ಬಾಲಿವುಡ್ ಡ್ರಗ್ ಲಿಂಕ್ ಕೇಸ್ ಸಂಬಂಧಿಸಿದಂತೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಹಿಂದಿ ಚಲನಚಿತ್ರೋದ್ಯಮದಲ್ಲಿ ಮಾದಕವಸ್ತು ಜಾಲ ಹರಡುವಿಕೆಯ ಬಗ್ಗೆ ಎನ್‌ಸಿಬಿ ಪ್ರಮುಖ ಮಾಹಿತಿಯನ್ನು ಪಡೆಯುತ್ತಿದೆ ಈ ಹಿನ್ನಲೆಯಲ್ಲಿ ವಿಚಾರಣೆಗಾಗಿ ನಿರ್ಮಾಪಕ ಕರಣ್ ಜೋಹರ್ಗೆ ನೋಟಿಸ್ ನೀಡಲಾಗಿದೆ.
ನಟ ಸುಶಾಂತ್ ಸಿಂಗ್ ಅಸಹಜ ಸಾವು ಪ್ರಕರಣದಿಂದಾಗಿ ಬಾಲಿವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿ ಬಂದಿತ್ತು ಈ ವೇಳೆ ಅನೇಕರ ಮೇಲೆ ಡ್ರಗ್ಸ್ ಸರಬರಾಜು ಮಾಡುವ ಆರೋಪ ಕೂಡ ಕೇಳಿ ಬಂದಿತ್ತು. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡು ಎನ್‌ಸಿಬಿ ಅಧಿಕಾರಿಗಳು ತನಿಖೆಗೆ ನಡೆಸುತ್ತಿದ್ದಾರೆ. ಈಗ ಕರಣ್ ಜೋಹರ್ಗೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ನಟಿ ಸಂಜನಾಗೆ ಷರತ್ತುಬದ್ದ ಜಾಮೀನು ನೀಡಿದ ಹೈಕೋರ್ಟ್
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ 47 ವರ್ಷದ ನಟ ಅರ್ಜುನ್ ರಾಂಪಾಲ್‌ಗೂ ಎರಡನೇ ಬಾರಿ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸಿತ್ತು. ಆದರೆ, ಅರ್ಜುನ್ ರಾಂಪಾಲ್ ಮುಂಬೈನ ಏಜೆನ್ಸಿಯ ಮುಂದೆ ಹಾಜರಾಗಲು ಒಂದು ವಾರ ಕಾಲಾವಕಾಶ ಕೋರಿದ್ದಾರೆ.
ನವೆಂಬರ್ 13 ರಂದು ಮೊದಲ ವಿಚಾರಣೆಯಲ್ಲಿ ಎನ್‌ಸಿಬಿ ಸುಮಾರು ಏಳು ಗಂಟೆಗಳ ಕಾಲ ನಟ ರಾಂಪಾಲ್ ಅವರನ್ನು ವಿಚಾರಣೆ ನಡೆಸಿತ್ತು. ನಟನ ಆಸ್ಟ್ರೇಲಿಯಾದ ಸ್ನೇಹಿತ ಪಾಲ್ ಬಾರ್ಟೆಲ್ ಅವರನ್ನು ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧಿಸಿದ ನಂತರ ಇವರನ್ನು ಪ್ರಶ್ನಿಸಲಾಗಿತ್ತು.
ಇದೇ ಪ್ರಕರಣದಲ್ಲಿ ಖ್ಯಾತ ಹಾಸ್ಯಗಾರ್ತಿ ಭಾರತಿ ಸಿಂಗ್ ಮತ್ತು ಅವರ ಪತಿಯನ್ನು ಎನ್‌ಸಿಬಿ ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ನಂತರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಹಾಸ್ಯ ಕಲಾವಿದೆ ಭಾರತಿ ಸಿಂಗ್ ದಂಪತಿಗೆ ಜಾಮೀನು!


