Homeಮುಖಪುಟಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

ಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

- Advertisement -
- Advertisement -

ʻನೀಂ ಕಡು ಕಾಫಿ ಬಲ್ಲೆ, ಕಡು ಖೋಟಾ ಬಲ್ಲೆಯಾ?ʼ

ʻನಿನ್ನೆ ಹುಟ್ಟಿದವನಿಗಿಂತ ಇವತ್ತು ಹುಟ್ಟಿದವ ಶಾಣ್ಯಾʼ ಅಂತ ಒಂದು ಗಾದಿ ಮಾತು ಅದ. ಅದು ಬ್ಯಾರೆ ಎಲ್ಲೆರ ಇದು ಸುಳ್ಳು ಆಗಬಹುದು, ಆದರ ತಂತ್ರಜ್ಞಾನದ ವಿಷಯದಾಗ ಅಗದೀ ಖರೆ.

ನಮ್ಮ ಯುವ ಸಾಫ್ಟವೇರು ತಂತ್ರಜ್ಞರು ಒಂದು ಕಂಪ್ಯೂಟರು, ಒಂದು ಇಂಟರನೆಟ್ಟು ಇಟಗೊಂಡು ಏನೇನೆಲ್ಲಾ ಮಾಡತಾರ ಅಂದರ ಕೇಳಬ್ಯಾಡರಿ. ಅವರ ಮಾಡಿದ ಒಂದೊಂದ ಕೆಲಸದ ಪರಿಣಾಮ ತಿಳಕೊಳ್ಳಿಕ್ಕೆ ನಮಗ ಭಾಳ ಟೈಂ ಬೇಕಾಗತದ. ಒಂದು ತಿಳಕೊಳ್ಳೋದರಾಗ ಇನ್ನೊಂದ ಬಂದಿರತದ.

ಕೆಲವೊಮ್ಮೆ ತಿಳಿಯಂಗೇ ಇಲ್ಲ.

ಈಗ ಅಂಥಾದ್ದೊಂದ ಬಂದದ. ಅದರ ಹೆಸರು ಕಡು ಖೋಟಾ. ಖೋಟಾ ಅನ್ನೋದು ನಮಗ ಎಲ್ಲಾರಿಗೂ ಗೊತ್ತು. ದಿನಾ ಅದನ್ನ ನೋಡತೇವಿ, ಕೇಳತೇವಿ, ನಂಬತೇವಿ. ಈಗ ಇದೇನಪಾ ಕಡು ಖೋಟಾ?

ಕಡು ಖೋಟಾ ಅಥವಾ ಡೀಪ್ ಫೇಕು ಅನ್ನೋ ತಂತ್ರಜ್ಞಾನ ನಮ್ಮ ಎಲ್ಲಾ ನಂಬಿಕೆಗಳನ್ನ, ತಿಳಿವಳಿಕೆಯನ್ನ ಬುಡಮೇಲು ಮಾಡುವಷ್ಟು ಶಕ್ತಿ ಇರುವಂಥಾದ್ದು. ಇದು ಮುಂದೆ ಎಂದೋ ಬರೋದಲ್ಲಾ. ಈಗಾಗಲೇ ಬಂದು ಬಿಟ್ಟದ. ಬರೇ ಇಂಗ್ಲಂಡು- ಅಮೆರಿಕಾದಾಗ ಬಂದಿಲ್ಲಾ, ನಮ್ಮ ಭಾರತ ವರ್ಷದಾಗ ಬಂದು ಬಿಟ್ಟದ.

ಮೊನ್ನೆ ದೆಹಲಿ ಚುನಾವಣೆಯೊಳಗ ಇದರ ಉಪಯೋಗ ಆಗೇದ ಅಂತ ತಂತ್ರಜ್ಞಾನ ಕಂಪನಿ ವೈಸ್ ವರದಿ ಮಾಡೇದ.

ಕಡು ಖೋಟಾ ಅಂದರ ತುಂಬ ತೀಕ್ಷ್ಣ ತಂತ್ರಜ್ಞಾನ ಉಪಯೋಗಿಸಿ ಸುಳ್ಳು ಸುಳ್ಳು ವಿಡಿಯೋಗಳನ್ನು ತಯಾರು ಮಾಡೋದು. ಯಾವುದು ಅಸಾಧ್ಯವೋ, ಯಾವುದು ಆಗಲಿಕ್ಕೆ ಸಾಧ್ಯವೇ ಇಲ್ಲವೋ ಅದನ್ನ ಆಗೇ ಬಿಟ್ಟದ ಅನ್ನೋಹಂಗ ತೋರಸೋದು. ಇದು ಸಣ್ಣ ಹುಡುಗರ ವಿಡಿಯೋಗೇಮೋ, ಅನಿಮೇಷನ್ ಕಾರ್ಟೂನೋ ಇದ್ದರ ಸಮಸ್ಯೆ ಇರಲಿಲ್ಲ. ಆದರ ಇದು ಆಗತಾ ಇರೋದು ಸುದ್ದಿ ಮಾಧ್ಯಮದಾಗ. ಕಮಲ ಹಾಸನ ಅವರ ಇಂಡಿಯನ್ ಸಿನಿಮಾದಾಗ ನೇತಾಜಿ ಜೊತೆಗೆ ಚಿತ್ರದ ನಾಯಕ ಓಡಾಡಿದಂಗ ಮಾಡಿದ್ದರು. ಆದರ ಅದು ಕೃತಕ ಅಂತ ಗೊತ್ತಾಗತಿತ್ತು. ಕಡು ಖೋಟಾ ಅಂದರ ಗೊತ್ತೇ ಆಗದ ಹಂಗ ಕಲಬೆರಕೆ ಮಾಡೋ ಕಲೆ. ಇದು ಎಷ್ಟು ಅಪಾಯಕಾರಿ ಅಂತ ಸ್ವಲ್ಪ ವಿಚಾರ ಮಾಡಿದರ ತಿಳೀತದ.

ಉದಾಹರಣೆಗೆ ಕಳೆದ ವಾರ ಇಂಗ್ಲಂಡಿನ ಇಂಜಿನಿಯರು ಒಬ್ಬ ಕನ್ಸರ್ವೇಟಿವ್ ಪಕ್ಷದ ಬೋರಿಸ ಜಾನಸನ್ ಅವರು ಲಿಬರಲ್ ಪಕ್ಷದ ಸಭೆಯೊಳಗ ಭಾಷಣ ಮಾಡಿದಂಗ, ಲಿಬರಲ್ ಪಕ್ಷದ ಜಿಮ್ಮಿ ಕಾರ್ಬಿನ್ ಅವರು ವಿರೋಧ ಪಕ್ಷದ ಸಮಾರಂಭದಾಗ ಸನ್ಮಾನ ಸ್ವೀಕರಿಸಿದ ಹಂಗ ವಿಡಿಯೋ ತಯಾರು ಮಾಡಿಬಿಟ್ಟ. ಇದನ್ನ ಭಾಳ ಮಂದಿ ನಂಬಿ ಷೇರು, ಲೈಕು, ಕಾಮೆಂಟು ಮಾಡಿದರು.

ಗ್ಯಾಬೋನ್ ದೇಶದ ಅಧ್ಯಕ್ಷ ಅಲಿ ಬೊಂಗೋ ಅವರು ಮಾಡಿದ ಭಾಷಣದ ವಿಡಿಯೋ ತುಣುಕಿನಿಂದ ಅವರ ದೇಶದಾಗ ಒಂದು ಕ್ಷಿಪ್ರಕ್ರಾಂತಿ ಆತು. ಹಿಂಸಾಚಾರ ಆತು. ಆದರ ಆ ಭಾಷಣ ಅವರು ಮಾಡಿರಲೇ ಇಲ್ಲ. ಅವರ ಹಳೇ ವಿಡಿಯೋಗಳ ತುಣುಕುಗಳನ್ನು ಸೇರಿಸಿ, ಅವಕ್ಕೆ ಹೊಸಾ ಅಂಗಿ- ಪ್ಯಾಂಟು ಹಾಕಿ ಖೋಟಾ ವಿಡಿಯೋ ತಯಾರು ಮಾಡಲಾಯಿತು. ಅದು ಇಷ್ಟೆಲ್ಲಾ ಘೋಟಾಲಾ ಮಾಡಿತು.

ಕಡು ಖೋಟಾ ವಿಡಿಯೋ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ ಸ್ಲೋವಾಕಿಯಾದ ಒಬ್ಬ ಪುಣ್ಯಾತ್ಮ ಪ್ರಯತ್ನ ಮಾಡಲಿಕ್ಕೆ ಹತ್ಯಾನ. ಕಂಟ್ರೋಲ್- ಶಿಫ್ಟ್ – ಫೇಸ್ ಅನ್ನೋ ಯೂಟ್ಯೂಬ ವಿಡಿಯೋ ಸರಣಿಯೊಳಗ ಆತ ಇಲ್ಲಿಯವರೆಗೂ 20 ಕಡು ಖೋಟಾ ವಿಡಿಯೋಗಳನ್ನ ಹಾಕ್ಯಾನ. ಅದರಾಗಿನ ಉದಾಹರಣೆ ಅಂದರ 1973 ರಲ್ಲಿ ತೀರಿ ಹೋಗಿರೋ ನಟ ಬ್ರೂಸ್ ಲೀ ಯನ್ನು ಹೀರೋ ಮಾಡಿ 2010 ಸಿನಿಮಾಗಳನ್ನು ಮರು ತಯಾರಿ ಮಾಡೋದು, ಬ್ಯಾಟ ಮ್ಯಾನಿನ ಜೋಕರ ಪಾತ್ರ ತೊಗೊಂಡು ಹೋಗಿ ಇನ್ನಾವುದೋ ಸಂಬಂಧ ಇರಲಾರದ ಸಿನಿಮಾದಾಗ ವಿಲನ್ ಮಾಡೋದು, ಈಗ ಜೀವಂತ ಇರಲಾರದ ಡೇವಿಡ್ ಬೋವಿ ಅವರಂತಹಾ ಪಾಪ್- ರಾಕ್ ಹಾಡುಗಾರರ ಬಾಯಾಗಿಂದಾ ಹೊಸಾ ಹಾಡುಗಳನ್ನು ಹೇಳಿಸೋದು, ಇತ್ಯಾದಿ.

ಉದಾಹರಣೆ ನೋಡಿ:

ನೀವು ಕಲ್ಪನೆ ಮಾಡಿಕೊರಿ. ಇವತ್ತಿನ ಚಲನಚಿತ್ರ ನಟಿಯರು ಕಪ್ಪು- ಬಿಳುಪಿನ ಸಿನಿಮಾದಾಗ ಮಾಡೋದು, ಅಥವಾ ಮೀನಾಕುಮಾರಿ, ಉದಯ ಚಂದ್ರಿಕಾ ಸರ್ವಮಂಗಳಾ ಇವರೆಲ್ಲಾ ಇವನೇ ಶ್ರೀಮನ್ನಾರಾಯಣ, ಕೆಜಿಎಫ್ ನಂತಾ ಸಿನಿಮಾದಾಗ ಮಾಡೋದು ಹೆಂಗಿರತದ?

ಇಂಥದೆಲ್ಲಾ ಮಸ್ತ ಮಜಾ ಇರಬಹದು ಬಿಡ್ರಿ.

ಆದರ ಇಂಥಾದೆಲ್ಲಾ ರಾಜಕೀಯದಾಗ ಬಂದರ? ಏನಾದೀತು?

ಉದಾಹರಣೆಗೆ ರಾಹುಲ ಗಾಂಧಿ ನರೇಂದ್ರಮೋದಿ ಚುನಾವಣಾ ಪ್ರಚಾರಕ್ಕ ನಿಂತರ? ದೇವೇಗೌಡರೂ- ಅಮಿತ ಷಾ ಆಲಿಂಗನ ಮಾಡಿಕೊಂಡ ವಿಡಿಯೋ ನಿಮ್ಮ ಫೋನಿನ್ಯಾಗ ಒಡಮೂಡಿದರ? ನೆಹರೂ – ಜಿನ್ನಾ ಇಬ್ಬರೂ ಅಣ್ಣ- ತಮ್ಮಾ ಅಂತ ವಾಟ್ಸಪ್ಪು ಮೆಸೇಜು ಈಗಾಗಲೇ ಬರಲಿಕ್ಕೆ ಹತ್ತೇದ. ಅವರಿಬ್ಬರೂ ನಾವು ಒಂದೇ ತಾಯಿಯ ಮಕ್ಕಳು ಅಂತ ಹೇಳೋ ವಿಡಿಯೋ ಹುಟ್ಟಿಗೊಂಡರ? ನನ್ನನ್ನ ಯಾರೂ ಹತ್ಯೆ ಮಾಡಿಲ್ಲ. ಸುಳ್ಳ ಸುಳ್ಳ ಯರ‍್ಯಾರನ್ನೋ ಬಯ್ಯಬ್ಯಾಡ್ರಿ. ಸಬಕೋ ಸನಮತಿ ದೇ ಭಗವಾನ ಅಂತ ಗಾಂಧಿ ದೇಶವನ್ನು ಸಂಬೋಧಿಸಿ ಮಾತಾಡೋ ವಿಡಿಯೋ ನಾಳೆ ಟೀವಿಯೊಳಗ ಪ್ರಸಾರ ಆದರ? ಇಂಥಾವೆಲ್ಲಾ ಸುರು ಆದರ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಲ್ಲಾ, ನರಕಕ್ಕೆ ಕಿಚ್ಚು ಹಚ್ಚೋದು ಆಗತೇತಿ.

ಯಾವುದು ಕಡು ಖೋಟಾ, ಯಾವುದು ಅಲ್ಲಾ ಅಂತ ಕಂಡುಹಿಡಿಯೋ ತಂತ್ರಜ್ಞಾನ ಇನ್ನೂ ಬಂದಿಲ್ಲಂತ. ಕೃತಕ ಬುದ್ಧಿಮತ್ತೆ ಕ್ಷೇತ್ರ ಬೆಳದಂಗ ಬರಬಹುದಂತ. ಆದರ ಪೇಪರು- ಫೋನಿನ್ಯಾಗ ಬಂದ ಖೋಟಾ ಸುದ್ದಿಗಳನ್ನು ವರೆಗೆ ಹಚ್ಚಲು ನಮ್ಮ ಜನಾ ತಯಾರಿಲ್ಲಾ ಎಲ್ಲಾನೂ ಹುಯ್ಯ ಅಂತ ನಂಬತಾರ. ಇನ್ನ ಕಡು ಖೋಟಾ ವಿಡಿಯೋ ಪ್ರಸಾರ ಆಗಲಿಕ್ಕೆ ಹತ್ತಿದವಂದರ ಏನಾದೀತ?

ಅಂದಂಗ ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ ತಿವಾರಿ ಅವರು ಬೇರೆ ಬೇರೆ ಪೋಷಾಕು ಧರಿಸಿ ನಾಲ್ಕು -ಐದು ಭಾಷೆಯೊಳಗ ಮತದಾರರಿಗೆ ಮತ ಕೇಳೋ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರಂತ. ಅವರಿಗೆ ಅಷ್ಟು ಭಾಷಾನ ಬರಂಗಿಲ್ಲ, ಬಂದರೂ ಅಷ್ಟು ಸುಲಲಿತವಾಗಿ ಮಾತಾಡಲಿಕ್ಕೆ ಆಗಂಗಿಲ್ಲ ಅಂತ ಅವರನ್ನ ಬಲ್ಲವರಿಗೆ ಖಾತ್ರಿ ಆತಂತ. ಹಿಂಗಾಗಿ ಅವು ಕಡು ಖೋಟಾ ಅಂತ ಎಲ್ಲಾರಿಗೂ ಗುಮಾನಿ ಬಂತಂತ. ಆ ನಂತರ ವೈಸ್ ಸಂಸ್ಥೆಯ ವರದಿ ಬಂತು, ಅದು ಬ್ಯಾರೆ ವಿಷಯ. ಇದು ಅಂತ್ಯ ಅಲ್ಲ, ಆರಂಭ ಅನ್ನೋದನ್ನ ನಾವು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...