ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ಗುರುತಿಸಿಕೊಂಡಿರುವ ನಾಟಕ ತಂಡ ರಂಗಪಯಣ 12ನೇ ವರ್ಷದ ಸಂಭ್ರಮದಲ್ಲಿದೆ. ಜುಲೈ-31ಕ್ಕೆ 12 ವರ್ಷಗಳಿಗೆ ಕಾಲಿಡುತ್ತಿದ್ದು, ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
“ನಾವು ರಂಗಭೂಮಿಯಲ್ಲಿ ನಡೆದು ಬಂದ ಹಾದಿಯೇ ವಿಭಿನ್ನ, ವಿಚಿತ್ರ, ವಿಸ್ಮಯ. ನಾವು ಸುಮ್ಮನೆ ರಂಗಪಯಣ ಅನ್ನಿಸಿಕೊಂಡದ್ದಲ್ಲಾ 12 ವರ್ಷಗಳಲ್ಲಿ ಎಲ್ಲೋ ಒಂದೊ ಎರಡೋ ಹೆಜ್ಜೆ ಎಡವಿರಬಹುದು ಆದರೆ ಮಾಡಿದ ಅಷ್ಟೂ ನಾಟಕಗಳು ಹೆಮ್ಮೆ ತಂದುಕೊಟ್ಟ ನಾಟಕಗಳೆ. ಇಲ್ಲಿಯ ತನಕ ಸಮಾಜ ಪರವಾದ 10 ನಾಟಕಗಳನ್ನು ರಂಗಪಯಣ ಕೊಡುಗೆಯಾಗಿ ನೀಡಿದೆ. ಈಗ ರಂಗಪಯಣ ಜುಲೈ-31 ಕ್ಕೆ 12ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಮುಂದಿನ ನಡೆಗಳ ಪ್ರಕಟಣೆ ಮತ್ತು ಸಣ್ಣ ಹಾಡಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ರಂಗಪಯಣ ತಂಡ ತಿಳಿಸಿದೆ.

ಜುಲೈ-31ರ ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣ, ಕನ್ನಡ ಭವನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ.ಬೇಲೂರು ರಘುನಂದನ್ ಮತ್ತು ಮಾಗಡಿ ಗಿರೀಶ್ ಅತಿಥಿಗಳಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜಗದೀಶ್ ಕೆಂಗನಾಳ್ ಅವರ ಜನಪದರು ರಂಗತಂಡ ರಂಗಪಯಣಕ್ಕೆ ಸಾಥ್ ನೀಡಲಿದೆ.
ಇದನ್ನೂ ಓದಿ: ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’


