Homeಕರ್ನಾಟಕಬಿಜೆಪಿ ಎಂದರೆ ಯೋಜನೆ ಮತ್ತು ಯೋಚನೆ ಇಲ್ಲದ ಗಾಂಪರ ಗುಂಪು- ಕಾಂಗ್ರೆಸ್

ಬಿಜೆಪಿ ಎಂದರೆ ಯೋಜನೆ ಮತ್ತು ಯೋಚನೆ ಇಲ್ಲದ ಗಾಂಪರ ಗುಂಪು- ಕಾಂಗ್ರೆಸ್

- Advertisement -
- Advertisement -

ಉದ್ಯೋಗ ಸೃಷ್ಟಿಗಿಂತ, ಕೌಶಲ್ಯ ಆಧಾರಿತ ತರಬೇತಿಗೆ ಒತ್ತು ನೀಡಲಾಗುವುದು ಎಂಬ ಅಶ್ವತ್ಥನಾರಾಯಣ ಹೇಳಿಕೆಗೆ ’ಬಿಜೆಪಿ ಎಂದರೆ ಯೋಜನೆ ಮತ್ತು ಯೋಚನೆ ಇಲ್ಲದ ಗಾಂಪರ ಗುಂಪು ಎಂಬುದು ಸ್ಪಷ್ಟ’ ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಉದ್ಯೋಗ ಸೃಷ್ಟಿಗಿಂತ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೌಶಲ್ಯ ಅಭಿವೃದ್ಧಿ ತರಬೇತಿಗೆ ಒತ್ತು ನೀಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ  ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

“ಉದ್ಯೋಗ ಸೃಷ್ಟಿಗೆ ಕ್ರಮ ವಹಿಸದೆ ಕೇವಲ ಕೌಶಲ್ಯ ತರಬೇತಿ ನೀಡಿ ಕೌಶಲ್ಯಯುತ ನಿರುದ್ಯೋಗಿಗಳನ್ನು ಸೃಷ್ಟಿಸುವಿರಾ ಅಶ್ವತ್ಥನಾರಾಯಣ ಅವರೇ..?” ಎಂದು ಪ್ರಶ್ನೆ ಮಾಡಿದೆ.

“ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ಹಿಂದುಳಿದಿದ್ದರೂ ಕ್ರಮವಹಿಸದೆ ಯುವ ಸಮುದಾಯದ ಬದುಕನ್ನು ಕತ್ತಲೆಗೆ ತಳ್ಳುತ್ತಿದೆ ಬಿಜೆಪಿ” ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ವಿಧಾನಸಭಾ ಅಧಿವೇಶನ: ಕಾಂಗ್ರೆಸ್‌ನ ’ಎತ್ತಿನಗಾಡಿ ಚಲೋ’ ಪ್ರತಿಭಟನೆ ಚಿತ್ರಗಳಲ್ಲಿ…

“ಹಿಂದೆ ನಮ್ಮ ಆಡಳಿತದಲ್ಲಿ ಬೆಂಗಳೂರು ಉದ್ಯೋಗಳಗಳ ಅಕ್ಷಯಪಾತ್ರೆಯಂತಿತ್ತು, ದೇಶಾದ್ಯಂತ ಜನ ಉದ್ಯೋಗ ಅರಸಿ ಬರುತ್ತಿದ್ದರು. ಆದರೀಗ ರಾಜ್ಯ ಬಿಜೆಪಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ದೇಶದಲ್ಲಿಯೇ ಅತಿ ಹಿಂದುಳಿದಿದೆ. ಹೈದರಾಬಾದ್, ಪುಣೆಗಳಿಗಿಂತಲೂ ಬೆಂಗಳೂರು ಕಳಪೆ ಸಾಧನೆ ತೋರಿದೆ. ರಾಜ್ಯದ ಯುವಕರ ಭವಿಷ್ಯ ಮುಗಿಸಲಿದೆ ಬಿಜೆಪಿ” ಎಂದು ಆರೋಪಿಸಿದೆ.

ಇದನ್ನೂ ಓದಿ: ಯಾವ ಪುಂಡನೂ ಅ.5ರಂದು ಮಹಿಷ ದಸರಾ ನಿಲ್ಲಿಸಲಾರನು: ಪ್ರೊ.ಗುರು

ಇತ್ತ ಅಶ್ವತ್ಥನಾರಾಯಣ ಅವರ ಇದೇ ಸುದ್ದಿಯ ತುಣುಕನ್ನು ಹಂಚಿಕೊಂಡಿರುವ ಬಿಜೆಪಿ, “ಕೋವಿಡ್‌ ಸಂಕಷ್ಟದ ಕಾಲದಲ್ಲೂ ಉದ್ಯೋಗ ವಂಚಿತರಾಗಿದ್ದ ಸುಮಾರು 12 ಸಾವಿರಕ್ಕೂ ಅಧಿಕ ಮಂದಿಗೆ ರಾಜ್ಯ ಬಿಜೆಪಿ ಸರ್ಕಾರ ಉದ್ಯೋಗ ಕಲ್ಪಿಸಿದೆ” ಎಂದಿದೆ.

“ಉದ್ಯೋಗ ಆಧಾರಿತ ತರಬೇತಿ ನೀಡುವ ಮೂಲಕ ಅನೇಕ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ನೆರವಾಗುತ್ತಿದೆ” ಎಂದು ಸಚಿವ ಅಶ್ವತ್ಥನಾರಾಯಣರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.

 


ಇದನ್ನೂ ಓದಿ: ಹಿಂದಿ ಹೇರಿಕೆ ನಿಲ್ಲಿಸಿ: ಟ್ವಿಟರ್‌ನಲ್ಲಿ ಗಣ್ಯರು, ಕಲಾವಿದರಿಂದ StopHindiImposition ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...