Homeಕರ್ನಾಟಕವರ್ಷ ಕಳೆದರೂ ದೇವರಾಜ ಅರಸು ಪ್ರಶಸ್ತಿ ಪ್ರಕಟಿಸದ ಬಿಜೆಪಿ ಸರ್ಕಾರ : ಏನಿರಬಹುದು ಹುನ್ನಾರ?

ವರ್ಷ ಕಳೆದರೂ ದೇವರಾಜ ಅರಸು ಪ್ರಶಸ್ತಿ ಪ್ರಕಟಿಸದ ಬಿಜೆಪಿ ಸರ್ಕಾರ : ಏನಿರಬಹುದು ಹುನ್ನಾರ?

ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯು ಹೆಸರನ್ನು ಅಂತಿಮಗೊಳಿಸಿದೆ. ಆದರೆ ಫೈಲ್‌ ಅನುಮೋದನೆಗಾಗಿ ನಮ್ಮ ಬಳಿ ಇನ್ನೂ ಬಂದಿಲ್ಲ" ಎನ್ನುತ್ತಾರೆ ಹಿಂದುಳಿದ ವರ್ಗಗಳ ಇಲಾಖೆಯ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸನ್‌.

- Advertisement -
- Advertisement -

ಪ್ರತಿ ವರ್ಷ ರಾಜ್ಯ ಸರ್ಕಾರ ದೇವರಾಜ ಅರಸು ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಯನ್ನು ಈ ಬಾರಿ ವರ್ಷ ಮುಗಿದರೂ ಈ ಸರ್ಕಾರ ನೆನಪಿಸಿಕೊಂಡಂತಿಲ್ಲ. ಇದಕ್ಕಾಗಿ ಅದು ಕೊಡುತ್ತಿರುವ ಕಾರಣ, ರಾಜ್ಯದಲ್ಲಿ ನೆರೆಹಾವಳಿಯಿಂದಾಗಿ ಪ್ರಶಸ್ತಿ ಕೊಡಲು ಸರ್ಕಾರದ ಬಳಿ ಸಮಯ ಮತ್ತು ಹಣವಿಲ್ಲವಂತೆ. ಅದು ಎಷ್ಟು ಎಂದರೆ ಕೇವಲ ಐದು ಲಕ್ಷ…!

ಪ್ರತಿ ವರ್ಷ ದೇವರಾಜು ಅರಸುರವರ ಜನ್ಮದಿನವಾದ ಆಗಸ್ಟ್‌ 20ರಂದು ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತಿತ್ತು. ಕಳೆದ ಬಾರಿ ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗುಣಿಕಾರರಿನ್ನು ಆರಿಸಿತ್ತು. ಅಟಲ್‌ ಬಿಹಾರಿ ವಾಜಪೇಯಿಯವರು ನಿಧನದ ಕಾರಣದಿಂದ ಡಿಸೆಂಬರ್‌ನಲ್ಲಿ ಪ್ರಶಸ್ತಿ ನೀಡಲಾಗಿತ್ತು. ಈ ಮೊದಲು ಬಿ.ಎ ಮೋಹಿದ್ದೀನ್, ದಿನೇಶ್ ಅಮೀನ್ ಮಟ್ಟು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮಹತ್ವದ ಸಾಧಕರಿಗೆ ಈ ಪ್ರಶಸ್ತಿ ಒಲಿದಿದೆ.

ಈ ಬಾರಿ ಆಗಸ್ಟ್‌ ಕಳೆದು ನವೆಂಬರ್‌ ಮುಗಿಯುತ್ತಾ ಬಂದಿದೆ. ಇನ್ನೊಂದು ತಿಂಗಳಲ್ಲಿ ಈ ವರ್ಷವೆ ಮುಗಿದುಬಿಡಲಿದೆ. ಆದರೂ ಸರ್ಕಾರ ಪ್ರಶಸ್ತಿ ನೀಡುವುದನ್ನು ಮರೆತಿದೆಯೋ ಅಥವಾ ಬೇಕಂತಲೇ ವಿಳಂಬ ಮಾಡುತ್ತಿದೆಯೋ?

ಈ ವರ್ಷ ಜುಲೈ 26 ರಂದೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತಲ್ಲದೇ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದರು. ಆಗಸ್ಟ್‌ ಅಂತ್ಯದೊಳಗೆ ಸಚಿವ ಸಂಪುಟವನ್ನು ರಚಿಸಿದರು. ಸೆಪ್ಟಂಬರ್‌, ಅಕ್ಟೋಬರ್‌, ನವೆಂಬರ್‌ ಮೂರು ತಿಂಗಳು ಕಳೆದರೂ ಅವರ್‍ಯಾರು ಈ ಪ್ರಶಸ್ತಿಯ ಬಗ್ಗೆ ಸೊಲೆತ್ತಿಲ್ಲ.

ಈ ಕುರಿತು ಮಾಹಿತಿ ಪಡೆಯಲು ಹಿಂದುಳಿದ ವರ್ಗಗಳ ಇಲಾಖೆಯ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸನ್‌ರವರನ್ನು ಸಂಪರ್ಕಿಸಿಲಾಯಿತು. ಆಗ ಅವರು “ಕುವೆಂಪು ವಿ.ವಿಯ ನಿವೃತ್ತ ಕುಲಪತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯು ಹೆಸರನ್ನು ಅಂತಿಮಗೊಳಿಸಿದೆ. ಆದರೆ ಫೈಲ್‌ ಅನುಮೋದನೆಗಾಗಿ ನಮ್ಮ ಬಳಿ ಇನ್ನೂ ಬಂದಿಲ್ಲ” ಎನ್ನುತ್ತಾರೆ.

ಸರ್ಕಾರದ ಈ ಧೋರಣೆಯು ಭೂಸುಧಾರಣೆಯ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಎಂದೇ ಪ್ರಖ್ಯಾತರಾದ ದೇವರಾಜು ಅರಸುರವರ ಬಗ್ಗೆ ಗೌರವವಿಲ್ಲವೆಂಬುದನ್ನು ತೋರಿಸುತ್ತದೆ.

ಈ ಕುರಿತು ನಾನುಗೌರಿ.ಕಾಂ ವತಿಯಿಂದ ಸಂಬಂಧಪಟ್ಟ ಹೋರಾಟಗಾರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ಇಲ್ಲಿದೆ ನೋಡಿ.

ಡಾ. ಸಿ.ಎಸ್‌ ದ್ವಾರಕನಾಥ್‌, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.

“ನೆರೆಯ ಕಾರಣ ಹೇಳಿ ಪ್ರಶಸ್ತಿ ನೀಡುವುದನ್ನು ತಪ್ಪಿಸುವುದಾದರೆ ತಪ್ಪಿಸಲಿ. ಅದರೆ ಬಹಳಷ್ಟು ಪ್ರಶಸ್ತಿಗಳನ್ನು ಈಗಾಗಲೇ ಪ್ರಕಟ ಮಾಡಿ, ದೇವರಾಜ್ ಅರಸ್ ಅವರ ಪ್ರಶಸ್ತಿಯನ್ನು ಮಾತ್ರ ತಪ್ಪಿಸುತ್ತಾರೆ ಅಂದರೆ ಏನರ್ಥ..? ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿದರು. ಆದರೆ ದೇವರಾಜ್‌ ಅರಸ್ ಅವರ ಪ್ರಶಸ್ತಿ ಮಾತ್ರ ತಪ್ಪಿಸಿರುವುದರ ಹಿಂದಿನ ಹುನ್ನಾರವಾದರೂ ಏನು..? ಎಲ್ಲಾ ಪ್ರಶಸ್ತಿಗಳನ್ನು ನೀಡಿ, ಕೇವಲ ಅರಸ್ ಅವರ ಪ್ರಶಸ್ತಿ ಮಾತ್ರ ನೀಡದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

==========

ಕೆ.ಎಸ್‌ ಶಿವರಾಂ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ, ಮೈಸೂರು.

“ದೇವರಾಜ್‌ ಅರಸ್‌ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ತಳ ಸಮುದಾಯದವರಿಗೆ ಅನೇಕ ಸವಲತ್ತುಗಳನ್ನು ನೀಡಿ, ಮುಖ್ಯವಾಹಿನಿಗೆ ತಂದಂತವರು ಅರಸ್. ಆದರೆ ಬಿಜೆಪಿಗೆ ಸಮಾನತೆ, ಮತ್ತು ಸಾಮಾಜಿಕ ನ್ಯಾಯ ಬೇಕಾಗಿಲ್ಲ. ಬಿಜೆಪಿ ಸರ್ಕಾರ ಹಿಂದುತ್ವ, ಕೋಮುಶಕ್ತಿಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿದೆ. ಹಾಗಾಗಿಯೇ ಹಿಂದುಳಿದ ವರ್ಗದ ಹಿತಾಸಕ್ತಿಗೆ ದುಡಿದವರ ಬಗ್ಗೆ ಬಿಜೆಪಿ ತಾತ್ಸಾರ ಮಾಡುತ್ತಿದೆ. ಸಾವರ್ಕರ್‌ ಅಂತವರನ್ನು ವಿಜೃಂಭಿಸಿ, ಸಾಮಾಜಿಕ ನ್ಯಾಯದ ಪರ ದುಡಿದ ಅಂಬೇಡ್ಕರ್‌ ಮತ್ತು ಅರಸ್‌ರಂತವರನ್ನು ಜನಮಾನಸದಿಂದ ತೆಗೆದು ಹಾಕಲು ಬಿಜೆಪಿ ಸರ್ಕಾರ ಹೀಗೆ ಮಾಡುತ್ತಿದೆ. ಆರ್‌ಎಸ್‌ಎಸ್‌ನ್ನು ವಿಜೃಂಭಿಸಲು ಹೀಗೆಲ್ಲಾ ಮಾಡ್ತಿದ್ದಾರೆ. ಇದೆಲ್ಲಾ ಬಿಜೆಪಿ ರಚಿಸಿರುವ ಹುನ್ನಾರ. ಈ ಕೂಡಲೇ ದೇವರಾಜ್‌ ಅರಸ್‌ ಪ್ರಶಸ್ತಿ ಪ್ರಕಟ ಮಾಡಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ.

================

ರಮೇಶ್‌ ಅಭಿಮನ್ಯು, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಮತ್ತು ಪತ್ರಕರ್ತರು

“ದೇವರಾಜ್‌ ಅರಸ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋದ ಸಿಎಂ ಯಡಿಯೂರಪ್ಪನವರು ಪ್ರಶಸ್ತಿ ಬಗ್ಗೆ ಮಾತನಾಡಲೇ ಇಲ್ಲ. ಹಿಂದುಳಿದ ಹಾಗೂ ತಳ ಸಮುದಾಯದ ನಾಯಕನನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಇದನ್ನು ನಾವು ಖಂಡತುಂಡವಾಗಿ ಖಂಡಿಸುತ್ತೇವೆ. ಬಿಜೆಪಿ ಸರ್ಕಾರ ಕೇವಲ ಅಧಿಕಾರ, ಆಪರೇಷನ್ ಕಮಲ ಮಾಡುವುದರಲ್ಲಿ ಬ್ಯುಸಿಯಾಗಿದೆ. ಹಿಂದುಳಿದ ಸಮುದಾಯಗಳನ್ನು ಮರೆತಿದ್ದಾರೆ. ದೇವರಾಜ್‌ ಅರಸ್ ಅವರಂತಹ ಮಹಾನ್‌ ನಾಯಕನನ್ನು ಆದರ್ಶವಾಗಿಟ್ಟುಕೊಂಡು ಬಿಜೆಪಿ ಅಧಿಕಾರ ನಡೆಸಬೇಕಿತ್ತು. ಆದರೆ ಅಂತಹ ನಾಯಕನಿಗೆ ಬಿಜೆಪಿ ಅವಮಾನ ಮಾಡಿದೆ”.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯ ಸಾರ ಮತ್ತು ಶೈಲಿ ಎರಡಕ್ಕೂ ರಾಷ್ಟ್ರವು ಭಾರಿ ಬೆಲೆ ತೆರುತ್ತಿದೆ’: ಕಾಂಗ್ರೆಸ್

ನವದೆಹಲಿ: ಇರಾನ್ ಮೇಲೆ ನಡೆದ ಯುದ್ಧಕ್ಕೆ ಸರ್ಕಾರದ ಪ್ರತಿಕ್ರಿಯೆಯು ಭಾರತದ ಮೌಲ್ಯಗಳು, ತತ್ವಗಳು ಮತ್ತು ಹಿತಾಸಕ್ತಿಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ, ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯ ಸಾರ...

ಬಂಗಾಳ ಎಸ್‌ಐಆರ್| ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್-ಮಾಲ್ಡಾದಲ್ಲಿ ಅತ್ಯಧಿಕ ಮತದಾರರ ಪರಿಶೀಲನೆ ಬಾಕಿ

ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಚುನಾವಣಾ ಆಯೋಗ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳದ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ದಾಖಲೆಗಳ ಪರಿಶೀಲನೆಗೆ...

‘ಪ್ರಜಾಪ್ರಭುತ್ವ ಜಗತ್ತಿನ ನಾಯಕರು, ಸಾರ್ವಭೌಮ ರಾಷ್ಟ್ರದ ನಾಯಕನನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯ’: ಖಮೇನಿ ಹತ್ಯೆಗೆ ಪ್ರಿಯಾಂಕ ಗಾಂಧಿ ಖಂಡನೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಜಾಪ್ರಭುತ್ವ ಜಗತ್ತಿನ ನಾಯಕರು ಎಂದು ಕರೆಯಲ್ಪಡುವವರು" ಸಾರ್ವಭೌಮ ರಾಷ್ಟ್ರದ ನಾಯಕತ್ವವನ್ನು ಗುರಿಯಾಗಿಸಿಕೊಂಡು...

ದುಬೈ-ಅಬುಧಾಬಿ ಮೇಲೆ ದಾಳಿ; ಇರಾನ್‌ಗೆ ಯುಎಇ ಎಚ್ಚರಿಕೆ

ಇರಾನ್ ತನ್ನ ನೆರೆಹೊರೆಯವರನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಎಚ್ಚರಿಕೆ ನೀಡಿದ್ದಾರೆ. "ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್ ಆಕ್ರಮಣವು ತಪ್ಪು ಲೆಕ್ಕಾಚಾರವಾಗಿದೆ. ಇದೇ ಬೆಳವಣಿಗೆ ನಿರ್ಣಾಯಕ ಹಂತದಲ್ಲಿ ಇರಾನ್...

ಇರಾನ್‌ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತೊಲ್ಲ ಅಲಿರೆಝಾ ಅರಾಫಿ ನೇಮಕ

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆ, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ-ಸಂಯೋಜಿತ...

ಖಮೇನಿ ಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನೆ; ಶ್ರೀನಗರದಲ್ಲಿ ಇಂಟರ್‌ನೆಟ್ ಸ್ತಬ್ಧ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ಕಾಶ್ಮೀರದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ಶ್ರೀನಗರದಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ಗುಂಪು (UNMOGIP) ಪ್ರಧಾನ ಕಚೇರಿಯ ಮುಂದೆ ದೊಡ್ಡ ಜನಸಮೂಹ ಜಮಾಯಿಸಿತ್ತು....

ಅಮೆರಿಕಾ-ಇಸ್ರೇಲ್ ‘ಪುಂಡ ರಾಷ್ಟ್ರಗಳು’; ಇರಾನ್ ಮೇಲಿನ ದಾಳಿ ಖಂಡಿಸಿದ ಕೇರಳ ಸಿಎಂ; ಅನಿವಾಸಿ ಭಾರತೀಯರ ಆತಂಕ ಪರಿಹರಿಸಲು ಕೇಂದ್ರಕ್ಕೆ ಮನವಿ

ತಿರುವನಂತಪುರಂ: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಹಲವಾರು ಅನಿವಾಸಿ ಭಾರತೀಯರ ಆತಂಕವನ್ನು ಪರಿಹರಿಸಲು ಕೇಂದ್ರವು ತಕ್ಷಣ...

ಅಮೆರಿಕ-ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ‘ಇರಾನ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಹತ್ಯೆ; ಇರಾನ್ ಮಾಧ್ಯಮಗಳ ವರದಿ 

ಟೆಹ್ರಾನ್: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಸಾವನ್ನಪ್ಪಿದ್ದಾರೆ ಎಂದು ದೇಶದ ಸರ್ಕಾರಿ ಸ್ವಾಮ್ಯದ ಐಆರ್‌ಐಬಿ ಟಿವಿ ಭಾನುವಾರ ವರದಿ ಮಾಡಿದೆ. ಟೆಹ್ರಾನ್ ಮೇಲಿನ ದಾಳಿಯಲ್ಲಿ...

ಕರಾಚಿ| ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ಘರ್ಷಣೆ : ಕನಿಷ್ಠ 9 ಸಾವು

ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ದೂತಾವಾಸದ ಬಳಿ ಭಾನುವಾರ (ಮಾ.1) ಇರಾನ್ ಪರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ ಉಂಟಾಗಿ ಕನಿಷ್ಠ ಒಂಭತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. "ನಾವು ಕನಿಷ್ಠ ಎಂಟು...

ಇರಾನ್-ಇಸ್ರೇಲ್ ಯುದ್ಧ: ಭಾರತ ತಕ್ಷಣದ ಆರ್ಥಿಕ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ; ವರದಿ

ಫೆಬ್ರವರಿ 28, 2026 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮುಷ್ಕರದ ನಂತರ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ತೀವ್ರ ಏರಿಕೆಯು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಅಪಾಯಗಳನ್ನು ತೀವ್ರಗೊಳಿಸಿದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ತಕ್ಷಣದ...