2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ದಿಟ್ಟ ಪತ್ರಕರ್ತ, ಆಲ್ಟ್‌ನ್ಯೂಸ್ ಸಹ ಸಂಪಾದಕ ಮೊಹಮ್ಮದ್ ಜುಬೇರ್‌ರನ್ನು ಬಂಧಿಸಿದ್ದ ದೆಹಲಿ ಪೊಲೀಸರು ದೆಹಲಿಯ ಬುರಾರಿಯಲ್ಲಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಜುಬೇರ್‌ರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡಿದೆ.
ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುವ ಆರೋಪದ ಮೇಲೆ ಜುಬೇರ್ ಮೇಲೆ ಪ್ರಕರಣ ದಾಖಲಾಗಿದೆ. 2020ರ ಪ್ರಕರಣದ ವಿಚಾರಣೆಗೆಂದು ಅವರನ್ನು ದೆಹಲಿ ಪೊಲೀಸರು ಕರೆಸಿದ್ದರು. ಆ ಪ್ರಕರಣದಲ್ಲಿ ಜುಬೇರ್ ಬಂಧನದಿಂದ ರಕ್ಷಣೆ ಪಡೆದಿದ್ದರು. ಆನಂತರ ಪೊಲೀಸರು 2018ರ ಟ್ವೀಟ್ ಆಧರಿಸಿ ಬಂಧಿಸಿದ್ದೇವೆ ಎಂದಿದ್ದಾರೆ. ಆ ಟ್ವೀಟ್ ಯಾವುದಿರಬೇಕೆಂದು ಚರ್ಚೆ ನಡೆಯುತ್ತಿದೆ.
2018ರ ಮಾರ್ಚ್ 24 ರಂದು ಮೊಹಮ್ಮದ್ ಜುಬೇರ್ ಮತೀಯ ಗೂಂಡಾಗಿರಿಗಳನ್ನು, ನೈತಿಕ ಪೊಲೀಸ್‌ಗಿರಿಯನ್ನು ಖಂಡಿಸಿ ವ್ಯಂಗ್ಯವಾಗಿ ಪೋಸ್ಟ್ ಒಂದನ್ನು ಮಾಡಿದ್ದರು. 2014ಕ್ಕೆ ಮುಂಚೆ ಹನಿಮೂನ್ ಹೋಟೆಲ್ ಇದ್ದಿದ್ದು, 2014ರ ನಂತರ ಹನುಮಾನ್ ಹೋಟೆಲ್ ಆಗಿ ಬದಲಾಗಲಿದೆ. ಸಂಸ್ಕಾರಿ ಹೋಟೆಲ್ ಎಂದು ಬರೆದಿದ್ದರು. ಪ್ರೇಮಿಗಳ ದಿನಕ್ಕೆ ತಡೆಯೊಡ್ಡುತ್ತಿದ್ದ ಬಲಪಂಥೀಯ ಕಾರ್ಯಕರ್ತರ ಧೋರಣೆ ಖಂಡಿಸಿ ವ್ಯಂಗ್ಯವಾಗಿ ಮಾಡಿದ್ದ ಪೋಸ್ಟ್ ಅದಾಗಿತ್ತು.
ಅದಕ್ಕೆ ಹನುಮಾನ್ ಭಕ್ತ್ ಎಂಬ ಬಾಲಾಜಿಕಿಜೈನ್ ಎಂಬ ಯೂಸರ್ ಐಡಿ ಹೊಂದಿರುವ ಫೇಕ್ ಅಕೌಂಟ್‌ನಿಂದ ಕಮೆಂಟ್ ಮಾಡಿ ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ನಮ್ಮ ದೇವರಾದ ಹನುಮಾನ್‌ಜಿಯವರನ್ನು ಹನಿಮೂನ್‌ಗೆ ಹೋಲಿಸಿ ನೇರವಾಗಿ ಹಿಂದೂಗಳಿಗೆ ಅವಮಾನ ಮಾಡಲಾಗಿದೆ. ಏಕೆಂದರೆ ಹನುಮಾನ್ ಬ್ರಹ್ಮಚಾರಿಯಾಗಿದ್ದರು. ಈ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಈ ತಿಂಗಳ 19ನೇ ತಾರೀಕಿನಂದು ಕಮೆಂಟ್ ಮಾಡಲಾಗಿತ್ತು. ವಾಸ್ತವದಲ್ಲಿ ಆ ಖಾತೆಯು 2021ರ ಅಕ್ಟೋಬರ್‌ನಲ್ಲಿ ರಚನೆಯಾಗಿದೆ ಎಂದು ತಿಳಿದುಬಂದಿದೆ.
ಆ ಖಾತೆ ಆ ರೀತಿ ಕಮೆಂಟ್ ಮಾಡಿದಾಗ ಅದಕ್ಕೆ ಕೇವಲ ಒಬ್ಬರು ಮಾತ್ರ ಫಾಲೋವರ್ ಇದ್ದರು. ಮೂರೇ ಮೂರು ಟ್ವೀಟ್ ಗಳನ್ನು ಮಾಡಲಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಜುಬೇರ್‌ರನ್ನು ಬಂಧಿಸಿದ್ದಾರೆ. ಆ ನಂತರ ಆ ಹನುಮಾನ್ ಭಕ್ತ್ ಖಾತೆಯನ್ನು ನೂರಾರು ಜನರು ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ಆ ಮುಖವಿಲ್ಲದೆ ಖಾತೆಯೇ ನನ್ನನ್ನು ಫಾಲೋ ಮಾಡಿ ಎಂದು ಟ್ವೀಟ್ ಮಾಡುತ್ತಿದೆ.
@DelhiPolice Linking our God Hanuman ji with Honey Moon is direct insult of Hindus because he is brahmchari @DCP_CCC_Delhi kindly take action against this guy https://t.co/dNna0u5YSo
— Hanuman Bhakt (@balajikijaiin) June 19, 2022
ಈ ದೂರು ನೀಡಿದ ಖಾತೆಯ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಅನಾಮಧೇಯ ಖಾತೆಯಿಂದ ಬಂದ ದೂರನ್ನು ದೆಹಲಿ ಪೊಲೀಸರು ಹೇಗೆ ಪರಿಗಣಿಸುತ್ತಾರೆ? ಆದರೆ ಜೆಎನ್‌ಯುನಲ್ಲಿ ಹಿಂಸಾಚಾರವೆಬ್ಬಿಸಿದ ಕೋಮಲ್ ಶರ್ಮಾ ವಿರುದ್ಧ ಸ್ಪಷ್ಟ ವಿಡಿಯೋ ಸಾಕ್ಷಿ ಇದ್ದರೂ ಸಹ ಏಕೆ ಬಂಧಿಸಿಲ್ಲ ಎಂದು ಯೂಟ್ಯೂಬರ್ ಧ್ರುವ್‌ರಾಠೀ ಪ್ರಶ್ನಿಸಿದ್ದಾರೆ.
According to Delhi Police, Zubair is arrested because an anonymous Twitter account with 1 folllower complained that his sentiments are hurt.
But Komal Sharma couldn’t be arrested despite video evidence of violence. What a joke this whole system is!
#IStandWithZubair pic.twitter.com/36V9O3CVXj
— Dhruv Rathee 🇮🇳 (@dhruv_rathee) June 27, 2022
ಇದನ್ನೂ ಓದಿ: ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ #IStandWithZubair ಹ್ಯಾಷ್‌ಟ್ಯಾಗ್


