Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ನಾವು ಒಂದು ಕ್ರಾಂತಿಯನ್ನು ಪದಕೋಶದ ಅರ್ಥದಲ್ಲಿ- ಸರಳವಾಗಿ, ಈಗಿರುವ ಸರಕಾರವನ್ನು ಶಾಂತಿಯುತವಾಗಿ ಅಥವಾ ಹಿಂಸಾತ್ಮಕವಾಗಿ ಕಿತ್ತೆಸೆಯುವುದು ಮತ್ತದರ ಜಾಗದಲ್ಲಿ ಹೊಸ ಸರಕಾರವೊಂದನ್ನು ಸ್ಥಾಪಿಸುವುದು ಎಂದು ಹೇಳುವುದರ ಮೂಲಕ ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇದೊಂದು ಬಹಳ ಔಪಚಾರಿಕ ರಾಜಕೀಯ ವ್ಯಾಖ್ಯಾನವಾದರೂ, ನಿರ್ದಿಷ್ಟವಾಗಿ ಅಷ್ಟೇನೂ ಅರ್ಥಪೂರ್ಣವಲ್ಲ. ನಾವು ಒಂದು ರೀತಿಯ ಹೆಚ್ಚು ಮಾರ್ಕ್ಸ್‌ವಾದಿ ಅರ್ಥದಲ್ಲಿ ಒಂದು ಕ್ರಾಂತಿಯನ್ನು, ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಂದನ್ನು ಹೆಚ್ಚು ಪ್ರಗತಿಪರವಾದ ವ್ಯವಸ್ಥೆಯಿಂದ ಬದಲಿಸುವುದು ಎಂದು ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇಲ್ಲಿ ಪ್ರಶ್ನೆಯೊಂದು ಯಾವಾಗಲೂ ಏಳುತ್ತದೆ; ಏನೆಂದರೆ, ಯಾವುದು “ಐತಿಹಾಸಿಕವಾಗಿ ಹೆಚ್ಚು ಪ್ರಗತಿಪರ” ಎಂಬುದನ್ನು ನಿರ್ಧರಿಸುವವರು ಯಾರು ಎಂಬುದು. ಸಾಮಾನ್ಯವಾಗಿ- ಕನಿಷ್ಟ ಪಕ್ಷ ತಮ್ಮತಮ್ಮ ದೇಶದಲ್ಲಾದರೂ- ಅದು ಗೆದ್ದವರೇ ಆಗಿರುತ್ತಾರೆ.

ಅಂತಿಮವಾಗಿ, ಒಂದು ಕ್ರಾಂತಿಯನ್ನು ಕ್ರಾಂತಿಕಾರಿ ಗುಣಸ್ವಭಾವ ಹೊಂದಿರುವವರ ನೇತೃತ್ವವಿರುವ, ಕ್ರಾಂತಿಕಾರಿ ಗುಣಸ್ವಭಾವದ ಜನರನ್ನು ಆಕರ್ಷಿಸುವ ಒಂದು ರಾಜಕೀಯ ಚಳವಳಿ ಎಂದು ಹೇಳುವ ಮೂಲಕ ನಾವು ಮನಃಶಾಸ್ತ್ರೀಯ ಅರ್ಥದಲ್ಲಿ ವ್ಯಾಖ್ಯಾನಿಸಬಹುದು.

ಅದು, ಖಂಡಿತವಾಗಿಯೂ, ಅಂತಾ ಉತ್ತಮ ವ್ಯಾಖ್ಯಾನವೇನಲ್ಲವಾದರೂ, ಈ ಪ್ರಬಂಧದ ನಿಲುವಿನಿಂದ ನೋಡಿದಲ್ಲಿ, ಒಂದು ಉಪಯುಕ್ತ ಹೇಳಿಕೆಯಾಗಿದ್ದು, ಈಗ ಚರ್ಚಿಸಲಿರುವ ಪ್ರಶ್ನೆಯ ಮೇಲೆ ಎಲ್ಲಾ ಒತ್ತನ್ನು ನೀಡುತ್ತದೆ: ಅದೆಂದರೆ, ಯಾವುದು ಕ್ರಾಂತಿಕಾರಿ ಗುಣಸ್ವಭಾವ?

“ಕ್ರಾಂತಿಕಾರಿ ಗುಣಸ್ವಭಾವ”ದ ಅತ್ಯಂತ ಮೂಲಭೂತ ಗುಣಲಕ್ಷಣ ಎಂದರೆ, ಆತ ಸ್ವತಂತ್ರ ಮತ್ತು ಮುಕ್ತ. ಸ್ವಾತಂತ್ರ್ಯ ಎಂದರೆ, ಮೇಲಿರುವ ಬಲಶಾಲಿಗಳಿಗೆ ಸಹವಾಸದ ನಿಷ್ಠೆಯ ಮತ್ತು ನಾನು ಹಿಂದೆ ಸರ್ವಾಧಿಕಾರಿ ಗುಣಸ್ವಭಾವದ ಕುರಿತು ಮಾತನಾಡುವಾಗ ವಿವರಿಸಿದ ತಮಗಿಂತ ಕೆಳಗಿರುವ ಬಲಹೀನರ ಬಗೆಗಿನ ನಿಷ್ಠೆಯ ತದ್ವಿರುದ್ಧವಾದದ್ದು ಎಂದು ಮನಗಾಣುವುದು ಸುಲಭ.

ಆದರೆ, ಇದು “ಮುಕ್ತತೆ” ಮತ್ತು “ಸ್ವಾತಂತ್ರ್ಯ” (ಇಂಡಿಪೆಂಡೆನ್ಸ್ ಮತ್ತು ಫ್ರೀಡಂ) ಎಂದರೆ ಏನು ಎಂಬುದನ್ನು ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. ಸಮಸ್ಯೆ ಇರುವುದು ನಿರ್ದಿಷ್ಟವಾಗಿ “ಫ್ರೀಡಂ” ಮತ್ತು “ಇಂಡಿಪೆಂಡೆನ್ಸ್” ಎಂಬ ಪದಗಳನ್ನು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪ್ರತಿಯೊಬ್ಬರೂ ಮುಕ್ತರು ಮತ್ತು ಸ್ವತಂತ್ರರು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. (ಕನ್ನಡದಲ್ಲಿ ಎರಡೂ ಪದಗಳನ್ನು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ- ಅನುವಾದಕನ ಟಿಪ್ಪಣಿ). ಈ ಎರಡೂ ಪದಗಳ ಪರಿಕಲ್ಪನೆಯ ಬೇರು ಇರುವುದು ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಕ್ರಾಂತಿಯಲ್ಲಿ ಮತ್ತು ಅವುಗಳನ್ನು ಪ್ರಭುತ್ವಗಳ ತದ್ವಿರುದ್ಧವಾಗಿ ಇಟ್ಟು ನೋಡುವುದರಿಂದ ಅವು ಹೊಸ ಶಕ್ತಿಯನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

ಊಳಿಗಮಾನ್ಯ ಮತ್ತು ರಾಜಾಡಳಿತದ ಸರ್ವಾಧಿಕಾರದ ವ್ಯವಸ್ಥೆಯ ಕಾಲದಲ್ಲಿ, ವ್ಯಕ್ತಿಯು ಮುಕ್ತನಾಗಲೀ, ಸ್ವತಂತ್ರನಾಗಲೀ ಆಗಿರಲಿಲ್ಲ. ಆತ ತನಗಿಂತಲೂ ಮೇಲಿನವರ ಸಾಂಪ್ರದಾಯಿಕ ಅಥವಾ ನಿರಂಕುಶ ನಿಯಮ, ಕಾನೂನು ಮತ್ತು ಆಜ್ಞೆಗಳಿಗೆ ಅಧೀನನಾಗಿದ್ದ. ಯೂರೋಪ್ ಮತ್ತು ಅಮೆರಿಕಾದಲ್ಲಿ ಬೂರ್ಜ್ವಾ (bourgeois, ಮಧ್ಯಮ ವರ್ಗ) ಕ್ರಾಂತಿಗಳು ವ್ಯಕ್ತಿಗೆ ರಾಜಕೀಯ ಮುಕ್ತತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟವು.

ಈ ಸ್ವಾತಂತ್ರ್ಯವು “ಒಂದದಿಂದ ಸ್ವಾತಂತ್ರ್ಯ” ಆಗಿತ್ತು. ಅಂದರೆ, ರಾಜಕೀಯ ಅಧಿಕಾರಸ್ಥರಿಂದ ಸ್ವಾತಂತ್ರ್ಯ ಆಗಿತ್ತು. ಇಂದಿನ ಕೈಗಾರಿಕಾವಾದವು ಹೊಸ ರೀತಿಯ ಅಧಿಕಾರಶಾಹಿಗಳಲ್ಲಿ ಸಾಮಾನ್ಯರಿಗೆ ಹೊಸ ರೀತಿಯ ಅವಲಂಬನೆಗಳನ್ನು ಸೃಷ್ಟಿಸಿದ್ದರೂ, ಇದೊಂದು ಪ್ರಮುಖ ಬೆಳವಣಿಗೆಯಾಗಿತ್ತು, ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ಕೈಗಾರಿಕಾವಾದವು ಹತ್ತೊಂಭತ್ತನೇ ಶತಮಾನದಲ್ಲಿ ವ್ಯಾಪಾರಿಗಳಿಗೆ ಅನಿಯಮಿತ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಒದಗಿಸಿತ್ತು.

ಏನಿದ್ದರೂ, ಮುಕ್ತತೆ ಮತ್ತು ಸ್ವಾತಂತ್ರ್ಯದ ಸಮಸ್ಯೆಯು ಮೇಲೆ ಹೇಳಿದ ಅರ್ಥದ ಮುಕ್ತತೆ ಮತ್ತು ಸ್ವಾತಂತ್ರ್ಯಕ್ಕಿಂತ ಹೆಚ್ಚು ಆಳವಾಗಿದೆ. ವಾಸ್ತವದಲ್ಲಿ, ಸ್ವಾತಂತ್ರ್ಯದ ಸಮಸ್ಯೆಯು ಮಾನವ ಅಭಿವೃದ್ಧಿಯ ಆತ್ಯಂತ ಮೂಲಭೂತ ಅಂಶಗಳಲ್ಲಿ ಒಂದು- ನಾವು ಅದನ್ನು ಅದರ ಸಂಪೂರ್ಣ ಆಳ ಮತ್ತು ಅಗಲದಲ್ಲಿ ನೋಡಿದಲ್ಲಿ ಮಾತ್ರ.

ಆಗ ತಾನೇ ಹುಟ್ಟಿದ ಶಿಶು ತನ್ನ ಪರಿಸರದೊಂದಿಗೆ ಒಂದಾಗಿರುತ್ತದೆ. ಅದಕ್ಕೆ ಹೊರಗಿನ ಪ್ರಪಂಚವು ಆಗಿನ್ನೂ, ತನ್ನಿಂದ ಪ್ರತ್ಯೇಕವಾದ ಒಂದು ವಾಸ್ತವವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ. ಆಗಲೂ ಕೂಡಾ ಶಿಶುವು ತನ್ನಿಂದ ಹೊರಗಿರುವ ವಸ್ತುಗಳನ್ನು ಗುರುತಿಸಬಲ್ಲದು. ಹಾಗಿದ್ದೂ, ಅದು ಇನ್ನೂ ಬಹಳ ಕಾಲ ಅಸಹಾಯಕವಾಗಿರುತ್ತದೆ ಮತ್ತು ತನ್ನ ತಂದೆ, ತಾಯಿಯ ನೆರವಿಲ್ಲದೆ ಬದುಕಿ ಉಳಿಯಲಾರದು. ಇತರ ಎಳೆಯ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಮಾನವನ ಈ ದೀರ್ಘಕಾಲದ ಅಸಹಾಯಕತೆಯು ಅದರ ಬೆಳವಣಿಗೆಗೆ ಒಂದು ತಳಹದಿಯಾಗಿದ್ದರೂ, ಅದು ಅದಕ್ಕೆ ಅಧಿಕಾರವನ್ನು ಅವಲಂಬಿಸಿರಲು ಮತ್ತು ಅಧಿಕಾರಕ್ಕೆ ಭಯಪಡಲು ಕಲಿಸುತ್ತದೆ.

ಸಾಮಾನ್ಯವಾಗಿ ಹುಟ್ಟಿನಿಂದ ಪ್ರೌಢಾವಸ್ಥೆಯ ತನಕದ ವರ್ಷಗಳಲ್ಲಿ ಅಧಿಕಾರವನ್ನು ಪ್ರತಿನಿಧಿಸುವವರು ಹೆತ್ತವರಾಗಿರುತ್ತಾರೆ ಮತ್ತು ಅದು ಇಬ್ಬಗೆಯ ಆಯಾಮಗಳನ್ನು ಹೊಂದಿರುತ್ತದೆ: ನೆರವಾಗುವುದು ಮತ್ತು ಶಿಕ್ಷಿಸುವುದು. ಒಬ್ಬ ಎಳೆಯ ವ್ಯಕ್ತಿ ಪ್ರೌಢಾವಸ್ಥೆಗೆ ತಲಪುವ ಕಾಲದ ಆಸುಪಾಸಿನಲ್ಲಿ ತನ್ನನ್ನು ತಾನೇ ರಕ್ಷಿಸಿಕೊಳ್ಳಬಲ್ಲಂತ ಅಭಿವೃದ್ಧಿಯ ಹಂತ ತಲಪಿರುತ್ತಾನೆ (ಖಂಡಿತವಾಗಿಯೂ, ಸರಳ ಬೇಸಾಯಗಾರ ಸಮಾಜಗಳಲ್ಲಿ.) ಮತ್ತು ಇನ್ನೂ ತನ್ನ ಸಾಮಾಜಿಕ ಅಸ್ತಿತ್ವಕ್ಕಾಗಿ ಹೆತ್ತವರ ಋಣದಲ್ಲಿ ಇರಬೇಕಾದ ಅಗತ್ಯವಿರುವುದಿಲ್ಲ. ಆತ ಆರ್ಥಿಕವಾಗಿ ಅವರಿಂದ ಸ್ವತಂತ್ರನಾಗಿರಬಹುದು. ಹಲವು ಪ್ರಾಚೀನ ಸಮಾಜಗಳಲ್ಲಿ ಈ ಸ್ವಾತಂತ್ರ್ಯವನ್ನು (ಮುಖ್ಯವಾಗಿ ತಾಯಿಯಿಂದ) ದೀಕ್ಷೆಯ ವಿಧಿವಿಧಾನಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಆದರೆ, ಅವು ತನ್ನ ಕುಲದ ಮೇಲಿನ ಅಥವಾ ಅದರ ಗಂಡು ಅಂಶದ ಮೇಲಿನ ಅವಲಂಬನೆಯನ್ನು ಮುಟ್ಟಲು ಹೋಗುವುದಿಲ್ಲ. ಲೈಂಗಿಕವಾಗಿ ಪ್ರೌಢವಾಗುವುದು ಕೂಡಾ ಹೆತ್ತವರಿಂದ ಬಿಡುಗಡೆಯ ಪ್ರಕ್ರಿಯೆಯನ್ನು ಮುನ್ನಡೆಸುವ ಇನ್ನೊಂದು ಅಂಶವಾಗಿದೆ. ಲೈಂಗಿಕ ಬಯಕೆ ಮತ್ತು ಲೈಂಗಿಕ ತೃಪ್ತಿಯು ಒಬ್ಬ ವ್ಯಕ್ತಿಯನ್ನು ತನ್ನ ಕುಟುಂಬದ ಹೊರಗಿನವರ ಜೊತೆಗೆ ಕಟ್ಟಿಹಾಕುತ್ತದೆ. ಸ್ವತಃ ಲೈಂಗಿಕ ಕ್ರಿಯೆಯಲ್ಲಿ ಮಾತ್ರ- ತಂದೆಯಾಗಲೀ, ತಾಯಿಯಾಗಲೀ ನೆರವಾಗಲು ಸಾಧ್ಯವಿಲ್ಲ ಮತ್ತು ಇದರಲ್ಲಿ ಯುವ ವ್ಯಕ್ತಿ ತನ್ನ ದಾರಿ ಹುಡುಕಿಕೊಳ್ಳುತ್ತಾನೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಪ್ರೌಢಾವಸ್ಥೆಗೆ ತಲಪಿದ ನಂತರದ ಐದು ಅಥವಾ ಹತ್ತು ವರ್ಷಗಳ ತನಕ ಲೈಂಗಿಕ ತೃಪ್ತಿಯನ್ನು ಮುಂದೂಡಲಾಗುವ ಸಮಾಜಗಳಲ್ಲಿ ಕೂಡಾ, ಎಚ್ಚೆತ್ತ ಲೈಂಗಿಕ ಬಯಕೆಯು ಸ್ವಾತಂತ್ರ್ಯಕ್ಕಾಗಿ ಹಂಬಲವನ್ನು ಹುಟ್ಟಿಸುತ್ತದೆ ಮತ್ತು ಹೆತ್ತವರ ಮತ್ತು ಸಾಮಾಜಿಕ ಅಧಿಕಾರಗಳ ಜೊತೆಗೆ ಸಂಘರ್ಷಗಳನ್ನುಂಟುಮಾಡುತ್ತದೆ. ಸಹಜ ವ್ಯಕ್ತಿಗಳು ಪ್ರೌಢಾವಸ್ಥೆಯ ನಂತರದ ಈ ವರ್ಷಗಳಲ್ಲಿ ಈ ಮಟ್ಟದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಆದರೆ, ಆತ ಸ್ವಂತ ಸಂಪಾದನೆ ಮಾಡಿ ಜೀವನ ನಡೆಸಿದರೂ, ಮದುವೆಯಾಗಿ ಸ್ವಂತ ಮಕ್ಕಳನ್ನು ಸಾಕಿದರೂ, ಆತ ನಿಜವಾಗಿಯೂ ಮುಕ್ತ ಮತ್ತು ಸ್ವತಂತ್ರನಾಗುವುದಿಲ್ಲ.

ಅವನು ಇನ್ನೂ ಬಹುತೇಕ ಅಸಹಾಯಕನಾದ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು, ತನಗೊಂದು ಖಾತರಿ, ಸ್ಥಿರತೆ ನೀಡುವಂತ ಅಧಿಕಾರವನ್ನು ಹುಡುಕಲು ಯತ್ನಿಸುತ್ತಿರುವ ಒಬ್ಬ ವಯಸ್ಕ ವ್ಯಕ್ತಿ ಮಾತ್ರ. ಈ ಸಹಾಯಕ್ಕೆ ಬದಲಾಗಿ ನೀಡುವ ಬೆಲೆಯಾಗಿ- ಆತ ತನ್ನನ್ನು ಅವರ (ಅಧಿಕಾರಸ್ಥರ) ಅವಲಂಬಿತನನ್ನಾಗಿ ಮಾಡಿಕೊಳ್ಳುತ್ತಾನೆ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಬೆಳವಣಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾನೆ. ಅವನು ತನ್ನ ಯೋಚನೆ, ಚಿಂತನೆಗಳನ್ನು ಅವರಿಂದ ಎರವಲು ಪಡೆಯುತ್ತಾನೆ- ತನ್ನ ಭಾವನೆಗಳು, ತನ್ನ ಗುರಿಗಳು, ತನ್ನ ಮೌಲ್ಯಗಳನ್ನು ಕೂಡಾ; ಯೋಚನೆ ಮಾಡುತ್ತಿರುವುದು, ಭಾವನೆಗಳನ್ನು ಹೊಂದಿರುವುದು ತಾನೇ ಮತ್ತು ತನ್ನ ನಿರ್ಧಾರಗಳನ್ನು ತಾನೇ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದರೂ ಕೂಡಾ.

(ಮುಂದುವರಿಯುತ್ತದೆ…)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಮುಂದುವರೆದ ಬುಲ್ಡೋಝರ್ ಅ’ನ್ಯಾಯ’ : ಯುಪಿ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಛೀಮಾರಿ

ಉತ್ತರ ಪ್ರದೇಶದ ಸರ್ಕಾರದ "ಬುಲ್ಡೋಝರ್ ಅನ್ಯಾಯ" ವಿರುದ್ಧ ಸುಪ್ರೀಂ ಕೋರ್ಟ್ 2024ರ ನವೆಂಬರ್‌ನಲ್ಲಿ ಕಟ್ಟುನಿಟ್ಟಾದ ತೀರ್ಪು ನೀಡಿದ್ದರೂ, ದಂಡನಾತ್ಮಕ ಕ್ರಮವಾಗಿ ಕಟ್ಟಡಗಳನ್ನು ಉರುಳಿಸುವ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿರುವುದರ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ...

‘ಕಾಶ್ಮೀರಿಗಳ ವಿರುದ್ಧ ಗುಂಪು ಹಿಂಸಾಚಾರಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಿದೆ’: ಮೆಹಬೂಬಾ ಮುಫ್ತಿ ಆರೋಪ

ಶ್ರೀನಗರ: ಕೇಂದ್ರಾಡಳಿತ ಪ್ರದೇಶದ ಹೊರಗೆ ಕಾಶ್ಮೀರಿಗಳ ವಿರುದ್ಧ ಗುಂಪು ಹಿಂಸಾಚಾರಕ್ಕೆ ರಾಜ್ಯ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವಂತೆ ಕಾಣುತ್ತಿದೆ, ಕಾನೂನಿನ ಆಡಳಿತವನ್ನು ದ್ವೇಷವು ಬದಲಾಯಿಸಲು ಅವಕಾಶ ನೀಡುತ್ತದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ಒತ್ತಡಕ್ಕೆ ಮಣಿದು ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ದೇಶವನ್ನು ಮಾರಿದ್ದಾರೆ : ರಾಹುಲ್ ಗಾಂಧಿ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ (ಫೆ.3) ತೀವ್ರ ವಾಗ್ದಾಳಿ ನಡೆಸಿದ್ದು, "ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ದೇಶವನ್ನು ಮಾರಿದ್ದಾರೆ" ಎಂದು ಆರೋಪಿಸಿದರು. ಸಂಸತ್ತಿನ...

ಧರ್ಮಸ್ಥಳ ಪ್ರಕರಣದ ಚರ್ಚೆ ವೇಳೆ ಹಲ್ಲೆಗೆ ಯತ್ನ; ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ ವಿರುದ್ಧ ಎಫ್‌ಐಆರ್

2025ರ ಅಕ್ಟೋಬರ್‌ನಲ್ಲಿ ‘R.ಕನ್ನಡ’ ಸುದ್ದಿ ವಾಹಿನಿಯಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಹಿಂದುತ್ವ ಕೋಮುವಾದಿ ಕಾರ್ಯಕರ್ತ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ...

ಲೋಕಸಭೆಯಲ್ಲಿ ನರವಾಣೆ ಆತ್ಮಕಥೆ ಗದ್ದಲ : ವಿಪಕ್ಷಗಳ 8 ಮಂದಿ ಸಂಸದರು ಅಮಾನತು

ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಕತೆಯ ವಿಚಾರ ಮಂಗಳವಾರ (ಫೆ.3) ಕೂಡ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪುಸ್ತಕದ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ರಾಹುಲ್...

ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್ ರಾಷ್ಟ್ರಪತಿಗಳಿಗೆ ಬರೆದ ಮನ ಮುಟ್ಟುವ ಪತ್ರ

ಕೇಂದ್ರ ಸರ್ಕಾರ ವಿಬಿಜಿ- ರಾಮ್ ಜಿ 2025 ಕಾನೂನನ್ನು ವಾಪಸ್ ಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್‌ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ.  2026 ಫೆಬ್ರವರಿ...

ಗುಜರಾತ್‌| ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ

ಗುಜರಾತ್‌ನ ಪಠಾನ್ ಜಿಲ್ಲೆಯ ಗ್ರಾಮವೊಂದರಲ್ಲಿ, ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದಲಿತ ಸಮುದಾಯದ ಯುವಕ ವಿಶಾಲ್ ಚಾವ್ಡಾಗೆ ಮದುವೆಯ ಸಂತೋಷದ ದಿನವು ಜೀವನದ ದುಃಸ್ವಪ್ನವಾಗಿ...

ಗೃಹಲಕ್ಷ್ಮಿ ಯೋಜನೆಯಿಂದ 52 ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಹೊರಕ್ಕೆ: ಆದಾಯ ತೆರಿಗೆ ಇಲಾಖೆ ದಾಖಲೆಗಳು ಕಾರಣ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ರಾಜ್ಯಾದ್ಯಂತ 1.26 ಕೋಟಿ ಫಲಾನುಭವಿಗಳಲ್ಲಿ 52,000 ಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ತೆಗೆದುಹಾಕಲಾಗಿದೆ, ಏಕೆಂದರೆ ಅವರು ಜಿಎಸ್ಟಿ ಅಥವಾ ಆದಾಯ ತೆರಿಗೆ ಇಲಾಖೆಗಳ ದಾಖಲೆಗಳಲ್ಲಿ ತೆರಿಗೆದಾರರಾಗಿದ್ದಾರೆ ಎಂದು ಮಹಿಳಾ ಮತ್ತು...

ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಮನರೇಗಾ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಫೆ.3) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ,...

‘ಖಾಸಗಿ ಮಾಹಿತಿಯ ಕಳ್ಳತನ’ : ವಿವಾದಾತ್ಮಕ ಗೌಪ್ಯತೆ ನೀತಿ ಸಂಬಂಧ ವಾಟ್ಸಾಪ್, ಮೆಟಾ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ

ನಾಗರಿಕರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ವಾಟ್ಸಾಪ್ ಮತ್ತು ಅದರ ಪೋಷಕ ಕಂಪನಿ ಮೆಟಾವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಡೇಟಾ ಹಂಚಿಕೆಯ ಹೆಸರಿನಲ್ಲಿ ಬಳಕೆದಾರರ ಖಾಸಗಿ ಡೇಟಾವನ್ನು ಬಳಸಿಕೊಳ್ಳಲು...