HomeಚಳವಳಿJNU ಹಿಂಸಾಚಾರ ಖಂಡಿಸಿ, ಭಾರತ ಬಂದ್‌ ಬೆಂಬಲಿಸಿ ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಿಳಿದ ದೆಹಲಿ ವಿ.ವಿ ವಿದ್ಯಾರ್ಥಿಗಳು..

JNU ಹಿಂಸಾಚಾರ ಖಂಡಿಸಿ, ಭಾರತ ಬಂದ್‌ ಬೆಂಬಲಿಸಿ ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಿಳಿದ ದೆಹಲಿ ವಿ.ವಿ ವಿದ್ಯಾರ್ಥಿಗಳು..

- Advertisement -
- Advertisement -

JNUನಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ಖಂಡಿಸಿ, ಭಾರತ ಬಂದ್‌ ಬೆಂಬಲಿಸಿ ಸಹಸ್ರಾರು ಸಂಖ್ಯೆಯಲ್ಲಿ ದೆಹಲಿ ವಿ.ವಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆಯ ಜೊತೆಗೆ ಅವರ ಅಭಿಪ್ರಾಯಗಳಿಗೆ ಮುಕ್ತ ಸ್ವಾತಂತ್ರ್ಯವಿರಬೇಕೆಂದು ವಿದ್ಯಾರ್ಥಿಗಳ ಒತ್ತಾಯಿಸಿದ್ದಾರೆ.

“ಕಿರುಕುಳಕ್ಕೊಳಗಾದವರಿಗೆ ಮತ್ತು ಎಲ್ಲಾ ಧರ್ಮಗಳ ನಿರಾಶ್ರಿತರಿಗೆ ಮತ್ತು ಭೂಮಿಯ ಎಲ್ಲಾ ರಾಷ್ಟ್ರಗಳಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನೆಂದು ನನಗೆ ಹೆಮ್ಮೆ ಇದೆ.’ ಎಂಬ ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ಓದುವ ಮೂಲಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವೇಕಾನಂದರಿಗೆ ಗೌರವ ಸಲ್ಲಿಸಿದರು.

ತದನಂತರ ಕ್ಯಾಂಪಸ್‌ಗಳಲ್ಲಿನ ಹಿಂಸಾಚಾರದ ವಿರುದ್ಧ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಹೆಜ್ಜೆಹಾಕಿದರು.

ಇನ್ನು ಬೆಂಗಳೂರಿನಲ್ಲಿ 24 ಗಂಟೆಗಳ ನಿರಂತರ ಪ್ರತಿಭಟನೆಗೆ ಕರೆಕೊಟ್ಟಿರುವ ವಿದ್ಯಾರ್ಥಿಗಳು ಸಹ ಭಾರತ್‌ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಗೆ ಹಿರಿಯ ಇತಿಹಾಸಕಾರ ರಾಮಚಂದ್ರ ಗುಹಾ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ JNUSU ಮಾಜಿ ಅಧ್ಯಕ್ಷ ಸಾಯಿ ಬಾಲಾಜಿ, ಅವರು JNU ಅನ್ನು ಮುಚ್ಚಬಹುದು ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದರು. ಆದರೆ ಈಗ ಭಾರತದ ಪ್ರತಿ ರಸ್ತೆ ಮತ್ತು ನಗರಗಳಲ್ಲಿ ಸಣ್ಣ JNUಗಳು ತಲೆ ಎತ್ತುತಲಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: JNU ದಾಳಿ ಖಂಡಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಹರಿದು ಬಂದ ಯುವಜನತೆ…

ಹೈದರಾಬಾದ್‌ನ ಕೇಂದ್ರೀಯ ವಿ.ವಿ ವಿದ್ಯಾರ್ಥಿಗಳು ಸಹ ಜೆಎನ್‌ಯು ಮೇಲಿನ ದಾಳಿ, ಸಿಎಎ, ಎನ್‌ಆರ್‌ಸಿ ಖಂಡಿಸಿ ಮೆರವಣಿಗೆ ನಡೆಸಿದರು.

ಕೋಲ್ಕತ್ತ, ಮುಂಬೈ ಸೇರಿದಂತೆ ನೂರಾರು ಕಡೆ ವಿದ್ಯಾರ್ಥಿಗಳು ಇಂದೂ ಕೂಡ ಜೆಎನ್‌ಯು ದಾಳಿ ಖಂಡಿಸಿ ಮತ್ತು ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...