್ತಿದೆ..

- Advertisement -
- Advertisement -

ಬ್ರಾಹ್ಮಣ ಸಮುದಾಯಕ್ಕೆ ಹೊರತುಪಡಿಸಿ ಇತರೆ ಸಮುದಾಯಗಳಿಗೆ ಬಹುತೇಕ ನಾಗರಿಕ ಹಕ್ಕುಗಳು ಸಹಸ್ರಾರು ವರ್ಷಗಳ ಕಾಲ ನಿರಾಕರಣೆ ಆಗಿದ್ದ ದೇಶದಲ್ಲಿ ಅದರಲ್ಲೂ ಶಿಕ್ಷಣದ ಹತ್ತಿರಕ್ಕೂ ಬಿಟ್ಟುಕೊಳ್ಳದೇ ಜಾತಿ ಪದ್ಧತಿಯನ್ನು ಆಳವಾಗಿ ಬೇರುಬಿಟ್ಟುಕೊಂಡಿರುವ ದೇಶವೊಂದರಲ್ಲಿ ಜೆಎನ್‌ಯು ಅಂಥ ವಿಶ್ವವಿದ್ಯಾಲಯವು ವಿಶೇಷವಾಗಿ ನಿಲ್ಲುತ್ತದೆ. ಸ್ವಾತಂತ್ರ್ಯ ದ 70 ವರ್ಷಗಳ ನಂತರವೂ ಸಾಕ್ಷರತೆಯನ್ನೂ ಗುಣಾತ್ಮಕವಾಗಿ ಸಾಧಿಸಲೂ ಈವರೆಗೂ ಸಾಧ್ಯವಿಲ್ಲದಿರುವಾಗ ದಲಿತರು, ಅಲ್ಪ ಸಂಖ್ಯಾತರು, ಆದಿವಾಸಿ, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದ ಸಮುದಾಯವದರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಲು ಸಾಧ್ಯ ಮಾಡಿದ್ದು ಜೆಎನ್‌ಯು ಆಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರಾತಿನಿಧ್ಯವೂ ಇದೆ. ಅಲ್ಲದೆ ಇಲ್ಲಿ ಶಿಕ್ಷಣ ಪಡೆದ ಅನೇಕ ತಳಸಮುದಾಯದ ಯುವತಿಯುವಕರು ಹೊರದೇಶಗಳಲ್ಲಿ, ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರುಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಆಳುವ ಮನುವಾದಿ ಸರ್ಕಾರಗಳಿಗೆ ಹಾಗೂ ಮೇಲ್ವರ್ಗದ ಜನರಿಗೆ ಜೆಎನ್‌ಯು ಎಂದರೆ ‘ಸಹಜವಾಗಿ’ ಅಸಹನೆ ಇದ್ದೇಯಿದೆ!

ಜೆಎನ್ಯು ಮೇಲೆ ಸರ್ಕಾರಕ್ಕೆ ದ್ವೇಷ ಯಾಕೆ?

ಹೈದರಾಬಾದ್‌ನ ಹೆಚ್‌ಸಿಯುನ ಪ್ರತಿಭಾವಂತ ವಿದ್ಯಾರ್ಥಿ ರೋಹಿತ್ ವೇಮುಲನ ಸಾಂಸ್ಥಿಕ ಕೊಲೆಯ ನಂತರದಲ್ಲಿ ದೇಶದಾದ್ಯಂತ ನಡೆದ ವಿದ್ಯಾರ್ಥಿ ಯುವಜನರ ಹೋರಾಟದಲ್ಲಿ ಜೆಎನ್‌ಯು ಕೇಂದ್ರ ಸರ್ಕಾರದ ವೈಫಲ್ಯವನ್ನು ಗಮನ ಸೆಳೆಯುವಂತೆ ಎತ್ತಿಹಿಡಿದಿತ್ತು. ಇತ್ತೀಚೆಗಷ್ಟೆ ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ‘ಒಂದಿಂಚೂ ಹಿಂದೆ ಸರಿಯುವುದಿಲ್ಲ’ ಎನ್ನುವ ಘೋಷಣೆಯೊಂದಿಗೆ ಧೀರೋದ್ಧಾತ ಪ್ರತಿಭಟನೆಗಳನ್ನು ನಡೆಸಿದ್ದರು. ಇದನ್ನು ಕೇಂದ್ರ ನಿರೀಕ್ಷೆ ಮಾಡಿರಲಿಲ್ಲ.

ಇನ್ನು ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯು ಕೇಂದ್ರ ಸರ್ಕಾರಕ್ಕೆ ದಂಗು ಬಡಿದಂತಾಗಿತ್ತು. ತಮ್ಮ ಬಹುಮತದಿಂದ ಏನು ಬೇಕಾದರೂ ಮಾಡಬಹುದು ಎಂದು ಅಂದುಕೊಂಡಿದ್ದ ಬಿಜೆಪಿಗೆ ದೇಶದ ವಿದ್ಯಾರ್ಥಿ ಯುವಜನರು ದೊಡ್ಡ ಶಾಕ್ ನೀಡಿದ್ದರು. ಅದರಲ್ಲೂ ಜೆಎನ್‌ಯು ವಿದ್ಯಾರ್ಥಿಗಳು ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಅಲ್ಲದೆ ನಿರಂತರವಾಗಿ ಬರುತ್ತಿದ್ದ ಜನವಿರೋಧಿ ನೀತಿಗಳು, ಆರ್ಥಿಕ ಕುಸಿತ, ನಿರುದ್ಯೋಗ ಏರಿಕೆ ಇತ್ಯಾದಿ ಸೇರಿ ಹತ್ತಾರು ಜನರ ನಿಜವಾದ ವಿಚಾರಗಳು ಮುನ್ನಲೆಗೆ ಬರುವಂತೆ ಕಾರ್ಯಕ್ರಮಗಳು, ಪ್ರತಿಭಟನೆಗಳನ್ನು ಜೆಎನ್‌ಯು ವಿದ್ಯಾರ್ಥಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಕೇಂದ್ರ ಉತ್ತರ ಕೊಡಲಾಗದ ಪ್ರಶ್ನೆಗಳನ್ನು ಎತ್ತಿದ್ದಾರೆ. ತಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣದ ಜ್ಞಾನ ಪಡೆದಾಗ ಜನಪರವಾದ ಪ್ರಶ್ನೆಗಳು ಕೇಳುವುದು ಸಾಮಾನ್ಯವಾಗಿ ಬರುವ ಗುಣವಾಗಿದೆ. ಮೇಲಿನ ಈ ಎಲ್ಲಾ ಕಾರಣಗಳಿಗಾಗಿ ತಮ್ಮ ವೈಫಲ್ಯವನ್ನು ಸರಿಮಾಡಿಕೊಳ್ಳುವ ಬದಲಾಗಿ ಸರ್ಕಾರವು ದ್ವೇಷವನ್ನು ಬೆಳೆಸಿಕೊಂಡಿದೆ.

ಜೆಎನ್‌ಯು ಕೇವಲ ಎಡಪಕ್ಷದ ಪರವಿರುವ ವಿದ್ಯಾರ್ಥಿಗಳು, ಕೇವಲ ಬಿಜೆಪಿ ವಿರುದ್ಧ ಕೆಲಸ ಮಾಡುವವರು ಎಂದು ಅಪಪ್ರಚಾರವನ್ನು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ನಂದಿಗ್ರಾಮ ಇತ್ಯಾದಿ ಜಾಗದಲ್ಲಿ ನಡೆದ ಹಿಂಸೆಯ ವಿರುದ್ಧವೂ ಜೆಎನ್‌ಯು ದನಿ ಎತ್ತಿತ್ತು. 1996ರಲ್ಲಿ ಜನಪರವಾದ ಪಕ್ಷದ ಪರ ಬಿಹಾರದಲ್ಲಿ ಪ್ರಚಾರ ಮಾಡಿದ್ದರು ಅನ್ನುವ ಕಾರಣಕ್ಕೆ ಜೆಎನ್‌ಯು ವಿದ್ಯಾರ್ಥಿ ಮುಖಂಡರನ್ನು ಕೊಲೆ ಮಾಡಲಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಅವಧಿಯ ನಿರ್ಭಯ ಅತ್ಯಾಚಾರ ಸಂದರ್ಭದಲ್ಲಿ ನಿರಂತರವಾಗಿ ವಿದ್ಯಾರ್ಥಿ ಹೋರಾಟದ ಕಾವನ್ನು ಕಾಪಿಟ್ಟುಕೊಂಡಿದ್ದು ಜೆಎನ್‌ಯು. ಕಾಶ್ಮೀರದ 370 ರದ್ಧತಿ ಸಂದರ್ಭದಲ್ಲಿ, ಹೊಸ ಶಿಕ್ಷಣ ನೀತಿ ಕರಡು ಬಂದ ಸಮಯದಲ್ಲಿ ಮತ್ತು ಹಲವಾರು ಇತರ ಜನವಿರೋಧಿ ನೀತಿಗಳು ಬಂದಾಗ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿರೋಧಗಳು ಬರದೇ ಇದ್ದಾಗ ಜೆಎನ್‌ಯು ಮಾತ್ರ ಪ್ರತಿರೋಧವನ್ನು ಒಡ್ಡುತ್ತಲಿತ್ತು. ಹೀಗೆ ಬಹು ಕಾಲದಿಂದ ಜನಪರವಾಗಿ ವಿದ್ಯಾರ್ಥಿ ಹೋರಾಟದ ಬದ್ಧತೆಯನ್ನು ಜೆಎನ್‌ಯು ಕಾಪಾಡಿಕೊಂಡಿದೆ. ಈ ಬದ್ಧತೆಯನ್ನು ಮುರಿಯುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡುತ್ತಾ ಬರುತ್ತಿವೆ. ಆದರೆ ಈ ಕಾಲದ ಕೇಂದ್ರ ಸರ್ಕಾರ ಕ್ರೂರವಾಗಿ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತಿದೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದಾಳಿ ಏಕಾಯಿತು?

ಸಿಎಎ, ಎನ್‌ಆರ್‌ಸಿ ವಿರುದ್ಧದ ದೇಶದಾದ್ಯಂತ ಬಂದ ಪ್ರತಿರೋಧವನ್ನು ಕೇಂದ್ರ ಸುಧಾರಿಸಿಕೊಳ್ಳದಾಯಿತು. ಅದರಲ್ಲೂ ವಿದ್ಯಾರ್ಥಿ ಯುವಜನರ ಪಾತ್ರ ಅವರಿಗೆ ದಿಗಿಲು ಬಡಿಸಿತ್ತು. ಈ ಹೊತ್ತಿಗಾಗಲೇ ದೇಶದ್ರೋಹದಂತಹ ನೂರಾರು ಸುಳ್ಳು ಕೇಸು, ಜೈಲು ಎಲ್ಲವನ್ನೂ ನೋಡಿ ಬಂದಂತಹ ಜೆಎನ್‌ಯು ವಿದ್ಯಾರ್ಥಿಗಳನ್ನು ಯಾವುದರಿಂದಲೂ ಹೆದರಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಕೇಂದ್ರ ಬಂದಿತ್ತಾದರೂ ಎಬಿವಿಪಿ ಗೂಂಡಾಗಳನ್ನು ಬಳಸಿಕೊಂಡು, ವಿಸಿ ಹಾಗೂ ಪೊಲೀಸರ ಸಹಾಯದಿಂದಲೂ ದಾಳಿ ನಡೆಸಿದೆ.

ಜೆಎನ್‌ಯು ವಿದ್ಯಾರ್ಥಿ ಹಾಗೂ ಪ್ರೊಫೆಸರ್‌ಗಳು ಹೇಳುವಂತೆ ಮೌಖಿಕವಾಗಿ ಪೋಲಿಸರಿಗೆ ಎರಡು ಗಂಟೆಗಳ ಕಾಲ ಸುಮ್ಮನಿದ್ದು ದಾಳಿಕೋರರಿಗೆ ಅವಕಾಶ ನೀಡಬೇಕು ಎನ್ನುವ ಆದೇಶವಿತ್ತು ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾದ ವಿಡಿಯೋಗಳು, ವಾಟ್ಸಾಪ್ ಗ್ರೂಪಿನ ಸಂದೇಶದ ಸ್ಕ್ರೀನ್ ಶಾಟ್‌ಗಳು ಈಗ ಬಹಿರಂಗವಾಗಿವೆ. ಶುಲ್ಕ ಹೆಚ್ಚಳದಿಂದ ಶುರುವಾಗಿ ಸಿಎಎ ವಿರುದ್ಧದ ಪ್ರತಿರೋಧದವರೆಗೂ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದು ಶಾಂತಿಯುತವಾಗಿ ನಡೆಯುತ್ತಿರುವುದು ಕೇಂದ್ರಕ್ಕೆ ಮತ್ತೊಂದು ನುಂಗಲಾರದ ತುತ್ತಾಗಿದೆ. ಇದರ ಮಹತ್ವ ಕುಗ್ಗಿಸಲು ಶಾಂತಿ ಕದಡಲು ವಿದ್ಯಾರ್ಥಿಗಳ ಮಧ್ಯ ಗಲಾಟೆ ನಡೆಯುತ್ತಿದೆ ಎಂದು ಬಿಂಬಿಸಲು ಈ ಪೂರ್ವನಿಯೋಜಿತ ದಾಳಿ ನಡೆಸಿದ್ದಾರೆ. ಈ ದಾಳಿಯ ನಂತರ ‘ಶಟ್‌ಡೌನ್ ಜೆಎನ್‌ಯು’ ಎಂದು ಟ್ರೆಂಡ್ ಮಾಡುತ್ತಿರುವುದೇ ಇವರ ಉದ್ದೇಶ ತಿಳಿಯುತ್ತಿದೆ. ಇದರಿಂದಾಗಿ ಒಂದು ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನದಲ್ಲಿ ಕೇಂದ್ರ ಇದ್ದಂತಿದೆ. ಒಂದು ನಿರಂತರವಾಗಿರುವ ಜೆಎನ್‌ಯು ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವುದು ಮತ್ತೊಂದು ತಳ ಸಮುದಾಯದ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದು.

ಇದೆಲ್ಲದರ ದಮನದ ನಂತರವೂ ಧೂಳಿನಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಪ್ರತಿಬಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟವೂ ಎದ್ದು ಬರುತ್ತಿದೆ. ಪ್ರಜಾತಂತ್ರವನ್ನು ಕಾಪಾಡಲು ದೇಶದಾದ್ಯಂತ ವಿದ್ಯಾರ್ಥಿಯುವಜನರು ಹೋರಾಟದ ಸಾಗರಕ್ಕೆ ಸೇರುತ್ತಿರುವುದು ಆಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೌಂದರ್ಯವಲ್ಲ; ಪ್ರಜಾಪ್ರಭುತ್ವದ ಜೀವ ಮತ್ತು ಆತ್ಮದ ಮೇಲಿನ ದಾಳಿ!

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...