“ನರೇಂದ್ರ ಮೋದಿ ಸರ್ಕಾರ ಬಿಎಸ್ಎನ್ಎಲ್, ರೈಲ್ವೆ, ವಿಮಾನ ನಿಲ್ದಾಣಗಳಂತಹ ದೇಶದ ಸಾರ್ವಜನಿಕ ಸ್ವಾಮ್ಯದ ಆಸ್ತಿಗಳಲ್ಲಿನ ಸರ್ಕಾರದ ಶೇರುಗಳನ್ನು ಹಿಂಪಡೆದು, ಖಾಸಗಿ ಹೂಡಿಕೆಗೆ ಅವಕಾಶ ನೀಡುತ್ತಿದೆ. ಈ ಮೂಲಕ ಮೋದಿಯವರು ದೇಶದ ಸಂಪತ್ತನ್ನು ಅಂಬಾನಿ, ಅದಾನಿಯಂತ ಕಾರ್ಪೊರೇಟ್ ವಲಯದ ಜನರಿಗೆ ಮಾರಾಟ ಮಾಡುತ್ತಿದ್ದಾರೆ”- ಶಂಕರಗೌಡ ಚನ್ನಬಸವನಗೌಡ ಪಾಟೀಲ್, ಬ್ಯಾಡಗಿ.
“ಅಚ್ಚೇ ದಿನ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಇದೀಗ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಅಚ್ಚೇ ದಿನ ನಮ್ಮ ಬದುಕಿನಲ್ಲಿ ಬರಲೇ ಇಲ್ಲ”- ಮಲ್ಲೇಶಪ್ಪ, ಕೋಲಾರ
“ಈ ಹಿಂದೆ ಗಾರೆ ಕೆಲಸ ಮಾಡುತ್ತಿದ್ದವಳು ಈಗ ಕಸ-ಮುಸುರೆ ಕೆಲಸಕ್ಕೆ ಹೋಗುತ್ತಿದ್ದೇನೆ. ಬಿಜೆಪಿ ಸರ್ಕಾರ ನಮಗೆ ಸರಿಯಾಗಿ ವೃದ್ಧಾಪ್ಯ ವೇತನವನ್ನೂ ಕೊಡುತ್ತಿಲ್ಲ. ನನಗೆ ಜೀವನದಲ್ಲಿ ಯಾರೂ ಆಸರೆ ಇಲ್ಲ. ನಮ್ಮಂತ ನಿರ್ಗತಿಕರು ಜೀವನ ಮಾಡುವುದು ತುಂಬಾ ಕಷ್ಟವಾಗಿದೆ”- 75 ವರ್ಷದ ಅಜ್ಜಿ.
ಈ ಎಲ್ಲಾ ಹೇಳಿಕೆಗಳು ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ನಡೆಸುತ್ತಿರುವ ಬಿಜೆಪಿಯ ಲೂಟಿಯ ವಿರುದ್ದ ಭಾರತ (#IndiaAgainstBJPLoot) ಎಂಬ ಅಭಿಯಾನದಲ್ಲಿ ಬಂದಿರುವುವು.
ಕಾಂಗ್ರೆಸ್ ಪಕ್ಷವು ಪೆಟ್ರೋಲ್, ಡೀಸೆಲ್ ಮತ್ತು LPG ಬೆಲೆಗಳ ಏರಿಕೆ, ಆಸ್ತಿ ಮಾರಾಟ ಮಾಡುವ ವಿರುದ್ದ ಒಕ್ಕೂಟ ಸರ್ಕಾರದ ದಾಳಿ ಮಾಡುತ್ತಿದೆ. ಸರ್ಕಾರ ವಿಧಿಸಿರುವ ಕೆಲವು ತೆರಿಗೆಗಳನ್ನು ತೆಗೆದುಹಾಕುವ ಮೂಲಕ ಅವುಗಳನ್ನು ಕಡಿಮೆ ಮಾಡುವಂತೆ ಪಕ್ಷವು ಒತ್ತಾಯಿಸುತ್ತಿದೆ.
ಇದನ್ನೂ ಓದಿ: LPG ಬೆಲೆ ಮತ್ತೆ ಹೆಚ್ಚಳ: ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ
ಈ ಹಿಂದೆ ಗಾರೆ ಕೆಲಸ ಮಾಡುತ್ತಿದ್ದವಳು ಈಗ ಕಸ-ಮುಸುರೆ ಕೆಲಸಕ್ಕೆ ಹೋಗುತ್ತಿದ್ದೇನೆ. ಬಿಜೆಪಿ ಸರ್ಕಾರ ನಮಗೆ ಸರಿಯಾಗಿ ವೃದ್ಧಾಪ್ಯ ವೇತನವನ್ನೂ ಕೊಡುತ್ತಿಲ್ಲ.
ನನಗೆ ಜೀವನದಲ್ಲಿ ಯಾರೂ ಆಸರೆ ಇಲ್ಲ. ನಮ್ಮಂತ ನಿರ್ಗತಿಕರು ಜೀವನ ಮಾಡುವುದು ತುಂಬಾ ಕಷ್ಟವಾಗಿದೆ.#IndiaAgainstBJPLoot pic.twitter.com/XSz2zft5do
— Karnataka Congress (@INCKarnataka) September 1, 2021
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾವೆಲ್ಲ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೆವು. ಆದರೆ ಈಗ ಮೋದಿ ಸರ್ಕಾರ ಬಂದ ಮೇಲೆ ನಾವು, ಮಕ್ಕಳೆಲ್ಲ ಅರೆ ಹೊಟ್ಟೆ ಊಟ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಬಡವರ ಬದುಕನ್ನು ಮತ್ತಷ್ಟು ಹೀನಾಯವಾಗಿಸಿದೆ” ಎಂದು ಮಹಿಳೆಯೊಬ್ಬರು ಮಾತನಾಡಿದ್ದಾರೆ.
70 ವರ್ಷಗಳ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರಗಳು ದೇಶವನ್ನು ಕಟ್ಟುವಂತ ಕೆಲಸ ಮಾಡಿದವು.
ಹೀಗೆ ಸುಸಜ್ಜಿತವಾಗಿ ನಿರ್ಮಿಸಿದ್ದ ದೇಶವನ್ನು ನರೇಂದ್ರ ಮೋದಿ ಸರ್ಕಾರ ಕೇವಲ 7 ವರ್ಷಗಳಲ್ಲೇ ಕೆಡವುತ್ತಿದೆ.
ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಅಂಬಾನಿ-ಅದಾನಿ ಅವರಿಗೆ ಮಾರಾಟ ಮಾಡುತ್ತಿದೆ.#IndiaAgainstBJPLoot pic.twitter.com/s10rjvaDx4
— Karnataka Congress (@INCKarnataka) September 1, 2021
ದೇಶದಲ್ಲಿ, ಜನರ ತೆರಿಗೆ ಹಣದಿಂದ ಹಲವು ಸಂಸ್ಥೆಗಳು, ಮೂಲ ಸೌಕರ್ಯ, ವಿಮಾನ ನಿಲ್ದಾಣ, ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ.
ಕಾಂಗ್ರೆಸ್ ದೇಶಕ್ಕೆ ಇಂತಹ ಹಲವಾರು ಕೊಡುಗೆಗಳನ್ನು ನೀಡಿದೆ.
ಆದರೆ @BJP4India ಸರ್ಕಾರ ದೇಶದ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿಯನ್ನು ಪರಭಾರೆ ಮಾಡುತ್ತಿರುವುದು ದುರಂತ.
– @DKShivakumar#IndiaAgainstBJPLoot pic.twitter.com/RkUAydw0nv— Karnataka Congress (@INCKarnataka) September 1, 2021
ಬಿಜೆಪಿ ಸರ್ಕಾರ ದೇಶದ ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮೋದಿಯವರು ನಮ್ಮನ್ನು ಮಾರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವೆಲ್ಲ ಒಂದಾಗಿ ಇದರ ವಿರುದ್ಧ ಹೋರಾಟ ಮಾಡೋಣ ಎಂದು ಕರ್ನಾಟಕ ಕಾಂಗ್ರೆಸ್ ಒತ್ತಾಯಿಸಿದೆ.
ಇದನ್ನೂ ಓದಿ: ಬಿಜೆಪಿಯವರು ಕಳ್ಳರಂತೆ ಗಮನ ಬೇರೆಡೆ ಸೆಳೆದು ಬೆಲೆ ಏರಿಕೆ ಮಾಡುತ್ತಿದ್ದಾರೆ: ಎಎಪಿ


