ಬಿಜೆಪಿ ವತಿಯಿಂದ ಇಂದು ನಡೆಯುತ್ತಿರುವ ಜನಸಂಕಲ್ಪ ಯಾತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಿಲ್ಲ. ಆದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಲೇವಡಿ ಮಾಡಿವೆ.
“ಶಿರಾ ದಲ್ಲಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯಲ್ಲಿ ಖಾಲಿ ಕುರ್ಚಿಗೆ ಭಾಷಣ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ. ಜನ ಸಂಕಲ್ಪ ಯಾತ್ರೆಯಲ್ಲಿ ಜನರೇ ಇಲ್ಲ. ಖಾಲಿ ಖುರ್ಚಿಗೆ ಭಾಷಣ ಮಾಡೋ ಕಲೆಯನ್ನು ಕರ್ನಾಟಕ ಬಿಜೆಪಿಯಿಂದ ನೋಡಿ ಕಲಿಯಬೇಕು” ಎಂದು ಜೆಡಿಎಸ್ ಪಕ್ಷ ಖಾಲಿ ಕುರ್ಚಿಗಳ ವಿಡಿಯೋ ಪೋಸ್ಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ.
ಮುಂದುವರಿದು “ಜೆ.ಪಿ ನಡ್ಡಾರವರೆ ಅವರೇ, ಕರ್ನಾಟಕ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಖಾಲಿ ಕುರ್ಚಿಗೆ ಭಾಷಣ ಮಾಡಿ ಸುಸ್ತಾಗಿದ್ದರೆ ಬೀದರ್ ನಲ್ಲಿ ಎಚ್.ಡಿ ಕುಮಾರಸ್ವಾಮಿಯವರು ನಡೆಸುತ್ತಿರುವ ಪಂಚರತ್ನ ರಥ ಯಾತ್ರೆಗೆ ಬನ್ನಿ, ಇಲ್ಲಿ ರಾತ್ರಿ 3:00 ಆಗಿದ್ದರೂ ಜನ ಜಾತ್ರೆ ಹೇಗಿರುತ್ತೆ ನೋಡಬನ್ನಿ” ಎಂದು ಜೆಡಿಎಸ್ ಪಕ್ಷ ಟ್ವೀಟ್ ಮಾಡಿದೆ.
ಶಿರಾ ದಲ್ಲಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯಲ್ಲಿ ಖಾಲಿ ಕುರ್ಚಿಗೆ ಭಾಷಣ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ @JPNadda ಜನ ಸಂಕಲ್ಪ ಯಾತ್ರೆಯಲ್ಲಿ ಜನರೇ ಇಲ್ಲ. ಖಾಲಿ ಖುರ್ಚಿಗೆ ಭಾಷಣ ಮಾಡೋ ಕಲೆ @BJP4Karnatakaರಿಂದ ನೋಡಿ ಕಲಿಯಬೇಕು
1/2 pic.twitter.com/94qCgsIrMX— Janata Dal Secular (@JanataDal_S) January 7, 2023
ಇನ್ನು ಬಿಜೆಪಿಯನ್ನು ಟೀಕಿಸಲು ಕಾಂಗ್ರೆಸ್ ಪಕ್ಷ ಸಹ ಹಿಂದೆ ಬಿದ್ದಿಲ್ಲ. ಖಾಲಿ ಕುರ್ಚಿಗಳಿಗೆ ಕಿವಿ ಇಲ್ಲ ಎನ್ನುವುದನ್ನು ಬಿಜೆಪಿ ಮರೆತಿದೆ ಎಂದು ಬಿಜೆಪಿಯ ಕಾಲೆಳೆದಿದೆ.
ಬಸವರಾಜ ಬೊಮ್ಮಾಯಿಯವರೆ, ಖಾಲಿ ಕುರ್ಚಿಗಳಿಗೆ ಕಿವಿ ಇಲ್ಲ ಎನ್ನುವುದನ್ನು ಅರಿತಿರುವಿರಾ?! ಖಾಲಿ ಕುರ್ಚಿಗಳ ಮೂಲಕ ಜೆ.ಪಿ ನಡ್ಡಾರವರಿಗೆ ಬೊಮ್ಮಾಯಿ ಸರ್ಕಾರದ ಸಾಧನೆಯ ದರ್ಶನವಾಗಿರಬಹುದು ಅಲ್ಲವೇ ಕರ್ನಾಟಕ ಬಿಜೆಪಿ? ರಾಜ್ಯದ ಜನತೆಯಷ್ಟೇ ಅಲ್ಲ ಬಿಜೆಪಿ ಕಾರ್ಯಕರ್ತರೇ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಕುರ್ಚಿಗಳು ಮಾತಾಡಿಕೊಳ್ಳುತ್ತಿದ್ದವು! ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ಕಾರ್ಯಕ್ರಮದ ಖಾಲಿ ಕುರ್ಚಿಗಳ ವಿಡಿಯೋ ಟ್ವೀಟ್ ಮಾಡಿದೆ.
'@BSBommai ಅವರೇ,
ಖಾಲಿ ಕುರ್ಚಿಗಳಿಗೆ ಕಿವಿ ಇಲ್ಲ ಎನ್ನುವುದನ್ನು ಅರಿತಿರುವಿರಾ?!ಖಾಲಿ ಕುರ್ಚಿಗಳ ಮೂಲಕ @JPNadda ಅವರಿಗೆ ಬೊಮ್ಮಾಯಿ ಸರ್ಕಾರದ ಸಾಧನೆಯ ದರ್ಶನವಾಗಿರಬಹುದು ಅಲ್ಲವೇ @BJP4Karnataka?
ರಾಜ್ಯದ ಜನತೆಯಷ್ಟೇ ಅಲ್ಲ ಬಿಜೆಪಿ ಕಾರ್ಯಕರ್ತರೇ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಕುರ್ಚಿಗಳು ಮಾತಾಡಿಕೊಳ್ಳುತ್ತಿದ್ದವು! pic.twitter.com/akOH8QLsPY
— Karnataka Congress (@INCKarnataka) January 6, 2023
2023ರಲ್ಲಿ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮೇಲೆ ಮುಖ್ಯವಾಹಿನಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಣ್ಣಿಟ್ಟಿವೆ. ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆ ಮುಗಿಸಿದ್ದು ಈಗ 224 ಕ್ಷೇತ್ರಗಳಿಗೆ ಬಸ್ ಯಾತ್ರೆ ಹೊರಡಲು ತಯಾರಿ ನಡೆಸಿದೆ. ಜೆಡಿಎಸ್ ಪಂಚ ರತ್ನ ಯಾತ್ರೆ ನಡೆಸುತ್ತಿದ್ದರೆ, ಆಡಳಿತರೂಢ ಬಿಜೆಪಿಯು ಜನ ಸಂಕಲ್ಪ ಯಾತ್ರೆ ಮೂಲಕ ಮತ ಭೇಟೆಗೆ ಇಳಿದಿವೆ.
ಇದನ್ನೂ ಓದಿ: ಸಿಎಂ ಮಗ, ಬಿಜೆಪಿ ಸಚಿವರೊಂದಿಗೆ ಸಂಬಂಧ ಹೊಂದಿರುವ ಸ್ಯಾಂಟ್ರೊ ರವಿ ಯಾರು? ಇಲ್ಲಿದೆ ಪೂರ್ಣ ವಿವರ


